ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಹೀರೋ ಮೋಟೊ ಕಾರ್ಪ್ ತನ್ನ ಎಕ್ಸ್ ಟ್ರೀಮ್ 200ಎಸ್ ಬೈಕ್ ಅನ್ನು, ಎಕ್ಸ್ ಪಲ್ಸ್ 200 ಮತ್ತು ಎಕ್ಸ್ ಪಲ್ಸ್ 200ಟಿ ಗಳ ಜೊತೆಯಲ್ಲಿ ಬಿಡುಗಡೆ ಮಾಡಿದೆ. ಎಕ್ಸ್ ಟ್ರೀಮ್ 200 ಎಸ್ ಬೈಕ್, ಕಳೆದ ವರ್ಷ ಬಿಡುಗಡೆ ಮಾಡಲಾದ ಎಕ್ಸ್ ಟ್ರೀಮ್ 200 ಆರ್ ನ ಪರಿಷ್ಕೃತ ಮಾದರಿಯಾಗಿದೆ. ಕೆಲವು ವಿನ್ಯಾಸಗಳನ್ನು 2014ರಲ್ಲಿ ಅನಾವರಣಗೊಳಿಸಲಾದ ಹೆಚ್ ಎಕ್ಸ್ 250ಆರ್ ನಿಂದ ಪಡೆಯಲಾಗಿದೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಈ ಮೋಟಾರ್ ಸೈಕಲ್ ಎಕ್ಸ್ ಟ್ರೀಮ್ 200 ಆರ್ ನ ಮೇಲೆ ಆಧಾರಿತವಾಗಿದೆ. ಪವರ್ ಟ್ರೇನ್ ಸೇರಿದಂತೆ, ಉಳಿದ ಬಿಡಿಭಾಗಗಳು ಎಕ್ಸ್ ಟ್ರೀಮ್ 200 ಆರ್ ಮೇಲೆ ಅವಲಂಬಿತವಾಗಿವೆ. ಈಗ ಬಿಡುಗಡೆಯಾಗಿರುವ ಬೈಕ್ ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಯಮಹಾದ ಆರ್15 ವಿ3.0 ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. 200 ಸಿಸಿ ಸೆಗ್ ಮೆಂಟ್ ನಲ್ಲಿ ಜನಪ್ರಿಯವಾಗಿರುವ ಬಜಾಜ್ ಪಲ್ಸರ್ ಆರ್ ಎಸ್ 200 ಬೈಕ್ ಗೆ ಪ್ರತಿಸ್ಪರ್ಧಿಯಾಗಿ ಎಕ್ಸ್ ಟ್ರೀಮ್ 200 ಎಸ್ ಅನ್ನು ಬಿಡುಗಡೆ ಮಾಡಲಾಗಿದೆ. ಈಗ ಎರಡೂ ಮೋಟಾರ್ ಬೈಕ್ ಗಳ ಸ್ಟೈಲಿಂಗ್, ಎಂಜಿನ್, ಸಸ್ಪೆಂಷನ್, ಬ್ರೇಕ್, ಬೆಲೆ ಗಳನ್ನು ಹೋಲಿಕೆ ಮಾಡಿ ನೋಡೊಣ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಎಕ್ಸ್ ಟ್ರೀಮ್ 200 ಎಸ್

