ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಪ್ರಸಕ್ತ ಹಣಕಾಸು ವರ್ಷದ(2019 - 20) ಮೊದಲ ಆರು ತಿಂಗಳಲ್ಲಿ ಹೋಂಡಾ ಮೋಟಾರ್‍‍ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ, ದೇಶದ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ಏಪ್ರಿಲ್‍ ತಿಂಗಳಿನಿಂದ 2019ರ ಸೆಪ್ಟೆಂಬರ್‍‍ವರೆಗೆ ಹೋಂಡಾ ಆಕ್ಟಿವಾದ 13,93,256 ಯು‍‍ನಿ‍ಟ್‍ಗಳು ಮಾರಾಟವಾಗಿದ್ದು, ದೇಶದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಇತ್ತೀಚೆಗೆ ಬಿಡುಗಡೆಯಾದ ಹೋಂಡಾದ ಲಿಮಿಟೆಡ್ ಎಡಿಷನ್ ಆಕ್ಟಿವಾ 5ಜಿ ರಾತ್ರೋ ರಾತ್ರಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಹೋಂಡಾ ಕಂಪನಿಯು, ಎರಡು ಹೊಸ ಬಣ್ಣಗಳನ್ನು ಹೊಂದಿರುವ 10 ಹೊಸ ಪ್ರೀಮಿಯಂ ಶೈಲಿಯ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ತನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ.

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಹೋಂಡಾ 2001ರಲ್ಲಿ ಹೋಂಡಾ ಆಕ್ಟಿವಾವನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಆರಂಭದಿಂದಲೂ ಆಕ್ಟಿವಾ ಉತ್ತಮ ಸ್ಪೆಸ್, ಹೆಚ್ಚಿನ ಮೈಲೇಜ್, ಸ್ಟೈಲ್ ಮತ್ತು ಸುಧಾರಿತವಾದ ತಂತ್ರಜ್ಞಾನದ ಮೂಲಕ ಜನಸಮಾನ್ಯರ ಗಮನಸೆಳೆಯಿತು. ಹೋಂಡಾ ಅಕ್ಟಿವಾ ಬೇಡಿಕೆ ಎಷ್ಟರ ಮಟ್ಟಿಗೆ ಇದೆ ಎಂದರೆ ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೆ ಒಂದು ಆಕ್ಟಿವಾ ಮಾರಾಟವಾಗುತ್ತಿದೆ. ಭಾರತೀಯರ ಮೆಚ್ಚಿನ ಸ್ಕೂಟರ್ ಆಗಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಆಕ್ಟಿವಾ ಪ್ರಾರಂಭವಾಗಿ 17 ವರ್ಷದ ನಂತರ ಅಂದರೆ 2016-17ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ದ್ವಿಚಕ್ರ ವಿಭಾಗದ ಮಾರಾಟದಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿತ್ತು. ಹೋಂಡಾ ಆಕ್ಟಿವಾ 2 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಹೋಂಡಾ ಕಂಪನಿಯು ಈ ಸ್ಕೂಟರ್ ಅನ್ನು ಆಟೋಮ್ಯಾಟಿಕ್ ಸ್ಕೂಟರ್ ಸೆಗ್‍‍ಮೆಂಟ್‍ನಲ್ಲಿ ಮುಂಚೂಣೆಯಲ್ಲಿಡಲು ನಿರತವಾಗಿದೆ.

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಆಕ್ಟಿವಾ ಸ್ಕೂಟರ್ ದೇಶಿಯ ದ್ವಿಚಕ್ರ ವಾಹನ ಉದ್ಯಮಕ್ಕೆ ಶೇ.14ರಷ್ಟು ಕೊಡುಗೆಯನ್ನು ನೀಡುತ್ತಿದೆ. ಹೋಂಡಾ ಕಂಪನಿಯು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇ.56ರಷ್ಟು ಪಾಲನ್ನು ಹೊಂದಿ, ಸ್ಕೂಟರ್ ಸೆಗ್‍‍ಮೆಂಟ್‍ನಲ್ಲಿ ಪಾರುಪತ್ಯ ಸಾಧಿಸುತ್ತಿದೆ.

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಹೋಂಡಾ ಆಕ್ಟಿವಾ ಮೂರು ಮಾದರಿಗಳಲ್ಲಿ ಲಭ್ಯವಿದೆ. ಅದರಲ್ಲಿ ಹೋಂಡಾ ಆಕ್ಟಿವಾ ಐ ಸ್ಕೂಟರ್ 109.19 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಮತ್ತು 8.94 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಕ್ಟಿವಾ ಐ-ಇಂಪೀರಿಯಲ್ ರೆಡ್ ಮೆಟಾಲಿಕ್, ಲಷ್ ಮೆಜೆಂಟಾ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಮೆಟಾಲಿಕ್, ಆರ್ಕಿಡ್ ಪರ್ಪಲ್ ಮೆಟಾಲಿಕ್ ಮತ್ತು ಕ್ಯಾಂಡಿ ಜಾಝಿ ಬ್ಲೂ ಬಣ್ಣದಲ್ಲಿ ಲಭ್ಯವಿದೆ. ಭಾರತೀಯ ಎಕ್ಸ್ ಶೋರೂಂ ಪ್ರಕಾರ ಈ ಸ್ಕೂಟರ್ ಬೆಲೆಯು ರೂ.52,887ಗಳಾಗಿದೆ.

