ಗ್ರಾಹಕರ ಕೈಸೇರಲು ಸಜ್ಜಾದ ಹೋಂಡಾ ಸಿಬಿಆರ್ 650ಆರ್
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಕಳೆದ ವಾರವಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಸಿಬಿಆರ್ 650 ಆರ್ ಬೈಕ್ ಬಿಡುಗಡೆಗೊಳಿಸಿದ್ದು, ಮೊದಲ ಬಾರಿಗೆ ಹೊಸ ಬೈಕ್‌ಗಳನ್ನು ಅಧಿಕೃತ ಡೀಲರ್ಸ್‌ಗಳಿಗೆ ಪೂರೈಕೆ ಮಾಡುತ್ತಿರುವುದು ಕಂಡುಬಂದಿದೆ.

ಹೋಂಡಾ ಸಿಬಿಆರ್ 650ಆರ್ ಬೈಕ್ ನ ಬೆಲೆ ಭಾರತದಲ್ಲಿ ಎಕ್ಸ್ ಶೋ ರೂಂ ದರವನ್ನು ರೂ 7.70 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಸಿಬಿಆರ್ 650ಆರ್ ಬೈಕ್ ಅನ್ನು ಇತ್ತೀಚಿಗಷ್ಟೇ ಸ್ಥಗಿತಗೊಳಿಸಲಾದ ಸಿಬಿಆರ್ 650ಎಫ್ ಬೈಕಿನ ಬದಲಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ 22 ಪ್ರೀಮಿಯಂ ಹೋಂಡಾ ಬೈಕ್ ಶೋರೂಂಗಳಲ್ಲಿ ಮಾತ್ರವೇ ಸಿಬಿಆರ್ 650ಆರ್ ಖರೀದಿಗೆ ಅವಕಾಶವಿದ್ದು, ಕರ್ನಾಟಕದಲ್ಲಿ ಬೆಂಗಳೂರಿನ ಸಿಲಿಕಾನ್ ಮೋಟಾರ್ಸ್‌ನಲ್ಲಿ ಮಾತ್ರಲೇ ಈ ಅವಕಾಶ ನೀಡಲಾಗಿದೆ.

ಇನ್ನು ಸಿಬಿಆರ್ 650ಎಫ್ ಗೆ ಹೋಲಿಸಿದರೆ ಸಿಬಿಆರ್ 650ಆರ್ ಬೈಕ್ ನಲ್ಲಿ ಅನೇಕ ಡಿಸೈನ್ ಗಳನ್ನು ಅಪ್ ಡೇಟ್ ಮಾಡಲಾಗಿದೆ. ಅವುಗಳೆಂದರೆ ಡ್ಯುಯಲ್ ಹೆಡ್ ಲ್ಯಾಂಪ್ ಯೂನಿಟ್, ಎಕ್ಸ್ ಪೊಸ್ಡ್ ಎಂಜಿನ್ ಮತ್ತು ವಿಭಿನ್ನ ವಿನ್ಯಾಸ ಹೊಂದಿರುವ ಬೈಕಿನ ಹಿಂಬದಿ ಭಾಗವು ಆಕರ್ಷಕವಾಗಿದೆ.

ಸಿಬಿಆರ್ 650ಆರ್ ನಲ್ಲಿರುವ ಅನೇಕ ವಿನ್ಯಾಸಗಳನ್ನು ಸಿಬಿಆರ್ 650ಎಫ್ ನಿಂದ ಪಡೆಯಲಾಗಿದೆ. ಸಿಬಿಆರ್ 650ಆರ್ ಬೈಕ್ ಅನ್ನು ಸ್ಪೋರ್ಟ್ ಟೂರರ್ ಆಗಿ ಬಿಡುಗಡೆ ಮಾಡಲಾಗಿದೆ. ಈ ಬೈಕಿನ ಹ್ಯಾಂಡಲ್ ಬಾರ್ ಗಳ ಮೇಲೆ ಕ್ಲಿಪ್ ಗಳನ್ನು ಅಳವಡಿಸಲಾಗಿದ್ದು, 30 ಎಂಎಂ ನಷ್ಟು ಕೆಳಗೆ ಬಿಡಲಾಗಿದೆ.

