390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸಿದ ಕೆಟಿಎಂ
ಗೋವಾದಲ್ಲಿ ಆರಂಭವಾಗಿರುವ 2019ರ ಇಂಡಿಯಾ ಬೈಕ್ ವೀಕ್ ಮೇಳದಲ್ಲಿ ಕೆಟಿಎಂ ಸಂಸ್ಥೆಯು ಹೊಸ ಮಾದರಿಯ ಆಫ್ ರೋಡ್ ಬೈಕ್ ಪ್ರದರ್ಶನಗೊಳಿಸುವ ಮೂಲಕ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, 390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನ ಮಾಡಿದೆ.

ಪರ್ಫಾಮೆನ್ಸ್ ಬೈಕ್ ಪ್ರಿಯರ ಬೇಡಿಕೆಯೆಂತೆ ಭಾರತದಲ್ಲಿ ಸೂಪರ್ ಬೈಕ್ ಮಾರಾಟವನ್ನು ಹೆಚ್ಚಿಸುವತ್ತ ಮಹತ್ವದ ಯೋಜನೆ ರೂಪಿಸುತ್ತಿರುವ ಕೆಟಿಎಂ ಸಂಸ್ಥೆಯು ಕಳೆದ ತಿಂಗಳು ಡ್ಯೂಕ್ 790 ಬಿಡುಗಡೆಗೊಳಿಸಿದ್ದು, ಇದೀಗ ಆಫ್ ರೋಡ್ ಬೈಕ್ ಮಾದರಿಗಳಾದ ಅಡ್ವೆಂಚರ್ 390 ಮತ್ತು ಅಡ್ವೆಂಚರ್ 790 ಬೈಕ್‌ಗಳನ್ನು ಪ್ರದರ್ಶನ ಮಾಡಿದೆ. 2020ರ ಜನವರಿ ಕೊನೆಯಲ್ಲಿ ಅಡ್ವೆಂಚರ್ 390 ಬಿಡುಗಡೆಯಾಗಲಿದ್ದರೆ ಜೂನ್-ಜುಲೈ ವೇಳೆಗೆ ಅಡ್ವೆಂಚರ್ 790 ಮಾದರಿಯು ಖರೀದಿಗೆ ಲಭ್ಯವಾಗಲಿದೆ.

ಅಡ್ವೆಂಚರ್ ಟೂರರ್ ಬೈಕ್ ಮಾದರಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದ್ದು, ಆಫ್ ರೋಡ್ ಜೊತೆಗೆ ದಿನನಿತ್ಯದ ಸವಾರಿಗೂ ಈ ಬೈಕ್‌ಗಳು ಉತ್ತಮವಾಗಿರುವುದೇ ಬೇಡಿಕೆ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಗುಣವಾಗಿ ಕೆಟಿಎಂ ಸಂಸ್ಥೆಯು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಅಭಿವೃದ್ದಿಪಡಿಸಿದ್ದು, ಇನ್ನುಳಿದ ಬೈಕ್ ಮಾದರಿಗಳು ಸಹ ಶೀಘ್ರದಲ್ಲೇ ಹೊಸ ಎಂಜಿನ್ ಪಡೆದುಕೊಳ್ಳಲಿವೆ.

790 ಅಡ್ವೆಂಚರ್ ಬೈಕ್ ಮಾದರಿಯು 799ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, ಅಡ್ವೆಂಚರ್ ಟೂರರ್ ಫರ್ಪಾಮೆನ್ಸ್ ಮಾದರಿಯಾಗಿ 94-ಬಿಎಚ್‌ಪಿ ಮತ್ತು 88-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸ್ಟ್ರೀಟ್, ಆಫ್ ರೋಡ್, ರೈನ್ ಮತ್ತು ರ‍್ಯಾಲಿ ಎನ್ನುವ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಆಫ್ ರೋಡ್ ಮಾದರಿಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿರುವ 790 ಅಡ್ವೆಂಚರ್ ಮಾದರಿಯು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯ ಬೈಕ್ ಆವೃತ್ತಿಯಾಗಿದೆ.

