ಸೂಪರ್ ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬೈಕ್ ಕ್ರೇಜ್ ಎಲ್ಲರಿಗೂ ಗೊತ್ತಿರುವ ವಿಷಯ. ಕ್ರಿಕೆಟ್‌ನಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಬಳಿಯಿರುವ ಬೈಕುಗಳಲ್ಲಿ ರಾಂಚಿ ಸುತ್ತಮುತ್ತ ಜಾಲಿ ರೈಡ್ ಹೋಗುತ್ತಾರೆ. ಕೇವಲ ಬೈಕ್ ಮಾತ್ರವಲ್ಲ, ತನ್ನ ಬಳಿಯಿರುವ ಕಾರುಗಳಲ್ಲೂ ಸುತ್ತು ಹಾಕುವುದುಂಟು.

ಸೂಪರ್‍‍ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಕ್ಯಾಪ್ಟನ್ ಕೂಲ್ ಧೋನಿ ಮನೆಯಲ್ಲಿರುವ ಬೈಕ್‌ಗಳ ಗ್ಯಾರೇಜ್‌ನಲ್ಲಿ ಹಳೆಯ ಮಾಡೆಲ್‌ಗಳಿಂದ ಹಿಡಿದು ಹೊಸ ಮಾಡೆಲ್‌ಗಳವರೆಗೆ, ಸಾಧಾರಣ ಮೊತ್ತದಿಂದ ದುಬಾರಿ ಬೆಲೆಯ ಬೈಕ್‌ಗಳ ಸಂಗ್ರಹವೇ ಇದೆ. ಧೋನಿ 2015ರಲ್ಲಿ ಭಾರತದಲ್ಲಿ ಕವಾಸಕಿ ನಿಂಜಾ ಎಚ್ 2 ಸೂಪರ್‍‍ಬೈಕ್ ಅನ್ನು ಬಿಡುಗಡೆಯಾದ ಬಳಿಕ ಈ ಬೈಕ್ ಅನ್ನು ಖರೀದಿಸಿದ ಮೊದಲ ವೈಕ್ತಿ ಎನಿಸಿಕೊಂಡರು. 2015ರಲ್ಲಿ ಭಾರತದ ಎಕ್ಸ್ ಶೋರೂಂ ಪ್ರಕಾರ 29 ಲಕ್ಷ ದರ ಹೊಂದಿತ್ತು.

ಕ್ಯಾಪ್ಟನ್ ಕೂಲ್ ಮಹಿರವರಿಗೆ ಬೈಕುಗಳ ಕ್ರೇಜ್ ಇರುವುದು ತಿಳಿದ ವಿಷಯ. ಆದರೆ ಅವರು ಸಾರ್ವಜನಿಕವಾಗಿ ಬೈಕ್ ರೈಡ್ ಮಾಡಿರುವುದು ಕಡಿಮೆ. ಧೋನಿ ತನ್ನ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣದ ಕವಾಸಕಿ ಎಚ್‍2 ಸೂಪರ್‍‍ಬೈಕ್‍‍ನಲ್ಲಿ ರಾಂಚಿ ಅಂತರ್‍‍ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬೈಕ್ ರೈಡ್ ಮಾಡುವ ವೀಡಿಯೊವನ್ನು ಅಪ್‍‍ಲೋಡ್ ಮಾಡಲಾಗಿದೆ.

ಸೂಪರ್‍‍ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಬಿಗ್ ಕವಾಸಕಿ ಎಚ್2 ಇದೀಗ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ವೇಗದ ರೋಡ್-ಲೀಗಲ್ ಬೈಕ್‍‍ಗಳಲ್ಲಿ ಒಂದಾಗಿದೆ. ಧೋನಿ ಬೈಕ್ ಬಗ್ಗೆ ಹೆಚ್ಚು ಕ್ರೆಜ್ ಹೊಂದಿದ್ದಾರೆ, ಕ್ಯಾಪ್ಟನ್ ಕೂಲ್ ಧೋನಿ ಮನೆಯಲ್ಲಿರುವ ಬೈಕ್‌ಗಳ ಗ್ಯಾರೇಜ್‌ನಲ್ಲಿ ಹಳೆಯ ಮಾಡೆಲ್‌ಗಳಿಂದ ಹಿಡಿದು ಹೊಸ ಮಾಡೆಲ್‌ನವರೆಗೆ ಬೈಕ್‌ಗಳ ಸಂಗ್ರಹವೇ ಇದೆ.

ಸೂಪರ್‍‍ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಧೋನಿ ಬೈಕುಗಳ ಸಂಗ್ರಹದಲ್ಲಿ ಅಲ್ಟ್ರಾ-ಅಪರೂಪದ ಕಾನ್ಫೆಡರೇಟ್ ಹೆಲ್‌ಕ್ಯಾಟ್ ಎಕ್ಸ್ 132 ಜೊತೆಗೆ ಡುಕಾಟಿ 1098, ಕವಾಸಕಿ ನಿಂಜಾ ಎಕ್ಸ್ ಡ್‌ಎಕ್ಸ್ 14 ಆರ್, ಹಾರ್ಲೆ ಡೇವಿಡ್ಸನ್ ಫ್ಯಾಟ್‌ಬಾಯ್, ಮತ್ತು ಯಮಹಾ ವೈಜೆಡ್ 600 ಥಂಡರ್‌ಕ್ಯಾಟ್ ಮುಂತಾದ ಹಲವಾರು ಆಕರ್ಷಕ ಬೈಕ್‍‍ಗಳಿವೆ. ಅವರ ಬಳಿ ಯಮಹಾ ಆರ್‌ಎಕ್ಸ್ 100 ಮತ್ತು ಆರ್‌ಡಿ 350 ಬೈಕುಗಳಿವೆ. ಇವು ಅವರ ನೆಚ್ಚಿನ ಬೈಕುಗಳು.

