ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

2020ರ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ನಿಷೇಧಗೊಳ್ಳಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬಿಎಸ್-6 ವಾಹನಗಳ ಉತ್ಪಾದನೆ ಮತ್ತುಮಾರಾಟ ಕಡ್ಡಾಯವಾಗಲಿದೆ. ಈ ಹಿನ್ನಲೆಯಲ್ಲಿ ಹೋಂಡಾ ಮೋಟಾರ್‌ಸೈಕಲ್ ವಿಭಾಗವು ಡೆಡ್‌ಲೈನ್‌ಗೂ ಮುನ್ನ ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಸದ್ಯ ಉತ್ಪಾದನೆಗೊಂಡಿರುವ ಬಿಎಸ್-4 ಆಕ್ಟಿವಾ ಸ್ಕೂಟರ್ ಮಾದರಿಗಳು ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಸ್ಟಾಕ್ ಪೂರ್ಣಗೊಂಡ ನಂತರ ಬಿಎಸ್-6 ಮಾದರಿಗಳ ಮಾರಾಟಕ್ಕೆ ಚಾಲನೆ ಸಿಗಲಿದೆ. ಹೋಂಡಾ ಸಂಸ್ಥೆಯು ಈಗಾಗಲೇ ಆಕ್ಟಿವಾ 125 ಸ್ಕೂಟರ್ ಮಾದರಿಯನ್ನು ಬಿಎಸ್-6 ನಿಯಮ ಅನುಸಾರವೇ ಮಾರಾಟ ಮಾಡುತ್ತಿದ್ದು, ಇನ್ನುಳಿದ 110 ಸಿಸಿ ಎಂಜಿನ್ ಸಾಮರ್ಥ್ಯದ ಆಕ್ಟಿವಾ ಆವೃತ್ತಿಯನ್ನು ಉನ್ನತೀಕರಿಸುವ ಮೂಲಕ ಬಿಎಸ್-6 ಎಂಜಿನ್‌ನೊಂದಿಗೆ ಮುಂದಿನ ಫೆಬ್ರುವರಿ ಹೊತ್ತಿಗೆ ರಸ್ತೆಗಿಳಿಸಲಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಆಕ್ಟಿವಾ 125 ಮತ್ತು ಎಸ್‌ಪಿ ಶೈನ್ ಬಿಡುಗಡೆಯ ನಂತರ ಇದೀಗ ಆಕ್ಟಿವಾ 5ಜಿ ಮುಂದುವರಿದ ಆವೃತ್ತಿಯಾದ ಆಕ್ಟಿವಾ 6ಜಿ ಬಿಡುಗಡೆಗಾಗಿ ಸಿದ್ದತೆ ನಡೆಸಿರುವ ಹೋಂಡಾ ಸಂಸ್ಥೆಯು ಹೊಸ ಸ್ಕೂಟರ್ ಮಾದರಿಯನ್ನು ಭಾರೀ ಬದಲಾವಣೆಯೊಂದಿಗೆ ಅಭಿವೃದ್ದಿಗೊಳಿಸಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಬಹುನೀರಿಕ್ಷಿತ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಆಕ್ಟಿವಾ 5ಜಿ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಜೊತೆಗೆ ಬಿಎಸ್-6 ಎಂಜಿನ್ ಜೋಡಣೆಯಿಂದಾಗಿ ಹೊಸ ಸ್ಕೂಟರ್ ಇಂಧನ ದಕ್ಷತೆ ಮತ್ತು ಪರ್ಫಾಮೆನ್ಸ್‌ ಹೆಚ್ಚಳಗೊಂಡಿದ್ದು, ಬೆಲೆ ಕೂಡಾ ದುಬಾರಿಯಾಗಿರಲಿದೆ. ಆಕ್ಟಿವಾ 6ಜಿ ಸ್ಕೂಟರ್‌ನಲ್ಲಿ ಈ ಬಾರಿ ಹೊಸ ಪ್ರೀಮಿಯಂ ಫೀಚರ್ಸ್‌ಗಳಾದ ಫ್ರಂಟ್ ಡಿಸ್ಕ್, ಹೊರಭಾಗದಲ್ಲಿ ಫ್ಯೂಲ್ ಕ್ಯಾಪ್, 12-ಇಂಚಿನ ಅಲಾಯ್ ವೀಲ್ಹ್, ಮರುವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟರ್ನ್ ಸಿಗ್ನಲ್ ನೀಡಲಾಗಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಜೊತೆಗೆ ಟರ್ನ್ ಬೈ ಟರ್ನ್ ನ್ಯಾವಿಗೆಷನ್, ಕಾಲ್ ಅಲರ್ಟ್ ಸೌಲಭ್ಯಗಳನ್ನು ಹೊಂದಿರಲಿದ್ದು, ಹೊಸ ಸ್ಕೂಟರ್‌ನಲ್ಲಿ ಡ್ರೈವ್ ಹ್ಯಾಂಡ್ಲಿಂಗ್ ಸುಧಾರಣೆಗಾಗಿ ಚಾರ್ಸಿ ಕೂಡಾ ಬದಲಾವಣೆ ಮಾಡಿರುವ ಪ್ರಮುಖ ಆಕರ್ಷಣೆಯಾಗಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಇನ್ನು ಆಕ್ಟಿವಾ 6ಜಿ ಸ್ಕೂಟರ್‌ನಲ್ಲಿ ಬಿಎಸ್-6 ಪ್ರೇರಿತ 110ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದ್ದು, ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಜೋಡಣೆಯಿಂದಾಗಿ ಇಂಧನ ದಕ್ಷತೆ ಹೆಚ್ಚಿರುವುದಲ್ಲದೇ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಪಡೆದಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಆದರೆ ಹೊಸ ಎಂಜಿನ್ ಪರ್ಫಾಮೆನ್ಸ್ ಕುರಿತಾಗಿ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಆಕ್ಟಿವಾ 5ಜಿ ಮಾದರಿ ಉತ್ಪಾದನೆ ಮಾಡುವ 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್‌ಗಿಂತಲೂ ಉತ್ತಮವಾಗಿರಲಿದೆ ಎನ್ನಲಾಗಿದೆ.

