ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿಎಂ-ಬಜಾಜ್
ಬಜಾಜ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನವನ್ನು ಅತಿ ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಹೊಸ ಅರ್ಬನೈಟ್ ಸರಣಿಯ ಸ್ಕೂಟರ್ ಅನ್ನು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಈ ದ್ವಿಚಕ್ರ ವಾಹನವು ಬಜಾಜ್ ಬಿಡುಗಡೆಗೊಳಿಸಲಿರುವ ಮೊದಲ ಎಲೆಕ್ಟ್ರಿಕ್ ವಾಹನವಾಗಿರಲಿದೆ. ಅರ್ಬನೈಟ್ ಸರಣಿಯ ಸ್ಕೂಟರ್ ಮಾಸ್ ಮಾರುಕಟ್ಟೆಯಲ್ಲಿರುವ ವಾಹನಗಳಿಗಿಂತ ಹಾಗೂ ಎಂಟ್ರಿ ಲೆವೆಲ್ ವಾಹನಗಳಿಗಿಂತ ಭಿನ್ನವಾಗಿರಲಿದೆ. ಬಜಾಜ್ - ಕೆಟಿಎಂ ಕಂಪನಿಗಳು ಜಂಟಿಯಾಗಿ ಹೊಸ ವಾಹನಗಳಿಗಾಗಿ ಹೊಸ ಪವರ್ ಟ್ರೇನ್‍ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಎಕಾನಾಮಿಕ್ ಟೈಮ್ಸ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಬಜಾಜ್ ಆಟೋದ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಕೇಶ್ ಶರ್ಮಾರವರು ಈ ಬಗ್ಗೆ ಮಾತನಾಡಿದ್ದಾರೆ.

ಹೊಸ ವಾಹನಗಳ ಮೂಲ ಮಾದರಿಗಳನ್ನು ತಯಾರಿಸುತ್ತಿರುವುದನ್ನು ಖಚಿತಪಡಿಸಿರುವ ಅವರು ಯಾವ ವಾಹನವನ್ನು ಮೊದಲು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬೇಕೆಂದು ಇನ್ನೂ ಖಚಿತವಾಗಿಲ್ಲವೆಂದು ತಿಳಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಬಜಾಜ್ ಹಾಗೂ ಕೆಟಿಎಂ ಕಂಪನಿಗಳು ಜೊತೆಯಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಹೊಸ ಪ್ಲಾಟ್‍ಫಾರಂನಲ್ಲಿ 48 ವೋಲ್ಟಿನ ಪವರ್ ಟ್ರೇನ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪವರ್ ಟ್ರೇನ್ ಅನ್ನು ಎರಡೂ ಕಂಪನಿಗಳೂ ವಿವಿಧ ರೀತಿಯಲ್ಲಿ ಬಳಸಿಕೊಳ್ಳಲಿವೆ.

ಮೂಲ ಮಾದರಿಯಲ್ಲಿರುವ ಪವರ್‍ಟ್ರೇನ್ ಪ್ಲಾಟ್‍ಫಾರಂ ಅನ್ನು ವೇಗವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಹೊಸ ಪವರ್‍ಟ್ರೇನ್ ಅನ್ನು 2022ರ ವೇಳೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. 48 ವೋಲ್ಟ್ ನ ಪವರ್‍ಟ್ರೇನ್ 3 ರಿಂದ 10 ಕೆಡಬ್ಲ್ಯು ಸಾಮರ್ಥ್ಯದ ವಾಹನಗಳನ್ನು ಚಾರ್ಜ್ ಮಾಡಲು ಸಹಕಾರಿಯಾಗಲಿದೆ. ಹೊಸ ಪ್ಲಾಟ್‍ಫಾರಂನಡಿಯಲ್ಲಿ ಬರುವ ಎಲ್ಲಾ ವಾಹನಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು.

ಕೆಟಿಎಂ ಕಂಪನಿಯು ವಿಶ್ವಾದ್ಯಂತವಿರುವ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದೆ. ಹೊಸ ಪ್ಲಾಟ್‍ಫಾರಂ ಅನ್ನು ತಯಾರಿಸಲು ಕೆಟಿಎಂ ಬಿಡಿಭಾಗಗಳನ್ನು ಬಳಸಿಕೊಳ್ಳಲಾಗುವುದು.
MOST READ: ಪ್ರಪಂಚದ ದೊಡ್ಡ ಜೆಟ್ ವಿಮಾನವನ್ನು ಎಳೆದ ಮಿನಿ ಕೂಪರ್..!

ಈ ಪ್ಲಾಟ್‍ಫಾರಂನಲ್ಲಿ ತಯಾರಾಗುವ ದ್ವಿಚಕ್ರ ವಾಹನಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಪ್ಲಾಟ್‍ಫಾರಂ ಅನ್ನು ಹಲವು ಬೈಕುಗಳು ಹಾಗೂ ಪರ್ಫಾಮೆನ್ಸ್ ಸ್ಕೂಟರ್‍ಗಳು ಬಳಸಿಕೊಳ್ಳುವ ಸಾಧ್ಯತೆಗಳಿವೆ.
MOST READ: ಉತ್ಪಾದನಾ ಹಂತದಲ್ಲಿರುವ ಎಂಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಬಜಾಜ್-ಕೆಟಿಎಂ ಸಹಭಾಗಿತ್ವವು ಭಾರತದ ಮಟ್ಟಿಗೆ ಯಶಸ್ವಿಯಾಗಿದ್ದು, ಎರಡೂ ಕಂಪನಿಗಳೂ ಒಬ್ಬರಿಗೊಬ್ಬರು ಪ್ರಯೋಜನವನ್ನು ಪಡೆದಿದ್ದಾರೆ. ಈ ಸಹಭಾಗಿತ್ವದಿಂದಾಗಿ ಬಜಾಜ್ ಡೊಮಿನೊರ್ 400 ಹಾಗೂ ಕೆಟಿಎಂ 390 ಡ್ಯೂಕ್ ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ.
MOST READ: ಎಸ್‍ಯುವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಮುಂಬರುವ ದಿನಗಳಲ್ಲಿ ಹೊಸ ಬಗೆಯ ಎಲೆಕ್ಟ್ರಿಕ್ ವಾಹನಗಳನ್ನು ಈ ಕಂಪನಿಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ನಿರೀಕ್ಷಿಸಬಹುದು. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಯಶಸ್ವಿಯಾಗುವುದು ಇನ್ನೂ ದೂರದ ಮಾತು.

ಭಾರತ ಸರ್ಕಾರವು ಭವಿಷ್ಯದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಾಗೂ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಬಹುದು. ಆಗ ಈ ಹೊಸ ಪ್ಲಾಟ್‍ಫಾರಂನಿಂದ ಈ ಕಂಪನಿಗಳಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ.

ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳ ಬೆಲೆಯು, ಮಾಮೂಲಿ ದ್ವಿಚಕ್ರ ವಾಹನಗಳ ಬೆಲೆಗಿಂತ ಹೆಚ್ಚಾಗಿರಲಿದೆ. ಇದಕ್ಕಾಗಿ ಸರ್ಕಾರವು ಸಬ್ಸಿಡಿಗಳನ್ನು ನೀಡಿ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಯಶಸ್ವಿಯಾಗುವಂತೆ ಮಾಡಬೇಕಿದೆ.
Source: E-Scoot


Click it and Unblock the Notifications








