ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಜಾವಾ ಮೋಟಾರ್‍‍ಸೈಕಲ್ಸ್ ಕಂಪನಿಯು ಹಣ ಪಡೆದು ಡೀಲರ್‍‍ಶಿಪ್ ನೀಡುವುದಾಗಿ ವಂಚಿಸುತ್ತಿರುವವರ ಬಗ್ಗೆ ಜಾಗರೂಕತೆಯಿಂದ ಇರಬೇಕೆಂದು ತಿಳಿಸಿದೆ. ಈ ಬಗ್ಗೆ ಜಾವಾ ಮೋಟಾರ್‍‍ಸೈಕಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದು, ಡೀಲರ್‍‍ಶಿಪ್ ಲೈಸೆನ್ಸ್ ನೀಡುತ್ತಿರುವುದಾಗಿ ಹೇಳುತ್ತಿರುವವರಿಂದ ದೂರವಿರಬೇಕೆಂದು ಆ ಎಚ್ಚರಿಕೆ ಸಂದೇಶದಲ್ಲಿ ತಿಳಿಸಿದೆ.

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಜಾವಾ ಕಂಪನಿಯು ಕಳೆದ ವರ್ಷ ಮತ್ತೆ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಜಾವಾ ಕಂಪನಿಯ ಬೈಕುಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. 2018ರ ನವೆಂಬರ್‍‍ನಲ್ಲಿ ಜಾವಾ ಕಂಪನಿಯು ಜಾವಾ ಹಾಗೂ ಜಾವಾ 42 ಬೈಕುಗಳನ್ನು ಬಿಡುಗಡೆಗೊಳಿಸಿತ್ತು.

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಬಿಡುಗಡೆಯಾದಾಗಿನಿಂದ ಈ ಎರಡೂ ಬೈಕುಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಸಾವಿರಾರು ಜನ ಈ ಬೈಕುಗಳಿಗಾಗಿ ಬುಕ್ಕಿಂಗ್ ಮಾಡಿದ್ದಾರೆ. ಈ ಬೈಕುಗಳಿಗೆ ಯಾವ ಮಟ್ಟದ ಬೇಡಿಕೆಯಿದೆ ಎಂದರೆ, ಬುಕ್ಕಿಂಗ್ ಮಾಡಿದ 6ರಿಂದ 8 ತಿಂಗಳ ನಂತರ ಈ ಬೈಕುಗಳನ್ನು ವಿತರಿಸಲಾಗುವುದು. ಆದರೂ ಸಹ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೈಕುಗಳನ್ನು ಬುಕ್ಕಿಂಗ್ ಮಾಡುತ್ತಿದ್ದಾರೆ.

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಜಾವಾ ಕಂಪನಿಯು ದೇಶದಲ್ಲಿರುವ ಡೀಲರ್‍‍ಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಸಹ ಗಮನ ಹರಿಸಿದೆ. ಬಿಡುಗಡೆಯಾದ ನಾಲ್ಕು ತಿಂಗಳಲ್ಲಿ ಜಾವಾ ಮೋಟಾರ್‍‍ಸೈಕಲ್ಸ್ 100 ಡೀಲರ್‍‍‍‍‍ಶಿಪ್‍‍ಗಳನ್ನು ಆರಂಭಿಸಿತ್ತು. ಜಾವಾ ಕಂಪನಿಯು ವೇಗವಾಗಿ ಉತ್ಪಾದನೆಯನ್ನು ಮಾಡುತ್ತಿದೆ.

