ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಆಧರಿತ ವಾಹನಗಳ ಸಂಖ್ಯೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಈಗಾಗಲೇ ಬಿಎಸ್-6 ವಾಹನಗಳ ಮಾರಾಟ ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯು ಇವಿ ವಾಹನ ಖರೀದಿದಾರರಿಗೆ ಸಾಕಷ್ಟು ಸಹಕಾರಿಯಾಗಿದೆ. ಈ ಹಿಂದೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಶೇ.12ರಷ್ಟಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇ.5ಕ್ಕೆ ಇಳಿಕೆ ಮಾಡಲಾದಿದ್ದು, ಟೆಕ್ನೊ ಎಲೆಕ್ಟ್ರಾ ಸಂಸ್ಥೆಯು ತನ್ನ ಸ್ಕೂಟರ್‌ಗಳ ಬೆಲೆ ಇಳಿಕೆ ಮಾಡಿದೆ.

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಪುಣೆ ಮೂಲದ ಟೆಕ್ನೊ ಎಲೆಕ್ಟ್ರಾ ಸಂಸ್ಥೆಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ನಮೂನೆಯ 3 ಹೊಸ ಸ್ಕೂಟರ್‌ಗಳನ್ನು ಕಳೆದ ವರ್ಷವೇ ಬಿಡುಗಡೆಗೊಳಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಬೆಲೆ ಕಡಿತಗೊಳಿಸಿ ಹೊಸ ದರಪಟ್ಟಿ ಬಿಡುಗಡೆ ಮಾಡಿದೆ.

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಟೆಕ್ನೊ ಎಲೆಕ್ಟ್ರಾ ಸಂಸ್ಥೆಯು ನಿಯೋ, ರ‍್ಯಾಪ್ಟರ್ ಮತ್ತು ಎಮರ್ಜ್ ಎನ್ನುವ ಒಟ್ಟು ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ದರಪಟ್ಟಿಯೆಂತೆ ಸ್ಕೂಟರ್‌ಗಳ ಬೆಲೆ ರೂ.2,410 ಯಿಂದ ರೂ. 4,141 ತನಕ ಬೆಲೆ ಇಳಿಕೆಯಾಗಿದೆ.

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಹೊಸ ದರಪಟ್ಟಿ(ಎಕ್ಸ್‌ಶೋರೂಂ ದರಗಳು ಪುಣೆ)

ನಿಯೋ- ರೂ.41,557 (ರೂ. 2,410 ಇಳಿಕೆ)

ರ‍್ಯಾಪ್ಟರ್- ರೂ. 57,423 (ರೂ. 3,348 ಇಳಿಕೆ)

ಎಮರ್ಜ್- ರೂ. 68,106 (ರೂ. 4,141 ಇಳಿಕೆ)

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಇನ್ನು ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳು 250 ವೊಲ್ಟ್ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಪ್ರೇರಣೆಯೊಂದಿಗೆ ಉತ್ತಮ ಮೈಲೇಜ್ ರೇಂಜ್ ಹೊಂದಿದ್ದು, ನಿಯೋ ಮತ್ತು ರ‍್ಯಾಪ್ಟರ್ ಸ್ಕೂಟರ್‌ಗಳು ಲೀಡ್-ಆ್ಯಸಿಡ್ ಬ್ಯಾಟರಿ ಹೊಂದಿದ್ದರೆ ಟಾಪ್ ಎಂಡ್ ಮಾದರಿಯಾದ ಎಮರ್ಜ್ ಸ್ಕೂಟರ್‌ನಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಜೋಡಿಸಲಾಗಿದೆ.

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಈ ಮೂಲಕ 3ರಿಂದ 4 ಗಂಟೆಗಳ ಅವಧಿಯಲ್ಲಿ ಪೂರ್ಣಪ್ರಮಾಣದ ಚಾರ್ಜಿಂಗ್ ಗುಣಲಕ್ಷಣ ಹೊಂದಿರುವ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳು ಪ್ರತಿ ಚಾರ್ಜ್‌ಗೆ ನಿಯೋ(65 ಕಿ.ಮೀ), ರ‍್ಯಾಪ್ಟರ್(85 ಕಿ.ಮೀ) ಮತ್ತು ಎಮರ್ಜ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 80 ಕಿ.ಮೀ ಮೈಲೇಜ್‌ನೊಂದಿಗೆ ಉತ್ತಮ ಟಾಪ್ ಸ್ಪೀಡ್ ಗುಣಲಕ್ಷಣ ಹೊಂದಿದೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಹೊಸ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳು ಕೈಗೆಟುವ ಬೆಲೆ ಮತ್ತು ಉತ್ತಮ ಮೈಲೇಜ್ ಅಷ್ಟೇ ಅಲ್ಲದೇ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದ್ದು, ರ‍್ಯಾಪ್ಟರ್ ಮತ್ತು ಎಮರ್ಜ್ ಸ್ಕೂಟರ್‌ನಲ್ಲಿ ಡಿಸ್ಕ್ ಬ್ರೇಕ್, ನಿಯೋ ಸ್ಕೂಟರ್‌ನಲ್ಲಿ ಡ್ರಮ್ ಬ್ರೇಕ್ ಸೌಲಭ್ಯವಿದೆ.

MOST READ: 2020ರ ಆರಂಭದಲ್ಲಿ ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್ ಬಿಡುಗಡೆ ಪಕ್ಕಾ..!

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಹಾಗೆಯೇ ಹೊಸ ಸ್ಕೂಟರ್‌ಗಳಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ರಿವರ್ಸಿಂಗ್ ಫಂಕ್ಷನ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ಸ್, ಸೆಂಟ್ರಲ್ ಲಾಕಿಂಗ್, ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ ಸೌಲಭ್ಯಗಳನ್ನು ನೀಡಲಾಗಿದ್ದು, ಹೀರೋ ಮತ್ತು ಆಂಪೈರ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳು ಭರ್ಜರಿ ಪೈಪೋಟಿ ನೀಡಲಿವೆ.

MOST READ: ಕೊನೆಗೂ ಭಾರೀ ದಂಡಕ್ಕೆ ಹೆದರಿದ ಬೆಂಗಳೂರಿನ ವಾಹನ ಸವಾರರು

ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದೇ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯಲ್ಲಿ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಫೇಮ್ 2 ಯೋಜನೆ ಅಡಿಯಲ್ಲಿ ಜಿಎಸ್‌ಟಿ ಇಳಿಕೆ, ಆದಾಯ ತೆರಿಗೆಯಲ್ಲಿ ವಿನಾಯ್ತಿ, ಸಬ್ಸಡಿ ಸೌಲಭ್ಯಗಳು ಸೇರಿದಂತೆ ಹಲವು ಕ್ರಮಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ಬೇಡಿಕೆಯನ್ನು ತಗ್ಗಿಸಲು ನೆರವಾಗುತ್ತಿವೆ.

More from DriveSpark

Article Published On: Tuesday, October 15, 2019, 11:20 [IST]
English summary
Techno Electra EV Range Prices Reduced. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+