ಬಿಡುಗಡೆಗೂ ಮುನ್ನವೇ ಲೈವ್‌ವೈರ್ ಬೈಕ್ ಉತ್ಪಾದನೆಗೆ ಬ್ರೇಕ್ ಹಾಕಿದ ಹಾರ್ಲೆ ಡೇವಿಡ್ಸನ್
ಕಳೆದ ತಿಂಗಳ ಹಿಂದಷ್ಟೇ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಆವೃತ್ತಿಯನ್ನು ಪ್ರದರ್ಶನಗೊಳಿಸಿ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ಹಾರ್ಲ ಡೇವಿಡ್ಸನ್ ಸಂಸ್ಥೆಯು ಇದೀಗ ಹೊಸ ಬೈಕ್ ಉತ್ಪಾದನೆ ಮತ್ತು ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.

ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿರುವ ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಆವೃತ್ತಿಯಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದ ಹಿನ್ನಲೆಯಲ್ಲಿ ಹೊಸ ಬೈಕ್ ಉತ್ಪಾದನೆ ಮತ್ತು ಪ್ರದರ್ಶನ ಪ್ರಕ್ರಿಯೆಗಳಿಗೆ ಬ್ರೇಕ್ ಹಾಕಿರುವ ಹಾರ್ಲೆ ಸಂಸ್ಥೆಯು, ಹೊಸ ಬೈಕಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವ ತನಕ ಯಾವುದೇ ರೀತಿಯ ಉತ್ಪಾದನಾ ಚಟುವಟಿಕೆ ಮತ್ತು ಪ್ರದರ್ಶನ ಪ್ರಕ್ರಿಯೆಗಳನ್ನು ಮಾಡುವುದಿಲ್ಲವೆಂದು ಅಧಿಕೃತವಾಗಿ ಮಾಹಿತಿ ನೀಡಿದೆ.

ಮಾಹಿತಿಗಳ ಪ್ರಕಾರ, ಹೊಸ ಲೈವ್‌ವೈರ್ ಬೈಕಿನ ಬ್ಯಾಟರಿ ಚಾರ್ಜಿಂಗ್ ಸಿಸ್ಟಂನಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದು, ಟೆಸ್ಟ್ ರೈಡ್ ವೇಳೆ ಕೆಲವು ಅನುಭವಿ ಬೈಕ್ ಸವಾರರು ಈ ಕುರಿತಂತೆ ಹಾರ್ಲೆ ಸಂಸ್ಥೆಗೆ ಸರಿಪಡಿಸುವಂತೆ ಮನವಿ ಮಾಡಿದ್ದರು.

ಟೆಸ್ಟ್ ರೈಡ್ ವೇಳೆ ನೂರಾರು ಗ್ರಾಹಕರಿಂದ ಕೆಲವು ಸಲಹೆ ಮತ್ತು ಸೂಚನೆಗಳಲ್ಲಿ ಬ್ಯಾಟರಿ ಚಾರ್ಜಿಂಗ್ ಸಿಸ್ಟಂನಲ್ಲಿರುವ ಲೋಪವನ್ನು ಗಂಭೀರವಾಗಿ ಪರಿಣಿಸಿರುವ ಹಾರ್ಲೆ ಸಂಸ್ಥೆಯು ಗ್ರಾಹಕರ ಸಲಹೆ ಮೇರೆಗೆ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ನಂತರವೇ ಹೊಸ ಬೈಕ್ ಉತ್ಪಾದನೆ ಮರುಚಾಲನೆ ನೀಡಲಾಗುವುದು ಎಂದಿದೆ.

ಲೈವ್‌ವೈರ್ ಎಲೆಕ್ಟ್ರಿಕ್ ಸೂಪರ್ ಬೈಕ್ ಸದ್ಯ ಭಾರತ ಸೇರಿದಂತೆ ಅಮೆರಿಕ ಮತ್ತು ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಈ ಹಿನ್ನೆಲೆ ಬಿಡುಗಡೆಗೂ ಮುನ್ನ ಪ್ರದರ್ಶನಗೊಳಿಸಿ ಆಯ್ದ ಮೋಟಾರ್‌ಸ್ಪೋರ್ಟ್ ಗ್ರಾಹಕರಿಗೆ ಮಾತ್ರವೇ ಟೆಸ್ಟ್ ರೈಡ್ ಸೌಲಭ್ಯವನ್ನು ಕಲ್ಪಿಸುತ್ತಿದೆ. ಈ ಮೂಲಕ ಗ್ರಾಹಕರ ಅನುಭವ ಮತ್ತು ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿರುವ ಹಾರ್ಲೆ ಸಂಸ್ಥೆಯು ಬಿಡುಗಡೆಯ ಹೊತ್ತಿಗೆ ಮತ್ತಷ್ಟು ಹೊಸ ಬದಲಾಣೆಗಳೊಂದಿಗೆ ರಸ್ತೆಗಿಳಿಯಲಿದೆ.