ಇದರಿಂದ ಮೋಟಾರ್ ಸೈಕಲ್ ನಲ್ಲಿ ಆರಾಮದಾಯಕ ರೈಡಿಂಗ್ ಪೊಸಿಷನ್ ದೊರೆಯುತ್ತದೆ. ಸಿಬಿಆರ್ 650ಎಫ್ ಗೆ ಹೋಲಿಸಿದರೆ ಹಿಂಬದಿಯಲ್ಲಿರುವ ಫೂಟ್ ಪೆಗ್‍ಗಳನ್ನು ಹಿಂದಕ್ಕೆ ಸರಿಸಲಾಗಿದೆ. ಸಿಬಿಆರ್ 650ಆರ್ ಯಲ್ಲಿರುವ ಇತರ ಫೀಚರ್ ಗಳೆಂದರೆ : ಎಲ್ಇಡಿ ಹೆಡ್ ಲ್ಯಾಂಪ್ಸ್, ಸಂಪೂರ್ಣ ಡಿಜಿಟಲ್ ಎಲ್‍ಸಿಡಿ ಇನ್ಸೂಟ್ರೂಮೆಂಟ್ ಹೊಂದಿರುವ ಕ್ಲಸ್ಟರ್, ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್, ಸ್ಲಿಪರ್ ಕ್ಲಚ್ ಮತ್ತು ಕ್ವಿಕ್ ಶಿಫ್ಟರ್.

ಸಿಬಿಆರ್ 650ಆರ್ ಬೈಕ್ 649 ಸಿಸಿ ಲಿಕ್ವಿಡ್ ಇನ್ ಲೈನ್ ಹೊಂದಿರುವ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 95 ಬಿಹೆಚ್‍ಪಿಯನ್ನು 12,000 ಆರ್‍ಪಿಎಂ ಮತ್ತು 64 ಎನ್ಎಂ ಪೀಕ್‍ಟಾರ್ಕ್ ಅನ್ನು 8,500 ಆರ್‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಫೀಡಿನ ಗೇರ್ ಬಾಕ್ಸ್ ಹೊಂದಿದೆ. ಸಿಬಿಆರ್ 650ಆರ್ ನ ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯು 15 ಲೀಟರ್ ಆಗಿದೆ. ಪ್ರತಿ ಲೀಟರಿಗೆ ಸುಮಾರು 20 ಕಿ.ಮೀ ಮೈಲೇಜ್ ನೀಡಲಿದೆ.

2019ರ ಹೋಂಡಾ ಸಿಬಿಆರ್ 650ಆರ್ 41 ಎಂಎಂ ಶೋವಾ ಯುಎಸ್‍ಡಿ ಫೋರ್ಕ್ ಅನ್ನು ಮುಂಭಾಗದಲ್ಲಿ ಮತ್ತು ಮೋನೋ ಶಾಕ್ ಅನ್ನು ಹಿಂಭಾಗದಲ್ಲಿ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಅನ್ನು ಡ್ಯುಯಲ್ ಡಿಸ್ಕ್ ಸೆಟ್ ನಿಯಂತ್ರಿಸುವುದು, ಮುಂಭಾಗದಲ್ಲಿ ರೇಡಿಯಲ್ ಮೌಂಟೆಡ್ ಕ್ಯಾಲಿಪರ್ ಗಳು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಸೆಟ್ ಅಪ್ ಗಳಿದ್ದು ಇವುಗಳಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಬೆಂಬಲವಾಗರಲಿದೆ.

ಸಿಬಿಆರ್ 650ಆರ್ ಮ್ಯಾಟ್ ಗನ್ ಪೌಡರ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಗ್ರಾಂಡ್ ಪ್ರಿಕ್ಸ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಲಿದೆ.

ಒಟ್ಟಿನಲ್ಲಿ ಸಿಬಿಆರ್ 650ಆರ್ ಭಾರತೀಯ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಹೊಂದಿರುವ ಮಿಡಲ್ ವೇಟ್ ಮೋಟಾರ್ ಸೈಕಲ್ ಸೆಗ್‍ಮೆಂಟಿನಲ್ಲಿ ಹೊಸದಾಗಿ ಪ್ರವೇಶ ಪಡೆದಿದೆ. 500 ರಿಂದ 800 ಸಿಸಿ ಸೆಗ್ ಮೆಂಟಿನಲ್ಲಿ ಅನೇಕ ಮೋಟಾರ್ ಸೈಕಲ್ ಗಳಿದ್ದು, ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ ಮುಂಚೂಣಿಯಲ್ಲಿದೆ. ಸಿಬಿಆರ್ 650ಆರ್ ಬೈಕ್ ಟ್ರಂಪ್ ಸ್ಟ್ರೀಟ್ ಟ್ರಿಪಲ್, ಆರ್‍ಇ 650 ಟ್ವಿನ್ಸ್ ಮತ್ತು ಇತ್ತೀಚಿಗಷ್ಟೆ ಬಿಡುಗಡೆಯಾದ ಸುಜುಕಿ ಜಿಎಸ್ಎಕ್ಸ್ ಎಸ್ 750 ಬೈಕ್ ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.
Source:autocarindia


Click it and Unblock the Notifications