ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಬೈಕ್ ಡಿಸೈನ್ ಬಹಿರಂಗ
ಮೋಟಾರ್ ಸೈಕಲ್ ಗಳನ್ನು ಖರೀದಿಸುವಾಗ ಬಹುತೇಕ ಜನರು ಬ್ರಾಂಡ್, ದೃಢತೆ ಮತ್ತು ವಿಶ್ವಾಸರ್ಹತೆಯನ್ನು ನೋಡಿದರೆ ಕೆಲವರು ವಿಭಿನ್ನ ಮತ್ತು ವಿಶಿಷ್ಟವಾದುದನ್ನು ನೋಡುತ್ತಾರೆ. ಅಂತಹ ಕೆಲವು ಮಂದಿಗಾಗಿಯೇ ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಬೈಕ್ ಬಿಡುಗಡೆ ಮಾಡುತ್ತಿದೆ. ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಒಂದು ವಿಭಿನ್ನವಾದ, ನಾರ್ಟನ್ ಕಮಾಂಡೋ 961 ಮಾದರಿಯ, ಕ್ಲಾಸಿಕ್ ಸೌಂದರ್ಯದ ಲಿಮಿಟೆಡ್ ಎಡಿಷನ್ ಬೈಕ್ ಇದಾಗಿದೆ.

ಕೇವಲ 77 ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಬೈಕ್ ಗಳನ್ನು ತಯಾರಿಸುತ್ತಿದ್ದು, ಮೂಲಗಳ ಪ್ರಕಾರ ಒಂದು ಬೈಕನ್ನು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬ್ರಿಟ್ಲಿಂಗ್ ವಿಭಿನ್ನ ಮತ್ತು ವಿಶೇಷವಾಗಿ ವಾಚ್ ತಯಾರಿಸುವ ಜಾಗತಿಕ ಕಂಪನಿಗಳಲ್ಲಿ ಒಂದಾಗಿದ್ದು, ವಿಶೇಷವಾದ ಬೈಕ್‍ಗಳನ್ನು ಸಹ ನಿರ್ಮಾಣ ಮಾಡುತ್ತಿದೆ.
ಪ್ರತಿಯೊಂದು ಬ್ರಿಟ್ಲಿಂಗ್ ವಾಚ್ ವಿಶೇಷ ಕೌಶಲ್ಯವನ್ನು ಹೊಂದಿದ್ದು , ಬ್ರಿಟ್ಲಿಂಗ್ ನಿಂದ ತಯಾರಾದ ವಾಚ್ ಗಳು ಪ್ರಪಂಚದ್ಯಾಂತ ಶ್ರೀಮಂತರ ಕೈಯನ್ನು ಅಲಂಕರಿಸಿವೆ. ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಮೋಟಾರ್ ಸೈಕಲ್ ಬ್ರಿಟ್ಲಿಂಗ್ ಸಹಯೋಗದೊಂದಿಗೆ ತಯಾರಾಗುತ್ತಿದ್ದು ಬ್ರಿಟ್ಲಿಂಗ್ ವಾಚ್ ನಂತೆಯೇ ವಿಶಿಷ್ಟವಾಗಿರಲಿದೆ.

ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಬೈಕನ್ನು ಬ್ರಿಟನಲ್ಲಿರುವ ಐಕಾನಿಕ್ ಮೋಟಾರ್ ಸೈಕಲ್ ಕಂಪನಿ ತಯಾರಿಸಲಿದ್ದು ನಂತರ ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಮತ್ತು ನಾರ್ಟನ್ ಕಮಾಂಡೊ ಮಧ್ಯೆ ಹಲವು ಭಿನ್ನತೆಗಳಿವೆ.

