ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ನವೆಂಬರ್ 2018ರಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಎಂಟ್ರಿ ಕೊಟ್ಟ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಈ ಹಿಂದೆಯೆ ತಮ್ಮ ಕೆಲ ಗ್ರಾಹಕರಿಗೆ ಬೈಕ್‍ಗಳ ವಿತರಣೆಯನ್ನು ಮಾಡಲಾಗಿದ್ದು, ಕೆಲವು ದಿನಗಳ ಹಿಂದಷ್ಟೆ ಸಂಸ್ಥೆಯ ಸ್ಥಾಪಕರು ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಜೂನ್ ತಿಂಗಳ ಕೊನೆಯ ವಾರದಿಂದ ವಿತರಣೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿಕೊಂಡಿತ್ತು.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಇದೀಗ ನಾಗ್‍ಪುರ್‍‍‍ನಾಲ್ಲಿರುವ ಶ್ರೀ ಕುಷಾಲ್ ಮೋಟಾರ್ ಎಂಬ ಜಾವಾ ಡೀಲರ್‍‍ಗಳು ಡ್ಯುಯಲ್ ಚಾನಲ್ ಎಬಿಎಸ್ ಆಧಾರಿತ ಜಾವಾ ಬೈಕ್‍ಗಳ ವಿತರಣೆಯನ್ನು ಪ್ರಾರಂಭಿಸಲಾಗಿದ್ದು, ಗುಣ್ವಂತ್ ಖೋಬ್ರಾಗಡ್ ಎಂಬಾತ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್ ಡೆಲಿವರಿ ಪಡೆದ ಮೊದಲ ಗ್ರಾಹಕರಾಗಿದ್ದಾರೆ. ಕೊನೆಗು ಹಲವು ದಿನಗಳಿಂಡ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರ ಕೈಗೆ ಹೊಸ ಬೈಕ್‍ಗಳು ಸೇರಿತ್ತಿದ್ದು, ಇನ್ನಿತರೆ ನಗರದಲ್ಲಿರುವ ಡೀಲರ್‍‍ಗಳು ಡೆಲಿವರಿಯನ್ನು ಶುರು ಮಾಡಿದ್ದಾರೆ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

Image Courtesy: Jawa Motorcycles Nagpur/Facebook

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಇಲ್ಲಿಯ ವರೆಗೂ ಎಷ್ಟು ವಾಹನಗಳಿಗಾಗಿ ಬುಕ್ಕಿಂಗ್ ಪಡೆದಿದೆ ಎಂಬ ಸರಿಯಾದ ಮಾಹಿತನ್ನು ಹೊರಹಾಕಿಲ್ಲವಾಗಿದ್ದು, ಎಷ್ಟು ಬೈಕ್‍ಗಳನ್ನು ವಿತರಣೆ ಮಾಡಿದೆ ಎಂಬ ಮಾಹಿತಿಯನ್ನು ಕೂಡಾ ಹೊರಹಾಕಿಲ್ಲ. ಆದರೆ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್ ವರದಿ ಪ್ರಕಾರ ನವೆಂಬರ್ 2018 ರಿಂದ ಮಾರ್ಚ್ 2019ರ ವರೆಗು ಕೇವಲ 255 ಬೈಕ್‍ಗಳನ್ನು ಸಂಸ್ಥೆಯು ಡಿಸ್‍ಪ್ಯಾಚ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಇನ್ನು ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಇದರಲ್ಲಿ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಈ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿರುವ ಜಾವಾ ಸಂಸ್ಥೆಯು ಬೈಕ್ ವಿತರಣೆಯೊಂದಿಗೆ ಮತ್ತಷ್ಟು ಬೈಕ್ ಮಾರಾಟ ಮಳಿಗೆಗಳನ್ನು ತೆರೆಯುವ ಇರಾದೆಯಲ್ಲಿದ್ದು, ಆರ್‌ಇ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಿದೆ.

ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು

ಲಭ್ಯವಿರುವ ಬಣ್ಣಗಳು

ಜಾವಾ ಬಿಡುಗಡೆಗೊಳಿಸಿದ ಈ ಎರಡೂ ಬೈಕ್‍ಗಳು ಆಕರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಜಾವಾ ಬೈಕ್ - ಜಾವಾ ಬ್ಲಾಕ್, ಜಾವಾ ಮರೂನ್ ಮತ್ತು ಜಾವಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

More from DriveSpark

Article Published On: Tuesday, July 2, 2019, 15:22 [IST]
English summary
Dual Channel ABS Jawa Bikes Delivery Starts. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+