ಬಿಡುಗಡೆಗೆ ಸಜ್ಜಾದ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯು ಬಿಎಸ್-6 ನಿಯಮ ಅನುಸಾರ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಉನ್ನತೀಕರಿಸುತ್ತಿದ್ದು, ಆಕ್ಟಿವಾ 125 ಮತ್ತು ಎಸ್‌ಪಿ ಶೈನ್ ಬಿಡುಗಡೆಯ ನಂತರ ಇದೀಗ ಆಕ್ಟಿವಾ 5ಜಿ ಮುಂದುವರಿದ ಆವೃತ್ತಿಯಾದ ಆಕ್ಟಿವಾ 6ಜಿ ಬಿಡುಗಡೆಗಾಗಿ ಸಿದ್ದತೆ ನಡೆಸಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಬಹುನೀರಿಕ್ಷಿತ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಆಕ್ಟಿವಾ 5ಜಿ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ಬಿಎಸ್-6 ಎಂಜಿನ್ ಜೋಡಣೆಯಿಂದಾಗಿ ಹೊಸ ಸ್ಕೂಟರ್ ಇಂಧನ ದಕ್ಷತೆ ಮತ್ತು ಪರ್ಫಾಮೆನ್ಸ್‌ ಹೆಚ್ಚಳಗೊಂಡಿದ್ದು, ಬೆಲೆ ಕೂಡಾ ದುಬಾರಿಯಾಗಿರಲಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಆಕ್ಟಿವಾ 6ಜಿ ಸ್ಕೂಟರ್‌ನಲ್ಲಿ ಈ ಬಾರಿ ಹೊಸ ಪ್ರೀಮಿಯಂ ಫೀಚರ್ಸ್‌ಗಳಾದ ಫ್ರಂಟ್ ಡಿಸ್ಕ್, ಹೊರಭಾಗದಲ್ಲಿ ಫ್ಯೂಲ್ ಕ್ಯಾಪ್, 12-ಇಂಚಿನ ಅಲಾಯ್ ವೀಲ್ಹ್, ಮರುವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟರ್ನ್ ಸಿಗ್ನಲ್ ನೀಡಲಾಗಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಜೊತೆಗೆ ಟರ್ನ್ ಬೈ ಟರ್ನ್ ನ್ಯಾವಿಗೆಷನ್, ಕಾಲ್ ಅಲರ್ಟ್ ಸೌಲಭ್ಯಗಳನ್ನು ಹೊಂದಿರಲಿದ್ದು, ಹೊಸ ಸ್ಕೂಟರ್‌ನಲ್ಲಿ ಡ್ರೈವ್ ಹ್ಯಾಂಡ್ಲಿಂಗ್ ಸುಧಾರಣೆಗಾಗಿ ಚಾರ್ಸಿ ಕೂಡಾ ಬದಲಾವಣೆ ಮಾಡಿರುವ ಪ್ರಮುಖ ಆಕರ್ಷಣೆಯಾಗಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಇನ್ನು ಆಕ್ಟಿವಾ 6ಜಿ ಸ್ಕೂಟರ್‌ನಲ್ಲಿ ಬಿಎಸ್-6 ಪ್ರೇರಿತ 110ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದ್ದು, ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಜೋಡಣೆಯಿಂದಾಗಿ ಇಂಧನ ದಕ್ಷತೆ ಹೆಚ್ಚಿರುವುದಲ್ಲದೇ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಪಡೆದಿದೆ. ಆದರೆ ಹೊಸ ಎಂಜಿನ್ ಪರ್ಫಾಮೆನ್ಸ್ ಕುರಿತಾಗಿ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಆಕ್ಟಿವಾ 5ಜಿ ಮಾದರಿ ಉತ್ಪಾದನೆ ಮಾಡುವ 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್‌ಗಿಂತಲೂ ಉತ್ತಮವಾಗಿರಲಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಬೆಲೆ ಏರಿಕೆ ಬಿಸಿ..!

