ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ರಾಯಲ್ ಎನ್‍‍ಫೀಲ್ಡ್ ಬೈಕ್ ಹೊಂದುವುದು ಪ್ರತಿ ಯುವಕರ ಕನಸು. ಯುವಕರು ಮಾತ್ರವಲ್ಲ ಯುವತಿಯರು ಕೂಡ ರಾಯಲ್‍ ಎನ್‍ಫೀಲ್ಡ್ ಲುಕ್ ಮತ್ತು ಅದರ ಸೌಂಡಿ‍ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ . ಅಂದು ಮಿಲಿಟರಿ ಉಪಯೋಗಕ್ಕೆಂದು ತಯಾರಿಸಲಾದ ರಾಯಲ್ ಎನ್‍ಫೀಲ್ಡ್, ಇಂದಿನ ಯುವಜನತೆಯ ಫೇವರೇಟ್ ಬೈಕ್ ಆಗಿದೆ.

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ರಾಯಲ್ ಎನ್‍‍ಫೀಲ್ಡ್ ಕೇವಲ ಸಾಮಾನ್ಯ ಜನರ ಮೆಚ್ಚಿನ ಬೈಕ್ ಅಲ್ಲ ಸೆಲೆಬ್ರಿಟಿಗಳು ಕೂಡ ಈ ಬೈಕಿಗೆ ಮಾರು ಹೋಗಿದ್ದಾರೆ. ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ಜಾಲಿ ರೈಡ್ ತೆರಳುವುದು ಅಂದರೆ ಸೆಲೆಬ್ರಿಟಿಗಳಿಗೆ ಒಂದು ರೀತಿಯ ಕ್ರೇಜ್. ರಾಯಲ್ ಎನ್‍‍ಫೀಲ್ಡ್ ಅನ್ನು ಬಳಸುವ ಸೆಲೆಬ್ರಿಟಿಗಳು ಯಾರೆಲ್ಲ ಎಂಬುವುದರ ಮಾಹಿತಿ ಇಲ್ಲಿದೆ.

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ಜಾನ್ ಅಬ್ರಹಾಂ

ಬಾಲಿವುಡ್ ನಟ ಜಾನ್ ಅಬ್ರಹಾಂ ಅವರಿಗೆ ಬೈಕು ಮತ್ತು ಕಾರುಗಳ ಕ್ರೇಜ್ ಹೆಚ್ಚು. ಅವರ ಬಳಿ ಹಲವಾರು ದುಬಾರಿ ಕಾರುಗಳು ಮತ್ತು ಬೈಕುಗಳ ಸಂಗ್ರಹವಿದೆ. ಇದರಲ್ಲಿ ನಿಸ್ಸಾನ್ ಜಿಟಿ-ಆರ್, ಲ್ಯಾಂಬೋರ್ಗಿನಿ ಗಲ್ಲಾರ್ಡೊ ಮತ್ತು ಯಮಹಾ ಆರ್‍‍ಡಿ 350 ಬೈಕ್ ಸೇರಿದಂತೆ ಹಲವಾರು ಬೈಕ್ ಕಾರುಗಳನ್ನು ಹೊಂದಿದ್ದಾರೆ. ಇವರ ಬಳಿ ಇರುವ ಕಸ್ಟಮೈಸ್ ರಾಯಲ್ ಎನ್‍‍ಫೀಲ್ಡ್ ಬೈಕ್ ಅನ್ನು ಲೈಟ್‌ಫೂಟ್ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ರಜಪೂತಾನ ಕಸ್ಟಮ್ಸ್ ಮಾರ್ಪಡು ಮಾಡಿದೆ.