ಹೊಸ ಬೈಕಿನಲ್ಲಿ ಎಲ್ಇಡಿ ಡ್ಯುಯಲ್ ಹೆಡ್‌ಲ್ಯಾಂಪ್, 43-ಎಂಎಂ ನಾನ್ ಅಡ್ಜೆಸ್ಟ್‌ಬಲ್ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಮುಂಭಾಗದಲ್ಲಿ ಪ್ರಿಲೋಡ್ ಅಡ್ಜೆಸ್ಟ್‌ಬಲ್ ಮೊನೋಶಾರ್ಕ್ ಸಸ್ಫೆಷನ್ ಹೊಂದಿದ್ದು, ರೈಡಿಂಗ್ ಸುರಕ್ಷತೆಗಾಗಿ ಟ್ರಾಕ್ಷನ್ ಕಂಟ್ರೊಲ್, ಕಾರ್ನರ್ ಎಬಿಎಸ್, ಮಲ್ಟಿ ಇನ್‌ಫಾರ್ಮೆಷನ್ ಟಿಎಫ್‌ಟಿ ಸ್ಕ್ರೀನ್ ಫೀಚರ್ಸ್‌ಗಳನ್ನು ಹೊಂದಿದೆ.

ಹಾಗೆಯೇ ಆಫ್ ರೋಡ್ ರೈಡಿಂಗ್‌ಗಾಗಿ ಆರಾಮದಾಯಕ ಆಸನ, 15 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ವೀಂಡ್ ಸ್ಕ್ರೀನ್, 21-ಇಂಚಿನ ಫ್ರಂಟ್ ವೀಲ್ಹ್, 18-ಇಂಚಿನ ರಿಯರ್ ವೀಲ್ಹ್ ಸೌಲಭ್ಯವು ಹೊಸ ಬೈಕ್ ಬಲಿಷ್ಠತೆಗೆ ಪೂರಕವಾಗಿದ್ದು, ಬರೋಬ್ಬರಿ 189 ಕೆಜಿ ತೂಕ ಪಡೆದಿದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಅಡ್ವೆಂಚರ್ ಟೂರ್‌ಗೆ ಪೂರಕವಾಗಿ ಗರಿಷ್ಠ ಫೀಚರ್ಸ್‌ಗಳನ್ನು ಹೊಂದಿರುವುದು ಬೈಕ್ ಬೆಲೆ ಹೆಚ್ಚಳ ಸಾಧ್ಯತೆಗಳಿದ್ದು, ಡ್ಯೂಕ್ 790 ಬೈಕ್ ಮಾದರಿಗಿಂತಲೂ ದುಬಾರಿ ಬೆಲೆ ಪಡೆಯಲಿರುವ 790 ಅಡ್ವೆಂಚರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.10 ಲಕ್ಷದಿಂದ ರೂ.11 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.
MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಇನ್ನು ಕೆಟಿಎಂ ಬಿಡುಗಡೆ ಮಾಡಲು ನಿರ್ಧರಿಸಿರುವ 390 ಅಡ್ವೆಂಚರ್ ಬೈಕ್ ಸಹ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ 1290 ಸೂಪರ್ ಅಡ್ವೆಂಚರ್ ಬೈಕ್ ಹೋಲಿಕೆಯನ್ನೇ ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹಿಮಾಲಯನ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್ ಮಾರಾಟಗೊಳ್ಳಲಿದೆ.
MOST READ: ತಂದೆಗೆ ದುಬಾರಿ ಬೆಲೆಯ ಸೂಪರ್‍ಬೈಕ್ ಗಿಫ್ಟ್ ನೀಡಿದ ಮಗ

390 ಅಡ್ವೆಂಚರ್ ಬೈಕ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 373-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ 44-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ದೆಹಲಿ ಎಕ್ಸ್‌ಶೋರಂ ಪ್ರಕಾರ 390 ಅಡ್ವೆಂಚರ್ ಮಾದರಿಯು ರೂ. 2.30 ಲಕ್ಷದಿಂದ ರೂ. 2.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳ ಪ್ರೇರಣೆಯಿಂದಾಗಿ ಈ ಬೈಕ್ ಕೂಡಾ ತುಸು ದುಬಾರಿ ಎನ್ನಿಸಲಿದೆ.


Click it and Unblock the Notifications








