ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂವಿ ಅಗಸ್ಟಾ ಟೂರಿಸ್ಮೊ ವೆಲೊಚೆ 800
ಎಂವಿ ಅಗಸ್ಟಾ ತಮ್ಮ ಮೊದಲ ಸ್ಪೋರ್ಟ್ ಟೂರರ್ ಆವೃತ್ತಿಯ ಟುರಿಸ್ಮೊ ವೆಲೋಸ್ 800 ಅನ್ನು ಆಗಸ್ಟ್ 29 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದ್ದಾರೆ. ಈಗಗಾಲೇ ಭಾರತಕ್ಕೆ ಬೈಕ್‍ಗಳನ್ನು ರಾವನಿಸಿದ್ದು, ಎಲ್ಲಾ ಡೀಲರ್‍ಗಳಿಗೆ ವಿತರಿಸಲಾಗಿದೆ. ಟುರಿಸ್ಮೊ ವೆಲೋಸ್ 800 ಬೈಕಿಗೆ ಭಾರತದ ಎಕ್ಸ್ ಶೋ ರೂಂನ ಬೆಲೆ ರೂ. 19.5 ರಿಂದ 20 ಲಕ್ಷದವರಿಗೆ ಇದೆ.

ಟೂರಿಸ್ಮೊ ವೆಲೊಚೆ 800800 ಬೈಕನ್ನು ಭಾರತದ್ಯಾಂತ ಇರುವ ಮೋಟೋರಾಯಲ್ ಶೋ ರೂಂನಲ್ಲಿ ಮಾರಟ ಮಾಡುತ್ತಾರೆ. ಹೊಸ ಬೈಕನ್ನು ಬಿಡುಗಡೆ ಮಾಡುವ ಸಮಯದಲ್ಲಿ ನವಿ ಮುಂಬೈನಲ್ಲಿ ಹೊಸ ಡೀಲರ್‍ಗಳ ಸೇರ್ಪಡೆಯಾಗಲಿದೆ.

ಎಂವಿ ಅಗಸ್ಟಾ ಎಂದಾಗ ಬೈಕ್ ಪ್ರಿಯರಿಗೆ ಮೊದಲಿಗೆ ಬರುವುದು ಇಟಾಲಿ ಶೈಲಿಯ ಆಕರ್ಷಕವಾದ ವಿನ್ಯಾಸಗಳಿಂದ ಕೂಡಿದ ಬೈಕು. ಬೈಕಿನ ಲುಕ್ ಮನಮೋಹಕವಾಗಿದ್ದು, ಬೈಕ್ ನೋಡಿದವರು ಇದರ ಲುಕ್‍ಗೆ ಕ್ಲೀನ್ ಬೋಲ್ಡ್ ಆಗ್ತಾರೆ.

ಬೈಕಿನ ವಿನ್ಯಾಸದಲ್ಲಿ ಪ್ರಮುಖವಾಗಿ ಕಾಣುವಂತಹದು ಪ್ಲೋಟಿಂಗ್ ರೇರ್ ಸೀಟ್ ವಿನ್ಯಾಸ, ಟರ್ನ್ ಸಿಗ್ನಲ್, ಇಂಟಿಗ್ರೇಟೆಡ್ (ಡಿಆರ್‌ಎಲ್) ಡೇಟೈಮ್ ರನ್ನಿಂಗ್ ಲೈಟ್ಸ್‌ನೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸೂಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.ಟೂರಿಸ್ಮೊ ವೆಲೊಚೆ 799ಸಿಸಿ 3 ಸಿಲಿಂಡರ್ ಎಂಜಿನ್ ಹೊಂದಿದ್ದು, 110ಬಿಎಚ್‍ಪಿ ಮತ್ತು 80ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಬೈಕ್ 6 ಸ್ಪಿಡ್ ಗೇರ್ ಮತ್ತು ಸ್ಲಿಪರ್ ಕ್ಲಚ್ ಅಸಿಸ್ಟ್ ಹೊಂದಿದ್ದು, ಅಪ್-ಅಂಡ್-ಡೌನ್ ಗೇರ್ ಶಿಫ್ಟ್ ಮಾಡಲು ಸರಳವಾಗಿಸಲು ಕ್ವಿಕ್-ಶಿಫ್ಟರ್ ಅನ್ನು ಕೂಡ ಅಳವಡಿಸಿದ್ದಾರೆ. ಬಲಿಷ್ಠವಾದ ಬಾಡಿಯನ್ನು ಹೊಂದಿದ್ದು, ಮುಂಭಾಗದಲ್ಲಿ ಅಪ್‍ಸೈಡ್-ಡೌನ್ ಫೋರ್ಕ್ ಗಳನ್ನು ಮತ್ತು ಮೋನೋ-ಶಾಕ್ ಅನ್ನು ಒಳಗೊಂಡಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸುರಕ್ಷತೆಗೆ ಹೆಚ್ಚು ಪ್ರಮುಖ್ಯತೆ ನೀಡಿದ್ದು, ಮುಂಭಾಗದಲ್ಲಿ ಎರಡು 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ 220 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಿದ್ದಾರೆ.ಭಾಷ್ ಎಬಿಎಸ್ ಹಾಗೂ ರೇರ್ ವೀಲ್ ಅನ್ನು ಅಳವಡಿಸಲಾಗಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಎಂವಿ ಅಗಸ್ಟಾ ಟೂರಿಸ್ಮೊ ವೆಲೊಚೆ 800 ಬೈಕಿನಲ್ಲಿ ನಾಲ್ಕು ರೀತಿಯ ಮೂಡ್‍ಗಳನ್ನು ಅಳವಡಿಸಿದ್ದಾರೆ. 8 ಲೆವಲ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, 9 ಪ್ಲಸ್ ಆ್ಯಂಟಿ-ಲಾಕ್ ಬ್ರೇಕ್ ಸಿಸ್ಟಮ್ ಹೊಂದಿದ್ದು, ಬಿಡುಗಡೆಯ ಬಳಿಕ ಡುಕಾಟಿ ಮಲ್ಟಿ ಸ್ಟ್ರಾಡಾ 950, ಮತ್ತು ಟ್ರಯಂಫ್ ಟೈಗರ್ 800 ಎಕ್ಸ್ಆರ್‍ಎಕ್ಸ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಇಟಾಲಿಯನ್ ಶೈಲಿಯ ಬೈಕಿನ ವಿನ್ಯಾಸ ಆಕರ್ಷಣೆಯವಾಗಿದೆ. ಬೈಕ್ ಪ್ರಿಯರು ಹೆಚ್ಚು ನಿರೀಕ್ಷೆಯಿಂದ ಕಾಯುತ್ತಿದ್ದ ಎಂವಿ ಅಗಸ್ಟಾ ಟ್ಯುರಿಸ್ಮೊಟೂರಿಸ್ಮೊ ವೆಲೊಚೆ 800 ಬೈಕು ಆಗಸ್ಟ್ ನಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಮಧ್ಯಮ ವರ್ಗದ ಬೈಕ್ ಪ್ರಿಯರಿಗೆ ಇದರ ಬೆಲೆ ಹೆಚ್ಚಿರುವುದರಿಂದ ಸ್ವಲ್ಪ ಮಟ್ಟದ ನಿರಾಸೆ ಮೂಡಿಸಿದೆ.


Click it and Unblock the Notifications