MOST READ: ಪತ್ನಿಯ ಸರ್ಪ್ರೈಸ್ ಗಿಫ್ಟ್‌ಗೆ ಪತಿ ಫುಲ್ ಖುಷ್..

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಬೆಲೆ ಏರಿಕೆ ಬಿಸಿ..!

ಹೌದು, ಬಿಎಸ್-4 ವಾಹನಗಳಿಂತಲೂ ಎಂಜಿನ್ ವಿಭಾಗದಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಬಿಎಸ್-6 ವಾಹನಗಳು ದುಬಾರಿ ಬೆಲೆ ಪಡೆದುಕೊಳ್ಳುತ್ತಿದ್ದು, ಆಕ್ಟಿವಾ 6ಜಿ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆಕ್ಟಿವಾ 5ಜಿ ಸ್ಕೂಟರ್‌ಗಿಂತಲೂ ರೂ.5 ಸಾವಿರದಿಂದ ರೂ.6 ಸಾವಿರ ಹೆಚ್ಚುವರಿ ಬೆಲೆಯೊಂದಿಗೆ ಮಾರಾಟವಾಗಲಿದೆ.

MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 5ಜಿ ಸ್ಕೂಟರ್ ಮಾದರಿಯು ಸ್ಟ್ಯಾಂಡರ್ಡ್, ಸ್ಟ್ಯಾಂಡರ್ಡ್ ಲಿಮಿಟೆಡ್, ಡಿಲಕ್ಸ್ ಮತ್ತು ಡಿಲಕ್ಸ್ ಲಿಮಿಟೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.71,800 ದಿಂದ ರೂ.74,392ಕ್ಕೆ ಮಾರಾಟವಾಗುತ್ತಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಆಕ್ಟಿವಾ 6ಜಿ ಮಾದರಿಯ ಸಹ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ಹೊಸ ಸ್ಕೂಟರ್ ಬೆಲೆಯು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.75 ಸಾವಿರದಿಂದ ರೂ.81 ಸಾವಿರ ಬೆಲೆ ಪಡೆದುಕೊಳ್ಳಲಿದೆ.

ಬಿಎಸ್-4 ಆಕ್ಟಿವಾ ಸ್ಕೂಟರ್ ಉತ್ಪಾದನೆಯನ್ನ ಬಂದ್ ಮಾಡಿದ ಹೋಂಡಾ

ಇದಲ್ಲದೇ ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 125 ಮಾದರಿಯು ಫ್ಯೂಲ್ ಇಂಜೆಕ್ಷಡ್ ಯುನಿಟ್ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 67,490ಕ್ಕೆ ನಿಗದಿಪಡಿಸಲಾಗಿದೆ.

Most Read Articles

Kannada
English summary
Honda stops dispatching BS-IV Activa. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X