ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

ಹೊಸ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್ ಅನ್ನು ಇಟಲಿಯಲ್ಲಿ ನವೆಂಬರ್ 5ರಿಂದ 10ರವರೆಗೆ ನಡೆಯಲಿರುವ 2019ರ ಇ‍ಐ‍‍ಸಿ‍ಎಂ‍ಎ ಶೋನಲ್ಲಿ ಅನಾವರಣಗೊಳಿಸಲಾಗುವುದು. ಭಾರತದಲ್ಲೂ ಬಿಡುಗಡೆಯಾಗಲಿರುವ ಈ ಬೈಕಿನ ಬೆಲೆ ರೂ.3 ಲಕ್ಷಗಳಾಗಲಿದೆ.

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

ಭಾರತದಲ್ಲಿ ಈ ಬೈಕ್ ಅನ್ನು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗುವುದು. ಹೊಸ ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಈ ಸೆಗ್‍‍ಮೆಂಟಿನಲ್ಲಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್, ಕವಾಸಕಿ ವರ್ಸಿಸ್ ಎಕ್ಸ್ 300 ಹಾಗೂ ಬಿ‍ಎಂ‍‍ಡಬ್ಲ್ಯು ಜಿ 310 ಜಿಎಸ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಅನ್ನು ಪುಣೆಯ ಚಕಾನ್‍‍‍ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು. ಇಲ್ಲಿ ತಯಾರಾಗುವ ಬೈಕುಗಳನ್ನು ಅಂತರ‍‍ರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು. ಇತ್ತೀಚಿಗೆ ಪವರ್‍‍ಡ್ರಿಫ್ಟ್ ಈ ಬೈಕಿನ ಸ್ಪಾಟ್ ಟೆಸ್ಟ್ ಚಿತ್ರಗಳನ್ನು ಸೆರೆ ಹಿಡಿದಿತ್ತು. ಈ ಚಿತ್ರಗಳಲ್ಲಿ ಹೊಸ ಬದಲಾವಣೆಗಳನ್ನು ಕಾಣಬಹುದು.

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

ಈ ಬೈಕಿನಲ್ಲಿರುವ ವಿನ್ಯಾಸವನ್ನು 790 ಅಡ್ವೆಂಚರ್ ಬೈಕಿನಿಂದ ಪಡೆಯಲಾಗಿದೆ. ಚಿತ್ರಗಳಲ್ಲಿರುವ ಬೈಕಿನಲ್ಲಿ ಹ್ಯಾಲೊಜೆನ್ ಹೆಡ್‍‍ಲೈಟ್‍‍ಗಳನ್ನು ಕಾಣಬಹುದು. ಈ ಮೊದಲು ಎಲ್‍ಇ‍‍ಡಿ ಹೆಡ್‍‍ಲೈಟ್ ಇರುವ 390 ಅಡ್ವೆಂಚರ್ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಬೇರೆ ರೀತಿಯ ಎಕ್ಸಾಸ್ಟ್ ಸಿಸ್ಟಂ ಅನ್ನು ಸಹ ಅಳವಡಿಸಲಾಗಿದೆ.

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

390 ಅಡ್ವೆಂಚರ್ ಬೈಕ್ ಹೊಸ ಫ್ರೇಂ ಹಾಗೂ ಸಸ್ಪೆಂಷನ್ ಸೆಟ್ ಅಪ್ ಹೊಂದಿರಲಿದೆ. ಬಿಡುಗಡೆಯಾಗಲಿರುವ ಹೊಸ ಬೈಕಿನ ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 17 ಇಂಚಿನ ಅಲಾಯ್ ವ್ಹೀಲ್‍‍ಗಳಿರಲಿವೆ. ಇದರ ಜೊತೆಗೆ ಈ ಬೈಕಿನಲ್ಲಿ ಎಲ್‍ಇ‍‍ಡಿ ಟೇಲ್ ಲ್ಯಾಂಪ್, ಟರ್ನ್ ಇಂಡಿಕೇಟರ್, ಬ್ಲೂ ಟೂತ್ ಕನೆಕ್ಟಿವಿಟಿ ಹೊಂದಿರುವ ಟಿ‍ಎಫ್‍‍ಟಿ ಡಿಸ್‍‍ಪ್ಲೇ ಹಾಗೂ ಟರ್ನ್ ಬೈ ಟರ್ನ್ ನ್ಯಾವಿಗೇಷನ್‍‍ಗಳಿರಲಿವೆ.

