ಬಹಿರಂಗವಾಯ್ತು ಸಿಬಿ ಶೈನ್ ಬಿಎಸ್ 6 ಬೈಕಿನ ಮಾಹಿತಿ
ಹೊಸ ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಭಾರತದಲ್ಲಿರುವ ಎಲ್ಲಾ ಕಂಪನಿಗಳು ತಮ್ಮ ವಾಹನಗಳಲ್ಲಿ ಮುಂದಿನ ವರ್ಷದ ಏಪ್ರಿಲ್‍ನಿಂದ ಕಡ್ಡಾಯವಾಗಿ ಬಿಎಸ್ 6 ಎಂಜಿನ್‍ಗಳನ್ನು ಅಳವಡಿಸಿಕೊಳ್ಳಬೇಕಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ಸಂಬಂಧಪಟ್ಟ ಪ್ರಾಧಿಕಾರದಿಂದ ಬಿಎಸ್ 6 ಪ್ರಮಾಣಪತ್ರವನ್ನು ಪಡೆಯಬೇಕಿದೆ. ಹೋಂಡಾ ಕಂಪನಿಯು ಸಹ ತನ್ನ ಸಿಬಿ ಶೈನ್ 125 ಬೈಕ್ ಅನ್ನು ಬಿಎಸ್6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸಿದೆ.

ಇಂಡಿಯನ್ ಆಟೋಸ್ ಬ್ಲಾಗ್ ಹೋಂಡಾ ಸಿಬಿ ಶೈನ್ 125 ಬೈಕಿಗೆ ಸಂಬಂಧಿಸಿದಂತೆ ಪವರ್ ಬಗೆಗಿನ ಮಾಹಿತಿಗಳನ್ನು ಬಹಿರಂಗ ಪಡಿಸಿದೆ. ಹೊಸ ಹೋಂಡಾ ಸಿಬಿ ಶೈನ್ 125 ಬೈಕಿನಲ್ಲಿರುವ ಬಿಎಸ್ 6 ಎಂಜಿನ್ 10.72 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿರುವ ಸಿಬಿ ಶೈನ್ 125 ಬೈಕಿನಲ್ಲಿರುವ ಬಿಎಸ್ 4 ಎಂಜಿನ್ 10.16 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತಿದೆ.

ಹೊಸ ಎಂಜಿನ್ ಹೊರತಾಗಿ, ಈ ಬೈಕ್ ಆನ್ ಬೋರ್ಡ್ ಡಯಾಗ್ನಾಸ್ಟಿಕ್ಸ್ 1 (ಒಬಿಡಿ - 1) ಹೊಂದಿರಲಿದೆ. ಈಗ ಬಹಿರಂಗವಾಗಿರುವ ದಾಖಲೆಯಲ್ಲಿ ಹೊಸ ಶೈನ್ 125 ಬೈಕಿನ ಗಾತ್ರದಲ್ಲಿ ಬದಲಾವಣೆಗಳಾಗಿರುವುದನ್ನು ಕಾಣಬಹುದು.

ಹೊಸ ಬೈಕಿನ ವ್ಹೀಲ್‍ಬೇಸ್ ಹಳೆಯ ಬೈಕಿನ ವ್ಹೀಲ್‍ಬೇಸ್‍ಗಿಂತ 19 ಎಂಎಂ ಹೆಚ್ಚಾಗಿದೆ. ಹೊಸ ಬೈಕ್ 1,285 ಎಂಎಂ ವ್ಹೀಲ್‍ಬೇಸ್ ಹೊಂದಿರಲಿದೆ. ಉದ್ದವು ಹಳೆ ಬೈಕಿಗಿಂತ 8 ಎಂಎಂ ನಷ್ಟು ಹೆಚ್ಚಾಗಿ 2,020 ಎಂಎಂ ಇರಲಿದೆ. ಅಗಲವು 23 ಎಂಎಂನಷ್ಟು ಹೆಚ್ಚಾಗಿ 785 ಎಂಎಂ ಇದ್ದರೆ, ಎತ್ತರವು 13 ಎಂಎಂನಷ್ಟು ಹೆಚ್ಚಾಗಿ 1,103 ಎಂಎಂ ಇರಲಿದೆ.