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ಗುಲ್ ಪನಾಗ್

ಬಾಲಿವುಡ್‌ನ ಪ್ರತಿಭಾವಂತ ಕಲಾವಿದೆ ನಟಿ ಗುಲ್ ಪನಾಗ್ ಅವರಿಗೆ ಕಾರು ಬೈಕುಗಳ ಮೇಲೆ ಕ್ರೇಜ್ ತುಸು ಹೆಚ್ಚಿದೆ. ಇವರ ಬಳಿ ದುಬಾರಿ ಕಾರು ಮತ್ತು ಬೈಕುಗಳನ್ನು ಹೊರತುಪಡಿಸಿ ಮಾರ್ಪಾಡು ಮಾಡಿದ ಸ್ಕಾರ್ಪಿಯೊ ಎಸ್‍‍ಯು‍ವಿಯನ್ನು ಹೊಂದಿದ್ದಾರೆ. ಇವರ ಬಳಿ ರಾಯಲ್ ಎನ್‍ಫೀಲ್ಡ್ ಎಲೆಕ್ಟ್ರಾ ಬೈಕ್ ಸಹ ಇದೆ. ಈ ಬೈಕಿನಲ್ಲಿ ಹಲವಾರು ಬಾರಿ ಅವರೊಬ್ಬರೆ ಅನೇಕ ಬಾರಿ ಸವಾರಿ ಮಾಡುತ್ತಾರೆ.

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ನಾನಾ ಪಟೇಕರ್

ನಾನಾ ಪಟೇಕರ್ ಬಾಲಿವುಡ್ ಪ್ರಸಿದ್ದ ನಟ. ಇವರಿಗೆ ರಾಯಲ್ ಎನ್‍‍ಫೀಲ್ಡ್ ನಲ್ಲಿ ಬಿ-ಟೌನ್ ಸುತ್ತ ಸವಾರಿ ಮಾಡುವುದನ್ನು ಇಷ್ಟಪಡುತ್ತಾರೆ. ಇವರು ರಾಯಲ್ ಎನ್‌ಫೀಲ್ಡ್ ಡಸರ್ಟ್ ಸ್ಟಾರ್ಮ್‌ ಬೈಕ್ ಅನ್ನು ಹೊಂದಿದ್ದಾರೆ. ಇವರು ಈ ಬೈಕಿನಲ್ಲಿ ಹಲವಾರು ಬಾರಿ ಸಿಟಿ ರೌಂಡ್ ಹೋಗಿದ್ದಾರೆ. ಇದು ರಾಯಲ್ ಎನ್‍‍ಫೀಲ್ಡ್ ಸರಣಿಯ ದುಬಾರಿ ಬೈಕುಗಳಲ್ಲಿ ಒಂದಾಗಿದೆ.

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ವರುಣ್ ಧವನ್

ಬಾಲಿವುಡ್‍ ನಟ ವರುಣ್ ಧವನ್ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ನಟರು ತೆರೆ ಮೇಲೆ ಮಾತ್ರ ಹೀರೋ ಅಲ್ಲ ತೆರೆ ಹಿಂದೆಯೂ ಕೆಲವರ ಜೀವನದಲ್ಲಿ ಹೀರೋ ಆಗಿರುತ್ತಾರೆ. ಅವರಲ್ಲಿ ನಟ ವರುಣ್ ಧವನ್ ಕೂಡಾ ಒಬ್ಬರು. ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಹಾಗೂ ಕಲಾವಿದರಿಗೆ ನೆರವು ನೀಡುವ ಎಲ್ಲರ ಗಮನ ಸೆಳೆದ ನಟ. ಇವರ ಬಳಿ ಕಸ್ಟಮ್ ಆಲಿವ್ ಗ್ರೀನ್ ಪೇಂಟೆಡ್ ಬುಲೆಟ್ 500 ಬೈಕ್ ಇದೆ. ಇವರು ಈ ಬೈಕಿನಲ್ಲಿ ಹಲವು ಬಾರಿ ಜಾಲಿ ರೈಡಿಗೆ ತೆರಳಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ಆದಿತ್ಯ ರಾಯ್ ಕಪೂರ್

ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಆಶಿಕಿ 2 ಚಲನಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಈ ನಟನ ಬಳಿ ಎರಡು ಪ್ರಿ ಯುನಿಟ್ ಎಂಜಿನ್ ಹೊಂದಿರುವ ಬೈಕ್‍‍ಗಳಿವೆ. ಎವಿಎಲ್-ಎಂಜಿನ್ ಮ್ಯಾಕಿಸ್ಮೊ 500 ಮತ್ತು ಐರಾನ್ ಎಂಜಿನ್ ಹೊಂದಿರುವ ಮತ್ತೊಂದು 500 ಸಿಸಿ ರಾಯಲ್ ಎನ್‌ಫೀಲ್ಡ್ ಅನ್ನು ಹೊಂದಿದ್ದಾರೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ಜಾಕಿ ಶ್ರಾಫ್