ಹೀರೋ ಎಕ್ಸ್ ಟ್ರೀಮ್ 200 ಎಸ್ ಬೈಕ್ ಅನ್ನು ಮೊದಲ ಬಾರಿಗೆ ಏಪ್ರಿಲ್ 2019ರಲ್ಲಿ ಸ್ಪೈ ವೀಡಿಯೊ ಮೂಲಕ ಸೆರೆಹಿಡಿಯಲಾಗಿತ್ತು. ಅದನ್ನು ಮೊದಲಿಗೆ ಹೆಚ್ಎಕ್ಸ್ 200ಆರ್ ಅಥವಾ ಕರಿಜ್ಮಾ ಎಂಬ ಹೆಸರಿನಿಂದ ಕರೆಯಲಾಗುವುದೆಂಬ ವದಂತಿಗಳಿದ್ದವು.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಆದರೆ ಎಕ್ಸ್ ಟ್ರೀಮ್ 200 ಎಸ್ ಎಂಬ ಹೆಸರಿಸುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲಾಯಿತು. ಇನ್ನು ಈ ಬೈಕಿನ ಸ್ಟೈಲ್ ಬಗ್ಗೆ ಹೇಳುವುದಾದರೆ ಈ ಬೈಕ್ ನ ಮುಂಭಾಗದಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಕ್ಲಸ್ಟರ್ ಇದ್ದರೆ, ಹೆಚ್ಎಕ್ಸ್ 250ಆರ್ ಕಾಂನ್ಸೆಪ್ಟ್ ನಲ್ಲಿ ಡ್ಯುಯಲ್ ಹೆಡ್ ಲ್ಯಾಂಪ್ ಇಡಲಾಗಿತ್ತು.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಎಕ್ಸ್ ಟ್ರೀಮ್ 200 ಎಸ್ ಸ್ಪೋರ್ಟ್ಸ್ ಬ್ಲೂ ಟೂತ್ ಕನೆಕ್ಟಿವಿಟಿ ಹೊಂದಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಈ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಶನ್, ಸರ್ವಿಸ್ ರಿಮೈಂಡರ್, ಗೇರ್ ಇಂಡಿಕೇಟರ್ ಮತ್ತು ಟ್ರಿಪ್ ಮೀಟರ್ ಗಳಿವೆ. ಆರಾಮದಾಯಕ ಚಾಲನೆಗಾಗಿ ಉದ್ದವಾದ ಮತ್ತು ಅಗಲವಾದ ಹ್ಯಾಂಡಲ್ ಬಾರ್ ಗಳನ್ನು ಅಳವಡಿಸಲಾಗಿದೆ. ಹೊಸ ಹೀರೋ ಎಕ್ಸ್ ಟ್ರೀಮ್ 200 ಎಸ್ ಬೈಕ್ ನಲ್ಲಿರುವ 17 ಇಂಚಿನ ಅಲಾಯ್ ವ್ಹೀಲ್, ಟಯರ್, ಬ್ರೇಕಿಂಗ್ ಹಾರ್ಡ್ ವೇರ್ ಮೊದಲಾದವುಗಳನ್ನು ಎಕ್ಸ್ ಟ್ರೀಮ್ 200 ಆರ್ ನಿಂದ ಪಡೆಯಲಾಗಿದೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಬಜಾಜ್ ಪಲ್ಸರ್ ಆರ್‍ಎಸ್ 200 ಬಜಾಜ್ ಮೋಟಾರ್ಸ್ ಲೈನ್ ಅಪ್ ನಲ್ಲಿರುವ ಉತ್ತಮವಾದ ಮೋಟಾರ್ ಸೈಕಲ್ ಗಳಲ್ಲಿ ಒಂದಾಗಿದೆ. ಆರ್‍ಎಸ್ 200 ಪಲ್ಸರ್ ಲೈನ್ ಅಪ್ ನಲ್ಲಿರುವ ಟಾಪ್ ಮಾದರಿಯಾಗಿದ್ದು, ಫೀಚರ್ ಪ್ಯಾಕ್ಡ್ ಮೋಟಾರ್ ಸೈಕಲ್ ಆಗಿದೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಪಲ್ಸರ್ ಆರ್‍ಎಸ್ 200 ಸ್ಪೋರ್ಟ್ಸ್ ನಲ್ಲಿ ಡ್ಯುಯಲ್ ಪ್ರಾಜೆಕ್ಟರ್ ಹೆಡ್ ಲ್ಯಾಂಪ್ ಗಳಿದ್ದು, ಚಿಕ್ಕದಾಗಿ ಚೊಕ್ಕವಾಗಿರುವ ರೇರ್ ವೀವ್ ಮಿರರ್ ಗಳಿವೆ. ಈ ಮೋಟಾರ್ ಸೈಕಲ್ ನಲ್ಲಿರುವ ಬಹುತೇಕ ಭಾಗಗಳಾದ ಸೆಮಿ ಅನಾಲಾಗ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಬ್ರೇಕ್ ಗಳು, ಚಾಸೀಸ್ ಮತ್ತು ಸಸ್ಪೆಂಷನ್ ಗಳು, ಪಲ್ಸರ್ ಎನ್ಎಸ್ 200 ಗಳಿಗೆ ಹೋಲುತ್ತವೆ. ಪಲ್ಸರ್ ಆರ್‍ಎಸ್ 200 ನಲ್ಲಿ ಬಹಳಷ್ಟು ಕರ್ವ್ ಮತ್ತು ಪ್ಲಾಸ್ಟಿಕ್ ಫೆರಿಂಗ್ ಗಳಿದ್ದು, ಬೈಕ್ ಗೆ ಸ್ಪೋರ್ಟ್ ಲುಕ್ ನೀಡುತ್ತವೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಹೀರೋ ಎಕ್ಸ್ ಟ್ರೀಮ್ 200 ಎಸ್ ಮತ್ತು ಬಜಾಜ್ ಪಲ್ಸರ್ ಆರ್‍ಎಸ್ 200 ಎಂಜಿನ್ ಗಳ ಹೋಲಿಕೆ

