ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಎಂವಿ ಅಗಸ್ಟಾ ಕಂಪನಿಯು ಭಾರತದಲ್ಲಿ ಮೂರು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದೆ. ಎಂವಿ ಅಗಸ್ಟಾ ಕಂಪನಿಯು, ಡ್ರಾಗ್‍‍ಸ್ಟರ್ ಸರಣಿಯ 800 ಆರ್‍ಆರ್, 800 ಆರ್‍ಆರ್ ಅಮೇರಿಕಾ ಹಾಗೂ 800 ಆರ್‍ಆರ್ ಪಿರೆಲಿ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಎಂವಿ ಅಗಸ್ಟಾ 800 ಆರ್‍ಆರ್ ಡ್ರಾಗ್‍‍ಸ್ಟರ್ ಹಾಗೂ 800 ಆರ್‍ಆರ್ ಅಮೇರಿಕಾ ಡ್ರಾಗ್‍‍ಸ್ಟರ್ ಬೈಕುಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.18.73 ಲಕ್ಷಗಳಾದರೆ, ಎಂ‍‍ವಿ ಅಗಸ್ಟಾ 800 ಆರ್‍ಆರ್ ಪಿರೆಲಿ ಡ್ರಾಗ್‍‍ಸ್ಟರ್ ಬೈಕಿನ ಬೆಲೆ ರೂ.21.5 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಈ ಮೂರು ಸೂಪರ್‍‍‍ಬೈಕುಗಳು 798ಸಿಸಿಯ ಮೂರು ಸಿಲಿಂಡರ್ ಎಂಜಿನ್ ಹೊಂದಿವೆ. ಈ ಎಂಜಿನ್ 12,300 ಆರ್‍‍ಪಿ‍ಎಂನಲ್ಲಿ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 10,100 ಆರ್‍‍ಪಿ‍ಎಂನಲ್ಲಿ 87 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

