ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ಕವಾಸಕಿ ಕಂಪನಿಯು ತನ್ನ ನಿಂಜಾ ಝಡ್ ಎಕ್ಸ್-14 ಬೈಕ್ ಅನ್ನು 2020ರಿಂದ ಸ್ಥಗಿತಗೊಳಿಸಲಾಗುತ್ತಿದೆ. ವರದಿಗಳ ಪ್ರಕಾರ ನಿಂಜಾ ಝಡ್ಎಕ್ಸ್-14 ಆರ್ ಬೈಕ್ ಅನ್ನು ಸ್ಥಗಿತಗೊಳಿಸಲು ಕಂಪನಿಯು ಈಗಾಗಲೇ ನಿರ್ಧರಿಸಿದೆ. ಈ ಮೂಲಕ ಭಾರತೀಯ ಸೂಪರ್‍‍ಬೈಕ್ ಪ್ರಿಯರಿಗೆ ಕವಾಸಕಿ ಕಂಪನಿಯು ಶಾಕಿಂಗ್ ನ್ಯೂಸ್ ನೀಡಿದೆ.

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ಕವಾಸಕಿ ನಿಂಜಾ ಝಡ್‍ಎಕ್ಸ್-14 ಆರ್ ಜನಪ್ರಿಯ ಬೈಕ್‍‍ಗಳಲ್ಲಿ ಒಂದಾಗಿದೆ. ಕವಾಸಕಿ ನಿಂಜಾ ಝಡ್‍ಎಕ್ಸ್-14ಆರ್ ಬೈಕ್, ಮೊಟ್ಟ ಮೊದಲು 2005ರಲ್ಲಿ ಟೋಕಿಯೊ ಮೋಟಾರ್ ಶೋನಲ್ಲಿ ಅನಾವರಣಗೊಂಡಿತ್ತು, ನಂತರ 2006ರಲ್ಲಿ ಈ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

1,352 ಸಿಸಿ ಎಂಜಿನ್‍ ಹೊಂದಿರುವ ಈ ಬೈಕ್ ವಿಶ್ವದ ಅತಿ ಹೆಚ್ಚು ಸಿಸಿಯ ಎಂಜಿನ್ ಹೊಂದಿರುವ ಬೈಕ್ ಆಗಿದೆ. ಈ ಬೈಕ್ ಮುಖ್ಯವಾಗಿ ಸುಜುಕಿ ಹಯಾಬುಸಾ ಬೈಕಿಗೆ ಪೈಪೋಟಿ ನೀಡುತ್ತದೆ

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ನಿಂಜಾ ಝಡ್ ಎಕ್ಸ್-14 ಕೇವಲ 2.5 ಸೆಕೆಂಡ್‍‍ಗಳಲ್ಲಿ 0-100 ಕಿ.ಮೀ ಕ್ರಮಿಸಬಲ್ಲ ವಿಶ್ವದ ಅತಿ ವೇಗದ ಬೈಕ್ ಆಗಿದೆ. ಕವಾಸಕಿ ನಿಂಜಾ ಝಡ್‍ಎಕ್ಸ್-14 ಆರ್ ಬೈಕ್ ಬಿಡುಗಡೆಯಾದಾಗಿನಿಂದಲೂ ನವೀಕರಣಗಳನ್ನು ಮಾಡಲಾಗುತ್ತಿದೆ.

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ನವೀಕರಿಸಿದ ಮಾದರಿಯು 1,441 ಸಿಸಿ ಎಂಜಿನ್ ಹೊಂದಿದೆ. ಇದರ ಜೊತೆಗೆ ಹಲವಾರು ಫೀಚರ್ಸ್‍ಗಳನ್ನು ಹೊಂದಿದೆ. ಕವಾಸಕಿ ನಿಂಜಾ ಝಡ್‍ಎಕ್ಸ್-14ಆರ್ ಬೈಕ್ 2019ರಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾರಾಟವಾಗಿತ್ತು.

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ಕವಾಸಕಿ ಝಡ್ಎಕ್ಸ್-14 ಆರ್ ಬೈಕ್ ಅನ್ನು 2020ರಿಂದ ಸ್ಥಗಿತಗೊಳಿಸಲಾಗುವುದು. ಆದರೆ ಕಂಪನಿಯು ಇದಕ್ಕೆ ನಿಖರವಾದ ಕಾರಣಗಳನ್ನು ತಿಳಿಸಿಲ್ಲ. ಮೇಲ್ನೋಟಕ್ಕೆ ಕಂಡು ಬರುವ ಕಾರಣಗಳೆಂದರೆ ಪ್ರಮುಖವಾಗಿ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಜಾರಿಯಾಗುತ್ತಿರುವ ಬಿಎಸ್-6 ಮಾಲಿನ್ಯ ನಿಯಮ. ಕವಾಸಕಿ ಝಡ್ಎಕ್ಸ್-14 ಆರ್ ಬೈಕಿನಲ್ಲಿರುವ 1,441 ಸಿಸಿ ಎಂಜಿನ್ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗಿದೆ. ಇದು ಈ ನಿಯಮಕ್ಕೆ ವಿರೋಧವಾಗಿದೆ.

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ಕವಾಸಕಿ ಝಡ್‌ಎಕ್ಸ್ 14 ಆರ್ ಬೈಕ್ 2170 ಎಂಎಂ ಉದ್ದ, 770 ಎಂಎಂ ಅಗಲ, 1170 ಎಂಎಂ ಎತ್ತರ ಹಾಗೂ 1480 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಝಡ್ಎಕ್ಸ್ 14 ಆರ್ ಬೈಕಿನಲ್ಲಿರುವ ಸೀಟಿನ ಎತ್ತರವು 800 ಎಂಎಂ ಆಗಿದ್ದರೆ, ಗ್ರೌಂಡ್ ಕ್ಲಿಯರೆನ್ಸ್ 125 ಎಂಎಂಗಳಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ಕವಾಸಕಿ ಝಡ್‌ಎಕ್ಸ್ 14 ಆರ್ ಬೈಕಿನಲ್ಲಿ 1,441 ಸಿಸಿಯ ಲಿಕ್ವಿಡ್ ಕೂಲ್ಡ್ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 207.1 ಬಿಹೆಚ್‌ಪಿ ಪವರ್ ಮತ್ತು 158.2 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ಸೂಪರ್‌ಬೈಕ್‌ನ ಸಸ್ಪೆಂಷನ್‍ಗಾಗಿ ಮುಂಭಾಗದಲ್ಲಿ 43 ಎಂಎಂ ಅಪ್‌ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಅಳವಡಿಸಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ಬ್ರೇಕ್‌ಗಳಿಗಾಗಿ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 250 ಎಂಎಂ ಸಿಂಗಲ್ ರೋಟರ್‍‍ಗಳಿವೆ. ಈ ಸೂಪರ್ ಬೈಕ್ ಕವಾಸಕಿಯ ಮೂರು ಮೋಡ್‍‍ನ ಕೆಟಿಆರ್‍‍ಸಿಯನ್ನು (ಕವಾಸಕಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ) ಹೊಂದಿದೆ. ಹೆಚ್ಚುವರಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ಒಳಗೊಂಡಿದೆ.

ಇತಿಹಾಸದ ಪುಟ ಸೇರಲಿದೆ ವಿಶ್ವದ ಅತೀ ವೇಗದ ಸೂಪರ್‍‍ಬೈಕ್

ನಿಂಜಾ ಝಡ್ಎಕ್ಸ್-14 ಬೈಕ್ ಇತಿಹಾಸದ ಪುಟ ಸೇರುವುದು ಬಹುತೇಕ ಖಚಿತವಾಗಿದೆ. ಭಾರತೀಯ ಸೂಪರ್ ಬೈಕ್ ಪ್ರಿಯರಿಗೆ ಕವಾಸಕಿಯ ಈ ನಿರ್ಧಾರದಿಂದ ನಿರಾಸೆಯಾಗಿದೆ. ಕವಾಸಕಿ ನಿಂಜಾ ಭಾರತೀಯ ರಸ್ತೆಗಳಲ್ಲಿ ಅಪರೂಪವಾಗಿ ಕಾಣುವ ಸೂಪರ್‍‍ಬೈಕ್‍‍ಗಳಲ್ಲಿ ಒಂದಾಗಿದೆ. ಈ ಬೈಕ್ ಭಾರತದಲ್ಲಿ ಬಿಡುಗಡೆಯಾದ ಅತಿ ಉತ್ತಮ ಸೂಪರ್‍‍ಬೈಕ್‍‍ಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Kawasaki Ninja ZX-14R To Be Discontinued After 2020: The Big Ninja To Be Taken Off The Shelves! - Read in Kannada
Story first published: Tuesday, November 26, 2019, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X