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಹೋಂಡಾ ಆಕ್ಟಿವಾ 5 ಜಿ ಮತ್ತೊಂದು ರೂಪಾಂತರವಾಗಿದೆ. ಈ ಸ್ಕೂಟರ್‍‍ನಲ್ಲಿ 109.19 ಸಿಸಿ ಎಂಜಿನ್ 8 ಬಿಎಚ್‍ಪಿ ಪವರ್ ಮತ್ತು 9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಕೂಟರ್ ಡ್ಯಾಜ್ಲೆ ಯೆಲ್ಲೊ ಮೆಟಾಲಿಕ್, ಮೆಜೆಸ್ಟಿಕ್ ಬ್ರೌನ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ಲ್ಯಾಕ್, ಮ್ಯಾಟ್ ಸೆಲೀನ್ ಸಿಲ್ವಿರ್ ಮೆಟಾಲಿಕ್, ಪರ್ಲ್ ಅಮೇಜಿಂಗ್ ವೈಟ್, ಪರ್ಲ್ ಸ್ಪಾರ್ಟನ್ ರೆಡ್ ಮತ್ತು ಟ್ರಾನ್ಸ್ ಬ್ಲೂ ಮೆಟಾಲಿಕ್‍ ಬಣ್ಣಗಳಲ್ಲಿ ಲಭ್ಯವಿದೆ. ಭಾರತೀಯ ಎಕ್ಸ್ ಶೋರೂಂ ಪ್ರಕಾರ ಈ ಸ್ಕೂಟರ್‍ ಬೆಲೆಯು ರೂ.56,535ಗಳಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಹೋಂಡಾ ಆಕ್ಟೀವಾ 125 ಸ್ಕೂಟರ್, 124 ಸಿಸಿ ಎಂಜಿನ್ ಹೊಂದಿದೆ. ಈ ಎಂಜಿನ್ 8.5 ಬಿಹೆಚ್‍‍ಪಿ ಪವರ್ ಮತ್ತು 10.54 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಕೂಟರ್ ರೆಬೆಲ್ ರೆಡ್‍ ಮೆಟಾಲಿಕ್, ಮಿಡ್‍‍ನೈಟ್ ಬ್ಲೂ ಮೆಟಾಲಿಕ್, ಪರ್ಲ್ ಅಮೇಜಿಂಗ್ ವೈಟ್, ಬ್ಲ್ಯಾಕ್, ಮ್ಯಾಟ್ ಕ್ರಸ್ಟ್ ಮೆಟಾಲಿಕ್ ಮತ್ತು ಸೆಲೀನ್ ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಭಾರತೀಯ ಎಕ್ಸ್ ಶೋರೂಂ ಪ್ರಕಾರ ಈ .ಸ್ಕೂಟರ್ ಬೆಲೆಯು ರೂ.62,591ಗಳಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ನಂ1 ಸ್ಥಾನಕ್ಕೇರಿದ ಹೋಂಡಾ ಆಕ್ಟಿವಾ ಸ್ಕೂಟರ್

ಹೋಂಡಾ ಪ್ರಾರಂಭದಲ್ಲಿ ಸರಿಯಾದ ಸಮಯದಲ್ಲಿ ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಆ ಸಮಯದಲ್ಲಿ ಸ್ಕೂಟಿ ಮತ್ತು ಸ್ಕೂಟಿ ಪೆಪ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತಿತ್ತು. ಆಕ್ಟಿವಾ ಸ್ಕೂಟರ್‍‍ಗೆ ಪ್ರಬಲ ಪೈಪೋಟಿಯನ್ನು ನೀಡುವ ಬ್ರ್ಯಾಂಡ್‍‍ಗಳು ಇರಲಿಲ್ಲ. ಆಕ್ಟಿವಾ ಸ್ಕೂಟರ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಇಂದಿಗೂ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿದೆ. ಹೊಸ ಸ್ಕೂಟರ್ ಬ್ರ್ಯಾಂಡ್‍‍ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಪ್ರಬಲ ಪೈಪೋಟಿಯನ್ನು ನೀಡಿದರೂ ತನ್ನ ಜನಪ್ರಿಯತೆ ಕಡಿಮೆಯಾಗಿಲ್ಲ.

Most Read Articles

Kannada
English summary
Honda’s Activa Sales Reach 14 Lakh Units In 6 Months: Becomes India’s Top-Selling Scooter - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X