ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್

ಲಿ ಐಯಾನ್ಸ್ ಎಲೆಕ್ಟ್ರಿಕ್ ಕಂಪನಿಯು ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಕೂಟರ್‍‍ನ ಬೆಲೆಯು ರೂ.65,000 ಗಳಾಗಿದ್ದು, ಕಾನ್ಫಿಗರೇಷನ್ ಆಧಾರದ ಮೇಲೆ ಬೆಲೆಯು ರೂ.99,000 ಗಳವರೆಗೆ ಇರಲಿದೆ. ಐಯಾನ್ಸ್ ಎಲೆಕ್ಟ್ರಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಭಾರತೀಯ ಮೂಲದ ಕಂಪನಿಯು ವಿವಿಧ ರೀತಿಯ ಜನರಿಗಾಗಿ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳನ್ನು ಅಭಿವೃದ್ಧಿ ಪಡಿಸಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳ ಉದ್ಯಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಹಲವಾರು ಕಂಪನಿಗಳು ನಾನಾ ವಿವಿಧ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮವು ದೇಶಿಯ ಮಾರುಕಟ್ಟೆಗೆ ಹೊಸದಾಗಿರುವ ಕಾರಣ ಬಹುತೇಕ ವಾಹನ ತಯಾರಕರು ಕಡಿಮೆ ಪರ್ಫಾಮೆನ್ಸ್ ಹೊಂದಿರುವ, ಹೆಚ್ಚು ದೂರ ಕ್ರಮಿಸಬಲ್ಲ ಸ್ಕೂಟರ್‍‍‍ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಹೆಚ್ಚು ದೂರವನ್ನು ಕ್ರಮಿಸುವ ಹಲವಾರು ಸ್ಕೂಟರ್‌ಗಳಿವೆ, ಆದರೆ ಅವುಗಳ ಬೆಲೆ ಹೆಚ್ಚಾಗಿರುತ್ತದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್

ವ್ಯಾಪಕ ಸಂಶೋಧನೆಯ ನಂತರ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ವಿಭಾಗದಲ್ಲಿ ಸ್ಪೊಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಐಯಾನ್ಸ್ ಎಲೆಕ್ಟ್ರಿಕ್ ಕಂಪನಿ ಹೇಳಿದೆ. ಎಲೆಕ್ಟ್ರಿಕ್ ಸ್ಪೊಕ್ ಸ್ಕೂಟರ್‍‍ನಲ್ಲಿ ಹೊರತೆಗೆಯಬಲ್ಲ 2.9 ಕಿ.ವ್ಯಾ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಬ್ರಷ್‍‍ಲೆಸ್ ಡಿಸಿ ಹಬ್ ಮೋಟಾರ್‍‍ನಿಂದ ಚಲಾಯಿಸಲಾಗುವ ಈ ಸ್ಕೂಟರ್, 2.1 ಕಿ.ವ್ಯಾ ಗರಿಷ್ಠ ವಿದ್ಯುತ್ ಉತ್ಪಾದನೆಯ ಜೊತೆಗೆ, ನಿರಂತರ ವಿದ್ಯುತ್ ಉತ್ಪಾದನೆಯು 1.2 ಕಿ.ವ್ಯಾ ಉತ್ಪಾದಿಸುತ್ತದೆ. ಇದರಿಂದಾಗಿ ಈ ಸ್ಕೂಟರ್‌ ಪ್ರತಿ ಗಂಟೆಗೆ 45 ಕಿ.ಮೀ ವೇಗವನ್ನು ಹೊಂದಲಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಕಾನ್ಫಿಗರೇಷನ್ ಆಯ್ಕೆಯನ್ನು ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ನೀಡಲಾಗಿದೆ. ಆಯ್ಕೆ ಮಾಡಿದ ಬ್ಯಾಟರಿ ಕಾನ್ಫಿಗರೇಶನ್‌ಗೆ ಅನುಗುಣವಾಗಿ, ಸ್ಕೂಟರ್ 50-130 ಕಿಲೋಮೀಟರ್‌ಗಳ ದೂರವನ್ನು ಕ್ರಮಿಸಲಿದೆ. ಲಿ ಐಯಾನ್ಸ್ ಎಲೆಕ್ಟ್ರಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‍‍ನ ನಿರ್ದೇಶಕರಾದ ಕ್ಯಾಪ್ಟನ್ ಗುರುವಿಂದರ್ ಸಿಂಗ್‍‍ರವರು ಮಾತನಾಡಿ, ಪರಿಸರ ಸ್ನೇಹಿ ವಾಹನಗಳು ಈಗ ಅಗತ್ಯವಾಗಿವೆ. ಲಿ ಐಯಾನ್ ಎಲೆಕ್ಟ್ರಿಕ್‍‍ನಲ್ಲಿ ನಾವು ಎಲೆಕ್ಟ್ರಿಕ್ ಚಾಲಾನಾ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೇವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್

