ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ದೇಶದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಕೆಟಿಎಂ ಸಂಸ್ಥೆಯು ತನ್ನ ಬೈಕ್ ಉತ್ಪನ್ನ ಬೆಲೆ ಹೆಚ್ಚಳ ಮಾಡಿದ್ದು, ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ.

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಮತ್ತು ವಾಹನಗಳ ಬಿಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆ ಬೈಕ್ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಕೆಟಿಎಂ ಸಂಸ್ಥೆಯು, ಪ್ರತಿ ಬೈಕಿನ ಬೆಲೆಯನ್ನು ಶೇ.1.50ರಿಂದ ಶೇ.2.50ರಷ್ಟು ಹೆಚ್ಚಳ ಮಾಡಿ ಹೊಸ ದರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಹೊಸ ದರ ಪಟ್ಟಿಯಂತೆ ಕೆಟಿಎಂ ನಿರ್ಮಾಣದ ಬೈಕ್‌ಗಳಲ್ಲಿ ಅತಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ 125 ಡ್ಯೂಕ್ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಎಕ್ಸ್‌ಶೋರೂಂ ಬೆಲೆಗಳ ಪ್ರಕಾರ ವಿವಿಧ ಬೈಕ್‌ಗಳ ಮೇಲೆ ಗರಿಷ್ಠ ರೂ.6,416 ಮತ್ತು ಕನಿಷ್ಠ ರೂ.2,252 ಬೆಲೆ ಹೆಚ್ಚಳ ಮಾಡಲಾಗಿದೆ.

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಕೆಟಿಎಂ ಬೈಕ್‌ಗಳ ಹೊಸ ದರ ಪಟ್ಟಿ (ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ)

ಬೈಕ್ ಮಾದರಿಗಳು ಹೊಸ ದರ ಹಳೆಯ ದರ ಹೆಚ್ಚಳವಾದ ದರ
ಕೆಟಿಎಂ ಡ್ಯೂಕ್ 125 ರೂ. 1,24,416 ರೂ. 1,18,000 ರೂ. 6,416
ಕೆಟಿಎಂ ಡ್ಯೂಕ್ 200 ರೂ. 1,61,421 ರೂ. 1,59,168 ರೂ. 2,253
ಕೆಟಿಎಂ ಡ್ಯೂಕ್250 ರೂ. 1,96,672 ರೂ. 1,93,421 ರೂ. 3,251
ಕೆಟಿಎಂ ಡ್ಯೂಕ್390 ರೂ. 2,47,819 ರೂ. 2,43,562 ರೂ. 4,257
ಕೆಟಿಎಂ ಆರ್‌ಸಿ200 ರೂ. 1,89,990 ರೂ. 1,87,738 ರೂ. 2,252
ಕೆಟಿಎಂ ಆರ್‌ಸಿ390 ರೂ. 2,43,490 ರೂ. 2,40,234 ರೂ. 3,256
ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಇನ್ನು ಕಳೆದ ನವೆಂಬರ್‌ನಲ್ಲಿ ಡ್ಯೂಕ್ 125 ಬಿಡುಗಡೆಯ ನಂತರ ದೇಶಿಯ ಮಾರುಕಟ್ಟೆಗೆ ಮತ್ತಷ್ಟು ಹೊಸ ಬೈಕ್‌ಗಳನ್ನು ಪರಿಚಯಿಸುವ ಇರಾದೆಯಲ್ಲಿರುವ ಕೆಟಿಎಂ ಸಂಸ್ಥೆಯು, ಅಂಡ್ವೆಚರ್ ಪ್ರಿಯರಿಗಾಗಿ ಮುಂದಿನ ಕೆಲವೇ ದಿನಗಳಲ್ಲಿ 390 ಅಡ್ವೆಂಚರ್, 390 ಅಡ್ವೆಂಚರ್ ಆರ್, ಡ್ಯೂಕ್ 790, 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಎನ್ನುವ ಒಟ್ಟು ಐದು ಹೊಸ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಕೆಟಿಎಂ ಬಿಡುಗಡೆ ಮಾಡಲಿರುವ ಒಟ್ಟು 5 ಹೊಸ ಬೈಕ್‌ಗಳು ಸಂಪೂರ್ಣವಾಗಿ ಸಿಕೆಡಿ ನೀತಿಯಡಿ ಭಾರತದಲ್ಲಿ ಮಾರಾಟವಾಗಲಿದ್ದು, ಬೈಕ್‌ಗಳ ಬಿಡಿಭಾಗಗಳು ಮತ್ತು ಎಂಜಿನ್ ಮಾದರಿಯನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಇಲ್ಲಿ ಮರು ಜೋಡಣೆ ಮಾಡಿ ಮಾರಾಟ ಮಾಡಲಾಗುತ್ತೆ.

