ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಕೆಟಿಎಂ ಸಂಸ್ಥೆಯು ಸದ್ಯದಲ್ಲೇ 390 ಅಡ್ವೆಂಚೆರ್ ಮತ್ತು ಡ್ಯೂಕ್ 790 ಹೊಸ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಖರೀದಿಗಾಗಿ ದೇಶದ ಪ್ರಮುಖ ನಗರಗಳಲ್ಲಿರುವ ಕೆಟಿಎಂ ಅಧಿಕೃತ ಮಾರಾಟಗಾರರ ಬಳಿ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಡ್ಯೂಕ್ 790 ಬೈಕ್ ಖರೀದಿಗಾಗಿ ಕೆಟಿಎಂ ಸಂಸ್ಥೆಯು ಅಧಿಕೃತ ಬುಕ್ಕಿಂಗ್ ಆರಂಭ ಮಾಡದೇ ಇದ್ದರೂ ಆಸಕ್ತ ಗ್ರಾಹಕರು ಕೆಟಿಎಂ ಪ್ರಮುಖ ಡೀಲರ್ಸ್‌ಗಳಲ್ಲಿ ರೂ.30 ಸಾವಿರದಿಂದ ರೂ.40 ಸಾವಿರ ಮುಂಗಡ ಪಾವತಿಸಿ ಹೊಸ ಬೈಕ್ ಖರೀದಿಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಡೀಲರ್ಸ್ ಯಾರ್ಡ್ ತಲುಪಿರುವ ಡ್ಯೂಕ್ 790 ಬೈಕ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ದೀಪಾವಳಿ ಹೊತ್ತಿಗೆ ಹೊಸ ಬೈಕ್ ಬಿಡುಗಡೆಯಾಗಲಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಡ್ಯೂಕ್ 1290 ಆವೃತ್ತಿಯನ್ನು ಮಾರಾಟ ಮಾಡುತ್ತಿರುವ ಕೆಟಿಎಂ ಸಂಸ್ಥೆಯು ಭಾರತದಲ್ಲೂ ಕೂಡಾ ತನ್ನ ಜನಪ್ರಿಯ ಸೂಪರ್ ಬೈಕ್ ಆವೃತ್ತಿಗಳನ್ನು ಒಂದೊಂದಾಗಿ ಪರಿಚಯಿಸುತ್ತಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಇದರಲ್ಲಿ ಇದೀಗ ಡ್ಯೂಕ್ 790 ಬಿಡುಗಡೆಯ ಸನಿಹದಲ್ಲಿದ್ದು, ತದನಂತರ 390 ಅಡ್ವೆಂಚೆರ್, 790 ಅಡ್ವೆಂಚೆರ್ ಮತ್ತು 500 ಸಿಸಿ ವಿಭಾಗದಲ್ಲೂ ಮತ್ತೆರಡು ಹೊಸ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಡ್ಯೂಕ್ 790 ಬೈಕ್ ಸದ್ಯ ಸಿ‍‍ಕೆ‍ಡಿ ವಿಧಾನದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದ್ದು, ಪುಣೆಯಲ್ಲಿರುವ ಬಜಾಜ್ ಬೈಕ್ ಉತ್ಪಾದನಾ ಘಟಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರಾಟಕ್ಕೆ ಸಿದ್ದವಾಗಲಿದೆ. ಕೆಟಿ‍ಎಂ ಸಂಸ್ಥೆಯ ಮಿಡ್ಲ್ ವೇಟ್ ವಿಭಾಗದಲ್ಲಿರುವ ಈ ನೇಕೆಡ್ ರೋಡ್‍‍ಸ್ಟರ್ ಬೈಕ್ ಮಾದರಿಯಲ್ಲಿ ಎಲ್‍‍ಸಿ8ಸಿ 799 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರೆಲಲ್ ಟ್ವಿನ್ ಎಂಜಿನ್ ಜೋಡಣೆ ಮಾಡಿದ್ದು, ಈ ಬೈಕಿನಲ್ಲಿರುವ ಎಂಜಿನ್ 103-ಬಿಹೆಚ್‍ಪಿ ಹಾಗೂ 86-ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಈ ಎಂಜಿನ್‍‍ನಲ್ಲಿ 6 ಸ್ಪೀಡ್ ಗೇರ್‍‍ಬಾಕ್ಸ್ ಇರಲಿದ್ದು, ಈ ಬೈಕಿನಲ್ಲಿ ಪಿ‍ಎ‍ಎಸ್‍‍ಸಿ ಸ್ಲಿಪ್ ಅಸಿಸ್ಟ್ ಕ್ಲಚ್ ಹಾಗೂ ಕ್ವಿಕ್ ಶಿಫ್ಟ್ ಅಸಿಸ್ಟ್ ಇರಲಿದೆ. ಇದರ ಜೊತೆಗೆ ಈ ಬೈಕಿನಲ್ಲಿ ರೈಡ್ ಬೈ ವೈರ್ ಥ್ರಾಟಲ್ ಇರಲಿದ್ದು, ಸ್ಪೋರ್ಟ್, ಸ್ಟ್ರೀಟ್, ರೇನ್ ಹಾಗೂ ಟ್ರ್ಯಾಕ್ ಎಂಬ ನಾಲ್ಕು ವಿವಿಧ ಬಗೆಯ ರೈಡರ್ ಮೋಡ್‍‍ಗಳನ್ನು ಒದಗಿಸಲಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಇದಲ್ಲದೇ ಹೊಸ ಬೈಕಿನಲ್ಲಿ ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎ‍‍ಬಿ‍ಎಸ್ ಹಾಗೂ ವ್ಹೀಲ್ ಕಂಟ್ರೋಲ್‍‍ಗಳನ್ನು ಸಹ ನೀಡಲಾಗಿದೆ.

