ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಒಕಿನಾವ ಸ್ಕೂಟರ್ FAME-II (ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆ) ಯೋಜನೆ ಅಡಿಯಲ್ಲಿ ಸಬ್ಸಿಡಿ ಅನುಮೋದನೆ ಪಡೆಯಲು ದೇಶದ ಮೊದಲ ವಿದ್ಯುತ್ ದ್ವಿಚಕ್ರ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ಯೋಜನೆಯ ಪ್ರಕಾರ, ಸ್ಥಳೀಯವಾಗಿ ಮಾರಾಟವಾಗುವ ಎಲೆಕ್ಟ್ರಿಕ್ ವಾಹನಗಳು ಕೆಲವು ಷರತ್ತುಗಳನ್ನು ಪೂರೈಸಿದರೆ ಮಾತ್ರ ಸರ್ಕಾರವು ಸಬ್ಸಿಡಿಗಳನ್ನು ನೀಡಲಾಗುತ್ತದೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಿಕೊಳ್ಳುವ ಒಕಿನಾವ ಐ-ಪ್ರೈಸ್ ಮತ್ತು ರಿಡ್ಜ್+ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ತಮ್ಮ ಬ್ಯಾಟರಿ ಸಾಮರ್ಥ್ಯದ (ಕೆಡಬ್ಲ್ಯೂಎಚ್) ಆಧಾರದ ಮೇಲೆ ರೂ. 17,000 ರಿಂದ ರೂ. 26,000 ರ ನಡುವೆ ಸರ್ಕಾರದಿಂದ ಸಬ್ಸಿಡಿಯನ್ನು ಗ್ರಾಹಕರು ಪಡೆಯಬಹುದಾಗಿದ್ದು, ಅಂದರೆ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ಗಳ ಬೆಲೆಗೆ ಹೋಲಿಸಿದರೆ ರಿಡ್ಜ್+ ಸ್ಕೂಟರ್‍‍ಗಳು ಕಡಿಮೆ ಬೆಲೆಯಲ್ಲಿ ದೊರೆಯಲಿದೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

FAME-II ಅನುಮೋದನೆಯನ್ನು ಪಡೆಯುವ ಸಲುವಾಗಿ, ಉತ್ಪನ್ನವು ಕನಿಷ್ಟ ಗಂಟೆಗೆ 40 ಕಿಲೋಮೀಟರ್‍‍‍ನಷ್ಟು ವೇಗವನ್ನು ಹೊಂದಿರಬೇಕು, ಒಂದು ಬಾರಿಯ ಚಾರ್ಜ್‍ಗೆ ಕನಿಷ್ಟ 80 ಕಿಮೀ ವ್ಯಾಪ್ತಿ, ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸಬೇಕು ಮತ್ತು 50% ಸ್ಥಳೀಯ ಉಪಕರಣಗಳನ್ನು ಬಳಸಬೇಕಾಗಿದ್ದು, ಒಕಿನಾವಾ ಸಂಸ್ಥೆಯ ವಾಹನಗಳು ಮೇಲಿನ ಎಲ್ಲಾ ಷರತ್ತುಗಳನ್ನು ಪೂರೈಸಿವೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಒಕಿನಾವ ಸಂಸ್ಥಯು ಒಕಿನಾವ ಸಂಸ್ಥೆಯು ಈಗಾಗಲೇ ಭಾರತದಲ್ಲಿ ಪ್ರೈಸ್ ಮತ್ತು ರಿಡ್ಜ್ ಪ್ಲಸ್ ಎನ್ನುವ ಎರಡು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಇದೀಗ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಐ-ಪ್ರೈಸ್ ಎನ್ನುವ ಸ್ಕೂಟರ್ ಮಾದರಿಯನ್ನು ಪರಿಚಯಿಸಿದೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ತೆಗೆದು ಹಾಕಬಹುದಾದ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಐ-ಪ್ರೈಸ್ ಸ್ಕೂಟರ್‌ಗಳು ಕೇವಲ ಎರಡರಿಂದ ಎರಡೂವರೆ ಗಂಟೆಗಳಲ್ಲಿ ಪೂರ್ಣಪ್ರಮಾಣದ ಚಾರ್ಚಿಂಗ್ ಪಡೆದುಕೊಳ್ಳಲಿದ್ದು, ಇದು ಲಿಡ್ ಆ್ಯಸಿಡ್ ಬ್ಯಾಟರಿಗಳಿಂತ ಶೇ.40ರಷ್ಟು ಕಡಿಮೆ ತೂಕ ಹೊಂದಿರಲಿವೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಮೇಲೆ ಹೇಳಿದ ಹಾಗೆ ಮೈಲೇಜ್ ವಿಚಾರದಲ್ಲಿ ಸದ್ಯ ಗಮನಸೆಳೆಯುತ್ತಿರುವ ಲೀಥಿಯಂ ಬ್ಯಾಟರಿ ಸೌಲಭ್ಯವು ಐ-ಪ್ರೈಸ್ ಸ್ಕೂಟರ್‌ನಲ್ಲಿ ಜೋಡಣೆ ಮಾಡಲಾಗಿದ್ದು, ಇದು ಒಂದು ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಚ್ ಮಾಡಿದ್ದಲ್ಲಿ 160 ರಿಂದ 180 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿರುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿ ಗಂಟೆಗೆ ಗರಿಷ್ಠ 75 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಚಾಲನಾ ವೆಚ್ಚ, ಕಡಿಮೆ ನಿರ್ವಹಣೆ ವೆಚ್ಚ ಮತ್ತು ಶೂನ್ಯ ಮಾಲಿನ್ಯನೊಂದಿಗೆ ಪರಿಸರ ಸ್ನೇಹಿ ಸ್ಕೂಟರ್‌ ಮಾದರಿಯಾಗಿದೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಒಕಿನಾವ ಸ್ಕೂಟರ್ ವಿಶೇಷತೆಗಳು