ಸೂಪರ್‍‍ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಕಳೆದ ತಿಂಗಳ ಹಿಂದಷ್ಟೇ ಕ್ರಿಕೆಟರ್ ಮಹೀಂದ್ರ ಸಿಂಗ್ ಧೋನಿ ತಮ್ಮ ಕನಸಿನ ಕಾರು ಮಾದರಿಯಾದ ಜೀಪ್ ಗ್ರ್ಯಾಂಡ್ ಚರೋಕಿ ಎಸ್‌ಯುವಿಯನ್ನು ಖರೀದಿ ಮಾಡಿದ್ದರು. ಧೋನಿ ಗ್ಯಾರೇಜ್‌ನಲ್ಲಿ ಜೀಪ್ ಸಂಸ್ಥೆಯ ಹೊಸ ಕಾರು ಒಂದು ಸೇರ್ಪೆಡೆಯಾಗಿದೆ. ಇದರ ಬೆಲೆ ರೂ.1.6 ಕೋಟಿ ಹೊಂದಿದೆ. ಈ ಎಸ್‍ಯು‍ವಿಯು 6.2 ಲೀಟರ್ ಹೆಲ್‍ಕಟ್ ಎಂಜಿನ್ 707 ಬಿಎ‍ಚ್‍ಪಿ ಪವರ್ ಮತ್ತು 875 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಪವರ್‍‍ಫುಲ್ ಎಸ್‍‍ಯು‍ವಿಯಾಗಿದೆ.

ಸೂಪರ್‍‍ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಈ ಎಸ್‍ಯುವಿ‍ಯು ಕೇವಲ 3.62 ಸೆಕೆಂಡ್‍‍ಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಮುಟ್ಟುತ್ತದೆ. ಧೋನಿ ಲಡಾಖ್‍ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಈ ಕಾರಿನ ಡೆಲಿವರಿಯನ್ನು ಸ್ವೀಕರಿಸಿದ ಅವರ ಪತ್ನಿ ಕಾರಿನ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸೂಪರ್‍‍ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಕವಾಸಕಿ ನಿಂಜಾ ಎಚ್‍2 ಬೈಕಿನ ಪವರ್ ಹೆಚ್ಚಿಸಲು ಸೂಪರ್‍‍ಚಾರ್ಜ್‍‍ರ್ ಹೊಂದಿದೆ. ಇದು ಜಾಗತಿಕವಾಗಿ ಮಾರಾಟವಾಗುವ ಏಕೈಕ ಸೂಪ‍ರ್‍‍ಜಾರ್ಜ್ಡ್ ಮಾಸ್ ಉತ್ಪಾದನಾ ಬೈಕ್ ಆಗಿದೆ. ಕವಾಸಕಿ ನಿಂಜಾ ಎಚ್‍2,998 ಸಿಸಿ ಲಿಕ್ವಿಡ್-ಕೂಲ್ಡ್, ಇನ್ಲೈನ್-ನಾಲ್ಕು ಮೋಟಾರ್ 11,000 ಆರ್‍‍ಪಿಎಂನಲ್ಲಿ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 10,500 ಆರ್‍‍ಪಿಎಂ‍ನಲ್ಲಿ 113.5 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಪವರ್ ಉತ್ಪಾದನೆಯನ್ನು 207 ಬಿ‍‍ಹೆ‍‍ಚ್‍‍ಪಿ ಪವರ್ ಹೆಚ್ಚಿಸಿರುವ ರಾಮ್ ಏರ್ ಅನ್ನು ಸೇರಿಸುವ ಆಯ್ಕೆಯೂ ಇದಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸೂಪರ್‍‍ಬೈಕಿನಲ್ಲಿ ಕಣ್ಣಿಗೆ ಬಿದ್ದ ಎಂ‍ಎಸ್ ಧೋನಿ

ಬೈಕ್ ಮೋಟೊ ಜಿಪಿ ಸ್ಟೈಲ್ ಡಾಗ್-ರಿಂಗ್ ಗೇರ್‍‍ಬಾಕ್ಸ್ ಅನ್ನು ಒಳಗೊಂಡಿದೆ. ಭಾರತದಲ್ಲಿ ಬಿಡುಗಡೆಯಾದ ಮೊದಲನೆಯ ಬೈಕ್ ಅನ್ನು ಧೋನಿರವರು ಖರೀದಿಸಿದ್ದಾರೆ. ಈ ಬೈಕುಗಳನ್ನು ಖರೀದಿಸುವವರು ಬೆರಳೆಣಿಕೆಯಷ್ಟು ಜನರು ಮಾತ್ರ. ಈ ಬೈಕಿನ ಪ್ರಸ್ತುತ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.34.50 ಲಕ್ಷ ಹೊಂದಿದೆ.

Most Read Articles

Kannada
English summary
MS Dhoni spotted riding his Kawasaki H2 Superbike for the first time - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X