ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಹೀರೊ ಮೋಟೊಕಾರ್ಪ್ ತನ್ನ ಬೈಕುಗಳ ಹೋಂ ಡೆಲಿವರಿಯನ್ನು ಶುರು ಮಾಡಿದೆ. ಕಂಪನಿಯು ಈ ಸೇವೆಯನ್ನು ಗ್ರಾಹಕರ ಖರೀದಿ ಅನುಭವವನ್ನು ಹೆಚ್ಚಿಸಲು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಹಮ್ಮಿಕೊಂಡಿದೆ. ಹೀರೊ ಮೋಟೊಕಾರ್ಪ್ ಈ ಸೇವೆಯನ್ನು ನೀಡಲು ರೂ.349 ಶುಲ್ಕವನ್ನು ವಿಧಿಸಲಿದೆ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ವಿಶ್ವದ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ದ್ವಿಚಕ್ರ ವಾಹನಗಳ ಮಾರುಕಟ್ಟೆಯ ವಿಷಯಕ್ಕೆ ಬಂದರೆ, ವಿಶ್ವದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ವಾಹನ ತಯಾರಕ ಕಂಪನಿಗಳು ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತವೆ. ಮಾರುಕಟ್ಟೆಯನ್ನು ಸ್ಪರ್ಧಾತ್ಮಕವಾಗಿಡಲು ಹೀರೋ ಮೊಟೊಕಾರ್ಪ್ ಕೈಗೊಂಡಿರುವ ಕ್ರಮಗಳಲ್ಲಿ ಹೋಂ ಡೆಲಿವರಿ ಸೇವೆ ಒಂದಾಗಿದೆ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಈ ರೀತಿಯ ಸೇವೆಯನ್ನು ಈ ಸೆಗ್‍‍ಮೆಂಟಿನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿದೆ. ಈ ಮೊದಲು ಡೀಲರ್‍‍ಗಳ ಬಳಿ ಹೋಗಿ, ವಾಹನವನ್ನು ಕಾಯ್ದಿರಿಸಿ, ದಾಖಲೆಗಳಿಗೆ ಸಹಿ ಮಾಡಿ, ನಂತರ ಕೊನೆಯಲ್ಲಿ ವಾಹನದ ಡೆಲಿವರಿಯನ್ನು ಪಡೆಯುವಾಗ ಉಂಟಾಗುತ್ತಿದ್ದ ಸಂತೋಷವನ್ನು ಹೇಳಲು ಅಸಾಧ್ಯ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಈಗ ಎಲ್ಲವೂ ಬದಲಾಗಿದೆ. ವಾಹನ ಖರೀದಿಸುವವರು ಹಳೆಯ ಶಾಲಾ ಪುಸ್ತಕಗಳ ರೀತಿಯಲ್ಲಿ ವಾಹನಗಳನ್ನು ಖರೀದಿಸಲು ಬಯಸುವುದಿಲ್ಲ. ಇ-ಕಾಮರ್ಸ್ ಜನಪ್ರಿಯವಾಗಿರುವ ಈ ಕಾಲದಲ್ಲಿ, ಆಟೋಮೊಬೈಲ್ ಕಂಪನಿಗಳೂ ಸಹ ಬದಲಾವಣೆಗೆ ಹೊಂದಿಕೊಂಡಿವೆ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಕಾರುಗಳು ಹಾಗೂ ಬೈಕುಗಳ ಹೋಂ ಡೆಲಿವರಿ ಸೇವೆಗಳು ಹೊಸದೇನಲ್ಲ. ಪ್ರೀಮಿಯಂ ಕಾರು ತಯಾರಕ ಕಂಪನಿಗಳಾದ ಆಡಿ, ಬಿಎಂಡಬ್ಲ್ಯು ಹಾಗೂ ಮರ್ಸಿಡಿಸ್ ಬೆಂಜ್ ಈ ಸೇವೆಗಳನ್ನು ಬಹಳ ಹಿಂದಿನಿಂದಲೂ ನೀಡುತ್ತಿವೆ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಗ್ರಾಹಕರ ಬೇಡಿಕೆಯ ಮೇರೆಗೆ, ಕಾರುಗಳನ್ನು ಟೆಸ್ಟ್ ಡ್ರೈವ್‌ಗಳಿಗಾಗಿ, ದಾಖಲೆಗಳ ಪರಿಶೀಲನೆಗಾಗಿ ಹಾಗೂ ಡೆಲಿವರಿಗಾಗಿ ಗ್ರಾಹಕರು ಇರುವ ಜಾಗಕ್ಕೆ ಕೊಂಡೊಯ್ಯಲಾಗುತ್ತದೆ. ಕೆಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಸಹ ತಮ್ಮ ಗ್ರಾಹಕರಿಗೆ ಈ ಸೇವೆಯನ್ನು ನೀಡುತ್ತಿವೆ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಆದರೆ ಈ ಸೇವೆಗಳನ್ನು ಡೀಲರ್‍‍ಗಳು ನೀಡುತ್ತಿದ್ದಾರೆಯೇ ಹೊರತು ಕಂಪನಿಗಳು ನೀಡುತ್ತಿಲ್ಲ. ಆದರೆ ಹೀರೋ ಮೋಟೊಕಾರ್ಪ್ ಮಾತ್ರ ಡೀಲರ್‍‍ಗಳ ಮೂಲಕ ಈ ಸೇವೆಯನ್ನು ನೀಡದೇ ತಾನೇ ಖುದ್ದಾಗಿ ಈ ಸೇವೆಯನ್ನು ನೀಡಲು ಮುಂದಾಗಿದೆ. ಕಂಪನಿಯು ದೊಡ್ಡ ಪ್ರಮಾಣದಲ್ಲಿ, ಅಂದರೆ ವಾಹನ ತಯಾರಕರ ಮಟ್ಟದಲ್ಲಿಯೇ ಈ ಸೇವೆಯನ್ನು ಕೈಗೆತ್ತಿಕೊಂಡಿದೆ.

MOST READ: ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಈ ಸೇವೆಯನ್ನು ನೀಡಲು ಡೀಲರ್‍‍ಶಿಪ್‍‍ಗಳೊಂದಿಗೆ ಸಂಪರ್ಕ ಹೊಂದುವ ಅಗತ್ಯವಿಲ್ಲ. ಈ ಸೇವೆಯು ಪೂರ್ಣವಾಗಿ ಆನ್‌ಲೈನ್ ಆಧಾರಿತವಾಗಿದೆ. ಆನ್‍‍ಲೈನ್ ಮೂಲಕ ಬೈಕ್ ಖರೀದಿಸುವ ಪ್ರಕ್ರಿಯೆಯನ್ನು ಸರಳವಾಗಿಸಲಾಗಿದೆ. ಈ ಸೇವೆಯನ್ನು ಪಡೆಯ ಬಯಸುವವರು ಹೀರೊದ ಇ-ಕಾಮರ್ಸ್ ಪೋರ್ಟಲ್‌ಗೆ ಲಾಗಿನ್ ಮಾಡಬೇಕಾಗುತ್ತದೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಲಾಗಿನ್ ಮಾಡಿದ ನಂತರ, ಖರೀದಿಸ ಬಯಸುವ ಬೈಕಿನ ಮಾದರಿ ಹಾಗೂ ಬಣ್ಣವನ್ನು ಆಯ್ಕೆ ಮಾಡಿ ಕೊಳ್ಳಬೇಕು. ನಂತರ ರಾಜ್ಯ ಹಾಗೂ ನಗರದ ಬಗೆಗಿನ ವಿವರಗಳನ್ನು ಭರ್ತಿ ಮಾಡಬೇಕು. ನಗರವನ್ನು ಆಯ್ಕೆ ಮಾಡಿದ ನಂತರ, ಆಯ್ಕೆ ಮಾಡಿದ ನಗರದಲ್ಲಿ ಹೋಂ ಡೆಲಿವರಿ ಸೇವೆ ಲಭ್ಯವಿರುವ ಬಗ್ಗೆ ಪಾಪ್ ಅಪ್ ಬರುತ್ತದೆ. ಸೇವೆಯು ಲಭ್ಯವಿದ್ದರೆ ಹೋಂ ಡೆಲಿವರಿ ಸೇವೆಯನ್ನು ಟಿಕ್ ಮಾಡಬೇಕು.