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಟಿಎಂ ಸಂಸ್ಥೆಯು ಈಗಾಗಲೇ 1290 ಸೂಪರ್ ಡ್ಯೂಕ್‌ನಂತಹ ಹೈ ಪರ್ಫಾಮೆನ್ಸ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಭಾರತದಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸೂಪರ್ ಬೈಕ್‌ಗಳ ಬೇಡಿಕೆಯಿಂದಾಗಿ ತನ್ನ ಜನಪ್ರಿಯ ಮಾದರಿಗಳನ್ನು ಇಲ್ಲೂ ಕೂಡಾ ಪರಿಚಯಿಸುತ್ತಿದೆ.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಕಳೆದ ನವೆಂಬರ್‌ನಲ್ಲೇ 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಬೈಕ್‌ಗಳನ್ನು ಇಟಾಲಿಯ ಮಿಲಾನ್ ಆಟೋ ಮೇಳದಲ್ಲಿ ಅನಾವರಣ ಮಾಡಿ ಮುಂದಿನ ಕೆಲವೇ ದಿನಗಳಲ್ಲಿ ಯರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿತ್ತು.

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಆದ್ರೆ ಈ ಹೊಸ ಬೈಕ್‌ಗಳನ್ನು ಭಾರತಕ್ಕೂ ಪರಿಚಯಿಸುವ ಮಾಹಿತಿಯನ್ನು ಗೌಪ್ಯವಾಗಿಸಿದ್ದ ಕೆಟಿಎಂ ಸಂಸ್ಥೆಯು ಇದೇ ಮೊದಲ ಬಾರಿ ಹೊಸ ಬೈಕ್‌ಗಳು ಭಾರತದಲ್ಲೂ ಖರೀದಿಗೆ ಲಭ್ಯವಾಗುವ ಸುಳಿವು ನೀಡಿದ್ದು, ಮಾಹಿತಿಗಳ ಪ್ರಕಾರ ಮುಂದಿನ ಜೂನ್ ಅಥವಾ ಜುಲೈ ಹೊತ್ತಿಗೆ ಹೊಸ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

MOST READ: ಮತದಾನ ಮಾಡುವ ಬೈಕ್ ಸವಾರರಿಗೆ ಹೀರೋ ಕಡೆಯಿಂದ ಸ್ಪೆಷಲ್ ಆಫರ್!

ಹೊಸ ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ- ಕೆಟಿಎಂನಿಂದ ಹೊಸ ದರ ಪಟ್ಟಿ ಬಿಡುಗಡೆ

ಇದರಲ್ಲಿ ಹೊಸ 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಬೈಕ್‌ಗಳು ನೋಡಲು 1290 ಅಡ್ವೆಂಚರ್ ಬೈಕ್‍‍ಗಳಂತೆಯೇ ವಿನ್ಯಾಸ ಹೊಂದಿದ್ದು, ಆಫ್-ರೋಡಿಂಗ್ ಕೌಶಲ್ಯಕ್ಕೆ ತಕ್ಕ ಹಾಗೆ ವಿನ್ಯಾಸಗೊಳಿಸಲಾಗಿದೆ. ಇವು ಟ್ವಿನ್ ಸಿಲೆಂಡರ್ ಮೋಟಾರ್‍‍ಸೈಕಲ್ ಆಗಿದ್ದು, ಅಡ್ವೆಂಚರ್ ರೈಡಿಂಗ್ ಪ್ರಿಯರಿಗೆ ಹೊಸ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ಕೆಟಿಎಂ ktm
English summary
KTM Hikes Prices Across Entire Range — Here’s The Updated Price List.
Story first published: Monday, April 15, 2019, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X