ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಆಟೋಮೊಬೈಲ್ ಉದ್ಯಮವು ಕುಸಿತ ಕಾಣುತ್ತಿರುವ ಈ ಸಂದರ್ಭದಲ್ಲಿ ಕೆಟಿ‍ಎಂ ಕಂಪನಿಯ ಬೈಕ್‍‍ಗಳು ಕಳೆದ 10 ತಿಂಗಳಲ್ಲಿ 50,000 ಯುನಿಟ್‍‍ಗಳಷ್ಟು ಮಾರಾಟವಾಗಿವೆ. 2018ರಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಕೆಟಿ‍ಎಂ 125 ಹೆಚ್ಚು ಮಾರಾಟವಾಗುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ.

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಆಸ್ಟ್ರೀಯಾ ಮೂಲದ ಕೆ‍‍ಟಿ‍ಎಂ ಬೈಕ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದ್ದು, ಹೆಚ್ಚು ಬೇಡಿಕೆಯನ್ನು ಹೊಂದಿರುವ ಬೈಕ್‍‍ಗಳಾಗಿವೆ. ಈ ಪೈಕಿ ಕೆ‍‍ಟಿಎಂ 125 ಡ್ಯೂಕ್ ಮತ್ತು ಆರ್‍‍ಸಿ ಮಾಡೆಲ್‍ ಬೈಕುಗಳು ಹೆಚ್ಚು ಮಾರಾಟವಾಗುತ್ತಿವೆ. ಕೇವಲ 10 ತಿಂಗಳಲ್ಲಿ ಈ ಎರಡು ಬೈಕ್‍‍ಗಳ 22,374 ಯು‍‍ನಿ‍‍ಟ್‍ಗಳನ್ನು ಒಟ್ಟಾರೆಯಾಗಿ ಮಾರಾಟ ಮಾಡಲಾಗಿದೆ. ಈ ಮೂಲಕ ಈ ಎರಡೂ ಬೈಕುಗಳು ಕೆ‍‍ಟಿ‍ಎಂ ಮಾರಾಟಕ್ಕೆ ಶೇ.44ರಷ್ಟು ಪಾಲನ್ನು ನೀಡಿವೆ.

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಕೆ‍ಟಿಎಂ ಡ್ಯೂಕ್ 125 ಮೊದಲ ಬಾರಿಗೆ 2018 ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಫೇರ್ಡ್ 125 ಆ‍‍ರ್‍‍ಸಿ ಮಾದರಿ ಬೈಕ್‍ ಈ ವರ್ಷದ ಜೂನ್ ತಿಂಗಳಲ್ಲಿ ಮಾರಾಟ ಆರಂಭಿಸಿದ್ದರು. ಭಾರತದ ಎಕ್ಸ್ ಶೋರೂಂ ಪ್ರಕಾರ ಕೆಟಿಎಂ ಡ್ಯೂಕ್ 125 ಪ್ರಸ್ತುತ ಬೆಲೆಯು ರೂ.1.35 ಲಕ್ಷ ಮತ್ತು ಆರ್‍‍ಸಿ 125 ಬೈಕ್‍ ಬೆಲೆ ರೂ.1.48 ಲಕ್ಷಗಳಾಗಿದೆ.

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಕೆ‍ಟಿಎಂ ಡ್ಯೂಕ್ ಶ್ರೇಣಿಯ ಬೈಕ್‍‍ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆಯನ್ನುಗಳಿಸಿದೆ ಅಲ್ಲದೇ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಬಳಿಕ ಹೆಚ್ಚು ಅಪಘಾತವಾಗುತ್ತದೆ ಎಂಬ ಅಪವಾದವಿತ್ತು ಅವುಗಳನೆಲ್ಲಾ ದಾಟಿ ಗ್ರಾಹಕರ ಗಮನಸೆಳೆಯುವಲ್ಲಿ ಯಶಿಸ್ವಿಯಾಗಿವೆ.