ಹತ್ತು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವ ಒಕಿನಾವ ಸ್ಕೂಟರ್‌ಗಳು ಹೈ ಸ್ಪೀಡ್, ಡಿಜಿಟಲ್ ಸ್ಪೀಡೋಮೀಟರ್, ಆ್ಯಪ್ ಸಂಯೋಜಿತ ಫ್ಯೂಚರ್, ತ್ವರಿತ ಚಾರ್ಜಿಂಗ್, ಗರಿಷ್ಠ ಮೈಲೇಜ್, ರಿಯರ್ ಸಸ್ಪೆನ್ಷನ್, ಸ್ಟೈಲಿಷ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಲೈಟ್ಸ್ ಪಡೆದುಕೊಂಡಿರಲಿವೆ.

MOST READ: ಐಷಾರಾಮಿ ಸೌಲತ್ತುಗಳನ್ನು ಪಡೆದುಕೊಂಡ ಟೆಂಪೋ ಟ್ರಾವೆಲರ್ ಹೇಗಿದೆ ನೀವೆ ನೋಡಿ..!

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಹಾಗೆಯೇ ಸ್ಕೂಟರ್‌ಗಳಲ್ಲಿ ಸುರಕ್ಷಿತ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 12 ಇಂಚುಗಳ ಚಕ್ರಗಳು, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್, ಡ್ಯುಯಲ್ ಫ್ರಂಟ್ ಡಿಸ್ಕ್, ಸಿಂಗಲ್ ರಿಯರ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಅಸಿಸ್ಟನ್ ಬ್ರೇಕಿಂಗ್ ಸಿಸ್ಟಂ (E-ABS), ಸೈಡ್ ಸ್ಟ್ಯಾಂಡ್ ಸೇಫ್ಟಿ ಸೆನ್ಸಾರ್ ಸಹ ಇದರಲ್ಲಿದೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಇನ್ನು ಒಕಿನವಾ ರಿಡ್ಜ್+ ಸ್ಕೂಟರ್‍‍ನಲ್ಲಿಯೂ ಸಹ ಇನ್ನೊಂದು ವಿಶೇಷ ಅಂದ್ರೆ, ಓಕಿನವಾ ರಿಡ್ಜ್ ಸ್ಕೂಟರ್‌ಗಳಲ್ಲಿ ಜೋಡಿಸಲಾಗಿರುವ ಲೀಥಿಯಂ ಅಯಾನ್ ಬ್ಯಾಟರಿಯನ್ನು ತೆಗೆದು ಹಾಕಬಹುದಾದ ಸೌಲಭ್ಯವನ್ನು ಹೊಂದಿದ್ದು, ದೂರದ ಪ್ರಯಾಣದ ವೇಳೆಯು ಹೆಚ್ಚುವರಿ ಬ್ಯಾಟರಿ ಚಾರ್ಜಿಂಗ್ ಮಾಡಿಕೊಂಡು ಪ್ರಯಾಣಿಸಲು ಅನುಕೂಲಕವಾಗಿದೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಜೊತೆಗೆ 800 ವ್ಯಾಟ್ ಬಿಎಲ್‌ಡಿಸಿ ಮೋಟಾರ್(ವಾಟರ್ ಪ್ರೂಫ್) ಹೊಂದಿರುವ ಓಕಿನವಾ ರಿಡ್ಜ್ ಪ್ಲಸ್ ಸ್ಕೂಟರ್‌ಗಳು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ 