Just In
- 10 hrs ago
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- 10 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಂಡು ಬಂದ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್
- 11 hrs ago
ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- 11 hrs ago
ಅಂಬಾನಿಗೆ ಭದ್ರತೆ ನೀಡುತ್ತಿರುವ ಕಾರುಗಳ ಬೆಲೆ ಎಷ್ಟು ಗೊತ್ತಾ?
Don't Miss!
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- News
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
- Movies
ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಬೆಂಗಳೂರಿನಲ್ಲಿ ನಡೆಯಿತು ಹೋಂಡಾ ಆಫ್ರಿಕಾ ಟ್ರೂ ಅಡ್ವೆಂಚರ್ ಕ್ಯಾಂಪ್
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯ ಪ್ರೈ. ಲಿಮಿಟೆಡ್ ಕಂಪನಿಯು ಕಳೆದ ವಾರಂತ್ಯದಲ್ಲಿ ಬೆಂಗಳೂರಿನಲ್ಲಿ ಎರಡನೇ ಸುತ್ತಿನ ಆಫ್ರಿಕಾ ಟ್ವಿನ್ ಟ್ರೂ ಅಡ್ವೆಂಚರ್ ಕ್ಯಾಂಪ್ ಅನ್ನು ನಡೆಸಿದ್ದಾರೆ. ಕ್ಯಾಂಪ್‍ನಲ್ಲಿ ಪ್ರಾರಂಭಿಕ ಹಂತದ ರೈಡಿಂಗ್ ಮತ್ತು (ಡಿಸಿಟಿ) ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಬಗ್ಗೆ ರೈಡರ್‍ಗಳಿಗೆ ಮಾಹಿತಿಯನ್ನು ನೀಡಿದರು.

ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಬಿಗ್ ರಾಕ್ ಡಿರ್ಟ್‍ಪಾರ್ಕ್ ವತಿಯಿಂದ ನಡೆದ ಎರಡನೇ ಸುತ್ತಿನ ಕ್ಯಾಂಪ್‍ನಲ್ಲಿ 30 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಬಿಕ್ ರಾಕ್ ಡಿರ್ಟ್‍ಪಾರ್ಕ್ ಸಿಎಸ್ ಸಂತೋಷ್ ಅವರ ಒಡೆತನದಲ್ಲಿದೆ ಮತ್ತು ಮೂರು ಡಾಕರ್ ರ್‍ಯಾಲಿಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಹಿಮಾಲಯನ್ ಮೋಟಾರ್‍ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ವಿಜಯ್ ಪರ್ಮಾರ್ ಮತ್ತು ಇವರ ತಂಡ ರೈಡರ್‍ಗಳ ಜೊತೆ ಸಂವಾದವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ಮೋಟಾರ್ ಸೈಕ್ಲಿಂಗ್ ಮತ್ತು ಆಫ್ ರೋಡಿಂಗ್ ಬಗ್ಗೆ ಪ್ರಾಕ್ಟಿಕಲ್ ಆಗಿ ತರಬೇತಿ ನೀಡಿದರು.

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯ ಪ್ರೈ ಲಿಮಿಟೆಡ್‍ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ಉಪಾಧ್ಯಕ್ಷ ಯಧುವಿಂದರ್ ಸಿಂಗ್ ಮಾತನಾಡಿ, ಬೆಂಗಳೂರು ನಗರವು ಯಾವಗಲೂ ಉತ್ಸಾಹಭರಿತ ಸಾಹಸಿಗರನ್ನು ಕೂಡಿದ ಸಿಟಿಯಾಗಿದೆ. ಆಫ್ರಿಕಾ ಟ್ವಿನ್ ಟ್ರೂ ಅಡ್ವೆಂಚರ್ ಕ್ಯಾಂಪ್‍ನಲ್ಲಿ ಉತ್ಸಾಹಿಗಳನ್ನು ಮತ್ತು ಅಡ್ವೆಂಚರ್ ರೈಡರ್‍ಗಳು, ಸಾಹಸಮಯ ಅನುಭವ ಹೊಂದಿರುವ ತಜ್ಞರನ್ನು ಒಟ್ಟುಗೊಡಿಸಿದೆ, ಹೊಸ ಕೌಶಲ್ಯಗಳನ್ನು ಕಲಿಯಲು ಈ ಕ್ಯಾಂಪ್ ರೈಡರ್‍ಗಳಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಹೋಂಡಾದ ಆಫ್ರಿಕಾ ಟ್ವಿನ್ ಟ್ರೂ ಅಡ್ವೆಂಚರ್ ಕ್ಯಾಂಪ್ ಪ್ರಾಕ್ಟಿಕಲ್ ಜೊತೆ ಕ್ಲಾಸ್ ರೂಂ ಶೈಲಿಯ ಸೆಷನ್ ಕೂಡ ಆಗಿದ್ದು, ಈ ಕ್ಯಾಂಪ್‍ನಲ್ಲಿ ಮೊದಲ ಹಂತದಲ್ಲಿ ಬೇಸಿಕ್ ಆಗಿ ರೈಡರ್ ಬ್ರಷ್ ಆಪ್, ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ (ಡಿಸಿಡಿ) , ವಿವಿಧ ರೈಡಿಂಗ್ ಮೂಡ್‍ಗಳ ರೈಡ್, ಆಪ್ರಿಕಾ ಟ್ವಿನ್ ಮೋಟಾರ್ ಸೈಕಲ್ ಆಫ್-ರೋಡ್ ಸಾಮರ್ಥ್ಯ ಬಗ್ಗೆ ತಿಳಿಸಿದರು.