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಜಾವಾ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಡೀಲರ್‍‍‍ಶಿಪ್‍‍‍ಗಳನ್ನು ಆರಂಭಿಸುತ್ತಿರುವ ವಿಷಯವನ್ನು ತಿಳಿದ ಕೆಲವರು ಡೀಲರ್‍‍‍ಶಿಪ್ ನೀಡುವುದಾಗಿ ಜನರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಜಾವಾ ಮೋಟಾರ್‍‍ಸೈಕಲ್ಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಕ್ಲಾಸಿಕ್ ಲೆಜೆಂಡ್ ಪ್ರೈ ಲಿ. ಕಂಪನಿಯ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವವರು, ಡೀಲರ್‍‍ಶಿಪ್ ಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದಾರೆ. ಈ ಬಗ್ಗೆ ಜಾಗರೂಕತೆಯಿಂದ ಇರಬೇಕು. ನೀವು ಡೀಲರ್‍‍ಶಿಪ್ ತೆರೆಯಲು ಬಯಸಿದರೆ ಕಂಪನಿಯ ಅಧಿಕೃತ ವೆಬ್‍‍ಸೈಟಿನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದೆ.

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಇದರ ಅರ್ಥ ಕೆಲವರು ಜಾವಾ ಕಂಪನಿಯ ಹೆಸರಿನಲ್ಲಿ ಹಣ ಪಡೆದು ಜನರಿಗೆ ವಂಚಿಸುತ್ತಿರುವ ಪ್ರಕರಣಗಳು ಕಂಪನಿಯ ಗಮನಕ್ಕೆ ಬಂದಿವೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣಗಳು ಸಾರ್ವಜನಿಕವಾಗಿ ಬೆಳಕಿಗೆ ಬಂದಿಲ್ಲ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಇದರ ಜೊತೆಗೆ ಕಂಪನಿಯು ಕಂಪನಿಯ ವೆಬ್‍‍ಸೈಟಿನಲ್ಲಿ ಮಾತ್ರ ಡೀಲರ್‍‍ಶಿಪ್‍‍ಗಳಿಗಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದೆ. ಯಾರಾದರೂ ಹಣ ಪಡೆದು ಡೀಲರ್‍‍ಶಿಪ್ ನೀಡುವುದಾಗಿ ತಿಳಿಸಿದರೆ ಅಂತಹವರ ಬಗ್ಗೆ ಕಂಪನಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಬೇಕೆಂದು ತಿಳಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಆಟೋಮೊಬೈಲ್ ಕಂಪನಿಯೊಂದು ವಂಚನೆಗೆ ಒಳಗಾಗದಂತೆ ಸಾರ್ವಜನಿಕರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದೆ. ಭಾರತದಂತಹ ದೇಶದಲ್ಲಿ ಬೇಡಿಕೆಯಿರುವ ವಸ್ತುಗಳ ಹೆಸರಿನಲ್ಲಿ ಜನರನ್ನು ಸುಲಭವಾಗಿ ಯಾಮಾರಿಸುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಜಾವಾ ಬೈಕಿನ ವಿಷಯದಲ್ಲಿಯೂ ಸಹ ಇದೇ ನಡೆದಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ವಂಚಕರ ಬಗ್ಗೆ ಎಚ್ಚರಿಕೆ ನೀಡಿದ ಜಾವಾ

ಕೆಲವು ಷರತ್ತುಗಳನ್ನು ಪೂರೈಸಿದರೆ ಮಾತ್ರವೇ ಡೀಲರ್‍‍ಶಿಪ್ ನೀಡುವುದಾಗಿ ಕಂಪನಿಯು ಈ ಹಿಂದೆಯೇ ತಿಳಿಸಿತ್ತು. ಈ ಷರತ್ತುಗಳನ್ನು ಪೂರೈಸಲು ಬಯಸದ ಜನರು ಬೇರೆ ಅಡ್ಡದಾರಿಯಲ್ಲಿ ಡೀಲರ್‍‍ಶಿಪ್‍‍ಗಳನ್ನು ಪಡೆಯಲು ಬಯಸುತ್ತಾರೆ. ಅಂತಹವರನ್ನು ಮರಳು ಮಾಡಿ, ಹಣ ಪಡೆದು ವಂಚಿಸುವವರು ಹೆಚ್ಚಾಗುತ್ತಿದ್ದಾರೆ.

More from DriveSpark

Article Published On: Sunday, October 6, 2019, 9:00 [IST]
English summary
Jawa Motorcycles Dealership Scam: Jawa Cautions Enthusiasts To Stay Away From Fraudsters - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+