Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೀಪಾವಳಿ ಹೊತ್ತಿಗೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ
ಡ್ಯೂಕ್ 125 ಮತ್ತು ಆರ್‌ಸಿ 125 ಬಿಡುಗಡೆಯ ನಂತರ ಬೈಕ್ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಕೆಟಿಎಂ ಸಂಸ್ಥೆಯು ಸದ್ಯದಲ್ಲೇ 390 ಅಡ್ವೆಂಚೆರ್ ಮತ್ತು ಡ್ಯೂಕ್ 790 ಹೊಸ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಬದಲಾದ ಸಮಯದಲ್ಲಿ ಕೆಟಿಎಂ ಇದೀಗ ದೀಪಾವಳಿ ಹೊತ್ತಿಗೆ ಡ್ಯೂಕ್ 790 ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಡ್ಯೂಕ್ 1290 ಆವೃತ್ತಿಯನ್ನು ಮಾರಾಟ ಮಾಡುತ್ತಿರುವ ಕೆಟಿಎಂ ಸಂಸ್ಥೆಯು ಭಾರತದಲ್ಲೂ ಕೂಡಾ ತನ್ನ ಜನಪ್ರಿಯ ಸೂಪರ್ ಬೈಕ್ ಆವೃತ್ತಿಗಳನ್ನು ಒಂದೊಂದಾಗಿ ಪರಿಚಯಿಸುತ್ತಿದೆ. ಇದರಲ್ಲಿ ಇದೀಗ ಡ್ಯೂಕ್ 790 ಬಿಡುಗಡೆಯ ಸನಿಹದಲ್ಲಿದ್ದು, ತದನಂತರ 390 ಅಡ್ವೆಂಚೆರ್, 790 ಅಡ್ವೆಂಚೆರ್ ಮತ್ತು 500 ಸಿಸಿ ವಿಭಾಗದಲ್ಲೂ ಮತ್ತೆರಡು ಹೊಸ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಡ್ಯೂಕ್ 790 ಬೈಕ್ ಸದ್ಯ ಸಿಕೆಡಿ ವಿಧಾನದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದ್ದು, ಪುಣೆಯಲ್ಲಿರುವ ಬಜಾಜ್ ಬೈಕ್ ಉತ್ಪಾದನಾ ಘಟಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರಾಟಕ್ಕೆ ಸಿದ್ದವಾಗಲಿದೆ.

ಕೆಟಿಎಂ ಸಂಸ್ಥೆಯು ಮಿಡ್ಲ್ ವೇಟ್ ವಿಭಾಗದಲ್ಲಿರುವ ಈ ನೇಕೆಡ್ ರೋಡ್‍ಸ್ಟರ್ ಬೈಕ್ ಮಾದರಿಯಲ್ಲಿ ಎಲ್‍ಸಿ8ಸಿ 799 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರೆಲಲ್ ಟ್ವಿನ್ ಎಂಜಿನ್ ಜೋಡಣೆ ಮಾಡಿದ್ದು, ಈ ಬೈಕಿನಲ್ಲಿರುವ ಎಂಜಿನ್ 103-ಬಿಹೆಚ್‍ಪಿ ಹಾಗೂ 86-ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.

ಈ ಎಂಜಿನ್‍ನಲ್ಲಿ 6 ಸ್ಪೀಡ್ ಗೇರ್‍ಬಾಕ್ಸ್ ಇರಲಿದ್ದು, ಈ ಬೈಕಿನಲ್ಲಿ ಪಿಎಎಸ್‍ಸಿ ಸ್ಲಿಪ್ ಅಸಿಸ್ಟ್ ಕ್ಲಚ್ ಹಾಗೂ ಕ್ವಿಕ್ ಶಿಫ್ಟ್ ಅಸಿಸ್ಟ್ ಇರಲಿದೆ. ಇದರ ಜೊತೆಗೆ ಈ ಬೈಕಿನಲ್ಲಿ ರೈಡ್ ಬೈ ವೈರ್ ಥ್ರಾಟಲ್ ಇರಲಿದ್ದು, ಸ್ಪೋರ್ಟ್, ಸ್ಟ್ರೀಟ್, ರೇನ್ ಹಾಗೂ ಟ್ರ್ಯಾಕ್ ಎಂಬ ನಾಲ್ಕು ವಿವಿಧ ಬಗೆಯ ರೈಡರ್ ಮೋಡ್‍ಗಳನ್ನು ಒದಗಿಸಲಿದೆ. ಈ ಬೈಕ್ ಬೇರೆ ಬಗೆಯ ರೈಡ್ ಸಹಾಯಗಳಾದ ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್ ಹಾಗೂ ವ್ಹೀಲ್ ಕಂಟ್ರೋಲ್‍ಗಳನ್ನು ಸಹ ನೀಡಲಿದೆ.