120 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತವೆ. ಗಂಟೆಗೆ 55ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಓಕಿನವಾ ರಿಡ್ಜ್ ಪ್ಲಸ್ ಸ್ಕೂಟರ್‌ಗಳು ಈ ಹಿಂದಿನ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಿಂತಲೂ ಕಡಿಮೆ ವೇಗ ಹೊಂದಿದ್ದರೂ ಮೈಲೇಜ್ ವಿಚಾರದಲ್ಲಿ ಉತ್ತಮ ಆಯ್ಕೆಯಾಗಲಿದ್ದು, 150 ಕೆ.ಜಿ ತೂಕ ಪಡೆದುಕೊಂಡಿವೆ.

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಸ್ಕೂಟರ್‌ನಲ್ಲಿರುವ ಸುರಕ್ಷಾ ಸಾಧನಗಳು

ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಓಕಿನವಾ ಸಂಸ್ಥೆಯು ತನ್ನ ಸ್ಕೂಟರ್ ಮಾದರಿಗಳಲ್ಲಿ ಗರಿಷ್ಠ ಸುರಕ್ಷಾ ಸೌಲಭ್ಯಗಳನ್ನು ನೀಡುತ್ತಿದೆ. ಸದ್ಯ ಬಿಡುಗಡೆಯಾಗಿರುವ ರಿಡ್ಜ್ ಪ್ಲಸ್ ಸ್ಕೂಟರ್‌ನಲ್ಲೂ ಸಹ ಹಲವು ಸುಧಾರಿತ ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ.

MOST READ: ಟಾಟಾ ನೆಕ್ಸಾನ್ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಪಡೆಯಿರಿ 26 ಸಾವಿರದ ವರೆಗು ಸಬ್ಸಿಡಿ

ಸೆಂಟ್ರಲ್ ಲಾಕಿಂಗ್, ಆ್ಯಂಟಿ ಥೆಪ್ಟ್ ಅಲಾರಾಂ, ಕೀ ಲೆಸ್ ಎಂಟ್ರಿ ಜೊತೆಗೆ ಎಲೆಕ್ಟ್ರಾನಿಕ್ ಅಸಿಸ್ಟ್ ಬ್ರೇಕಿಂಗ್ ಸಿಸ್ಟಂ(ಇ-ಎಬಿಎಸ್) ಸೌಲಭ್ಯವನ್ನು ನೀಡಲಾಗಿದ್ದು, ಎರಡು ಬದಿಯ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಅಳವಡಿಸಲಾಗಿದೆ.

More from DriveSpark

Article Published On: Thursday, May 2, 2019, 10:36 [IST]
English summary
Okinawa Reduces Prices Of Electric Scooters Customers Can Get Subsidy Upto 26000. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+