168 ಕೆ.ಜಿ ತೂಕವನ್ನು ಹೊಂದಿರುವ ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 244 ಕಿ.ಮೀಗಳಾಗಿದೆ. ಈ ಎಲ್ಲಾ ಮೂರು ಬೈಕುಗಳ ಮುಂಭಾಗದಲ್ಲಿ 43 ಎಂಎಂ ಸಸ್ಪೆಂಷನ್ ಸೆಟ್‍ಅಪ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ. ಇವುಗಳು ಪ್ರಿಲೋಡೆಡ್ ಆಗಿದ್ದು, ರಿಬೌಂಡ್ ಅಡ್ಜಸ್ಟಬಿಲಿಟಿಯಾಗಿವೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಗಳಿವೆ. ಎಂವಿ ಅಗಸ್ಟಾ 800 ಆರ್‍ಆರ್ ಹಾಗೂ 800 ಆರ್‍ಆರ್ ಅಮೇರಿಕಾ ಬೈಕುಗಳು 17 ಇಂಚಿನ 120/70 ಹಾಗೂ 200/50 ಪ್ರೊಫೈಲ್ ಟಯರ್‍‍ಗಳನ್ನು ಹೊಂದಿವೆ. ಎಂವಿ ಅಗಸ್ಟಾ 800 ಆರ್‍ಆರ್ ಪಿರೆಲಿ ಬೈಕ್ ಸಹ 17 ಇಂಚಿನ ವ್ಹೀಲ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಮುಂಭಾಗದಲ್ಲಿ 120/70 ಪ್ರೊಫೈಲ್‍‍ನ ಟಯರ್‍‍ಗಳಿದ್ದರೆ, ಹಿಂಭಾಗದಲ್ಲಿ 200/55 ಪ್ರೊಫೈಲ್‍‍ನ ಟಯರ್‍‍ಗಳಿವೆ. 800 ಆರ್‍ಆರ್ ಪಿರೆಲಿ ಬೈಕಿನ ಹೆಸರೇ ಹೇಳುವಂತೆ ಈ ಬೈಕ್ ಎರಡೂ ಬದಿಯಲ್ಲಿ ಪಿರೆಲಿ ಡಯಾಬ್ಲೊ ಸೂಪರ್‍‍ಕೋರ್ಸಾ ರಬ್ಬರ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಈ ಮೂರೂ ಬೈಕುಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಿಲ್ಲ. ಆದರೆ 800 ಆರ್‍ಆರ್ ಅಮೇರಿಕಾ ಡ್ರಾಗ್‍‍ಸ್ಟರ್ ಬೈಕಿನ ಕೇವಲ 200 ಯುನಿಟ್‍‍ಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಡ್ರಾಗ್‍‍ಸ್ಟರ್ 800 ಆರ್‍ಆರ್ ಬೈಕ್ ಅನ್ನು ಐಸ್ ಪರ್ಲ್ ವೈಟ್/ಡಾರ್ಕ್ ಮ್ಯಾಟ್ ಗ್ರೇ ಹಾಗೂ ನಾರ್ಡೊ ಗ್ರೇ/ಡಾರ್ಕ್ ಮೆಟಾಲಿಕ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಡ್ರಾಗ್‍‍ಸ್ಟರ್ 800 ಆರ್‍ಆರ್ ಅಮೇರಿಕಾ ಬೈಕ್ ಅನ್ನು ಅಮೇರಿಕಾದ ಧ್ವಜದಿಂದ ಪ್ರೇರಿತವಾಗಿರುವ ವಿಶೇಷವಾದ ಲಿವರಿಯೊಂದಿಗೆ ಮಾರಾಟ ಮಾಡಲಾಗುವುದು. ಎಂವಿ ಅಗಸ್ಟಾ ಡ್ರಾಗ್‍‍ಸ್ಟರ್ 800 ಆರ್‍ಆರ್ ಪಿರೆಲಿ ಬೈಕ್ ಅನ್ನು ಮ್ಯಾಟ್ ಬ್ಲಾಕ್/ಪಿರೆಲಿ ಯೆಲ್ಲೊ ಹಾಗೂ ಐಸ್ ಪರ್ಲ್ ವೈಟ್/ಅಮೇರಿಕಾ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಇಟಲಿ ಮೂಲದ ಸೂಪರ್‍‍ಬೈಕುಗಳ ತಯಾರಕ ಕಂಪನಿಯಾದ ಎಂವಿ ಅಗಸ್ಟಾ ತನ್ನ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಕೈನೆಟಿಕ್ ಮೋಟೊರಾಯಲ್‍ ಮೂಲಕ ಮಾರಾಟ ಮಾಡಲಿದೆ. ಕೈನೆಟಿಕ್ ಮೋಟೊರಾಯಲ್ ಭಾರತದಲ್ಲಿ ಎಂವಿ ಅಗಸ್ಟಾ ಕಂಪನಿಯ ಬೈಕುಗಳ ಜೊತೆಗೆ ಇತರ ಕಂಪನಿಯ ಬೈಕುಗಳನ್ನು ಸಹ ಮಾರಾಟ ಮಾಡುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಕೈನೆಟಿಕ್ ಮೋಟೊರಾಯಲ್ ಭಾರತದಲ್ಲಿ ಸದ್ಯಕ್ಕೆ ಥಾಣೆ-ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೊಚ್ಚಿ ಹಾಗೂ ವಾಶಿಯಲ್ಲಿ ಶೋರೂಂಗಳನ್ನು ಹೊಂದಿದೆ. ಈ ಶೋರೂಂಗಳಲ್ಲಿ ಹಲವಾರು ಕಂಪನಿಗಳ ಪ್ರೀಮಿಯಂ ಬೈಕುಗಳನ್ನು ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಎಂವಿ ಅಗಸ್ಟಾ 800 ಆರ್‍ಆರ್ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಂವಿ ಅಗಸ್ಟಾ ದೇಶಿಯ ಮಾರುಕಟ್ಟೆಯಲ್ಲಿರುವ ಇಟಲಿ ಮೂಲದ ಹಲವು ಜನಪ್ರಿಯ ಕಂಪನಿಗಳ ಪೈಕಿ ಒಂದಾಗಿದೆ. ಕಂಪನಿಯು, ಭಾರತದಲ್ಲಿ ತನ್ನ ಸೂಪರ್‍‍ಬೈಕುಗಳನ್ನು ಕೈನೆಟಿಕ್ ಮೋಟೊರಾಯಲ್ ಮೂಲಕ ಮಾರಾಟ ಮಾಡುತ್ತದೆ. ಕೈನೆಟಿಕ್ ಮೋಟೊರಾಯಲ್ ಸದ್ಯಕ್ಕೆ ಭಾರತದ ಹೊಸ ನಗರಗಳಲ್ಲಿ ಹೊಸದಾಗಿ ಶೋರೂಂಗಳನ್ನು ತೆರೆಯಲು ಪಾಲುದಾರರನ್ನು ಎದುರು ನೋಡುತ್ತಿದೆ.

More from DriveSpark

Article Published On: Thursday, October 10, 2019, 10:55 [IST]
English summary
MV Agusta 800 RR Dragster Series Launched In India: Prices Start At Rs 18.73 Lakh - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+