ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಹೋಂಡಾ ಕಂಪನಿಯ ಸಿಬಿ650‍ಆರ್ ಬೈಕ್ ಅನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಗಾಡಿವಾಡಿ ವರದಿಗಳ ಪ್ರಕಾರ, ಹೋಂಡಾ ಟೂ ವ್ಹೀಲರ್ಸ್ ಇಂಡಿಯಾ ಈ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

600ಸಿಸಿ ಸೆಗ್‍‍ಮೆಂಟಿನಲ್ಲಿರುವ ಬೈಕುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಧ್ಯಮ ತೂಕದ ನೇಕೆಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇಟಲಿಯಲ್ಲಿ ನಡೆದ 2018ರ ಇಐಸಿಎಂಎ ಮೋಟಾರ್‌ಸೈಕಲ್ ಶೋನಲ್ಲಿ ಹೋಂಡಾ ಸಿಬಿ 650 ಆರ್ ಬೈಕ್ ಅನ್ನು ಅನಾವರಣಗೊಳಿಸಲಾಗಿತ್ತು. ಇದಕ್ಕೆ ವಿಮರ್ಶಕರು ಹಾಗೂ ಬೈಕ್ ಪ್ರಿಯರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2019ರ ಜನವರಿಯಲ್ಲಿ, ಈ ಸ್ಟ್ರೀಟ್ ನೇಕೆಡ್ ಬೈಕ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಈಗ ಕಂಪನಿಯು ಈ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಬಯಸಿದೆ. ಹೋಂಡಾ ಸಿಬಿ 650 ಆರ್ ಬೈಕ್, 650 ಸಿಸಿ ಸೆಗ್‍‍ಮೆಂಟಿನಲ್ಲಿರುವ ಆಕರ್ಷಕವಾದ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿರುವ ಸ್ಟೈಲಿಂಗ್ ಅನ್ನು ಸಿಬಿ1000 ಆರ್ ಬೈಕಿನಿಂದ ಪಡೆಯಲಾಗಿದೆ.

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಈ ಬೈಕಿನ ಮುಂಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‍‍‍‍‍‍ಎಲ್ ಹೊಂದಿರುವ ರೆಕಾನೈಸಬಲ್ ಎಲ್ಇಡಿ ಹೆಡ್‍‍ಲ್ಯಾಂಪ್‍‍‍ಗಳಿವೆ. ಹೆಡ್‌ಲ್ಯಾಂಪ್ ಯುನಿಟಿನ ಒಳಗೆ ರೆಕ್ಟಾಂಗ್ಯುಲರ್ ಬಾರ್ ಇದ್ದು, ಅದರ ಮೇಲೆ ಹೋಂಡಾ ಬ್ಯಾಡ್ಜ್ ಅಳವಡಿಸಲಾಗಿದೆ.

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಹೆಡ್‌ಲ್ಯಾಂಪ್‌ನ ಮೇಲೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದೆ. ಇದು ಎಲ್‌ಸಿಡಿಯಾಗಿದ್ದು, ಟ್ಯಾಕೋಮೀಟರ್, ಓಡೋಮೀಟರ್, ಸ್ಪೀಡೋಮೀಟರ್, ಟ್ರಿಪ್ ಮೀಟರ್, ಡಿಸ್ಟಾನ್ಸ್ ಟು ಎಂಪ್ಟಿ ಇತ್ಯಾದಿಗಳನ್ನು ತೋರಿಸುತ್ತದೆ. ಮುಂಭಾಗದ ತುದಿಗೆ ಮತ್ತಷ್ಟು ಅಂದವನ್ನು ನೀಡುವುದು ಬಂಗಾರದ ಲೇಪನದಲ್ಲಿ ಕೆತ್ತಲಾಗಿರುವ ಅಪ್‍‍ಸೈಡ್ ಡೌನ್ ಫೋರ್ಕ್.

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಇಂಧನ ಟ್ಯಾಂಕ್ ಹೋಂಡಾ ಸಿಬಿ 650 ಆರ್ ನಲ್ಲಿರುವ ಅತ್ಯುತ್ತಮವಾದ ವಿನ್ಯಾಸವಾಗಿದೆ. ಇದು ಮಸ್ಕುಲರ್ ಆಗಿದ್ದು, ಮೋಡಿಮಾಡುವ ಕ್ರೀಸ್‌ ಹಾಗೂ ಲೈನ್‍‍ಗಳನ್ನು ಹೊಂದಿದೆ. ಕೌಲಿಂಗ್ ಅದನ್ನು ಮತ್ತಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲ್ಯಾಂಪ್ ಹಾಗೂ ಎಲ್ಇಡಿ ಇಂಡಿಕೇಟರ್‍‍ಗಳಿವೆ.

