ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ದೇಶದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಕೆಟಿಎಂ ಸಂಸ್ಥೆಯು ತನ್ನ ಬೈಕ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಬೈಕ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡಿ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಮತ್ತು ವಾಹನ ತಯಾರಿಕೆಯ ಬೀಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಏಪ್ರಿಲ್ 1ರಿಂದಲೇ ತಮ್ಮ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಿದ್ದು, ಕೆಟಿಎಂ ಸಂಸ್ಥೆಯು ಸಹ ತನ್ನ ಬೈಕ್‌ಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡಿರುವುದು ಬೈಕ್ ಖರೀದಿ ಮತ್ತಷ್ಟು ದುಬಾರಿಯಾಗಿದೆ.

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಹೊಸ ದರ ಪಟ್ಟಿಯಂತೆ ಕೆಟಿಎಂ ನಿರ್ಮಾಣದ ಬೈಕ್‌ಗಳಲ್ಲಿ ಅತಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ 125 ಡ್ಯೂಕ್ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು, ವಿವಿಧ ನಗರಗಳಿಗೆ ಅನುಗುಣವಾಗಿ ಕನಿಷ್ಠ ರೂ.7 ಸಾವಿರದಿಂದ ರೂ.9 ಸಾವಿರ ದರ ಹೆಚ್ಚಳ ಮಾಡಲಾಗಿದೆ.

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಕರ್ನಾಟಕದಲ್ಲಿ ಇದೇ 125 ಡ್ಯೂಕ್ ಬೆಲೆಯು ರೂ. 8,390 ಬೆಲೆ ಏರಿಕೆಯಾಗಿದ್ದು, ಈ ಹಿಂದೆ 2018ರ ನವೆಂಬರ್‌ನಲ್ಲಿ ಬಿಡುಗಡೆಯಾದಾಗ ಇದ್ದ ರೂ.1.18 ಲಕ್ಷ ಎಕ್ಸ್‌ಶೋರೂಂ ಬೆಲೆಯು ಇದೀಗ ರೂ. 1.25 ಲಕ್ಷಕ್ಕೆ ಏರಿಕೆಯಾಗಿರುವುದು ಗ್ರಾಹಕರಿಗೆ ಜೇಬಿಗೆ ಮತ್ತಷ್ಟು ಕತ್ತರಿ ಬಿಳಲಿದೆ.

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಇನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಡ್ಯೂಕ್ 125 ಆವೃತ್ತಿಯು ಮಾರಾಟಗೊಳ್ಳುತ್ತಿದ್ದು, ಬೇಬಿ ಡ್ಯೂಕ್ ಎಂದೇ ಜನಪ್ರಿಯತೆಗೊಂಡಿದೆ. ಹೀಗಾಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೀರಿಕ್ಷೆಗೂ ಮಿರಿ ಹೊಸ ಬೈಕಿಗೆ ಬೇಡಿಕೆ ಹರಿದುಬಂದಿದ್ದು, ಈ ಮೂಲಕ ಡ್ಯೂಕ್ 200 ಹಿಂದಿಕ್ಕಿರುವ ಡ್ಯೂಕ್ 125 ಬೈಕ್ ಮಾದರಿಯು ಕೆಟಿಎಂ ಸಂಸ್ಥೆಗೆ ಉತ್ತಮ ಆದಾಯ ತಂದುಕೊಡುತ್ತಿದೆ.

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಡ್ಯೂಕ್ 125 ತಾಂತ್ರಿಕವಾಗಿ 125ಸಿಸಿ ಆವೃತ್ತಿಯಾದ್ರು ಡ್ಯೂಕ್ 200 ಮಾದರಿಯಲ್ಲೇ ಬಹುತೇಕ ಹೊರ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಹೊಸ ಬೈಕಿನಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್-ಡೌನ್ ಫೋಕ್ಸ್‌ನೊಂದಿಗೆ ಖರೀದಿ ಉತ್ತಮವಾಗಿದೆ.

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಹಾಗೆಯೇ ಡ್ಯೂಕ್ 200 ಮಾದರಿಯಲ್ಲೇ ಚಾರ್ಸಿ, ಸಸ್ಷೆನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಡ್ಯೂಕ್ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

MOST READ: ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಎಂಜಿನ್ ಮತ್ತು ಟಾಪ್ ಸ್ಪೀಡ್

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಬೈಕಿನ ವೈಶಿಷ್ಟ್ಯತೆ

ಡಿಜಿಟಲ್ ಇನ್ಟ್ರಮೆಂಟ್ ಕ್ಲಸ್ಟರ್‌ನೊಂದಿಗೆ 148 ಕೆಜಿ ತೂಕ ಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯಲ್ಲಿ 818ಎಂಎಂ ಎತ್ತರದ ಆಸನ ಸೌಲಭ್ಯ ಹೊಂದಿದ್ದು, ಹಿಂಬದಿಯ ಸವಾರರ ಆಸನ ಇದ್ದರೂ ಸಹ ಅಷ್ಟಾಗಿ ಸ್ಥಳಾವಕಾಶ ನೀಡಿಲ್ಲ. ಹೀಗಾಗಿ ಡ್ಯೂಕ್ 125 ಬೈಕ್ ಮಾದರಿಯ ಸಿಂಗಲ್ ರೈಡ್‌ಗೆ ಅತ್ಯುತ್ತಮ ಎನ್ನಬಹುದು.

MOST READ: ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ..!

ಬೈಕಿನ ಮೈಲೇಜ್

10.5-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಜೋಡಣೆ ಹೊಂದಿರುವ ಡ್ಯೂಕ್ 125 ಬೈಕ್ ಪ್ರತಿ ಲೀಟರ್‌ಗೆ ಕೆಟಿಎಂ ಸಂಸ್ಥೆಯೇ ಹೇಳಿಕೊಂಡಂತೆ 40 ರಿಂದ 42 ಕಿ.ಮಿ ನೀಡಬಹುದು ಎಂದಿದ್ದು, ಇನ್ನು ಕೆಲವು ಹವ್ಯಾಸಿ ಕೆಟಿಎಂ ಬೈಕ್ ಸವಾರರ ಪ್ರಕಾರ ಹೊಸ ಬೈಕ್ ಅನ್ನು ಎಕಾನಮಿಕ್ ಮೊಡ್‌ನಲ್ಲಿ ಬೈಕ್ ಚಾಲನೆ ಮಾಡಿದ್ದಲ್ಲಿ ಪ್ರತಿ ಲೀಟರ್‌ಗೆ 55 ಕಿ.ಮಿ ನಿಂದ 60 ಕಿ.ಮಿ ಮೈಲೇಜ್ ಗಿಟ್ಟಿಸಿಕೊಳ್ಳಬಹುದು ಎಂದಿದ್ದಾರೆ.

Most Read Articles

Kannada
Read more on ಕೆಟಿಎಂ ktm
English summary
KTM 125 Duke Just Got More Expensive — Price Hiked By Rs 7,000. Read in Kannada.
Story first published: Thursday, April 4, 2019, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X