600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಜರ್ಮನಿ ಮೂಲದ ಬೈಕ್ ತಯಾರಕ ಕಂಪನಿಯಾದ ಬಿ‍ಎಂ‍‍ಡಬ್ಲ್ಯು ಮೋಟೊರಾಡ್ ಹಬ್ಬದ ವೇಳೆಯಲ್ಲಿ ಬಿಎಂ‍ಡಬ್ಲ್ಯು ಜಿ 310 ಆರ್ ಹಾಗೂ ಜಿ310 ಜಿಎಸ್ ಬೈಕುಗಳಿಗಾಗಿ 600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದಿರುವುದಾಗಿ ತಿಳಿಸಿದೆ.

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಈ ಬುಕ್ಕಿಂಗ್‍‍ಗಳನ್ನು ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಡಲಾಗಿದೆ. ಕಂಪನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 600ಕ್ಕೂ ಹೆಚ್ಚು ಬೈಕುಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಹಬ್ಬದ ಕೊಡುಗೆಯಾಗಿ ಬಿ‍ಎಂ‍‍ಡಬ್ಲ್ಯು ಜಿ 310 ಆರ್ ಹಾಗೂ ಬಿ‍ಎಂ‍‍ಡಬ್ಲ್ಯು ಜಿ 310 ಜಿ‍ಎಸ್ ಬೈಕುಗಳನ್ನು ಫ್ರೀ ಇನ್ಶೂರೆನ್ಸ್ ಹಾಗೂ ಫ್ರೀ ರಿಜಿಸ್ಟ್ರೇಷನ್‍‍ನೊಂದಿಗೆ ಮಾರಾಟ ಮಾಡಲಾಗುವುದು.

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಈ ಎರಡೂ ಬೈಕುಗಳನ್ನು ಜರ್ಮನಿಯಲ್ಲಿರುವ ಕಂಪನಿಯ ಘಟಕದಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಈ ಬೈಕುಗಳನ್ನು ಕರ್ನಾಟಕದ ಹೊಸೂರಿನಲ್ಲಿರುವ ಟಿವಿ‍ಎಸ್ ಘಟಕದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾಗಿದೆ.

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ರುದ್ರತೇಜ್ ಸಿಂಗ್‍‍ರವರ ಪ್ರಕಾರ ಕಂಪನಿಯು ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ವಿಶಿಷ್ಟ ಉತ್ಪನ್ನಗಳನ್ನು ಹೊಂದಿದ್ದು, ಇದು ದೇಶದ ಬೈಕಿಂಗ್ ಸಮುದಾಯದಲ್ಲಿ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸಿದೆ.

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಪ್ರೀಮಿಯಂ ಬೈಕುಗಳ ಸೆಗ್‍‍ಮೆಂಟಿನಲ್ಲಿ ಬಿಎಂಡಬ್ಲ್ಯು ಮೋಟೊರಾಡ್ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಹಬ್ಬದ ಋತುವಿನಲ್ಲಿ ಬಿಎಂಡಬ್ಲ್ಯು ಜಿ 310 ಬೈಕುಗಳ ಯಶಸ್ಸಿಗೆ ಈ ಎಲ್ಲ ಅಂಶಗಳು ಕಾರಣವಾಗಿವೆ ಎಂದು ಸಿಂಗ್‍‍ರವರು ಹೇಳಿದರು.

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ನಮ್ಮ ಗ್ರಾಹಕರಿಗೆ, ಈ ದೀಪಾವಳಿ ಹಬ್ಬವು ಮರೆಯಲಾಗದ ಉಡುಗೊರೆಯನ್ನು ನೀಡಿದೆ, ಏಕೆಂದರೆ ಅವರು ಅಂತಿಮವಾಗಿ ತಮ್ಮ ನೆಚ್ಚಿನ ಬೈಕುಗಳನ್ನು ಖರೀದಿಸುವ ಕನಸನ್ನು ನನಸು ಮಾಡಿಕೊಂಡರು. ಬಿಎಂಡಬ್ಲ್ಯು ಮೋಟೊರಾಡ್ ಸಮುದಾಯವು ಭಾರತದಲ್ಲಿ ಬಲವಾಗಿ ಬೆಳೆಯುತ್ತಿದೆ.

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ನಮ್ಮ ಪರ್ಫಾಮೆನ್ಸ್ ನಲ್ಲಿ ಹೊಸ ಮಾನದಂಡಗಳನ್ನು ನಾವು ಮುಂದುವರೆಸಲಿದ್ದೇವೆ ಎಂದು ಸಿಂಗ್‍‍ರವರು ಹೇಳಿದರು. ಬಿಎಂ‍ಡಬ್ಲ್ಯು ಜಿ 310 ಆರ್ ಹಾಗೂ ಬಿಎಂ‍ಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ 313 ಸಿಸಿಯ ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಈ ಎಂಜಿನ್ 33.6 ಬಿ‍ಹೆಚ್‍‍ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಬಿಎಂ‍ಡಬ್ಲ್ಯು ಜಿ 310 ಆರ್ ಬೈಕ್, ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲಿರುವಂತಹ ಎಂಜಿನ್ ಹೊಂದಿದೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಆದರೆ ಬೇರೆ ರೀತಿಯ ಟ್ಯೂನ್ ಹೊಂದಿದೆ. ಈ ಎರಡೂ ಬೈಕುಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.2.99 ಲಕ್ಷ ಹಾಗೂ ರೂ.3.49 ಲಕ್ಷಗಳಾಗಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದ ಬಿ‍ಎಂ‍‍ಡಬ್ಲ್ಯು ಬೈಕುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೆಚ್ಚಿನ ದರವನ್ನು ಹೊಂದಿದ್ದರೂ 600ಕ್ಕೂ ಹೆಚ್ಚು ಬುಕ್ಕಿಂಗ್‍‍ಗಳನ್ನು ಪಡೆದ ಜಿ 310 ಸರಣಿಯ ಬೈಕುಗಳ ಸಾಧನೆಯು ನಿಜಕ್ಕೂ ಅಭಿನಂದನಾರ್ಹ.

More from DriveSpark

Article Published On: Friday, November 8, 2019, 16:04 [IST]
English summary
BMW g 310 r g 310 gs sales bookings increase during festive season - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+