ಮಾರುಕಟ್ಟೆಯಲ್ಲಿರುವ ಹೋಂಡಾ ಸಿಬಿ ಶೈನ್ 125 ಬೈಕಿನ ಎಂಜಿನ್ 4 ಸ್ಪೀಡ್‍ನ ಗೇರ್‍ಬಾಕ್ಸ್ ಹೊಂದಿದೆ. ಈ ಬೈಕಿನ ತೂಕವು 123 ಕೆ.ಜಿಗಳಾಗಿದೆ. ಬಿಎಸ್ 6 ಎಂಜಿನ್ ಹೊಂದಲಿರುವ ಬೈಕಿನ ತೂಕದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಹೋಂಡಾ 2 ವ್ಹೀಲರ್ಸ್ ಇಂಡಿಯಾ, ಹೊಸ ಸಿಬಿ ಶೈನ್ 125 ಬೈಕ್ ಅನ್ನು - ಮುಂಭಾಗ ಹಾಗೂ ಹಿಂಭಾಗದ ಡ್ರಮ್ ಹೊಂದಿರುವ ಸ್ಟಾಂಡರ್ಡ್, ಹಿಂಭಾಗ ಮತ್ತು ಮುಂಭಾಗದಲ್ಲಿ ಡ್ರಮ್ ಹೊಂದಿರುವ ಡೀಲಕ್ಸ್ ಹಾಗೂ ಮುಂಭಾಗದಲ್ಲಿ ಡಿಸ್ಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿರುವ ಡೀಲಕ್ಸ್ ಎಂಬ ಮೂರು ಆವೃತ್ತಿಗಳಲ್ಲಿ ಮಾರಾಟ ಮಾಡಲಿದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಪ್ರೀಮಿಯಂ ಬೈಕ್ ಆದ ಹೋಂಡಾ ಸಿಬಿ ಶೈನ್ ಎಸ್ಪಿ ಬೈಕ್ ಸಹ ಅಷ್ಟೇ ಪ್ರಮಾಣದ ಪವರ್ ಉತ್ಪಾದಿಸುವ ಸಾಧ್ಯತೆಗಳಿವೆ. ಸಿಬಿ ಶೈನ್ 125 ಬೈಕಿನಲ್ಲಿ 4 ಸ್ಪೀಡ್‍ನ ಗೇರ್‍ಬಾಕ್ಸ್ ಯುನಿಟ್‍ಗಳಿದ್ದರೆ, ಸಿಬಿ ಶೈನ್ ಎಸ್‍ಪಿ ಬೈಕಿನಲ್ಲಿ 5 ಸ್ಪೀಡ್‍ನ ಗೇರ್‍ಬಾಕ್ಸ್ ಯುನಿಟ್ ಇರಲಿದೆ. ಸಿಬಿ ಶೈನ್ ಎಸ್ಪಿ ಬೈಕ್ ಸಿಬಿ ಶೈನ್‌ನೊಂದಿಗೆ ಬಿಡಿ ಭಾಗಗಳನ್ನು ಹಂಚಿಕೊಳ್ಳುವುದನ್ನು ಗಮನಿಸಿದರೆ, ಸಿಬಿ ಶೈನ್ ಎಸ್‍ಪಿ ಬೈಕಿನ ಗಾತ್ರದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹೋಂಡಾ ಕಂಪನಿಯು ಇತ್ತೀಚೆಗಷ್ಟೇ ತನ್ನ ಮೊದಲ ಬಿಎಸ್ 6 ಎಂಜಿನ್ ವಾಹನವಾದ ಬಿಎಸ್ 6 ಆಕ್ಟಿವಾ 125 ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಪ್ರೀಮಿಯಂ ಸ್ಕೂಟರಿನ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.67,490ಗಳಾಗಿದೆ. ಮಾದರಿಗಳನ್ನು ಅವಲಂಬಿಸಿ ಈ ಸ್ಕೂಟರಿನ ಬೆಲೆಯು ಸುಮಾರು ರೂ.7,000ಗಳವರೆಗೆ ಹೆಚ್ಚಿರಲಿದೆ. ಇದೇ ರೀತಿಯಲ್ಲಿ ಹೋಂಡಾ ಸಿಬಿ ಶೈನ್ 125 ಬೈಕಿನ ಬೆಲೆಗಳು ಸಹ ಏರಿಕೆಯಾಗುವ ಸಾಧ್ಯತೆಗಳಿವೆ.
Source: Indianautosblog


Click it and Unblock the Notifications