ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ದೇಶದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಹೋಂಡಾ ಕಳೆದ ವಾರವಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ದುಬಾರಿ ಬೆಲೆಯ ಸಿಬಿಆರ್ 650 ಆರ್ ಬೈಕ್ ಬಿಡುಗಡೆಗೊಳಿಸಿದ್ದು, ಮುಂಬೈ ಮೂಲದ ಡಾ.ರೂಪೇಶ್ ಎಂಬುವರರು ಮೊದಲ ಯುನಿಟ್‌ನಲ್ಲಿ ಸಿಬಿಆರ್ 650ಆರ್ ಬೈಕ್ ಅನ್ನು ಖರೀದಿಸಿದ್ದಾರೆ.

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ಹೋಂಡಾ ಸಿಬಿಆರ್ 650ಆರ್ ಬೈಕ್ ನ ಬೆಲೆ ಭಾರತದಲ್ಲಿ ಎಕ್ಸ್ ಶೋ ರೂಂ ದರವನ್ನು ರೂ.7.70 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಸಿಬಿಆರ್ 650ಆರ್ ಬೈಕ್ ಅನ್ನು ಇತ್ತೀಚಿಗಷ್ಟೇ ಸ್ಥಗಿತಗೊಳಿಸಲಾದ ಸಿಬಿಆರ್ 650ಎಫ್ ಬೈಕಿನ ಬದಲಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ 22 ಪ್ರೀಮಿಯಂ ಹೋಂಡಾ ಬೈಕ್ ಶೋರೂಂಗಳಲ್ಲಿ ಮಾತ್ರವೇ ಸಿಬಿಆರ್ 650ಆರ್ ಖರೀದಿಗೆ ಅವಕಾಶವಿದ್ದು, ಕರ್ನಾಟಕದಲ್ಲಿ ಬೆಂಗಳೂರಿನ ಸಿಲಿಕಾನ್ ಮೋಟಾರ್ಸ್‌ನಲ್ಲಿ ಮಾತ್ರಲೇ ಈ ಅವಕಾಶ ನೀಡಲಾಗಿದೆ.

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ಇನ್ನು ಸಿಬಿಆರ್ 650ಎಫ್ ಗೆ ಹೋಲಿಸಿದರೆ ಸಿಬಿಆರ್ 650ಆರ್ ಬೈಕ್ ನಲ್ಲಿ ಅನೇಕ ಡಿಸೈನ್ ಗಳನ್ನು ಅಪ್ ಡೇಟ್ ಮಾಡಲಾಗಿದ್ದು, ಡ್ಯುಯಲ್ ಹೆಡ್ ಲ್ಯಾಂಪ್ ಯೂನಿಟ್, ಎಕ್ಸ್ ಪೊಸ್ಡ್ ಎಂಜಿನ್ ಮತ್ತು ವಿಭಿನ್ನ ವಿನ್ಯಾಸ ಹೊಂದಿರುವ ಬೈಕಿನ ಹಿಂಬದಿ ಭಾಗವು ಆಕರ್ಷಕವಾಗಿದೆ.

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ಸಿಬಿಆರ್ 650ಆರ್ ನಲ್ಲಿರುವ ಅನೇಕ ವಿನ್ಯಾಸಗಳನ್ನು ಸಿಬಿಆರ್ 650ಎಫ್ ನಿಂದ ಪಡೆಯಲಾಗಿದ್ದು, ಸಿಬಿಆರ್ 650ಆರ್ ಬೈಕ್ ಅನ್ನು ಸ್ಪೋರ್ಟ್ ಟೂರರ್ ಆಗಿ ಬಿಡುಗಡೆ ಮಾಡಲಾಗಿದೆ. ಈ ಬೈಕಿನ ಹ್ಯಾಂಡಲ್ ಬಾರ್ ಗಳ ಮೇಲೆ ಕ್ಲಿಪ್ ಗಳನ್ನು ಅಳವಡಿಸಲಾಗಿದ್ದು, 30 ಎಂಎಂ ನಷ್ಟು ಕೆಳಗೆ ಬಿಡಲಾಗಿದೆ.

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ಇದರಿಂದ ಮೋಟಾರ್ ಸೈಕಲ್ ನಲ್ಲಿ ಆರಾಮದಾಯಕ ರೈಡಿಂಗ್ ಪೊಸಿಷನ್ ದೊರೆಯುತ್ತಿದ್ದು, ಸಿಬಿಆರ್ 650ಎಫ್ ಗೆ ಹೋಲಿಸಿದರೆ ಹೊಸ ಬೈಕಿನ ಹಿಂಬದಿಯಲ್ಲಿರುವ ಫೂಟ್ ಪೆಗ್‍ಗಳನ್ನು ಸ್ವಲ್ಪ ಹಿಂದಕ್ಕೆ ಸರಿಸಲಾಗಿದೆ. ಸಿಬಿಆರ್ 650ಆರ್ ಯಲ್ಲಿರುವ ಇತರ ಫೀಚರ್ ಗಳೆಂದರೆ : ಎಲ್ಇಡಿ ಹೆಡ್ ಲ್ಯಾಂಪ್ಸ್, ಸಂಪೂರ್ಣ ಡಿಜಿಟಲ್ ಎಲ್‍ಸಿಡಿ ಇನ್ಸೂಟ್ರೂಮೆಂಟ್ ಹೊಂದಿರುವ ಕ್ಲಸ್ಟರ್, ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್, ಸ್ಲಿಪರ್ ಕ್ಲಚ್ ಮತ್ತು ಕ್ವಿಕ್ ಶಿಫ್ಟರ್.

