2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ದೇಶದ ಜನಪ್ರಿಯ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಟಿವಿಎಸ್ ಮೋಟಾರ್ ತನ್ನ ಮೊದಲ ಕ್ರೂಸರ್ ಬೈಕ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ವಿನೂತನ ವಿನ್ಯಾಸದೊಂದಿಗೆ ಸಿದ್ದವಾಗಿರುವ ಝೆಪ್ಲಿನ್ ಬೈಕ್ ಮಾದರಿಯು 2020ರ ಆರಂಭದಲ್ಲಿ ರಸ್ತೆಗಿಳಿಯುವುದು ಪಕ್ಕಾ ಆಗಿದೆ.

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಮೆಟ್ರೋ ನಗರ ಪ್ರದೇಶಗಳಲ್ಲಿ ಕ್ರೂಸರ್ ಬೈಕ್‌ಗಳಿಗೆ ಯುವ ಸಮುದಾಯವು ವಿಶೇಷ ಆಸಕ್ತಿ ತೋರುತ್ತಿದ್ದು, ಈ ಹಿನ್ನೆಲೆ ಬಜಾಜ್ ಅವೆಂಜರ್‌ಗಿಂತಲೂ ಉತ್ತಮವಾದ ಹೈ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಥಂಡರ್‌ಬರ್ಡ್ 350 ಆವೃತ್ತಿಗಿಂತಲೂ ಕಡಿಮೆ ಬೆಲೆಯಲ್ಲಿ ಝೆಪ್ಲಿನ್ ಕ್ರೂಸರ್ ಬೈಕ್ ಅನ್ನು ನಿರ್ಮಾಣ ಮಾಡಿದೆ. ಈ ಹಿಂದೆ 2018ರ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನವಾಗಿದ್ದ ಹೊಸ ಬೈಕ್ 2020ರ ಜನವರಿಯಲ್ಲಿ ಅಥವಾ ಫೆಬ್ರುವರಿಯಲ್ಲಿ ನಡೆಯಿರುವ ದೆಹಲಿ ಆಟೋ ಎಕ್ಸ್‌ಪೋ ಮೇಳದಲ್ಲಿ ಪ್ರದರ್ಶನಗೊಂಡ ನಂತರ ಖರೀದಿಗೆ ಲಭ್ಯವಿರಲಿದೆ.

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಅತ್ಯಾಧುನಿಕ ರೈಡಿಂಗ್ ಸೌಲಭ್ಯದ ಜೊತೆ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿರುವ ಝೆಪ್ಲಿನ್ ಬೈಕ್ ಮಾದರಿಯು ಇನ್‌ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್‌ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಅರಾಮದಾಯಕ ರೈಡಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಹೀಗಾಗಿಯೇ ಝೆಫ್ಲಿನ್ ಬೈಕ್‌ಗಳನ್ನು ಸ್ಟಾರ್ಟ್ ಮಾಡುವಾಗ ಎಲೆಕ್ಟ್ರಿಕ್ ಎಂಜಿನ್ ಮೂಲಕ ಶುರುವಾಗಿ ತದನಂತರ ಪೆಟ್ರೋಲ್ ಎಂಜಿನ್‌ಗೆ ವರ್ಗಾವಣೆಯಾಗುತ್ತಿದೆ. ಇದಕ್ಕಾಗಿಯೇ ಈ ಬೈಕ್‌ಗಳಲ್ಲಿ 48ಕೆವಿ ಮೋಟಾರ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಬೈಕಿನ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಗೂ ಹೆಚ್ಚು ಸಹಕಾರಿಯಾಗಲಿದೆ.

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಇದರಿಂದಾಗಿ ಕ್ರೂಸರ್ ಬೈಕ್ ಮಾದರಿಗಳಲ್ಲೇ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹೊಂದಿರುವ ಝೆಪ್ಲಿನ್ ಬೈಕ್‌ಗಳು ಇ-ಬೂಸ್ಟ್ ಆಯ್ಕೆಯೊಂದಿಗೆ ಯುವ ಸಮುದಾಯವನ್ನು ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, 2020ರ ಜನವರಿ ಕೊನೆಯಲ್ಲಿ ಇಲ್ಲವೇ ಫೆಬ್ರುವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿರುವ ದೆಹಲಿ ಆಟೋ ಮೇಳದಲ್ಲಿ ಭಾಗಿಯಾದ ನಂತರ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, 2020ರ ಏಪ್ರಿಲ್ 1ರಿಂದ ಭಾರತದಲ್ಲಿ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಟಿವಿಎಸ್ ಸಂಸ್ಥೆಯು ಹೊಸ ನಿಯಮಕ್ಕೆ ಅನುಗುಣವಾಗಿಯೇ ಝೆಪ್ಲಿನ್ ಬೈಕ್ ಎಂಜಿನ್ ಅನ್ನು ಅಭಿೃದ್ಧಿಗೊಳಿಸಿ ಜೋಡಣೆ ಮಾಡಲಾಗಿದೆ.

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಎಂಜಿನ್ ಸಾಮರ್ಥ್ಯ

ಬಿಎಸ್-6 ವೈಶಿಷ್ಟ್ಯತೆಯ 212 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಮಾದರಿಯನ್ನು ಹೊಂದಿರುವ ಝೆಪ್ಲಿನ್ ಬೈಕ್‌ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 20-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಅವೆಂಜರ್ 220 ಬೈಕಿಗಿಂತೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಜೊತೆಗೆ ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿರುವ ಝೆಪ್ಲಿನ್ ಬೈಕಿನಲ್ಲಿ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ, ಸ್ಮಾರ್ಟ್ ಬಯೋ ಕೀ, ಎಲೆಕ್ಟ್ರಾನಿಕ್ ಸ್ಪಿಡೋ ಮೀಟರ್ ಮತ್ತು ಅಡ್ವೆಂಚರ್ ಬೈಕ್ ರೈಡ್ ಕ್ಷಣಗಳನ್ನು ಸೆರೆಹಿಡಿಯಲು ಹೆಚ್‌ಡಿ ಕ್ಯಾಮೆರಾ ಕೂಡಾ ಪಡೆದುಕೊಂಡಿರಲಿದೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಹಾಗೆಯೇ ಝೆಪ್ಲಿನ್ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಲೈಟ್ ವೇಟ್ ಟ್ಯೂಬ್ ಲೇಸ್ ಟೈರ್, ಸ್ಪೋರ್ಕ್ ಚಕ್ರಗಳು, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನಲ್ ಎಬಿಎಸ್ ಮತ್ತು 41-ಎಂಎಂ ಯುಎಸ್‌ಡಿ ಫ್ರಂಟ್ ಪೋರ್ಕ್ ಒದಗಿಸಲಾಗಿದೆ.

MOST READ: ಹೋಂಡಾ ಮೋಟಾರ್‍‍ಸೈಕಲ್ ನೀಡುತ್ತಿದೆ ಭರ್ಜರಿ ಆಫರ್

2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಈ ಮೂಲಕ ಬಜಾಜ್ ಅವೆಂಜರ್ 220 ಕ್ರೂಸರ್ ಮತ್ತು ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಬೈಕಿಗೆ ತೀವ್ರ ಪೈಪೋಟಿ ನಡೆಸಲಿರುವ ಝೆಪ್ಲಿನ್ ಬೈಕ್‌ 2020ರ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಬೈಕ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷದಿಂದ ರೂ.1.25 ಲಕ್ಷದವರೆಗೆ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
TVS Zeppelin cruiser bike is expected to launch by the end of January 2020 or in early February.
Story first published: Monday, October 14, 2019, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X