ಇವುಗಳ ಪರಿಣಾಮವು ಪರಿಸರದ ಮೇಲೆ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲಾಗುವುದರ ಜೊತೆಗೆ ಸಮುದಾಯ ಹಾಗೂ ರಾಷ್ಟ್ರಗಳ ಮೇಲಾಗುತ್ತವೆ. ಈ ಎರಡು ಹೊಸ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬಿಡುಗಡೆಯಿಂದಾಗಿ, ನಾವು ಜನರಿಗೆ ಪರಿಸರ ಸ್ನೇಹಿ ದೇಶವನ್ನು ನಿರ್ಮಿಸಲು ಪ್ರೇರಣೆ ನೀಡುತ್ತೇವೆ ಎಂದು ತಿಳಿಸಿದರು. ನಮ್ಮ ದ್ವಿಚಕ್ರ ವಾಹನಗಳ ವಿನ್ಯಾಸವನ್ನು ಸ್ಥಳೀಯವಾಗಿ ಮಾಡಲಾಗಿದೆ. ಇದು 100%ನಷ್ಟು ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ತಯಾರಾಗಿದೆ.

MOST READ: ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಹ್ಯುಂಡೈ ಹೊಸ ಎಲೈಟ್ ಐ20

ಈ ಸ್ಕೂಟರ್ ಸಂಪೂರ್ಣವಾಗಿ ದೇಶಿಯವಾಗಿದೆ. ಯಾವುದೇ ಉತ್ಪನ್ನವು ಯಶಸ್ವಿಯಾಗಬೇಕಾದರೆ ಅದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿಕೊಳ್ಳಬೇಕು. ಇಲ್ಲಿಯೂ ಸಹ, ನಾವು ಅದ್ದೂರಿಯಾಗಿ ಬಿಡುಗಡೆಗೊಳಿಸುವ ಮೊದಲು ಪ್ರಿ ಆರ್ಡರ್ ಬುಕ್ಕಿಂಗ್‍‍ಗಳನ್ನು ಎದುರುನೋಡುತ್ತಿದ್ದೇವೆ ಎಂದು ಕ್ಯಾಪ್ಟನ್ ಸಿಂಗ್‍ರವರು ತಿಳಿಸಿದರು. ಸ್ಪೊಕ್ ಸ್ಕೂಟರ್ ಮೂಲ ವಿನ್ಯಾಸದ ಜೊತೆಗೆ ಸ್ಟೈಲಿಂಗ್ ಅನ್ನು ಹೊಂದಿದೆ. ಅಪ್ ಫ್ರಂಟ್ ವೃತ್ತಾಕಾರದ ಹೆಡ್‌ಲ್ಯಾಂಪ್ ಹೊಂದಿರುವ ವಿಶಿಷ್ಟ ವಿನ್ಯಾಸವಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್‍‍ನ ಟೇಲ್ ಲ್ಯಾಂಪ್‍‍ನಲ್ಲಿ ಇಂಟಿಗ್ರೇಟೆಡ್ ಆದ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳಿವೆ. ಹಿಂಭಾಗದಲ್ಲಿ ಫ್ಯಾಕ್ಟರಿಯಲ್ಲಿ ಫಿಟ್ ಆದ ಕಾರ್ಗೋ ಬಾಕ್ಸ್ ಥರ್ಮಲ್ ಇನ್ಸೂಲೇಷನ್ ಹೊಂದಿರುವ, ಎಲೆಕ್ಟ್ರಿಕ್ ಸ್ಪೊಕ್ ಸ್ಕೂಟರ್‍‍ಗಳನ್ನು ಜುಲೈ ತಿಂಗಳಿನಿಂದ ವಿತರಿಸಲಾಗುವುದು.

MOST READ: ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಪೊಕ್ ಎಲೆಕ್ಟ್ರಿಕ್ ಸ್ಕೂಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ, ಈ ಪಟ್ಟಿಗೆ ಸ್ಪೊಕ್ ಸ್ಕೂಟರ್ ಹೊಸ ಸೇರ್ಪಡೆಯಾಗಿದೆ. ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಡೆಲಿವರಿ ಮಾಡಲು ಎಲೆಕ್ಟ್ರಿಕ್ ಸ್ಪೊಕ್ ಸೂಕ್ತವಾಗಿದೆ. ಇ-ಕಾಮರ್ಸ್ ದೈತ್ಯ ಫ್ಲಿಪ್‍‍ಕಾರ್ಟ್ 2020ರ ಮಾರ್ಚ್ ವೇಳೆಗೆ ತನ್ನ ಉತ್ಪನ್ನಗಳನ್ನು ಡೆಲಿವರಿ ಮಾಡಲು 40% ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವುದಾಗಿ ಘೋಷಿಸಿದೆ. ಬಹುಶಃ ಇನ್ನು ಮುಂದೆ ಪಿಜ್ಜಾ ಡೆಲಿವರಿ ಮಾಡಲು ಸಹ ಈ ಸ್ಕೂಟರ್ ಅನ್ನೇ ಬಳಸುವ ಸಾಧ್ಯತೆಗಳಿವೆ.

Most Read Articles

Kannada
English summary
Elektrik Spock e-Scooter Launched In India — Seems Perfect For Doorstep Delivery - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X