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

ಈ ಬೈಕಿನಲ್ಲಿ 390 ಡ್ಯೂಕ್ ಬೈಕಿನಲ್ಲಿರುವಂತಹ ಎಂಜಿನ್ ಅಳವಡಿಸಲಾಗುವುದು. ಆದರೆ ಈ ಎಂಜಿನ್‍‍ನ ಪರ್ಫಾಮೆನ್ಸ್ ವಿಭಿನ್ನವಾಗಿರಲಿದೆ. 390 ಅಡ್ವೆಂಚರ್ ಬೈಕ್ ಆದ ಕಾರಣ ಆಫ್ ರೋಡ್‍‍ಗಳಿಗೆ ಅನುಗುಣವಾಗಿ ಈ ಎಂಜಿನ್ ಅನ್ನು ಟ್ಯೂನ್ ಮಾಡಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

ಈ ಎಂಜಿನ್ 9,000 ಆರ್‍‍ಪಿ‍ಎಂನಲ್ಲಿ 44 ಬಿ‍‍ಹೆಚ್‍‍ಪಿ ಪವರ್ ಹಾಗೂ 7,000 ಆರ್‍‍ಪಿ‍ಎಂನಲ್ಲಿ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಇರಲಿದೆ. ಸಸ್ಪೆಂಷನ್‍‍ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ ಯು‍ಎಸ್‍‍ಡಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿರಲಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

ಬ್ರೇಕಿಂಗ್‍‍ಗಳಿಗಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಗಳಿರಲಿವೆ. ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಬೆಲೆಯ ಬಗ್ಗೆ ಹೇಳುವುದಾದರೆ, ಕೆಟಿ‍ಎಂ 390 ಅಡ್ವೆಂಚರ್ ಬೈಕಿನ ಬೆಲೆಯು 390 ಡ್ಯೂಕ್ ಬೈಕಿಗಿಂತ ರೂ.30,000 - 40,000 ಹೆಚ್ಚಿರಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ ಫೀಚರ್‍‍ನಲ್ಲಿ ಕಂಡು ಬಂದ ಕೆ‍‍ಟಿ‍ಎಂ 390 ಅಡ್ವೆಂಚರ್ ಬೈಕ್

390 ಅಡ್ವೆಂಚರ್ ಬೈಕಿನ ಜೊತೆಗೆ ಕೆಟಿ‍ಎಂ ಕಂಪನಿಯು ಹಸ್ಕ್ಯುವರ್ನಾ ಸ್ವಾರ್ಟ್‍‍ಪಿಲೆನ್ 401, ಹಸ್ಕ್ಯುವರ್ನಾ ವಿಟ್‍‍ಪಿಲೆನ್, ಹೊಸ ತಲೆಮಾರಿನ ಕೆಟಿ‍ಎಂ ಆರ್‍‍ಸಿ 390, ಡ್ಯೂಕ್ 390 ಫೇಸ್‍‍ಲಿಫ್ಟ್ ಹಾಗೂ ಡ್ಯೂಕ್ 200 ಫೇಸ್‍‍ಲಿಫ್ಟ್ ಸೇರಿದಂತೆ 5 ಹೊಸ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Source: PowerDrift/Facebook

Most Read Articles

Kannada
Read more on ಕೆಟಿಎಂ ktm
English summary
KTM 390 Adventure spied with halogen headlight, new exhaust - Read in Kannada
Story first published: Friday, October 11, 2019, 15:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X