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ಸಿಬಿಆರ್ 650ಆರ್ ಬೈಕ್ 649 ಸಿಸಿ ಲಿಕ್ವಿಡ್ ಇನ್ ಲೈನ್ ಹೊಂದಿರುವ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 95 ಬಿಹೆಚ್‍‍ಪಿಯನ್ನು 12,000 ಆರ್‍‍ಪಿಎಂ ಮತ್ತು 64 ಎನ್ಎಂ ಪೀಕ್‍ಟಾರ್ಕ್ ಅನ್ನು 8,500 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಫೀಡಿನ ಗೇರ್ ಬಾಕ್ಸ್ ಹೊಂದಿದ್ದು, ಸಿಬಿಆರ್ 650ಆರ್ ನ ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯು 15 ಲೀಟರ್ ಆಗಿದೆ. ಪ್ರತಿ ಲೀಟರಿಗೆ ಸುಮಾರು 20 ಕಿ.ಮೀ ಮೈಲೇಜ್ ನೀಡಲಿದೆ.

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

2019ರ ಹೋಂಡಾ ಸಿಬಿಆರ್ 650ಆರ್ 41 ಎಂಎಂ ಶೋವಾ ಯುಎಸ್‍ಡಿ ಫೋರ್ಕ್ ಅನ್ನು ಮುಂಭಾಗದಲ್ಲಿ ಮತ್ತು ಮೋನೋ ಶಾಕ್ ಅನ್ನು ಹಿಂಭಾಗದಲ್ಲಿ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಅನ್ನು ಡ್ಯುಯಲ್ ಡಿಸ್ಕ್ ಸೆಟ್ ನಿಯಂತ್ರಿಸುವುದು, ಮುಂಭಾಗದಲ್ಲಿ ರೇಡಿಯಲ್ ಮೌಂಟೆಡ್ ಕ್ಯಾಲಿಪರ್ ಗಳು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಸೆಟ್ ಅಪ್ ಗಳಿದ್ದು ಇವುಗಳಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಬೆಂಬಲವಾಗರಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ಸಿಬಿಆರ್ 650ಆರ್ ಮ್ಯಾಟ್ ಗನ್ ಪೌಡರ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಗ್ರಾಂಡ್ ಪ್ರಿಕ್ಸ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಲಿದೆ.

ಹೋಂಡಾ ಸಿಬಿಆರ್650ಆರ್ ಮೊದಲ ಬೈಕ್ ಖರೀದಿಸಿದ ಡಾ.ರೂಪೇಶ್..!

ಒಟ್ಟಿನಲ್ಲಿ ಸಿಬಿಆರ್ 650ಆರ್ ಭಾರತೀಯ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಹೊಂದಿರುವ ಮಿಡಲ್ ವೇಟ್ ಮೋಟಾರ್ ಸೈಕಲ್ ಸೆಗ್‍ಮೆಂಟಿನಲ್ಲಿ ಹೊಸದಾಗಿ ಪ್ರವೇಶ ಪಡೆದಿದೆ. 500 ರಿಂದ 800 ಸಿಸಿ ಸೆಗ್ಮೆಂಟಿನಲ್ಲಿ ಅನೇಕ ಮೋಟಾರ್ ಸೈಕಲ್ ಗಳಿದ್ದು, ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ ಮುಂಚೂಣಿಯಲ್ಲಿದೆ. ಸಿಬಿಆರ್ 650ಆರ್ ಬೈಕ್ ಟ್ರಂಪ್ ಸ್ಟ್ರೀಟ್ ಟ್ರಿಪಲ್, ಆರ್‍ಇ 650 ಟ್ವಿನ್ಸ್ ಮತ್ತು ಇತ್ತೀಚಿಗಷ್ಟೆ ಬಿಡುಗಡೆಯಾದ ಸುಜುಕಿ ಜಿಎಸ್ಎಕ್ಸ್ ಎಸ್ 750 ಬೈಕ್ ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.

Source: Team Lords

Article Published On: Sunday, May 12, 2019, 9:00 [IST]
English summary
Honda CBR650R Deliveries Begin In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+