ಈ ಚಿತ್ರದಲ್ಲಿರುವ ರಾಯಲ್ ಎನ್‍‍ಫೀಲ್ಡ್ ಬೈಕು ಸಾಮಾನ್ಯ ಕ್ಯಾಸ್ಟ್ ಐರಾನ್ ಸರಣಿಯ ಬೈಕ್ ಆಗಿತ್ತು. ಜಾಕಿ ಶ್ರಾಫ್ ಅವರ ಈ ಬೈಕ್ ಅನ್ನು ವೆರ್ಡೆಂಚಿ ಕಸ್ಟಮ್ಸ್ ಅವರು ವಿಚಿತ್ರವಾಗಿ ಮಾರ್ಪಡಿಸಿದೆ. ಸ್ಕೇಲ್ಟರ್ ಎಂದು ಕರೆಯಲಾಗುವ ಈ ಬೈಕು ಭಾರತದ ಅತ್ಯಂತ ವಿಶಿಷ್ಟವಾಗಿ ಮಾರ್ಪಡಿಸಿದ ರಾಯಲ್ ಎನ್‍‍ಫೀಲ್ಡ್ ಬೈಕ್ ಆಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ಮೋಹನ್ ಲಾಲ್

ಮೋಹನ್ ಲಾಲ್ ಜನಪ್ರಿಯ ಮಲಯಾಳಂ ಚಲನಚಿತ್ರ ನಟ. ಅವರ ಬಳಿ ರಾಯಲ್ ಎನ್‍ಫೀಲ್ಡ್ ಕ್ರೋಮ್ ಬೈಕಿದೆ. ಇತರ 500 ಸಿಸಿ ಎನ್‍‍ಫೀಲ್ಡ್ ಬೈಕುಗಳಲ್ಲಿ ಕಂಡುಬರುವಂತಹ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 27.2 ಬಿ‍ಹೆಚ್‍ಪಿ ಪವರ್ ಮತ್ತು 41.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ಜಾಂಟಿ ರೋಡ್ಸ್

ಇವರು ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚು ಚಿರಪರಿಚಿತ, ಜಾಂಟಿ ರೋಡ್ಸ್ ಅವರ ನಿವೃತ್ತಿಯಿಂದ ಇಷ್ಟು ವರ್ಷಗಳ ನಂತರವೂ ಅವರ ಅಭಿಮಾನಿಗಳು ಸಂಖ್ಯೆ ಕಡಿಮೆಯಾಗಿಲ್ಲ.ಇವರು ಇತ್ತೀಚಿಗೆ ತಮ್ಮ ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದಾರೆ. ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು. ಇವರು ಭಾರತದಲ್ಲಿ ಹಲವು ಬಾರಿ ರಾಯಲ್ ಎನ್‍ಫೀಲ್ದ್ ಕ್ಲಾಸಿಕ್ 500 ಬೈಕಿನಲ್ಲಿ ಸವಾರಿ ಮಾಡಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಹೊಂದಿರುವ ಸೆಲೆಬ್ರಿಟಿಗಳು

ರಾಯಲ್ ಎನ್‍‍ಫೀಲ್ಡ್ ವಿಶ್ವದ ಅತ್ಯಂತ ಹಳೆಯ ಬೈಕ್ ಬ್ರ್ಯಾಂಡ್, ಅಲ್ಲದೇ ಈಗಲೂ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿದೆ. ರಾಯಲ್ ಎನ್‍‍ಫೀಲ್ಡ್ ಬ್ರ್ಯಾಂಡ್ ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಜನಪ್ರಿತೆಯನ್ನು ಹೊಂದಿದೆ.

Article Published On: Monday, November 11, 2019, 12:51 [IST]
English summary
FAMOUS people who ride Royal Enfields - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+