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಪೂರ್ಣವಾಗಿ ಬಹಿರಂಗಗೊಂಡ ಎಂಜಿನ್ ಕೂಡ ಬೈಕಿಗೆ ಮಸ್ಕುಲರ್ ಲುಕ್ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಬೈಕಿನಲ್ಲಿರುವ ಪೂರ್ಣ ಎಕ್ಸಾಸ್ಟ್ ಸಿಸ್ಟಂ ಕಲೆಯ ತುಣುಕಿನಂತೆ ಕಾಣುತ್ತದೆ. ಈ ಎಕ್ಸಾಸ್ಟ್ ಸಿಸ್ಟಂ ನಾಲ್ಕು ಡೌನ್‌ಪೈಪ್‌ಗಳನ್ನು ಹೊಂದಿದೆ. ನಾಲ್ಕು ಸಿಲಿಂಡರ್‌ಗಳಲ್ಲಿ ಪ್ರತಿಯೊಂದೂ ಅಂಡರ್‌ಬೆಲ್ಲಿ ಎಕ್ಸಾಸ್ಟ್ ಔಟ್‌ಲೆಟ್‌ನಲ್ಲಿ ಹೊಂದಿವೆ.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಹೋಂಡಾ ಸಿಬಿ 650 ಆರ್ ಬೈಕಿನಲ್ಲಿ ಲಿಕ್ವಿಡ್ ಕೂಲ್‍‍ನ 649 ಸಿಸಿಯ, ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಹೋಂಡಾ ಸಿಬಿಆರ್ 650 ಆರ್ ಬೈಕಿನಲ್ಲಿಯೂ ಅಳವಡಿಸಲಾಗಿದೆ. ಈ ಎಂಜಿನ್ 12,000 ಆರ್‌ಪಿಎಂನಲ್ಲಿ 93.7 ಬಿಹೆಚ್‌ಪಿ ಪವರ್ ಹಾಗೂ 8,500 ಆರ್‍‍ಪಿ‍ಎಂನಲ್ಲಿ 64 ಎನ್‍ಎಂ ಟಾರ್ಕ್ ಅನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಉತ್ಪಾದಿಸುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ದೇಶಿಯ ಮಾರುಕಟ್ಟೆಯಲ್ಲಿ, 87ಬಿ‍‍ಹೆಚ್‍‍‍ಪಿ ಪವರ್ ಹಾಗೂ 60 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿರುವ 6 ಸ್ಪೀದಿನ ಗೇರ್ ಬಾಕ್ಸ್ ಹಿಂದಿನ ವ್ಹೀಲ್ ಅನ್ನು ಚಲಾಯಿಸುತ್ತದೆ. ಸಸ್ಪೆಂಷನ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ 41 ಎಂಎಂ‍‍ನ ಎಸ್‌ಎಫ್‌ಎಫ್ (ಸೆಪರೇಟ್ ಫೋರ್ಕ್ ಫಂಕ್ಷನ್)ಠಾಗೂ ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊಶಾಕ್‍‍ಗಳಿವೆ. ನಾಲ್ಕು ಪಿಸ್ಟನ್ ಕ್ಯಾಲಿಪರ್‌ಗಳನ್ನು ಹೊಂದಿರುವ ಡ್ಯುಯಲ್ 310 ಎಂಎಂ ಡಿಸ್ಕ್ ಗಳು ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕಿಂಗ್ ಕಾರ್ಯಗಳನ್ನು ನಿರ್ವಹಿಸುತ್ತವೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ 600-800 ಸಿಸಿ ಬೈಕುಗಳ ಸೆಗ್‍‍ಮೆಂಟ್ ವೇಗವಾಗಿ ಬೆಳೆಯುತ್ತಿದೆ. ಈ ಸೆಗ್‍‍ಮೆಂಟಿನಲ್ಲಿ ವಿಶ್ವದ ಹಲವು ಅತ್ಯುತ್ತಮವಾದ ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಸೆಗ್‍‍ಮೆಂಟಿನಲ್ಲಿ ಮತ್ತಷ್ಟು ಬೈಕುಗಳು ಬಿಡುಗಡೆಯಾಗಲಿದ್ದು, ಮತ್ತಷ್ಟು ಪೈಪೋಟಿ ಏರ್ಪಡಲಿದೆ. ಹೋಂಡಾ ಸಿಬಿ 650 ಆರ್ ಬೈಕ್ ಅನ್ನು ಬಹು ನಿರೀಕ್ಷಿತ ಕೆಟಿಎಂ 790 ಡ್ಯೂಕ್ ಬೈಕ್ ಬಿಡುಗಡೆಯಾಗುವ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹೋಂಡಾ ಸಿಬಿ650‍ಆರ್

ಹೋಂಡಾ ಬೈಕುಗಳನ್ನು ಬಯಸುವವರು ನಾಲ್ಕು ಸಿಲಿಂಡರಿನ ಸಿಬಿ 650ಆರ್ ಬೈಕುಗಳನ್ನು ಖರೀದಿಸಲಿದ್ದಾರೆ. ಆದರೆ ಹೋಂಡಾ ಈ ಬೈಕಿಗೆ ಎಷ್ಟು ದರವನ್ನು ನಿಗದಿಪಡಿಸಲಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಈ ವರ್ಷದ ಆರಂಭದಲ್ಲಿ ಬ್ರಿಟನ್ನಿನಲ್ಲಿ ಹೋಂಡಾ ಸಿಬಿ 650ಆರ್ ಬೈಕ್ ಅನ್ನು 6,999 ಪೌಂಡ್ಸ್ ಅಂದರೆ ಭಾರತದ ಮೌಲ್ಯದಲ್ಲಿ ರೂ.6.07 ಲಕ್ಷಗಳ ಬೆಲೆಯಲ್ಲಿ ಬಿಡುಗಡೆಗೊಳಿಸಲಾಯಿತು. ಹೋಂಡಾ ಕಂಪನಿಯು ಭಾರತದಲ್ಲಿಯೂ ಸಹ ಇದೇ ದರವನ್ನು ನಿಗದಿಪಡಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Honda CB650R Expected To Launch In India: Price, Specifications, Features & Details - Read in kannada
Story first published: Tuesday, September 3, 2019, 15:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X