ಅಂತೂ ಇಂತೂ 6 ತಿಂಗಳ ನಂತರ ಗ್ರಾಹಕರ ಕೈ ಸೇರಿದ ಜಾವಾ ಹೊಸ ಬೈಕ್‌ಗಳು
2018ರ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಜಾವಾ ಹೊಸ ಮೋಟಾರ್‌ಸೈಕಲ್‌ಗಳ ಖರೀದಿಗಾಗಿ ಗ್ರಾಹಕರು ಕಾಯ್ದುಕುಳಿತಿದ್ದು, ಅಂತೂ ಇಂತೂ ಆರು ತಿಂಗಳ ನಂತರ ಹೊಸ ಬೈಕ್‌ಗಳು ಗ್ರಾಹಕರ ಕೈ ಸೇರಿವೆ. ಈ ಬಗ್ಗೆ ಜಾವಾ ಸಂಸ್ಥೆಯೇ ಮಾಹಿತಿ ನೀಡಿದ್ದು, ದೇಶಾದ್ಯಂತ ಆರಂಭವಾಗಿರುವ ತನ್ನ ಅಧಿಕೃತ ಡೀಲರ್ಸ್‌ಗಳಲ್ಲಿ ಹೊಸ ಬೈಕ್‌ಗಳ ವಿತರಣೆಗೆ ಭರ್ಜರಿಯಾಗಿ ಚಾಲನೆ ನೀಡಿದೆ.

ಸದ್ಯ ಜಾವಾ ಬೈಕ್ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ರೂ.5 ಸಾವಿರ ನೀಡಿ ಬುಕ್ಕಿಂಗ್ ಮಾಡಿ ಹೊಸ ಬೈಕ್ ಖರೀದಿಗಾಗಿ ಎದುರು ನೋಡುತ್ತಿದ್ದು, ಮುಂದಿನ ಸೆಪ್ಟೆಂಬರ್ ಅವಧಿಯ ತನಕವು ಬುಕ್ಕಿಂಗ್ ಪ್ರಕ್ರಿಯೆಯು ಭರ್ತಿಯಾಗಿದೆ. ಹೀಗಾಗಿ ಮೊದಲ ಬಾರಿಗೆ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಇದೀಗ ಹೊಸ ಬೈಕ್ ವಿತರಣೆಯಾಗುತ್ತಿದ್ದು, ಪೂರ್ಣ ಪ್ರಮಾಣದ ವಿತರಣೆಗೆ ಇನ್ನು ಐದರಿಂದ ಆರು ತಿಂಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆಗಳಿವೆ.

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಇನ್ನು ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಈ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿರುವ ಜಾವಾ ಸಂಸ್ಥೆಯು ಬೈಕ್ ವಿತರಣೆಯೊಂದಿಗೆ ಮತ್ತಷ್ಟು ಬೈಕ್ ಮಾರಾಟ ಮಳಿಗೆಗಳನ್ನು ತೆರೆಯುವ ಇರಾದೆಯಲ್ಲಿದ್ದು, ಆರ್‌ಇ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ..!
ದೇಶಾದ್ಯಂತ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹೊಸ ವಾಹನ ಖರೀದಿಸಿ ನೋಂದಣಿ ಮಾಡಲು ಮುಂದಾಗಿದ್ದ ಲಕ್ಷಾಂತರ ವಾಹನ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಶಾಕ್ ನೀಡಿದೆ.

ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಆದೇಶ ಅನ್ವಯ ಕೇಂದ್ರ ಸಾರಿಗೆ ಇಲಾಖೆಯು ದೇಶಾದ್ಯಂತ ಮೇ 2ರಿಂದಲೇ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸಿದ್ದು, ಹೊಸ ವಾಹನಗಳಲ್ಲಿ ಏಕ ರೂಪದ ಇನ್‌ಬಿಲ್ಟ್ ಹೈ ಸೆಕ್ಯೂರಿಟಿ ಫೀಚರ್ಸ್ ಸೇರ್ಪಡೆ ಮಾಡಿ ಮಾಹಿತಿ ಸಂಗ್ರಹಿಸದ ಹಿನ್ನಲೆಯಲ್ಲಿ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವಂತೆ ಎನ್‌ಐಸಿ ಸಂಸ್ಥೆಯು ಕೇಂದ್ರ ಸಾರಿಗೆ ಇಲಾಖೆಗೆ ಖಡಕ್ ಆದೇಶ ನೀಡಿದೆ.

