ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ದೀಪಾವಳಿ ಹಬ್ಬವು ಹತ್ತಿರವಾಗುತ್ತಿದ್ದಂತೆ ಬಹುತೇಕ ಆಟೋಮೊಬೈಲ್ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹಲವಾರು ಬಗೆಯ ಆಫರ್‍‍ಗಳನ್ನು ನೀಡುತ್ತಿವೆ. ಹೋಂಡಾ ಕಂಪನಿಯು ತನ್ನ ಜನಪ್ರಿಯ ವಾಹನಗಳಾದ ಆಕ್ಟಿವಾ 5ಜಿ ಹಾಗೂ ಸಿಬಿ ಶೈನ್ ಮೇಲೆ ಆಫರ್‍‍ಗಳನ್ನು ನೀಡುತ್ತಿದೆ.

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಸದ್ಯಕ್ಕೆ ಹೆಚ್ಚು ಮಾರಾಟವಾಗುತ್ತಿರುವ ಹೋಂಡಾ ಕಂಪನಿಯ ವಾಹನಗಳಾಗಿವೆ. ಕಂಪನಿಯು ಆಕ್ಟಿವಾ 5ಜಿ ಲಿಮಿಟೆಡ್ ಎಡಿಷನ್ ಹಾಗೂ ಸಿಬಿ ಶೈನ್ ಲಿಮಿಟೆಡ್ ಎಡಿಷನ್ ವಾಹನಗಳ ಮೇಲೆ ರೂ.11,000ದವರೆಗಿನ ಸೌಲಭ್ಯಗಳನ್ನು ನೀಡುತ್ತಿದೆ.

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ವಾಹನಗಳ ಮೇಲೆ ಹೋಂಡಾ ಕಂಪನಿಯು ರೂ.8,900ಗಳನ್ನು ಸಾಲದ ಮೊತ್ತವನ್ನು ಉಳಿಸಲು ನೀಡಲಿದ್ದರೆ, ಉಳಿದ ಮೊತ್ತಕ್ಕೆ ಜಾಯ್ ಕ್ಲಬ್ ಸದಸ್ಯತ್ವವನ್ನು ಉಚಿತವಾಗಿ ನೀಡಲಿದೆ. ಇದರ ಜೊತೆಗೆ, ರೂ.1,100 ಅನ್ನು ಡೌನ್ ಪೇಮೆಂಟ್ ಆಗಿ ಪಾವತಿಸಿ ಈ ವಾಹನಗಳನ್ನು ಖರೀದಿಸಬಹುದಾಗಿದೆ.

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ಹೋಂಡಾ ಕಂಪನಿಯು ರೂ.7,000ಗಳನ್ನು ಕ್ಯಾಶ್ ಬ್ಯಾಕ್ ಆಗಿ ನೀಡಲಿದೆ. ಈ ಹಬ್ಬದ ಆಫರ್‍‍ನಲ್ಲಿ, ಗ್ರಾಹಕರು ಸುಲಭವಾಗಿ ಹಣ ಪಾವತಿಸಲು ಸಾಧ್ಯವಾಗುವಂತೆ ಹೋಂಡಾ ಕಂಪನಿಯು ಈ ವಾಹನಗಳ ಮೇಲಿನ ಇ‍ಎಂ‍ಐ ಸೌಲಭ್ಯವನ್ನು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍‍ಗಳ ಮೂಲಕ ಪಾವತಿಸುವ ಸೌಲಭ್ಯವನ್ನು ಕೂಡ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ಆಕ್ಟಿವಾ 5ಜಿ, ಹೋಂಡಾ ಕಂಪನಿಯ ಜನಪ್ರಿಯ ವಾಹನವಾಗಿದೆ. ಇತ್ತೀಚಿಗಷ್ಟೇ ಹೋಂಡಾ ಕಂಪನಿಯು ಅಕ್ಟಿವಾ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 125ಸಿಸಿಯ ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿತ್ತು.

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ಈ ಎರಡೂ ವಾಹನಗಳ ಮೇಲಿನ ಆಫರ್‍‍ಗಳನ್ನು ಹೋಂಡಾ ಕಂಪನಿಯು ನೀಡುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ಡೀಲರ್‍‍ಗಳು ತಮಗೆ ಇಷ್ಟ ಬಂದಷ್ಟು ರಿಯಾಯಿತಿ ಹಾಗೂ ಆಫರ್‍‍ಗಳನ್ನು ನೀಡುತ್ತಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ನೀವೂ ಸಹ ಈ ಎರಡೂ ವಾಹನಗಳ ಪೈಕಿ ಯಾವುದಾದರೊಂದು ವಾಹನವನ್ನು ಖರೀದಿಸಲು ಬಯಸುತ್ತಿದ್ದರೆ, ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ, ಅವರು ನೀಡುವ ಆಫರ್ ಹಾಗೂ ವಿನಾಯಿತಿಯ ಬಗ್ಗೆ ವಿಚಾರಿಸಿಕೊಳ್ಳಬಹುದು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ಹೋಂಡಾ ಕಂಪನಿಯ ಮಾರಾಟವು ಹಬ್ಬದ ವೇಳೆಗೆ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಕಂಪನಿಯು ಈ ಎರಡು ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಮೇಲೆ ಆಫರ್‍‍ಗಳನ್ನು ನೀಡುತ್ತಿಲ್ಲ. ಆಕ್ಟಿವಾ ಹಾಗೂ ಸಿಬಿ ಶೈನ್ ವಾಹನಗಳಲ್ಲೂ ಲಿಮಿಟೆಡ್ ಎಡಿಷನ್ ವಾಹನಗಳ ಮೇಲೆ ಆಫರ್‍‍ಗಳನ್ನು ನೀಡಲಾಗುತ್ತಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹೋಂಡಾ ಆಕ್ಟಿವಾ ಹಾಗೂ ಸಿಬಿ ಶೈನ್ ಮೇಲೆ ಭರ್ಜರಿ ಆಫರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಆಕ್ಟಿವಾ 5ಜಿ ಹಾಗೂ ಸಿಬಿ ಶೈನ್ ಹೋಂಡಾ ಕಂಪನಿಯ ಜನಪ್ರಿಯ ವಾಹನಗಳಾಗಿದ್ದು, ಕಂಪನಿಯು ಈ ಎರಡು ವಾಹನಗಳ ಲಿಮಿಟೆಡ್ ಎಡಿಷನ್‍‍ಗಳ ಮೇಲೆ ಆಫರ್‍‍ಗಳನ್ನು ನೀಡುತ್ತಿದೆ. ಈ ಅಫರ್‍‍ಗಳಿಂದ ಹೋಂಡಾ ಕಂಪನಿಯ ಅಕ್ಟೋಬರ್ ತಿಂಗಳ ಮಾರಾಟದ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Article Published On: Wednesday, October 23, 2019, 10:29 [IST]
English summary
Festival offer on Honda Activa and CB Shine, benefits of thousands - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+