ಬ್ರಿಟ್ಲಿಂಗ್ ಸ್ಪೋರ್ಟ್ ವಿಶಿಷ್ಟ ಹಾಗೂ ವಿಶೇಷ ಬಣ್ಣಗಳನ್ನು ಹೊಂದಿರಲಿದ್ದು, ಸ್ವರ್ಣ ಲೇಪಿತ ಎರಡು ಬಗೆಯ ಸಿಲ್ವರ್ ಮತ್ತು ಕಪ್ಪು ಬಣ್ಣಗಳನ್ನು ಹೊಂದಿರಲಿದೆ. ಲಿಮಿಟೆಡ್ ಎಡಿಷನ್ ಬೈಕ್ ಎಂದು ಜನಗಳಿಗೆ ತಿಳಿಸುವ ಉದ್ದೇಶದಿಂದ ಪ್ಯಾನೆಲ್ ನ ಒಂದು ಬದಿಯಲ್ಲಿ ಕಮಾಂಡೋ ಬ್ಯಾಡ್ಜ್ ನಲ್ಲಿ ನಂಬರ್ ಇರಲಿದೆ.
MOST READ: ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಇದು ಹೊಸ ಸೀಟಿನ ವಿನ್ಯಾಸವನ್ನು ಹೊಂದಿರಲಿದ್ದು ಸೀಟಿನ ಮೇಲೆ ಬ್ರಿಟ್ಲಿಂಗ್ ಲೊಗೊ ಇರಲಿದೆ. ಸೀಟಿನ ಮೇಲೆ ಇರುವ ಲೆದರ್ ಮಾತ್ರ ಭಿನ್ನವಾಗಿರದೆ ಅದರ ಶೇಪ್ ಕೂಡ ವಿಭಿನ್ನವಾಗಿರಲಿದೆ. ಹೆಡ್ ಲ್ಯಾಂಪ್ ಮತ್ತು ಮೋಟಾರ್ ಬೈಕ್ ಸುತ್ತ ಕ್ರೋಮ್ ಬಣ್ಣವಿರಲಿದೆ. ಬ್ರಿಟ್ಲಿಂಗ್ ಲೊಗೊವನ್ನು ಎಂಜಿನ್ ಕವರಿನ ಮೇಲೂ ಅಳವಡಿಸಲಾಗಿದೆ.
ಈ ಬೈಕ್ ಮೊದಲಿನಂತೆಯೇ ಏರ್ ಮತ್ತು ಆಯಿಲ್ ಕೂಲ್ 961 ಸಿಸಿ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಂದಿರಲಿದೆ. ಯಾವುದೇ ಮೆಕಾನಿಕಲ್ ಬದಲಾವಣೆಗಳನ್ನು ಮಾಡಲಾಗಿಲ್ಲ, ಮೊದಲಿನಂತೆಯೇ ಗರಿಷ್ಟ 80 ಬಿ ಹೆಚ್ ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಬಿಡುಗಡೆ ಮಾಡುತ್ತದೆ. 5 ಸ್ಪೀಡಿನ ಗೇರ್ ಬಾಕ್ಸ್ ಮುಂದಿನ ಚಕ್ರವನ್ನು ಚಾಲನೆ ಮಾಡುತ್ತದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಮುಂದಿನ ದಿನಗಳಲ್ಲಿ ಅಪರೂಪದ ಬೈಕ್ ಆಗುವುದರಲ್ಲಿ ಅನುಮಾನವಿಲ್ಲ. ಅದು ಹಳೆ ಮಾದರಿಯ ಕೆಫೆ ರೇಸರ್ ಸ್ಟೈಲ್ ಬ್ರಿಟ್ಲಿಂಗ್ ಡಿಸೈನ್ ಟಚ್ ಮತ್ತು ಹಳೆ ತಲೆಮಾರಿನ ಬಿಗ್ ಬೋರ್ ಪ್ಯಾರಲೆಲ್ ಟ್ವಿನ್ ಎಂಜಿನ್ ಗಳನ್ನು ಹೊಂದಿದೆ. ಇದು ನಾರ್ಟನ್ ಬ್ರಿಟ್ಲಿಂಗ್ ಸ್ಪೋರ್ಟ್ ಅನ್ನು ಅಪರೂಪವಾಗಿಸಿದೆ. ವಾಸ್ತವಾಂಶದಲ್ಲಿ ಕೇವಲ 77 ಬೈಕ್ ಗಳನ್ನು ಬಿಡುಗಡೆ ಮಾಡುತ್ತಿರುವುದು ಅದರ ವೈಶಿಷ್ಟ್ಯವನ್ನು ತಿಳಿಸುತ್ತದೆ.


Click it and Unblock the Notifications