ಹೌದು, ಬಿಎಸ್-4 ವಾಹನಗಳಿಂತಲೂ ಎಂಜಿನ್ ವಿಭಾಗದಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಬಿಎಸ್-6 ವಾಹನಗಳು ದುಬಾರಿ ಬೆಲೆ ಪಡೆದುಕೊಳ್ಳುತ್ತಿದ್ದು, ಆಕ್ಟಿವಾ 6ಜಿ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆಕ್ಟಿವಾ 5ಜಿ ಸ್ಕೂಟರ್‌ಗಿಂತಲೂ ರೂ.5 ಸಾವಿರದಿಂದ ರೂ.6 ಸಾವಿರ ಹೆಚ್ಚುವರಿ ಬೆಲೆಯೊಂದಿಗೆ ಮಾರಾಟವಾಗಲಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 5ಜಿ ಸ್ಕೂಟರ್ ಮಾದರಿಯು ಸ್ಟ್ಯಾಂಡರ್ಡ್, ಸ್ಟ್ಯಾಂಡರ್ಡ್ ಲಿಮಿಟೆಡ್, ಡಿಲಕ್ಸ್ ಮತ್ತು ಡಿಲಕ್ಸ್ ಲಿಮಿಟೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.71,800 ದಿಂದ ರೂ.74,392ಕ್ಕೆ ಮಾರಾಟವಾಗುತ್ತಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಆಕ್ಟಿವಾ 6ಜಿ ಮಾದರಿಯ ಸಹ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ಹೊಸ ಸ್ಕೂಟರ್ ಬೆಲೆಯು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.75 ಸಾವಿರದಿಂದ ರೂ.81 ಸಾವಿರ ಬೆಲೆ ಪಡೆದುಕೊಳ್ಳಲಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಇದಲ್ಲದೇ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಾವಳಿಗೆ ಹೊಸ ಆಕ್ಟಿವಾ 125 ಸ್ಕೂಟರ್‌‌ ಮಾದರಿಯು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಸ್ಕೂಟರ್ ಖರೀದಿಗೆ ಈಗಾಗಲೇ ಸಾವಿರಾರು ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಅಕ್ಟೋಬರ್ 2ರಿಂದ ಹೊಸ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ್ದ ಹೋಂಡಾ ಸಂಸ್ಥೆಯು ಇದುವರೆಗೆ 25 ಸಾವಿರ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ವರ್ಷಾಂತ್ಯಕ್ಕೆ 1 ಲಕ್ಷ ಸ್ಕೂಟರ್ ಮಾರಾಟ ಗುರಿಹೊಂದಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 125 ಮಾದರಿಯು ಫ್ಯೂಲ್ ಇಂಜೆಕ್ಷಡ್ ಯುನಿಟ್ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 67,490ಕ್ಕೆ ನಿಗದಿಪಡಿಸಲಾಗಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಹೊಸ ಆಕ್ಟಿವಾ 125 ಸ್ಕೂಟರ್ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ಡಿಸೈನ್ ಪ್ರೇರಿತ ಫ್ರಂಟ್ ಅಪಾರ್ನ್, ಎಲ್ಇಡಿ ಡಿಆರ್‌ಎಲ್ಎಸ್ ಜೊತೆ ಟರ್ನ್ ಇಂಡಿಕೇಟರ್ ನೀಡಲಾಗಿದೆ. ಹಾಗೆಯೇ ಕ್ರೋಮ್ ಡಿಸೈನ್‌ನಿಂದಾಗಿ ಹೊಸ ಸ್ಕೂಟರಿಗೆ ಮತ್ತಷ್ಟು ಪ್ರೀಮಿಯಂ ವಿನ್ಯಾಸವನ್ನು ಒದಗಿಸಿದ್ದು, ಇದು ಸ್ಕೂಟರ್ ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಇದರೊಂದಿಗೆ ಬಿಎಸ್-6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ ಎನ್ನಬಹುದು.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

ಬಿಎಸ್-6 ಪ್ರೇರಿತ 124-ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್-ಇಂಜೆಕ್ಷಡ್ ಯುನಿಟ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು 8.4-ಬಿಎಚ್‌ಪಿ ಮತ್ತು 10.54-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಹೊಸ ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಅಂದ್ರೆ ಅದು ಐಡ್ಲಿಂಗ್ ಸ್ಟಾಪ್ ಸಿಸ್ಟಂ ಸೌಲಭ್ಯ. ಹೌದು, ಹೋಂಡಾ ಸಂಸ್ಥೆಯು ಮೊದಲ ಬಾರಿಗೆ ಆಕ್ಟಿವಾ 125 ಸ್ಕೂಟರ್‌ನಲ್ಲಿ ಐಡ್ಲಿಂಗ್ ಸ್ಟಾಪ್ ಸಿಸ್ಟಂ ಬಳಕೆ ಮಾಡಿದ್ದು, ಇದು ಟ್ರಾಫಿಕ್ ದಟ್ಟಣೆಗಳಲ್ಲಿ ಇಂಧನ ವ್ಯರ್ಥವನ್ನು ತಪ್ಪಿಸಲಿದೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಟ್ರಾಫಿಕ್ ಸಿಗ್ನಲ್‌ಗಳಲ್ಲಿ 30 ಸೇಕೆಂಡ್‌ಗಿಂತ ಹೆಚ್ಚು ನಿಲುಗಡೆಯಾದಲ್ಲಿ ಐಡ್ಲಿಂಗ್ ಸ್ಟಾಪ್ ಸಿಸ್ಟಂ ಸೌಲಭ್ಯವು ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಲಿದ್ದು, ಸ್ಕೂಟರ್ ತನ್ನಷ್ಟೇ ತಾನೇ ಬಂದ್ ಆಗುತ್ತೆ. ಇದು ಟ್ರಾಫಿಕ್ ದಟ್ಟಣೆಗಳಲ್ಲಿ ಆಗುವ ಇಂಧನ ವ್ಯರ್ಥವಾಗುವುದಕ್ಕೆ ಬ್ರೇಕ್ ಹಾಕಲಿದ್ದು, ಮೈಲೇಜ್ ಪ್ರಮಾಣವನ್ನು ಹೆಚ್ಚಿಸುತ್ತೆ.

ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಇನ್ನು ಹೊಸ ಆಕ್ಟಿವಾ 125 ಸ್ಕೂಟರ್‌ನಲ್ಲಿ ನೀಡಲಾಗಿರುವ ಮ್ಯಾಟೆ ಫಿನಿಷ್ ಬ್ಲ್ಯಾಕ್ ಅಲಾಯ್ ಚಕ್ರಗಳು, ಹೊರಭಾಗದಲ್ಲಿರುವ ಫ್ಯೂಲ್ ಕ್ಯಾಪ್, ಸೈಲೆಂಟ್ ಸ್ಟಾರ್ಟ್, ಸೈಡ್ ಸ್ಯಾಂಡ್ ಸೆನ್ಸಾರ್, ಎಲ್ಇಡಿ ಲೈಟಿಂಗ್, ಅನಲಾಗ್-ಡಿಜಿಟಲ್ ಕ್ಲಸ್ಟರ್ ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

More from DriveSpark

Article Published On: Saturday, December 14, 2019, 13:23 [IST]
English summary
According to report, Honda Motorcycles and Scooters India limited is Likely to launch new generation Activa 110 scooter with BS-6 compliant in India On 21st December.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+