ಇತ್ತೀಚಿಗೆ ಬಿಡುಗಡೆಯಾದ ಹೀರೋ ಎಕ್ಸ್ ಟ್ರೀಮ್ 200 ಎಸ್ ನಲ್ಲೂ ಸಹ ಎಕ್ಸ್ ಟ್ರೀಮ್ 200 ಆರ್ ನಲ್ಲಿರುವಂತೆಯೇ 199.6 ಸಿಸಿ ಯ ಸಿಂಗಲ್ ಸಿಲಿಂಡರ್ ಇದ್ದು, ಬಿಎಸ್ 4 ಆಧಾರಿತ ಏರ್ ಕೂಲ್ಡ್ ಯೂನಿಟ್ ಗಳನ್ನು ಒಳಗೊಂಡಿದೆ. ಈ ಯೂನಿಟ್ 18.4 ಪಿಎಸ್ ಪವರ್ ಅನ್ನು 8,000 ಆರ್‍‍ಪಿಎಂ ನಲ್ಲಿ ಮತ್ತು 17.1 ಎನ್ಎಂ ಪೀಕ್ ಟಾರ್ಕ್ ಅನ್ನು 6,500 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 5 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಬಜಾಜ್ ಪಲ್ಸರ್ ಆರ್ ಎಸ್ 200 ನಲ್ಲಿ 199.5 ಸಿಸಿ ಯ ಸಿಂಗಲ್ ಸಿಲಿಂಡರ್ ಇದ್ದು, 4 ವಾಲ್ವ್, ಫ್ಯುಯಲ್ ಇಂಜೆಕ್ಟೆಡ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಯೂನಿಟ್ ಗಳನ್ನು ಒಳಗೊಂಡಿದೆ. ಈ ಯೂನಿಟ್ 24.5 ಪಿಎಸ್ ಪೀಕ್ ಪವರ್ ಅನ್ನು 9,750 ಆರ್‍‍ಪಿಎಂ ನಲ್ಲಿ ಮತ್ತು 18.6 ಎನ್ಎಂ ಪೀಕ್ ಟಾರ್ಕ್ ಅನ್ನು 8,000 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಯೂನಿಟ್ ನಲ್ಲಿ 6 ಸ್ಪೀಡಿನ ಗೇರ್ ಬಾಕ್ಸ್ ಇದ್ದು, ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಎಕ್ಸ್ ಟ್ರೀಮ್ 200 ಎಸ್ ನಲ್ಲಿರುವಂತೆ ಬಜಾಜ್ ನ ಆರ್‍ಎಸ್ 200ನಲ್ಲೂ ಫ್ಯೂಯಲ್ ಇಂಜೆಕ್ಷೆನ್ ಟೆಕ್ನಾಲಜಿ ಇದೆ.

ಮಾದರಿ ಹೀರೋ ಎಕ್ಸ್ ಟ್ರೀಮ್ 200 ಎಸ್ ಬಜಾಜ್ ಪಲ್ಸರ್ ಆರ್ ಎಸ್ 200
ಎಂಜಿನ್

199.6 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ 199.5 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್
ಪವರ್

18.4 ಪಿಎಸ್ @ 8,000 ಆರ್ ಪಿ ಎಂ 24.5 ಪಿಎಸ್ @ 9,750 ಆರ್ ಪಿ ಎಂ
ಟಾರ್ಕ್

17.1 ಎನ್ ಎಂ @ 6,500 ಆರ್ ಪಿ ಎಂ 18.6 ಎನ್ ಎಂ @ 8,000 ಆರ್ ಪಿ ಎಂ
ಗೇರ್ ಬಾಕ್ಸ್

5-ಸ್ಪೀಡ್ 6-ಸ್ಪೀಡ್
ಎಬಿಎಸ್ ಇದೆ ಇದೆ
ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಸಸ್ಪೆಂಷನ್ ಮತ್ತು ಬ್ರೇಕ್ ಗಳಲ್ಲಿನ ಹೋಲಿಕೆ