ಏಪ್ರಿಲ್ 1ರಿಂದಲೇ ದೇಶಾದ್ಯಂತ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸಾರಿಗೆ ಇಲಾಖೆಯು ವಾಹನಗಳ ದತ್ತಾಂಶ ಸಂಗ್ರಹ ನಿಯಮವನ್ನು ಸರಿಯಾಗಿ ನಿರ್ವಹಿಸದಿರುವುದೇ ಹೊಸ ವಾಹನಗಳ ನೋಂದಣಿಗೆ ಬ್ರೇಕ್ ಬಿದ್ದಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೀಗಾಗಿ ಏಪ್ರಿಲ್ 1ರಿಂದ ನೋಂದಣಿಯಾಗಿರುವ ಹೊಸ ವಾಹನಗಳ ದತ್ತಾಂಶ ಸಂಗ್ರಹವನ್ನು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಸಾಫ್ಟ್‌ವೇರ್‌ನಲ್ಲಿ ದಾಖಲಿಸದ ಹೊರತಾಗಿ ಹೊಸ ವಾಹನಗಳ ನೋಂದಣಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಸದ್ಯ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಸಂಸ್ಥೆಯು ವಾಹನ್ ತಂತ್ರಾಶ ಮೂಲಕ ದೇಶದ ಪ್ರತಿಯೊಂದು ವಾಹನದ ದತ್ತಾಂಶವನ್ನು ಸಂಗ್ರಹಿಸುತ್ತಿದ್ದು, ಇದರಲ್ಲಿ ಏಪ್ರಿಲ್ 1ರಿಂದ ನೋಂದಣಿಯಾಗುತ್ತಿರುವ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ವಾಹನಗಳ ದತ್ತಾಂಶವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಬೇಕಿದ್ದ ಕೇಂದ್ರ ಸಾರಿಗೆ ಇಲಾಖೆಯು ಹೊಸ ನಿಯಮವನ್ನು ಪಾಲನೆ ಮಾಡಿಲ್ಲ.
MOST READ: ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಇನ್ನು ಸುಮಾರು ಒಂದು ದಶಕ ಹಿಂದೆಯೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು ಜಾರಿ ತರಲಾಗಿದ್ದರೂ ಸಹ ಇದುವರೆಗೆ ಹಲವಾರು ರಾಜ್ಯಗಳಲ್ಲಿ ಇದು ಕಡ್ಡಾಯವಾಗಿರಲಿಲ್ಲ. ಹೀಗಾಗಿ ವಾಹನಗಳ ಸುರಕ್ಷತೆಗಾಗಿ ಮಹತ್ವದ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರವು ಕಳೆದ ತಿಂಗಳು ಏಪ್ರಿಲ್ 1ರಿಂದವೇ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿರಬೇಕೆಂದು ಸುತ್ತೊಲೆ ಹೊರಡಿಸಿದೆ.

ಇದರ ಜೊತೆಗೆ ಕೇಂದ್ರ ಸರ್ಕಾರ ಹೊಸ ಸುರಕ್ಷಾ ನೀತಿಯ ಪ್ರಕಾರ, ಇಷ್ಟು ದಿನಗಳ ಕಾಲ ಕಾರು ಮಾಲೀಕರೇ ಆಯ್ಕೆ ಮಾಡುತ್ತಿದ್ದ ನಂಬರ್ ಪ್ಲೇಟ್‌ಗಳನ್ನು ಇನ್ಮುಂದೆ ಕಾರು ಉತ್ಪಾದಕರೇ ಪೂರೈಕೆ ಮಾಡಬೇಕಿದ್ದು, ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳ ಜೊತೆಗೆ ಹೈ ಎಂಡ್ ಕಾರುಗಳಲ್ಲೂ ಏಕರೂಪದ ನಂಬರ್ ಪ್ಲೇಟ್‌ಗಳಿರಲಿವೆ.


Click it and Unblock the Notifications