ಅಡ್ವೆಂಚರ್ ಕ್ಯಾಂಪ್‍ನಲ್ಲಿ ರೈಡರ್‍ಗಳ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಹಂಪ್ಸ್, ಅಂಡರ್‍ಗ್ರೌಂಡ್ ಟರ್ನ್ಸ್, ಗ್ರಾವೇಲ್, ಪಿಟ್ಸ್ ಮತ್ತು ಡಿರ್ಟ್ ಟ್ರ್ಯಾಕ್ ನಲ್ಲಿ ಸಾಹಸಮಯ ರೈಡ್‍ಗಳ ಬಗ್ಗೆ ಪ್ರಾಕ್ಟಿಕಲ್ ತರಬೇತಿ ನೀಡಿದರು.

ಹೋಂಡಾದ ಆಪ್ರಿಕಾ ಟ್ವಿನ್ ಟ್ರೂ ಅಡ್ವೆಂಚರ್ ಕ್ಯಾಂಪ್‍ನ ಮೊದಲ ಹಂತವನ್ನು ದೆಹಲಿಯ ಎನ್‍ಸಿಆರ್ ಪ್ರದೇಶದಲ್ಲಿ ನಡೆಸಲಾಗಿತ್ತು, ಇದರಲ್ಲಿ 20 ರೈಡರ್‍ಗಳು ಭಾಗವಹಿಸಿದ್ದರು. ಹೋಂಡಾದ ಮುಂದಿನ ಅಡ್ವೆಂಚರ್ ಕ್ಯಾಂಪ್ ಬಾರತದ ಪ್ರಮುಖ ನಗರಗಳಾದ ಮುಂಬೈ ಮತ್ತು ಕೊಚ್ಚಿಯಲ್ಲಿ ನಡೆಯಲಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಆಫ್ರಿಕಾ ಟ್ವಿನ್ ಅನ್ನು ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 2017ರಲ್ಲಿ ಪ್ರರಾಂಭಿಸಿದ್ದರು, ಕಂಪನಿಯ ಪ್ರಮುಖ ಅಡ್ವೆಂಚರ್ ಟೂರರ್ ಜಾಗತಿಕ ಶ್ರೇಣೆಯಲ್ಲಿದೆ. ಮೋಟಾರ್ ಸೈಕಲ್ ಹೋಂಡ ಮೋಟರ್‍ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮೊದಲ 1000 ಸಿಸಿ ಮೇಕ್ ಇನ್ ಇಂಡಿಯ ಮಾದರಿಯಾಗಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಆಫಿಕಾ ಟ್ವಿನ್ 999.11 ಸಿಸಿ ಟ್ವಿನ್-ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 86.04 ಬಿಎಚ್‍ಪಿ ಪವರ್ ಮತ್ತು 93.1 ಎನ್‍ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ. ಎಂಜಿನ್‍ಗೆ 6-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಜೋಡಿಸಲಾಗಿದೆ. ಈ ಬೈಕ್ ಟೂರ್, ಅರ್ಬನ್, ಗ್ರಾವೇಲ್ ಮತ್ತು ಯೂಸರ್ ಎಂಬ ನಾಲ್ಕು ರೈಡಿಂಗ್ ಮೂಡ್ ಅನ್ನು ಹೊಂದಿದೆ. ಹೋಂಡಾ ಸೆಲೆಕ್ಷಬಲ್ ಟಾರ್ಕ್ ಕಂಟ್ರೋಲ್ ಮತ್ತು ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ತಂತ್ರಜ್ಞಾನವನ್ನು ಒಳಗೊಂಡಿದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹೋಂಡಾ ಆಫ್ರಿಕಾ ಟ್ವಿನ್ ಮೆಟಾಲಿಕ್ ಬ್ಲೂ ಕಲರ್ ಹೊಂದಿದ್ದು, ಬೈಕಿಗೆ ಭಾರತದ ಎಕ್ಸ್ ಶೋ ರೂಂ ಪ್ರಕಾರ ರೂ.13.50 ಲಕ್ಷ ದರವನ್ನು ಹೊಂದಿದೆ. ಹೋಂಡಾದ ಅಡ್ವೆಂಚರ್ ಕ್ಯಾಂಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ದೇಶದ ಪ್ರಮುಖ ನಗರಗಳಲ್ಲಿ ಕ್ಯಾಂಪ್ ನಡೆಸುತ್ತಿದ್ದಾರೆ. ಕ್ಯಾಂಪ್ ತನ್ನ ಎರಡನೇ ಹಂತದ ಪಟ್ಟಿಯಲ್ಲಿ ಉಳಿದ ಪ್ರಮುಖ ನಗರಗಳಾದ ಮುಂಬೈ ಮತ್ತು ಕೊಚ್ಚಿಯಲ್ಲಿಯು ಕ್ಯಾಂಪ್ ನಡೆಯಲಿದೆ.