ಹೊಸ ಎಕ್ಸ್ ಟ್ರೀಮ್ 200ಎಸ್ ಸಸ್ಪೆಂಷನ್ ಎಕ್ಸ್ ಟ್ರೀಮ್ 200ಆರ್ ನ ಜೊತೆ ಹೋಲಿಕೆಯಲ್ಲಿದೆ. ಈ ಬೈಕ್ ನಲ್ಲಿ ಮುಂಭಾಗದಲ್ಲಿ 37 ಎಂಎಂ ನ ಟೆಲೆಸ್ಕೋಪಿಕ್ ಫೊರ್ಕ್ ಗಳಿದ್ದು, ಹಿಂಭಾಗದಲ್ಲಿ 7 ಸ್ಟೆಪಿನ ಅಡ್ಜಸ್ಟಬಲ್ ಮೊನೊಶಾಕ್ ಯೂನಿಟ್ ಗಳಿವೆ. ಬೈಕ್ ಅನ್ನು ನಿಯಂತ್ರಿಸಲು ಮುಂಭಾಗದಲ್ಲಿ 276 ಎಂಎಂ ನ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಗಳಿವೆ. ಚಾಲಕನ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ನ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಬಜಾಜ್ ಪಲ್ಸರ್ ಆರ್‍ಎಸ್ 200 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಹೊಂದಿದ್ದರೆ, ಹಿಂಭಾಗದಲ್ಲಿ ನೈಟ್ರಾಕ್ಸ್ ಮೊನೊ ಶಾಕ್ ಅಬ್ಸರ್ವರ್ ಗಳನ್ನು ಹೊಂದಿದೆ. ಬೈಕ್ ಅನ್ನು ನಿಯಂತ್ರಿಸಲು ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಬ್ರೇಕ್ ಗಳಿವೆ. ಪಲ್ಸರ್ ಆರ್‍ಎಸ್ 200 ನಲ್ಲೂ ಸಹ ಸ್ಟಾಂಡರ್ಡ್ ಆಗಿ ಸಿಂಗಲ್ ಚಾನೆಲ್ ನ ಎಬಿಎಸ್ ನೀಡಲಾಗಿದೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಬೆಲೆ ಹೋಲಿಕೆ

ಎಕ್ಸ್ ಶೋರೂಂ ದರದಂತೆ ಹೀರೋ ಎಕ್ಸ್ ಟ್ರೀಮ್ 200ಎಸ್ ನ ಬೆಲೆಯು ರೂ. 98,500 ಗಳಾಗಿದ್ದರೆ, ಬಜಾಜ್ ಪಲ್ಸರ್ ಆರ್‍ಎಸ್ 200 ನ ಬೆಲೆ ಎಕ್ಸ್ ಶೋರೂಂ ದರದಂತೆ ರೂ 1.39 ಲಕ್ಷಗಳಾಗಿದೆ.

ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

ಹೋಲಿಕೆ

ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್ ಟ್ರೀಮ್ 200ಎಸ್ ಕಡಿಮೆ ದರದಲ್ಲಿ ಅತಿ ಹೆಚ್ಚಿನ ಫೀಚರ್ ಗಳನ್ನು ನೀಡುತ್ತದೆ. ಆದರೆ ಪವರ್ ಮತ್ತು ಪರ್ಫಾರ್ಮೆನ್ಸ್ ನ ವಿಷಯದಲ್ಲಿ ಬಜಾಜ್ ನ ಪಲ್ಸರ್ ಆರ್‍ಎಸ್ 200, ಎಕ್ಸ್ ಟ್ರೀಮ್ 200ಎಸ್ ಗಿಂತ ಬಹಳ ದೂರದಲ್ಲಿದೆ. ನಿಮಗೆ ಕಡಿಮೆ ಬಜೆಟ್ ನಲ್ಲಿ ಬಹಳಷ್ಟು ಫೀಚರ್ ಗಳನ್ನು ಹೊಂದಿರುವ ಮತ್ತು ಸ್ಮೂತ್ ಎಂಜಿನ್ ಹೊಂದಿರುವ ಬೈಕ್ ಬೇಕಿದ್ದಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್ ಕೊಳ್ಳಬಹುದು.

ಆದರೆ ಇಡೀ ದಿನ ಅತಿ ವೇಗವಾಗಿ ಚಲಿಸಿದರೂ, ಚಾಲಕನಿಗಾಗಲಿ ಅಥವಾ ಎಂಜಿನ್ ಗಾಗಲಿ ಯಾವುದೇ ತೊಂದರೆಯಾಗದ ಬೈಕ್ ಬೇಕಿದ್ದರೆ ಪಲ್ಸರ್ ಆರ್‍ಎಸ್ 200 ಕೊಳ್ಳಬಹುದು.

MOST READ: ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

Kannada
English summary
Hero Xtreme 200S Vs Bajaj Pulsar RS 200: Spec Comparison - Read in Kannada
Story first published: Friday, May 3, 2019, 15:36 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more