ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಚೀನಾ ಮೂಲದ ವಾಹನ ತಯಾರಕ ಸಂಸ್ಥೆ ಸಿಎಫ್ ಮೋಟೊ ಜುಲೈ 19ರಂದು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ನಾಲ್ಕು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಸಿಎಫ್ ಮೋಟೊ ಬಿಡುಗಡೆ ಮಾಡಲಾದ ಬೈಕ್‍ಗಳು ರೂ. 2.29 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇದರಲ್ಲಿ ಎರಡು ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ಸ್, ಒಂದು ಅಡ್ವೆಂಚರ್ ಟೂರರ್ ಹಾಗು ಒಂದು ಸ್ಪೋರ್ಟ್-ಟೂರರ್ ಬೈಕ್ ಆಗಿದೆ.

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಬೈಕ್‍ಗಳ ಬೆಲೆ ಮತ್ತು ಬುಕ್ಕಿಂಗ್

ಸಿಎಫ್ ಮೋಟೊ ಬಿಡುಗಡೆ ಮಾಡಲಾದ 300ಎನ್‍ಕೆ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.29 ಲಕ್ಷ, 650ಎನ್‍ಕೆ ಬೈಕ್ ರೂ. 3.99 ಲಕ್ಷದ ಬೆಲೆ, 650ಎಂಟಿ ರೂ. 4.99 ಮತ್ತು 650ಜಿಟಿ ಬೈಕ್ ರೂ. 5.49 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ನಿಮ್ಮ ಸಮೀಪದಲ್ಲಿರುವ ಎಎಂಡಬ್ಲ್ಯೂ ಡಿಲರ್‍‍ಗಳ ಬಳಿ ರೂ. 5000 ನೀಡಿ ಅಥವಾ ಎಎಂಡಬ್ಲ್ಯೂ ಸಂಸ್ಥೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಇನ್ನು ಸಿಎಫ್ ಮೋಟೊ ಕಂಪೆನಿಯು ಬಿಡುಗಡೆ ಮಾಡಲಾದ ಎಲ್ಲಾ ಬೈಕ್‍ಗಳನ್ನು ದೇಶಿಯವಾಗಿ ಉಪಕರಣಗಳನ್ನು ಜೋಡಿಸಲಾಗುತ್ತದೆ. ಈ ಬೈಕ್ ಅನ್ನು ಚೀನಾದಿಂದ ಸಿಕೆಡಿ (ಕಂಪ್ಲೀಟ್ಲಿ ಕ್ನಾಕ್ಡ್ ಡೌನ್) ಯೂನಿಟ್ ಮಾರ್ಗದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿರುವ ಎಎಂಡಬ್ಲ್ಯೂ ಮೋಟಾರ್‍‍ಸೈಕಲ್ಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿ ತಮ್ಮ 4 ಹೊಸ ಬೈಕ್‍ಗಳ ಉಪಕರಣಗಳು, ಮಾರಾಟ ಮತ್ತು ಸರ್ವೀಸಿಂಗ್‍ನ ಬಾಧ್ಯತೆಯನ್ನು ನೀಡಿದೆ.

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಎಎಂಡಬ್ಲ್ಯೂ ಮೋಟಾರ್‍‍ಸೈಕಲ್ಸ್ ಹೈದೆರಾಬಾದ್‍‍ನ ಸಮೀಪದಲ್ಲಿರುವ ಪ್ಲಾಂಟ್ನಲ್ಲಿ ನಾಲ್ಕು ಹೊಸ ಬೈಕ್‍ಗಳ ಉತ್ಪಾದನೆಯನ್ನು ಮಾಡಲಾಗುತ್ತದೆ. ಎಎಂಡಬ್ಲ್ಯೂ ವರ್ಷಕ್ಕೆ 10,000 ಯೂನಿಟ್ ಬೈಕ್‍ಗಳನ್ನು ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದೆ. ಸಿಎಫ್ ಮೋಟೊ ಸಧ್ಯಕ್ಕೆ ರಾಷ್ಟ್ರದೆಲ್ಲೆಡೆ ಏಳು ಡೀಲರ್‍‍ಶಿಪ್‍ಗಳನ್ನು ತೆರಯಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಡೀಲರ್‍‍ಶಿಪ್‍ಗಳನ್ನು ತೆರೆಯುವುದಾಗಿ ಹೇಳಿಕೊಂಡಿದೆ.

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಎಂಜಿನ್ ಸಾಮರ್ಥ್ಯ

ಸಿಎಫ್ ಮೋಟೊ ಬಿಡುಗಡೆ ಮಾಡಲಾದ 300ಎನ್‍ಕೆ ಬೈಕ್ 292ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 33.5 ಬಿಹೆಚ್‍ಪಿ ಮತ್ತು 20.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಡಿ‍ಅರ್‍‍‍ಎಲ್‍ಗಳು ಮತ್ತು ಟೈಲ್‍ಲೈಟ್ಸ್ ಹಾಗು ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಇನ್ನು 650ಸಿಸಿ ಬೈಕ್‍ಗಳಾದ 650ಎನ್‍ಕೆ, 650ಜಿಟಿ ಮತ್ತು 650ಎಂಟಿ ಬೈಕ್ 649ಸಿಸಿ ಪ್ಯಾರಲಲ್-ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 66.68 ಬಿಹೆಚ್‍ಪಿ ಮತ್ತು 56ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕ್‍ಗಳಲ್ಲಿ ನೀಡಲಾದ ಎಂಜಿನ್ ಒಂದೇ ಆದರೂ ರೈಡಿಂಗ್ ಸ್ಟೈಲ್‍ನ ಮೇಲೆ ಟ್ಯೂನ್ ಮಾಡಲಾಗುವ ಹಾಗೆ ಎಂಜಿನ್ ಅನ್ನು ವಿನ್ಯಾಸ ಮಾಡಲಾಗಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

650ಸಿಸಿ ಆಧಾರಿತ ಬೈಕ್‍ಗಳು ಹೆಚ್ಚು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಎಲ್ಇಡಿ ಲೈಟಿಂಗ್ ಆಲ್-ಅರೌಂಡ್, ಫುಲ್ಲಿ ಡಿಜಿಟಲ್ ಟಿಎಫ್‍ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಒಂಗೊಂಡತೆ ಇನ್ನು ಹಲವಾರು ಫೀಚರ್ಸ್ ಅನ್ನು ಪಡೆದಿದೆ.

MOST READ: ಎಕ್ಸ್‌ಪ್ರೆಸ್‌ವೇಗಳಲ್ಲಿ ಎದುರಾಗುವ ಅಪಾಯಕಾರಿ ಸಂಗತಿಗಳಿವು..!

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಸಿಎಫ್ ಮೋಟೊ ಸಂಸ್ಥೆಯು ಕೊನೆಗೂ ದೇಶಿಯ ಮಾರಕಟ್ಟೆಯಲ್ಲಿ ತಮ್ಮ ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಲಾದ ಈ ಬೈಕ್‍ಗಳು ಈ ಮುನ್ನವೇ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡು ಬೈಕ್ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿತ್ತು. ಸಿಎಫ್ ಮೋಟೊ ಸಂಸ್ಥೆಯು ಶೀಘ್ರವೇ ತಮ್ಮ ಡೀಲರ್‍‍ಶಿಪ್‍ಗಳನ್ನು ವಿಸ್ತರಿಸಲಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಸಹ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿಕೊಂಡಿದೆ.

MOST READ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಾಹನಗಳಿಗೆ ಹೊಸ ರೂಲ್ಸ್..!

ಸಿಎಫ್ ಮೋಟೊ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ

ಸಿಎಫ್ ಮೋಟೊನ 300ಎನ್‍ಕೆ ಬೈಕ್ ಮಾರುಕಟ್ಟೆಯಲ್ಲಿರುವ ಕೆಟಿಎಂ ಡ್ಯೂಕ್ 390, ಹೋಂಡಾ ಸಿಬಿ300ಆರ್ ಬೈಕ್‍ಗಳಿಗೆ ಪೈಪೋಟಿ ನೀಡಿದರೆ, ಇನ್ನುಳಿದ 600ಎನ್‍ಕೆ, 600ಎಂಟಿ ಮತ್ತು 650ಜಿಟಿ ಬೈಕ್‍ಗಳು ಕವಾಸಕಿ ನಿಂಜಾ 650, ಕವಾಸಕಿ ವರ್ಸಿಸ್ 650ಮತ್ತು ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Article Published On: Tuesday, August 6, 2019, 15:18 [IST]
English summary
CFMoto New Bikes Bookinigs Open In India. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+