ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ 125 ಮತ್ತು ಯಮಹಾ ಎಂಟಿ-15 ಆವೃತ್ತಿಗಳ ನಡುವೆ ಭಾರಿ ಪೈಪೋಟಿಯಿತ್ತು, ಕಳೆದ ಜುಲೈ ತಿಂಗಳಲ್ಲಿ ಯಮಹಾ ಎಂಟಿ-15 ಬೈಕ್‍ನ್ನು ಕೆಟಿಎಂ ಡ್ಯೂಕ್ 125 ಮಾರಾಟದಲ್ಲಿ ಹಿಂದಿಕ್ಕಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಡ್ಯೂಕ್ 125 ಕಳೆದ ಜುಲೈ ತಿಂಗಳಿನಲ್ಲಿ 2,786 ಯುನಿಟ್ ಮಾರಾಟವಾಗಿದೆ.

ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ಡ್ಯೂಕ್ 125 ಬೈಕ್ ತನ್ನ ಪ್ರತಿಸ್ಪರ್ಧಿ ಯಮಹಾ ಎಂಟಿ-15 ಬೈಕಿನ ಮಾರಟಕ್ಕಿಂತ ಎರಡು ಪಟ್ಟು ಅಧಿಕ ಮಾರಾಟವಾಗಿದೆ. ಯಮಹಾದ ಎಂಟಿ-15 ಕೇವಲ 1.400 ಯುನಿಟ್ ಮಾತ್ರ ಮಾರಾಟಗೊಂಡಿದೆ. ಡ್ಯೂಕ್ 125 ಬೈಕ್ ಎದುರು ಯಮಹಾ ಎಂಟಿ-15 ನೆಲಕಚ್ಚಿದೆ. ಸತತ ಮೂರನೇ ತಿಂಗಳು ಡ್ಯೂಕ್ 125 ಬೈಕ್ ಯಮಹಾ ಎಂಟಿ-15 ಅನ್ನು ಮಾರಾಟದಲ್ಲಿ ಓವರ್‍ ಟೇಕ್ ಮಾಡಿ ಮುಂಚೂಣೆಯಲ್ಲಿದೆ.

ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ಬಹುಸಂಖ್ಖೆಯಲ್ಲಿ ಮಾರಾಟವಾಗಲೂ ಮುಖ್ಯ ಕಾರಣ ಬೈಕಿಗೆ ಕಡಿಮೆ ಬೆಲೆ ಮತ್ತು ಉತ್ತಮವಾದ ವೈಶಿಷ್ಟಗಳೊಂದಿಗೆ ಕೊಡಿದೆ. ಹೆಚ್ಚಿನ ವೈಶಿಷ್ಟ್ಯಗಳನ್ನು ಡ್ಯೂಕ್ 200 ಬೈಕಿನಿಂದ ಎರವಲು ಪಡೆದುಕೊಂಡಿದೆ. ಇದರಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನುಸ್ಟ್ರೋಮೆಂಟ್ ಕ್ಲಸ್ಟರ್, ಫ್ರಂಟ್ ಫೋರ್ಕ್, ಮೋನೋ ಶಾಕ್ ಸಸ್ಪೆಂಷನ್, ರೇರ್ ಡಿಸ್ಕ್ ಬ್ರೇಕ್‍‍ಗಳಿವೆ.

ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ಬಾಷ್ ನಿರ್ಮಾಣದ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರಲಿದೆ. ಕೆಲವು ವೈಶಿಷ್ಟ್ಯಗಳು ಯಮಹಾ ಎಂಟಿ-15 ಬೈಕಿನಲ್ಲಿಯೂ ಕೂಡ ಲಭ್ಯವಿದೆ. ಆದರೆ ಪ್ರಮುಖವಾಗಿ ಪರಿಗಣಿಸಬೇಕಾದ ಮುಖ್ಯ ವಿಷಯವೆಂದರೆ ಬೈಕಿನ ಬೆಲೆ. ದೇಶಿಯ ಮಾರುಕಟ್ಟೆಯಲ್ಲಿ ಬೈಕ್ ಬಿಡುಗಡೆಯಾದ ನಂತರ ಭರ್ಜರಿಯಾಗಿ ಮಾರಾಟವಾಗಿದೆ.

ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ಪ್ರಸ್ತುತ ಡ್ಯೂಕ್ 125 ಬೆಲೆ ರೂ. 1.29 ಲಕ್ಷ ವಾಗಿದ್ದು, ಡ್ಯೂಕ್ ದೇಶಿಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಮಯದಲ್ಲಿ ಇದರ ಬೆಲೆ 1.19 ಲಕ್ಷ ಮತ್ತು ಯಮಹಾ ಎಂಟಿ-15 ಬೆಲೆ ರೂ. 1.37 ಲಕ್ಷಗಳಾಗಿತ್ತು. ಯಮಹಾ ಬೆಲೆ ಅಧಿಕವಾಗಿದ್ದು, ಆದರೆ ಫೀಚರ್‍‍ಗಳು ಡ್ಯೂಕ್‍ಗಿಂತಲೂ ಕಡಿಮೆ ಇದೆ.

ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ಯಮಹಾ ಎಂಟಿ-15 ಪವರ್‍‍ಫುಲ್ ಇಂಜಿನ್ ಹೊಂದಿದ್ದು, ಲಿಕ್ವಿಡ್ ಕೂಲ್ಡ್ 155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‍ನೊಂದಿಗೆ ವಿವಿಟಿ ತಂತ್ರಜ್ಞಾನ ಹೊಂದಿದೆ. 19.3ಬಿ‍ಎಚ್‍‍ಪಿ ಪವರ್ ಮತ್ತು 14.7ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ರೇರ್ ವ್ಹೀಲ್ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಹೊಂದಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ಡ್ಯೂಕ್ 125 ಬೈಕ್ 124ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ 15 ಬಿಎಚ್‍ಪಿ ಪವರ್ ಮತ್ತು 12 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಕೆಟಿ‍ಎಂ ಡ್ಯೂಕ್ 125 ಬೈಕ್ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬೈಕ್‍ ಮಾರಾಟದಲ್ಲಿ ಯಮಹಾ ಎಂಟಿ 15 ಹಿಂದಿಕ್ಕಿದ ಡ್ಯೂಕ್ 125

ಭಾರತದಲ್ಲೂ ತನ್ನ ಜನಪ್ರಿಯತೆ ಮೂಲಕ ಬೈಕ್ ಮಾರಾಟದಲ್ಲಿ ಏರಿಕೆ ಕಂಡಿದೆ. ದೇಶಿಯ ಮಾರುಕಟ್ಟೆಗೆ ಅಸ್ಟ್ರಿಯನ್ ಬ್ಯಾಂಡ್‍‍ನಿಂದ ಕೆಟಿಎಂ ಡ್ಯೂಕ್ 125 ನೇಕೆಡ್ ಸ್ಟ್ರೀಟ್ ಫೈಟರ್ ವಿಭಾಗಕ್ಕೆ ದೊಡ್ಡ ಕೊಡುಗೆಯಾಗಿದೆ. ತನ್ನ ಹಿರಿಯಣ್ಣ ಡ್ಯೂಕ್ 200 ರೀತಿಯಲ್ಲೆ ಸ್ಟೈಲಿಶ್ ಲುಕ್ ಇರುವುದರಿಂದ ಬೈಕ್ ಪ್ರಿಯರು ಈ ಬೈಕಿಗೆ ಫಿದಾ ಆಗಿದ್ದಾರೆ. ಯಮಹಾ ಎಂಟಿ-15, ಟಿವಿಎಸ್ ಅಪಾಚೆ ಆರ್‍‍ಟಿಆರ್ 160 4ವಿ, ಬಜಾಜ್ ಪಲ್ಸರ್ ಎನ್‍ಎಸ್ 160 ಬೈಕಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
Read more on ಕೆಟಿಎಂ ktm
English summary
KTM Duke 125 Sales In July Registers Twice The Numbers As The Yamaha MT-15: Retails 2,786 Units - Read in Kannada
Story first published: Thursday, August 29, 2019, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X