MOST READ: ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಈ ಬೈಕಿನಲ್ಲಿರುವ ಇನ್ನೊಂದು ವಿಶೇಷತೆಯೆಂದರೆ, ಈ ಬೈಕ್ ಸೂಪರ್ ಮೋಟೊ ಮೋಡ್ ನೀಡಲಿದ್ದು, ಇದರಿಂದಾಗಿ ಚಾಲಕರು ಹಿಂದಿರುವ ವ್ಹೀಲ್‍‍ನಲ್ಲಿನ ಎ‍‍ಬಿ‍ಎಸ್ ಸುರಕ್ಷೆಯನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಈ ಬೈಕಿನ ಮುಂಭಾಗದಲ್ಲಿ ಡಬ್ಲ್ಯು‍‍ಪಿ ಸೋರ್ಸಿನ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಬ್ರೇಕಿಂಗ್ ಅನ್ನು ಮುಂಭಾಗದಲ್ಲಿರುವ ಡಬಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿರುವ ಸಿಂಗಲ್ ಡಿಸ್ಕ್ ಗಳು ನಿಯಂತ್ರಿಸುತ್ತವೆ. ಡ್ಯೂಕ್ 390 ಬೈಕಿನ ರೀತಿಯಲ್ಲಿಯೇ ಡ್ಯೂಕ್ 790 ಬೈಕ್ ಸಹ ಪೂರ್ಣವಾದ ಎಲ್‍‍ಇ‍‍ಡಿ ಲೈಟಿಂಗ್ ಸೆಟ್‍ಅಪ್, ಸ್ಮಾರ್ಟ್ ಫೋನ್‍‍ಗಳಿಗಾಗಿ ಸುಧಾರಿತ ಟೆಕ್ನಾಲಜಿಯ ಟಿ‍ಎಫ್‍‍ಟಿ ಕ್ಲಸ್ಟರ್‍‍ನ ಬ್ಲೂಟೂಟ್ ಕನೆಕ್ಟಿವಿಟಿ ಹೊಂದಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಹೊಸ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಎಕ್ಸ್ ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 8.50 ಲಕ್ಷಗಳಾಗುವ ಸಾಧ್ಯತೆಗಳಿದ್ದು, ಟ್ರ್ಯಾಕ್ ಮತ್ತು ಸ್ಟ್ರೀಟ್ ಬೈಕ್ ಸವಾರಿಗೆ ಇದು ಮತ್ತಷ್ಟು ಬಲಿಷ್ಠ ಬೈಕ್ ಆವೃತ್ತಿಯಾಗಿ ಮಿಂಚಲಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ..!

ಹೀಗಾಗಿ ಡ್ಯೂಕ್ 790 ಬೈಕ್ ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪ್ಪಲ್, ಸುಜುಕಿ ಜಿ‍ಎಸ್‍ಎಕ್ಸ್-ಎಸ್750, ಕವಾಸಕಿ ಝಡ್900, ಡುಕಾಟಿ ಮಾನ್‍‍ಸ್ಟರ್ ಬೈಕುಗಳಿಗೆ ಪೈಪೋಟಿ ನೀಡಲಿದ್ದು, ಕೆಟಿಎಂ ಬೈಕ್ ಸರಣಿಯಲ್ಲಿ ಅಗ್ರಸ್ಥಾನದಲ್ಲಿದೆ.

Most Read Articles

Kannada
Read more on ಕೆಟಿಎಂ ktm
English summary
KTM Duke 790 Bookings Open. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X