Just In
- 26 min ago ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- 28 min ago ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರಸ್ ಕಾರುಗಳು.. ಇವೇ ಜನಸಾಮಾನ್ಯರ ಲ್ಯಾಂಬೋರ್ಗಿನಿಗಳು!
- 2 hrs ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 15 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
Don't Miss!
- News HSRP; ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವರ್ಫುಲ್ ಎಂಜಿನ್ನೊಂದಿಗೆ ಬರಲಿದೆ ಕೆಟಿಎಂ ಡ್ಯೂಕ್ 790
ಕೆಟಿಎಂ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ 390 ಅಡ್ವೆಂಚೆರ್ ಮತ್ತು ಡ್ಯೂಕ್ 790 ಹೊಸ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇದರಲ್ಲಿ ಡ್ಯೂಕ್ 790 ಬೈಕ್ ಮಾದರಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಪವರ್ಫುಲ್ ಎಂಜಿನ್ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಡ್ಯೂಕ್ 790 ಬೈಕ್ ಖರೀದಿಗಾಗಿ ಕೆಟಿಎಂ ಸಂಸ್ಥೆಯು ಅಧಿಕೃತ ಬುಕ್ಕಿಂಗ್ ಆರಂಭ ಮಾಡದೇ ಇದ್ದರೂ ಆಸಕ್ತ ಗ್ರಾಹಕರು ಕೆಟಿಎಂ ಪ್ರಮುಖ ಡೀಲರ್ಸ್ಗಳಲ್ಲಿ ರೂ.30 ಸಾವಿರದಿಂದ ರೂ.40 ಸಾವಿರ ಮುಂಗಡ ಪಾವತಿಸಿ ಹೊಸ ಬೈಕ್ ಖರೀದಿಗೆ ಎದುರು ನೋಡುತ್ತಿದ್ದು, ಹೊಸ ಬೈಕ್ ಬಿಡುಗಡೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಡ್ಯೂಕ್ 790 ತಾಂತ್ರಿಕ ಮಾಹಿತಿಯುಳ್ಳ ಕೈಪಿಡಿಯೊಂದು ಸಾಕಷ್ಟು ಸದ್ದು ಮಾಡುತ್ತಿದೆ.
ಸೋರಿಕೆಯಾದ ಮಾಹಿತಿ ಪ್ರಕಾರ, ಡ್ಯೂಕ್ 790 ಬೈಕ್ ಮಾದರಿಯು ಹಲವು ಪ್ರೀಮಿಯಂ ಫೀಚರ್ಸ್ಗಳನ್ನು ಹೊತ್ತುಬರಲಿದ್ದು, ಮೋಟಾರ್ಸೈಕಲ್ ಟ್ರಾಕ್ಷನ್ ಕಂಟ್ರೋಲ್(ಎಂಟಿಸಿ), ಟ್ರಾಕ್ ಮೂಡ್, ಸಿಕ್ಸ್-ಆಕ್ಸಿಸ್ ಇನೆಟೆರಿಯಾ ಮತ್ತು ಕ್ವಿಕ್ ಶಿಫ್ಟರ್ ಪ್ಲಸ್ ಸಿಸ್ಟಂ ಹಲವು ಸುಧಾರಿತ ತಂತ್ರಜ್ಞಾನ ಸೌಲಭ್ಯ ಹೊಂದಿದೆ.
ಇನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಡ್ಯೂಕ್ 1290 ಆವೃತ್ತಿಯನ್ನು ಮಾರಾಟ ಮಾಡುತ್ತಿರುವ ಕೆಟಿಎಂ ಸಂಸ್ಥೆಯು ಭಾರತದಲ್ಲೂ ಕೂಡಾ ತನ್ನ ಜನಪ್ರಿಯ ಸೂಪರ್ ಬೈಕ್ ಆವೃತ್ತಿಗಳನ್ನು ಒಂದೊಂದಾಗಿ ಪರಿಚಯಿಸುತ್ತಿದೆ.
ಇದರಲ್ಲಿ ಇದೀಗ ಡ್ಯೂಕ್ 790 ಬಿಡುಗಡೆಯ ಸನಿಹದಲ್ಲಿದ್ದು, ತದನಂತರ 390 ಅಡ್ವೆಂಚೆರ್, 790 ಅಡ್ವೆಂಚೆರ್ ಮತ್ತು 500 ಸಿಸಿ ವಿಭಾಗದಲ್ಲೂ ಮತ್ತೆರಡು ಹೊಸ ಬೈಕ್ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯ ಸುಳಿವು ನೀಡಿದೆ. ಡ್ಯೂಕ್ 790 ಬೈಕ್ ಸದ್ಯ ಸಿಕೆಡಿ ವಿಧಾನದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದ್ದು, ಪುಣೆಯಲ್ಲಿರುವ ಬಜಾಜ್ ಬೈಕ್ ಉತ್ಪಾದನಾ ಘಟಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರಾಟಕ್ಕೆ ಸಿದ್ದವಾಗಲಿದೆ.
