ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಜಾವಾ ಸಂಸ್ಥೆಯು ಕಳೆದ ನವೆಂಬರ್‌ನಲ್ಲಿ ತನ್ನ ಬಹುನೀರಿಕ್ಷಿತ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ದೇಶಾದ್ಯಂತ 99 ಹೊಸ ಬೈಕ್ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿರುವುದಲ್ಲದೇ ಇದೇ ತಿಂಗಳು ಏಪ್ರಿಲ್ 1ರಿಂದ ಬೈಕ್ ವಿತರಣೆಯನ್ನು ಕೂಡಾ ಆರಂಭಗೊಳಿಸಿದೆ. ಹೀಗಾಗಿ 100ನೇ ಮಾರಾಟ ಮಳಿಗೆಗೆ ಚಾಲನೆ ನೀಡಲು ಸಿದ್ದವಾಗಿರುವ ಜಾವಾ ಸಂಸ್ಥೆಯು ಅಚ್ಚರಿ ಹೆಸರು ಒಂದನ್ನು ಪ್ರಕಟಿಸಿದೆ.

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

100ನೇ ಮಾರಾಟ ಮಳಿಗೆಗೆ ಭರ್ಜರಿಯಾಗಿ ಚಾಲನೆ ನೀಡಲಿರುವ ಜಾವಾ ಮೋಟಾರ್‌ಸೈಕಲ್ ಸಂಸ್ಥೆಯು ಈ ಬಾರಿ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಯನ್ನು ಆಯ್ದುಕೊಂಡಿದ್ದು, ಇದೇ ವಾರ ಚಾಲನೆಪಡೆದುಕೊಳ್ಳಲಿರುವ ತಿರುಪತಿ, ಜಮ್‌ಶೆಡ್‌ಪುರ ಮತ್ತು ತಿನ್‌ಸುಕಿಯಾ ನಗರಗಳ ಜಾವಾ ಮಾರಾಟ ಮಳಿಗೆಗಳ ಜೊತೆಗೆ ಹುಬ್ಬಳ್ಳಿಯಲ್ಲಿ ಸಿದ್ದವಾಗಿ ಹೊಸ ಬೈಕ್ ಮಾರಾಟ ಮಳಿಗೆಗಳಿಗೆ ಚಾಲನೆ ಸಿಗುವುದು ಬಹುತೇಕ ಖಚಿತವಾಗಿದೆ.

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಇನ್ನು ಜಾವಾ ಹೊಸ ಮೋಟಾರ್‌ಸೈಕಲ್‌ಗಳ ಖರೀದಿಗಾಗಿ ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದು, ಅಂತೂ ಇಂತೂ ನಾಲ್ಕು ತಿಂಗಳು ನಂತರ ಹೊಸ ಬೈಕ್‌ಗಳ ವಿತರಣೆಗೆ ಇದೀಗ ಚಾಲನೆ ಸಿಕ್ಕಿದೆ. ಬುಕ್ಕಿಂಗ್ ಸಂಖ್ಯೆಯನ್ನು ಆಧಾರಿಸಿ ಬೈಕ್ ವಿತರಣೆ ಮಾಡಲಾಗುತ್ತಿದ್ದು, ಕಳೆದ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಿಂದ ಮರೆಯಾಗಿದ್ದ ಜಾವಾ ಅಬ್ಬರಕ್ಕೆ ಇದೀಗ ಮತ್ತೆ ಮರುಜೀವ ಬಂದಂತಾಗಿದೆ.

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಸದ್ಯ ಜಾವಾ ಹೊಸ ಬೈಕ್‌ಗಳ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ರೂ.5 ಸಾವಿರ ನೀಡಿ ಬುಕ್ಕಿಂಗ್ ಮಾಡಿದ್ದು, ಮುಂದಿನ ಸೆಪ್ಟೆಂಬರ್ ಅವಧಿಯ ತನಕವು ಬುಕ್ಕಿಂಗ್ ಪ್ರಕ್ರಿಯೆಯು ಭರ್ತಿಯಾಗಿದೆ. ಹೀಗಾಗಿ ಮೊದಲ ಬಾರಿಗೆ ಬುಕ್ಕಿಂಗ್ ಮಾಡಿದ ಕೆಲವೇ ಗ್ರಾಹಕರಿಗೆ ಇದೀಗ ಹೊಸ ಬೈಕ್ ವಿತರಣೆಯಾಗುತ್ತಿದ್ದು, ಪೂರ್ಣ ಪ್ರಮಾಣದ ವಿತರಣೆಗೆ ಇನ್ನು ಐದಾರು ತಿಂಗಳು ಕಾಯಲೇಬೇಕಿದೆ.

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ರಾಯಲ್ ಎನ್‌‌ಫೀಲ್ಡ್‌ಗೆ ತಳಮಳ..!

ಆಕರ್ಷಕ ಬೆಲೆಗಳು ಮತ್ತು ತಾಂತ್ರಿಕವಾಗಿ ಬಲಿಷ್ಠವಾಗಿರುವ ಜಾವಾ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಸಂಸ್ಥೆಯನ್ನೇ ಗುರಿಯಾಗಿಸಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು ಕ್ಲಾಸಿಕ್ 350 ಬೈಕ್‌ಗಳಿಗೆ ಹೆಚ್ಚಿನ ಪೈಪೋಟಿ ನೀಡುತ್ತಿವೆ.

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಇದಕ್ಕೆ ಉದಾಹರಣೆ ಅಂದ್ರೆ, ಕಳೆದ ವರ್ಷ ನವೆಂಬರ್‌ನಿಂದ ಈ ತನಕ ಬೈಕ್ ಮಾರಾಟದಲ್ಲಿ ಶೇ.10ರಿಂದ 15ರಷ್ಟು ನಷ್ಟ ಅನುಭವಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಜಾವಾ ಹೊಸ ಬೈಕ್‌ಗಳ ಅಬ್ಬರದ ಮುಂದೆ ಕಂಗಾಲಾಗಿ ಹೋಗಿದೆ.

MOST READ: ಮತದಾನ ಮಾಡುವ ಬೈಕ್ ಸವಾರರಿಗೆ ಹೀರೋ ಕಡೆಯಿಂದ ಸ್ಪೆಷಲ್ ಆಫರ್

ಹುಬ್ಬಳ್ಳಿಯಲ್ಲಿ ಜಾವಾ ಮೊದಲ ಬೈಕ್ ಮಾರಾಟ ಮಳಿಗೆ ಆರಂಭಕ್ಕೆ ಕ್ಷಣಗಣನೆ..!

ಈ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಜಾವಾ ಸಂಸ್ಥೆಯು ಸದ್ಯ ಹೊಸ ಬೈಕ್‌ಗಳ ವಿತರಣೆಗೆ ಚಾಲನೆ ನೀಡಿದ್ದು, ಮತ್ತಷ್ಟು ಹೊಸ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿ ಆರ್‌ಇ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

More from DriveSpark

Article Published On: Monday, April 15, 2019, 19:06 [IST]
English summary
100 Dealerships In Just Four Months: Jawa Motorcycles Posts Unprecedented Growth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+