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಕೆಟಿಎಂ ಡ್ಯೂಕ್ 125 ಬೈಕ್‍ ಮತ್ತು 125 ಆರ್‍‍ಸಿ ಮಾದರಿ ಬೈಕ್ 124ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 9,250 ಆರ್‍‍ಪಿಎಂ ನಲ್ಲಿ 14.5 ಬಿಎ‍ಚ್‍ಪಿ ಪವರ್ ಮತ್ತು 8,000 ಆರ್‍‍ಪಿ‍ಎಂ ನಲ್ಲಿ 12 ಎನ್‍‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 6-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಕೆಟಿಎಂ ಡ್ಯೂಕ್ 125 ಬೈಕ್‍ ಮತ್ತು 125 ಆರ್‍‍ಸಿ ಮಾದರಿ ಬೈಕ್‍‍ಗಳು ತನ್ನದೇ ಶ್ರೇಣಿಯ ಕೆಟಿಎಂ ಡ್ಯೂಕ್ 200 ಮತ್ತು ಆರ್‍‍ಸಿ 200 ಬೈಕ್‍‍ಗಳ ರೀತಿಯ ಶೈಲಿ ಮತ್ತು ವಿನ್ಯಾಸವನ್ನು ಹೊಂದಿದೆ. ಡ್ಯೂಕ್ 200 ಮತ್ತು ಆರ್‍‍ಸಿ 200 ಬಗ್ಗೆ ಹೇಳುವುದಾದರೆ ಈ ಟ್ವಿನ್ ಬೈಕ್‍‍ಗಳು ಕಳೆದ 10 ತಿಂಗಳ ಅವಧಿಯಲ್ಲಿ 19,372 ಯು‍‍ನಿ‍ಟ್‍ಗಳು ಮಾರಾಟವಾಗಿದೆ. ತನ್ನ ಶ್ರೇಣಿಯಲ್ಲಿ ಮೊದಲ ಬಾರಿಗೆ ಕೆಟಿಎಂ ಡ್ಯೂಕ್ 200 ಮತ್ತು ಆರ್‍‍ಸಿ 200 ಬೈಕ್‍‍ಗಳು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬೈಕ್‍‍ಗಳಾಗಿದೆ.

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಕೆ‍ಟಿಎಂ ಡ್ಯೂಕ್ 250 ಮಾರಾಟದಲ್ಲಿ ಮೂರನೇ ಸಾಲಿನಲ್ಲಿದೆ. ಕಳೆದ 10 ತಿಂಗಳನಿಂದ ಕೆ‍ಟಿಎಂ 250 ಬೈಕಿನ 4,815 ಯುನಿ‍‍ಟ್‍‍ಗಳು ಮಾರಾಟವಾಗಿವೆ ಎಂದು ದಾಖಲಾಗಿದೆ. ಹೊಸ ಕೆಟಿಎಂ ಡ್ಯೂಕ್ 390 ಮತ್ತು ಆರ್‍‍ಸಿ 390 ಬೈ‍ಕ್‍ಗಳು ಕಳೆದ 10 ತಿಂಗಳ ಅವಧಿಯಲ್ಲಿ 3,396 ಬೈ‍‍ಕ್‍ಗಳ ಮಾರಾಟವಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ಕೆ‍ಟಿಎಂ ದೇಶಿಯ ಮಾರುಕಟ್ಟೆಯಲ್ಲಿ ಹೊಸ 790 ಡ್ಯೂಕ್ ಬೈಕ್ ಅನ್ನು ಬಿಡುಗಡೆ ಮಾಡಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಕೆ‍ಟಿಎಂ ಡ್ಯೂಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಸುಜುಕಿ ಜಿಝಡ್ಎಸ್-ಎಸ್750 ಬೈಕಿ‍ಗೆ ಪೈಪೋಟಿಯನ್ನು ನೀಡಲಿದೆ. ಬಹುನಿರೀಕ್ಷಿತ ಕೆ‍ಟಿಎಂ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8 ಲಕ್ಷಗಳಾಗುವ ಸಾಧ್ಯತೆಗಳಿವೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಭರ್ಜರಿಯಾಗಿ ಮಾರಾಟವಾಗುತ್ತಿವೆ ಕೆಟಿಎಂ ಡ್ಯೂಕ್ ಬೈಕ್‍‍ಗಳು

ದೇಶಿಯ ಮಾರುಕಟ್ಟೆಯಲ್ಲಿ ಕೆ‍ಟಿಎಂ ಬೈಕ್ ಹೊಸ ಹವಾ ಸೃಷ್ಟಿಸಿರುವುದು ಅಂತು ಸತ್ಯ. ಕೆ‍ಟಿಎಂ ಬೈಕ್ ತನ್ನ ದಕ್ಷತೆ ಮತ್ತು ಕಾರ್ಯಕ್ಷಮತೆಯಿಂದ ಗ್ರಾಹಕರ ಗಮನ ಸೆಳೆದಿದೆ. ಕೆ‍ಟಿಎಂ ಶ್ರೇಣಿಯ ಎಲ್ಲಾ ಬೈಕ್‍‍ಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿರುವುದು ಕಂಪನಿಗೆ ವರವಾಗಿದೆ. ಕೆಟಿಎಂ ಯುವಜನತೆಯ ಮೆಚ್ಚಿನ ಬೈಕ್‍‍ಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ.

Article Published On: Monday, September 23, 2019, 12:14 [IST]
English summary
KTM 125 Duke & RC Sales In India: Boost KTM Sales To 50,000 Units In 10 Months - Read in Kannada
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+