ಕೆಟಿಎಂ ಸಂಸ್ಥೆಯ ಮಿಡ್ಲ್ ವೇಟ್ ವಿಭಾಗದಲ್ಲಿರುವ ಈ ನೇಕೆಡ್ ರೋಡ್ಸ್ಟರ್ ಬೈಕ್ ಮಾದರಿಯಲ್ಲಿ ಎಲ್ಸಿ8ಸಿ 799 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರೆಲಲ್ ಟ್ವಿನ್ ಎಂಜಿನ್ ಜೋಡಣೆ ಮಾಡಿದ್ದು, ಈ ಬೈಕಿನಲ್ಲಿರುವ ಎಂಜಿನ್ 103-ಬಿಹೆಚ್ಪಿ ಹಾಗೂ 86-ಎನ್ಎಂ ಟಾರ್ಕ್ ಉತ್ಪಾದಿಸಲಿದೆ.
ಈ ಎಂಜಿನ್ನಲ್ಲಿ 6 ಸ್ಪೀಡ್ ಗೇರ್ಬಾಕ್ಸ್ ಇರಲಿದ್ದು, ಈ ಬೈಕಿನಲ್ಲಿ ಪಿಎಎಸ್ಸಿ ಸ್ಲಿಪ್ ಅಸಿಸ್ಟ್ ಕ್ಲಚ್ ಹಾಗೂ ಕ್ವಿಕ್ ಶಿಫ್ಟ್ ಅಸಿಸ್ಟ್ ಇರಲಿದೆ. ಇದರ ಜೊತೆಗೆ ಈ ಬೈಕಿನಲ್ಲಿ ರೈಡ್ ಬೈ ವೈರ್ ಥ್ರಾಟಲ್ ಇರಲಿದ್ದು, ಸ್ಪೋರ್ಟ್, ಸ್ಟ್ರೀಟ್, ರೇನ್ ಹಾಗೂ ಟ್ರ್ಯಾಕ್ ಎಂಬ ನಾಲ್ಕು ವಿವಿಧ ಬಗೆಯ ರೈಡರ್ ಮೋಡ್ಗಳನ್ನು ಒದಗಿಸಲಿದೆ.
ಇದಲ್ಲದೇ ಹೊಸ ಬೈಕಿನಲ್ಲಿ ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್ ಹಾಗೂ ವ್ಹೀಲ್ ಕಂಟ್ರೋಲ್ಗಳನ್ನು ಸಹ ನೀಡಲಾಗಿದೆ.
ಈ ಬೈಕಿನಲ್ಲಿರುವ ಇನ್ನೊಂದು ವಿಶೇಷತೆಯೆಂದರೆ, ಈ ಬೈಕ್ ಸೂಪರ್ ಮೋಟೊ ಮೋಡ್ ನೀಡಲಿದ್ದು, ಇದರಿಂದಾಗಿ ಚಾಲಕರು ಹಿಂದಿರುವ ವ್ಹೀಲ್ನಲ್ಲಿನ ಎಬಿಎಸ್ ಸುರಕ್ಷೆಯನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಈ ಬೈಕಿನ ಮುಂಭಾಗದಲ್ಲಿ ಡಬ್ಲ್ಯುಪಿ ಸೋರ್ಸಿನ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ಗಳನ್ನು ಅಳವಡಿಸಲಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಬ್ರೇಕಿಂಗ್ ಅನ್ನು ಮುಂಭಾಗದಲ್ಲಿರುವ ಡಬಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿರುವ ಸಿಂಗಲ್ ಡಿಸ್ಕ್ ಗಳು ನಿಯಂತ್ರಿಸುತ್ತವೆ. ಡ್ಯೂಕ್ 390 ಬೈಕಿನ ರೀತಿಯಲ್ಲಿಯೇ ಡ್ಯೂಕ್ 790 ಬೈಕ್ ಸಹ ಪೂರ್ಣವಾದ ಎಲ್ಇಡಿ ಲೈಟಿಂಗ್ ಸೆಟ್ಅಪ್, ಸ್ಮಾರ್ಟ್ ಫೋನ್ಗಳಿಗಾಗಿ ಸುಧಾರಿತ ಟೆಕ್ನಾಲಜಿಯ ಟಿಎಫ್ಟಿ ಕ್ಲಸ್ಟರ್ನ ಬ್ಲೂಟೂಟ್ ಕನೆಕ್ಟಿವಿಟಿ ಹೊಂದಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?
ಹೊಸ ಕೆಟಿಎಂ ಡ್ಯೂಕ್ 790 ಬೈಕ್ ಎಕ್ಸ್ ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 8.50 ಲಕ್ಷಗಳಾಗುವ ಸಾಧ್ಯತೆಗಳಿದ್ದು, ಟ್ರ್ಯಾಕ್ ಮತ್ತು ಸ್ಟ್ರೀಟ್ ಬೈಕ್ ಸವಾರಿಗೆ ಇದು ಮತ್ತಷ್ಟು ಬಲಿಷ್ಠ ಬೈಕ್ ಆವೃತ್ತಿಯಾಗಿ ಮಿಂಚಲಿದೆ.
ಹೀಗಾಗಿ ಡ್ಯೂಕ್ 790 ಬೈಕ್ ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪ್ಪಲ್, ಸುಜುಕಿ ಜಿಎಸ್ಎಕ್ಸ್-ಎಸ್750, ಕವಾಸಕಿ ಝಡ್900, ಡುಕಾಟಿ ಮಾನ್ಸ್ಟರ್ ಬೈಕುಗಳಿಗೆ ಪೈಪೋಟಿ ನೀಡಲಿದ್ದು, ಕೆಟಿಎಂ ಬೈಕ್ ಸರಣಿಯಲ್ಲಿ ಅಗ್ರಸ್ಥಾನದಲ್ಲಿದೆ.