ಇನ್ನು ಹಲವು ವಿಶೇಷ ತಂತ್ರಜ್ಞಾನಗಳ ಪ್ರೇರಣೆ ಹೊಂದಿರುವ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಹಾರ್ಲೆ ಸಂಸ್ಥೆಯ ಸ್ಪೋರ್ಟ್‌ಸ್ಟರ್ ಬೈಕಿನ ವಿನ್ಯಾಸದೊಂದಿಗೆ ಸಿದ್ದವಾಗಿದ್ದು, ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ಲೈಟ್, ಎಲ್ಇಡಿ ಲೈಟಿಂಗ್ಸ್, ಬ್ಲೂಟೂಥ್ ಕನೆಕ್ವಿವಿಟಿ, 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟರ್ನ್ ಇಂಡಿಕೇಟರ್ ಸೌಲಭ್ಯಗಳೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಎಲೆಕ್ಟ್ರಿಕ್ ಬೈಕ್ ಮಾದರಿಯಾದರೂ ಸಾಮಾನ್ಯ ಬೈಕಿನ ರೂಪವನ್ನೇ ಉಳಿಸಿಕೊಳ್ಳಲು ಪ್ರಯತ್ನಿಸಿರುವ ಹಾರ್ಲೆ ಸಂಸ್ಥೆಯು ಡಮ್ಮಿಯಾದ ಫ್ಯೂಲ್ ಟ್ಯಾಂಕ್ ವಿನ್ಯಾಸದಲ್ಲಿ ಬ್ಯಾಟರಿ ಚಾರ್ಜಿಂಗ್ ಸಾಕೆಟ್ ಜೋಡಣೆ ಮಾಡುವುದರೊಂದಿಗೆ ಎಕ್ಸ್ ಪೋಸ್ಡ್ ಫ್ರೇಮ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಸೀಟ್ ಸೆಟಪ್ ಸೇರಿಸಿದೆ.
MOST READ: 2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಬೈಕ್ ಮಾದರಿಯು 15.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಸಾಂಪ್ರದಾಯಿಕ ಮಾದರಿಯ ಐಸಿ ಎಂಜಿನ್ ಬದಲಿಗೆ ನೇರವಾಗಿ ಎಲೆಕ್ಟ್ರಿಕ್ ಮೋಟರ್‌ಗೆ ಕನೆಕ್ಟ್ ಮಾಡಲಾಗಿದೆ. ಹೀಗಾಗಿ ಲೈವ್‌ವೈರ್‌ನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 103-ಬಿಹೆಚ್‍ಪಿ ಪವರ್ ಹಾಗೂ 116-ಎನ್‍ಎಂ ಟಾರ್ಕ್ ಉತ್ಪಾದಿಸಬಲ್ಲದು.
MOST READ: ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಈ ಮೂಲಕ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಅದ್ಭುತವಾದ ಪರ್ಫಾಮೆನ್ಸ್ ಹೊಂದಿದ್ದು, ಕಂಪನಿಯ ಪ್ರಕಾರ, ಲೈವ್‌ವೈರ್ ಸುಮಾರು 3 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0-100 ಕಿ.ಮೀ ವೇಗವನ್ನು ಪಡೆಯುವುದಲ್ಲದೇ ಒಂದು ಬಾರಿ ಚಾರ್ಜ್ ಮಾಡಿದರೆ 235 ಕಿ.ಮೀ ವ್ಯಾಪ್ತಿಯವರೆಗೂ ಚಲಿಸಬಹುದು.
MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಜೊತೆಗೆ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಸ ಬೈಕಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ. ಸಿಕ್ಸ್ ಆಕ್ಸಿಸ್‍ನ ಇನ್‍ಹರ್ಶಿಯಲ್ ಮ್ಯಾನೇಜ್‍ಮೆಂಟ್ ಯೂನಿಟ್(ಐಎಂಯು), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಡ್ರ್ಯಾಗ್ ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಮ್ (ಡಿಎಸ್‌ಸಿಎಸ್), ಕಾರ್ನರಿಂಗ್ ಎಬಿಎಸ್ ಹಾಗೂ ರಿಯರ್ ವ್ಹೀಲ್ ಲಿಫ್ಟ್ ಮಿಟಿಗೇಷನ್ ಸಿಸ್ಟಂನೊಂದಿಗೆ 17 ಇಂಚಿನ ಮೈಕೆಲಿನ್ ಸ್ಕಾರ್ಚರ್ ಟಯರ್ ಸೇರಿದಂತೆ ರೋಡ್, ಸ್ಪೋರ್ಟ್, ರೇನ್ ಹಾಗೂ ರೇಂಜ್ ರೈಡಿಂಗ್ ಮೋಡ್‍ಗಳನ್ನು ಸಹ ನೀಡಲಾಗಿದೆ.


Click it and Unblock the Notifications








