ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಜಪಾನ್ ಮೂಲದ ದ್ಚಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮುಂದಿನ 18 ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬೈಕ್‍ ಅನ್ನು ಬಿಡುಗಡೆಗೊಳಿಸಲು ಚಿಂತಿಸಿದೆ. ರಾಯಲ್ ಎನ್‍‍ಫೀಲ್ಡ್ ಬೈಕಿಗೆ ಪೈಪೋಟಿ ನೀಡಲು ಹೊಸ ಬೈಕ್ ಅನ್ನು ಪ್ರೀಮಿಯಂ 300 ಸಿಸಿ - 500 ಸಿಸಿ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಇಟಿ ಆಟೋ ಪ್ರಕಾರ, ಕಂಪನಿಯ 100 ಔಟ್‍ಲೆಟ್‍ಗಳ ಸ್ವತಂತ್ರವಾಗಿ ನೆಟವರ್ಕ್ ಸ್ಥಾಪಿಸಲಿದ್ದು, ಮುಂದಿನ 18 ತಿಂಗಳಲ್ಲಿ ಪ್ರಮುಖ 22 ಬಿಗ್ ವಿಂಗ್ ಔಟ್‍‍ಲೆಟ್‍ಗಳನ್ನು ಹೊಂದಲಿದೆ. ಕಂಪನಿಯು 15 ಸದ್ಯಸರ ತಂಡವನ್ನು ರಚಿಸಿದೆ, ಅವರು ಕೇವಲ ಪ್ರೀಮಿಯಂ ಬೈಕ್ ವಿಭಾಗದ ಬಗ್ಗೆ ಮಾತ್ರ ಗಮನಹರಿಸುತ್ತಾರೆ.

ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಹೋಂಡಾ ಮಿಡ್ ಸೆಗ್‍‍ಮೆಂಟ್ 300 ಸಿಸಿ ಇಂದ 500 ಸಿಸಿ ವಿಭಾಗಕ್ಕೆ ಎಂಟ್ರಿ ಕೊಡಲು ಚಿಂತಿಸಿದೆ. ಈ ವಿಭಾಗದಲ್ಲಿ ಒಟ್ಟು ಒಂದು ವರ್ಷದಲ್ಲಿ ಎಂಟು ಲಕ್ಷದವರೆಗೆ ಯುನಿಟ್‍ಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ಮಿಡ್ ಸೆಗ್‍‍ಮೆಂಟ್‍ನಲ್ಲಿ ರಾಯಲ್ ಎನ್‍‍ಫೀಲ್ಡ್ ಪಾರುಪತ್ಯ ಸಾಧಿಸಿದೆ. ಮಿಡ್ ಸೆಗ್‍‍ಮೆಂಟ್‍‍ನಲ್ಲಿ ಬರೊಬ್ಬರಿ ಶೇ.85 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಇತರ ತಯಾರಕ ಕಂಪನಿಗಳು ಮಿಡ್ ಸೆಗೆಮೆಂಟ್‍‍ನಲ್ಲಿ ರಾಯಲ್ ಎನ್‍‍ಫೀಲ್ಡ್ ಪೈಪೋಟಿ ನೀಡಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಆದರೆ ರಾಯಲ್ ಎನ್‍‍ಫೀಲ್ಡ್ ಹತ್ತಿರವು ಸುಲಿಯಲು ಸಾಧ್ಯವಾಗಲಿಲ್ಲ. ಇದೀಗ ಹೋಂಡಾ ಕಂಪನಿಯು ರಾಯಲ್ ಎನ್‍‍ಫೀಲ್ಡ್ ಬೈಕಿಗೆ ವಿಭಿನ್ನ ವಿಧಾನದ ಮೂಲಕ ಸವಾಲು ಒಡ್ಡುವ ಗುರಿ ಹೊಂದಿದೆ ಮತ್ತು ಸ್ಥಿರವಾದ ಮಾರಾಟ, ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಹೆಚ್ಚಿನ ಮಾರಾಟವಾಗಲು ಮತ್ತು ಬೈಕ್‍‍ಗಳ ಡೆಲಿವರಿ ಮಾಡಲು ವಿಶೇಷ ತಂಡವನ್ನು ಕೂಡ ರಚನೆ ಮಾಡಿದೆ.

ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಸೇಲ್ಸ್ & ಮಾರ್ಕೆಟಿಂಗ್‌ನ ಉಪಾಧ್ಯಕ್ಷ, ಯಾದ್ವಿಂದರ್ ಸಿಂಗ್ ಗುಲೇರಿಯಾ ಅವರು ಮಾತನಾಡಿ, ಪ್ರೀಮಿಯಂ ಬೈಕ್ ವ್ಯವಹಾರಕ್ಕೆ ಹೊಸ ವಿಧಾನವು ಹಿಂದೆಂದಿಗಿಂತಲೂ ಹೊಸ ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುತ್ತದೆ ಮತ್ತು ಕಾರ್ಯತಂತ್ರಗಳು ಸಾಮೂಹಿಕ ಮಾರುಕಟ್ಟೆಯೊಂದಿಗೆ ಬೆರೆಯುವುದಿಲ್ಲ. ಕಂಪನಿಯಿಂದ ಮುಂಬರುವ ಯೋಜನೆಗೆ ಯಶಸ್ಸನ್ನು ಗಳಿಸುವಲ್ಲಿ ಹೊಸ ಬೈಕ್‍‍ಗಳ ಬೆಲೆ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಹೋಂಡಾ ಈಗಾಗಲೇ ಕಂಪನಿಯ 6 ಪ್ರೀಮಿಯಂ ಬಿಗ್ ವಿಂಗ್ ಡೀಲರ್‍‍ಗಳಿಂದ ಮಾರಾಟವಾಗುತ್ತಿದೆ.ಇದರಲ್ಲಿ ಸಿಬಿ 300ಆರ್, ಸಿಬಿ1000ಆರ್, ಸಿಬಿಆರ್100ಆರ್‍ಆರ್ ಫೈರ್‌ಬ್ಲೇಡ್, ಸಿಬಿಆರ್ 1000 ಆರ್‍ಆರ್ ಫೈರ್‌ಬ್ಲೇಡ್ ಎಸ್‌ಪಿ, ಆಫ್ರಿಕಾ ಟ್ವಿನ್ ಮತ್ತು ಗೋಲ್ಡ್ ವಿಂಗ್ ಜಿಎಲ್ 1800 ಬೈಕ್‍‍ಗಳು ಸೇರಿವೆ. ಆದರೆ ಈ ಎಲ್ಲಾ ಬೈಕ್‍‍ಗಳನ್ನು ಸಿಕೆಡಿ(ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗ ಅಥವಾ ಸಿಬಿಯು (ಕಂಪ್ಲೀಟ್ಲಿ ಬಿಲ್ಟ್ ಯುನಿಟ್) ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತದೆ. ಈ ಕಾರಣಕ್ಕೆ ಬೆಲೆಗಳು ಹೆಚ್ಚಾಗಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಹೋಂಡಾದ ಮುಂಬರುವ ಯೋಜನೆಯೊಂದಿಗೆ ಈ ಮಾರ್ಗವನ್ನು ಬದಲಾಯಿಸುವ ಉದ್ದೇಶವನ್ನು ಕಂಪನಿಯು ಹೊಂದಿದೆ. ಭಾರತದಲ್ಲಿ ಬೈಕ್‍ಗಳನ್ನು ತಯಾರಿಸಲು ಮತ್ತು ಜೋಡಿಸಲು ನೋಡುತ್ತಿದೆ. ಇದರಿಂದ ಪೈಪೋಟಿಯುತ ಬೆಲೆ ನೀಡಲು ಸಹಾಯವಾಗಲಿದೆ. ಈ ವಿಧಾನದಿಂದ ಹೋಂಡಾ ಮಿಡ್-ಸೆಗ್‍‍ಮೆಂಟ್ ಬೈಕುಗಳು ಮಾರುಕಟ್ಟೆಯಿಂದ ಕನಿಷ್ಠ ಶೇ.10 ರಷ್ಟು ಪಾಲನ್ನು ಹೋಂದಲು ಪ್ರಯತ್ನಿಸಬಹುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಆರ್‍ಇ ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾದ ಈ ಬೈಕ್..!

ಹೋಂಡಾದಲ್ಲಿ ಬೈಕ್‍‍ಗಳು ಮತ್ತು ಸ್ಕೂಟರ್‍‍ಗಳು ಜಾಗತಿಕವಾಗಿ ಮಾರಾಟವಾಗುತ್ತವೆ, ಅನೇಕ ಮಾದರಿಗಳು ಭಾರತೀಯ ಶ್ರೇಣಿಯಿಂದ ಮಾಯವಾಗಿದೆ. ಕಂಪನಿಯ ಮುಂಬರುವ ಯೋಜನೆಯೊಂದಿಗೆ ಸ್ಥಳೀಯವಾಗಿ ಉತ್ಪಾದಿಸಲಾದ ಹೋಂಡಾ ಮಾದರಿಗಳೊಂದಿಗೆ ದೇಶಿಯ ಮಾರುಕಟ್ಟೆ ಪರಿಚಯಿಸುವುದರೊಂದಿಗೆ ಬದಲಾಗಬಹುದು.

Most Read Articles

Kannada
English summary
Honda Will Introduce New Motorcycles In Indian Market To Rival Against Royal Enfield - Read in kannada
Story first published: Thursday, October 10, 2019, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X