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ನಂತರ, ಡೀಲರ್‍‍ರನ್ನು ಆಯ್ಕೆ ಮಾಡಿ ಬುಕ್ಕಿಂಗ್ ಪಾವತಿಯನ್ನು ಮಾಡಬಹುದು. ಇದಾದ ನಂತರ ಹೀರೊ ಕಂಪನಿಯು ತನ್ನ ಉದ್ಯೋಗಿಗಳನ್ನು ದಾಖಲೆಗಳ ಸಂಗ್ರಹಕ್ಕಾಗಿ ಗ್ರಾಹಕರ ಮನೆಗೆ ಕಳುಹಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಮೇಲೆ, ಆಯ್ಕೆ ಮಾಡಿಕೊಂಡಿರುವ ಬೈಕ್ ಅನ್ನು ಕೆಲ ದಿನಗಳಲ್ಲಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೊಟೊಕಾರ್ಪ್‌ನ ಮಾರಾಟ, ಆಫ್ಟರ್‌ಸೇಲ್ಸ್ ಹಾಗೂ ಪಾರ್ಟ್ಸ್ ಬಿಸಿನೆಸ್ ವಿಭಾಗದ ಮುಖ್ಯಸ್ಥ ಸಂಜಯ್ ಭಾನ್‍‍ರವರು ಮಾತನಾಡಿ, ಇಂದಿನ ಯುವ ಜನತೆ ತಾವು ಖರೀದಿಸುವ ಪ್ರತಿಯೊಂದು ವಸ್ತುವಿನಲ್ಲೂ ಮೌಲ್ಯವರ್ಧಿತ ಸೇವೆಗಳನ್ನು ಹೆಚ್ಚಾಗಿ ಹುಡುಕುತ್ತಿರುವುದರಿಂದ, ಕಂಪನಿಗಳೂ ಸಹ ತಮ್ಮ ಕಾರ್ಯತಂತ್ರವನ್ನು ಬದಲಿಸಬೇಕಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಲ್ಲಿ ಹೊಸತನವನ್ನು ನೀಡಬೇಕಾಗಿದೆ.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಇ ಕಾಮರ್ಸ್‍ ಸೇವೆಯನ್ನು ನೀಡುತ್ತಿರುವವರಲ್ಲಿ ನಾವು ಮೊದಲನೇಯವರಾಗಿದ್ದೇವೆ. ಈ ಹೊಸ ಸೇವೆಯನ್ನು ಪ್ರಾರಂಭಿಸುವ ಮೂಲಕ ನಾವು ಹೊಸ ಟ್ರೆಂಡ್ ಶುರು ಮಾಡಿದ್ದೇವೆ. ಬೈಕ್ ಅಥವಾ ಸ್ಕೂಟರ್ ಅನ್ನು ನಿಮ್ಮ ಮನೆಯ ವಿಳಾಸಕ್ಕೆ ಮಾತ್ರವಲ್ಲದೆ ನೀವು ಆಯ್ಕೆ ಮಾಡುವ ಯಾವುದೇ ವಿಳಾಸಕ್ಕಾದರೂ ತಲುಪಿಸುತ್ತೇವೆ ಎಂದು ಅವರು ಹೇಳಿದರು. ಈ ಸೇವೆಯನ್ನು ಸದ್ಯಕ್ಕೆ ಬೆಂಗಳೂರು, ಮುಂಬೈ ಹಾಗೂ ನೋಯ್ಡಾದಲ್ಲಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಿಸಲಾಗುವುದು.

ಹೋಂ ಡೆಲಿವರಿ ಶುರು ಮಾಡಿದ ಹೀರೋ ಮೋಟೊಕಾರ್ಪ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕಂಪನಿಯು ಸದೃಢವಾಗಿರಲು ಹೊಸ ರೀತಿಯ ಸೇವೆಗಳು ಅಗತ್ಯವಾಗಿವೆ. ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೊಟೊಕಾರ್ಪ್ ಇದನ್ನು ಅರಿತಿದೆ. ಕಂಪನಿಯು ಹೋಂ ಡೆಲಿವರಿ ಸೇವೆಯೊಂದಿಗೆ ಹೊಸ ಟ್ರೆಂಡ್ ಆರಂಭಿಸಿದೆ.

Most Read Articles

Kannada
English summary
Hero MotoCorp Kicks-Off Home Delivery - Read in kannada
Story first published: Tuesday, August 6, 2019, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X