ಈ ಬೈಕಿನಲ್ಲಿರುವ ಇನ್ನೊಂದು ವಿಶೇಷತೆಯೆಂದರೆ, ಈ ಬೈಕ್ ಸೂಪರ್ ಮೋಟೊ ಮೋಡ್ ನೀಡಲಿದ್ದು, ಇದರಿಂದಾಗಿ ಚಾಲಕರು ಹಿಂದಿರುವ ವ್ಹೀಲ್‍ನಲ್ಲಿನ ಎಬಿಎಸ್ ಸುರಕ್ಷೆಯನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಈ ಬೈಕಿನ ಮುಂಭಾಗದಲ್ಲಿ ಡಬ್ಲ್ಯುಪಿ ಸೋರ್ಸಿನ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್‍ಗಳನ್ನು ಅಳವಡಿಸಲಾಗಿದೆ.

ಬ್ರೇಕಿಂಗ್ ಅನ್ನು ಮುಂಭಾಗದಲ್ಲಿರುವ ಡಬಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿರುವ ಸಿಂಗಲ್ ಡಿಸ್ಕ್ ಗಳು ನಿಯಂತ್ರಿಸುತ್ತವೆ. ಡ್ಯೂಕ್ 390 ಬೈಕಿನ ರೀತಿಯಲ್ಲಿಯೇ ಡ್ಯೂಕ್ 790 ಬೈಕ್ ಸಹ ಪೂರ್ಣವಾದ ಎಲ್‍ಇಡಿ ಲೈಟಿಂಗ್ ಸೆಟ್‍ಅಪ್, ಸ್ಮಾರ್ಟ್ ಫೋನ್‍ಗಳಿಗಾಗಿ ಸುಧಾರಿತ ಟೆಕ್ನಾಲಜಿಯ ಟಿಎಫ್‍ಟಿ ಕ್ಲಸ್ಟರ್‍ನ ಬ್ಲೂಟೂಟ್ ಕನೆಕ್ಟಿವಿಟಿ ಹೊಂದಿದೆ.
MOST READ: ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಹೊಸ ಕೆಟಿಎಂ ಡ್ಯೂಕ್ 790 ಬೈಕ್ ಎಕ್ಸ್ ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 8.50 ಲಕ್ಷಗಳಾಗುವ ಸಾಧ್ಯತೆಗಳಿದ್ದು, ಟ್ರ್ಯಾಕ್ ಮತ್ತು ಸ್ಟ್ರೀಟ್ ಬೈಕ್ ಸವಾರಿಗೆ ಇದು ಮತ್ತಷ್ಟು ಬಲಿಷ್ಠ ಬೈಕ್ ಆವೃತ್ತಿಯಾಗಿ ಮಿಂಚಲಿದೆ.
MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಹೀಗಾಗಿ ಡ್ಯೂಕ್ 790 ಬೈಕ್ ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪ್ಪಲ್, ಸುಜುಕಿ ಜಿಎಸ್‍ಎಕ್ಸ್-ಎಸ್750, ಕವಾಸಕಿ ಝಡ್900, ಡುಕಾಟಿ ಮಾನ್‍ಸ್ಟರ್ ಬೈಕುಗಳಿಗೆ ಪೈಪೋಟಿ ನೀಡಲಿದ್ದು, ಕೆಟಿಎಂ ಬೈಕ್ ಸರಣಿಯಲ್ಲಿ ಅಗ್ರಸ್ಥಾನದಲ್ಲಿದೆ.