ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್

ಸುಜುಕಿ ಕಂಪನಿಯು 2019ರ ಹೊಸ ಜಿಕ್ಸರ್ 155 ಫೇಸ್‌ಲಿಫ್ಟ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1 ಲಕ್ಷಗಳಾಗಲಿದೆ. ಹೊಸ ಸುಜುಕಿ ಜಿಕ್ಸರ್ 155 ಫೇಸ್‌ಲಿಫ್ಟ್ ಬೈಕಿನಲ್ಲಿ ನವೀಕರಿಸಿದ ಸ್ಟೈಲಿಂಗ್, ಸುಧಾರಿತ ಪರ್ಫಾಮೆನ್ಸ್ ಹಾಗೂ ಈಗಿರುವ ಬೈಕಿನಲ್ಲಿರುವುದಕ್ಕಿಂತ ಹೊಸದಾದ ಹಾಗೂ ಹೆಚ್ಚುವರಿಯಾದ ಫೀಚರ್‍‍ಗಳಿರಲಿವೆ.

ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್

ಹೊಸ ಸುಜುಕಿ ಜಿಕ್ಸರ್ 155 ಬೈಕಿನ ಬೆಲೆ ಹಿಂದಿನ ಬೈಕಿಗೆ ಹೋಲಿಸಿದರೆ ಸುಮಾರು ರೂ.13,000 ಜಾಸ್ತಿಯಾಗಿರಲಿದೆ. ಹಿಂದಿನ ಬೈಕಿನ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ ರೂ.88,390ಗಳಾಗಿದ್ದರೆ, ಎಸ್‌ಪಿ ಮಾದರಿಯ ಬೆಲೆ ರೂ.88,941ಗಳಾಗಿತ್ತು. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತಿವೆ. ವಿನ್ಯಾಸದ ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಹೊಸ ಸುಜುಕಿ ಜಿಕ್ಸರ್ 155 ಬೈಕ್ ಕೆಲವು ವಿನ್ಯಾಸಗಳನ್ನು ಸುಜುಕಿ ಕಂಪನಿಯ ಎಸ್‍ಎಫ್ 250 ಬೈಕಿನಿಂದ ಪಡೆದುಕೊಂಡಿದೆ.

ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್

ಆ ವಿನ್ಯಾಸಗಳೆಂದರೆ ಓವಲ್ ಶೇಪಿನ ಎಲ್ಇಡಿ ಹೆಡ್‌ಲ್ಯಾಂಪ್, ಸೊಗಸಾಗಿ ವಿನ್ಯಾಸಗೊಳಿಸಲಾದ ಟ್ಯಾಂಕ್ ಶ್ರೌಡ್, ನವೀಕರಿಸಿದ ಬಾಡಿ ಗ್ರಾಫಿಕ್ಸ್, ಸ್ಪ್ಲಿಟ್ ಸೀಟುಗಳು, ಬ್ಲ್ಯಾಕ್ಡ್ ಔಟ್ ಅಲಾಯ್ ವೀಲ್ಸ್ ಹಾಗೂ ಎಲ್ಇಡಿ ಟೈಲ್‌ಲೈಟ್‌ಗಳು. ಹೊಸ ಸುಜುಕಿ ಜಿಕ್ಸರ್ 155 ನವೀಕೃತ ಬೈಕ್ ತನ್ನ ಕಂಪನಿಯ ಇತರ ಬೈಕುಗಳಿಂದ ಪೂರ್ಣ ಪ್ರಮಾಣದ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆದಿದೆ. ಆದರೆ, ಹೊಸ ಎಸ್‌ಎಫ್ ಮಾದರಿಯ ಬೈಕಿನಲ್ಲಿದ್ದ ಹ್ಯಾಂಡಲ್‌ಬಾರ್‌ಗಳ ಮೇಲಿನ ಕ್ಲಿಪ್ ಅನ್ ಈ ಬೈಕಿನಲ್ಲಿರುವುದಿಲ್ಲ.

ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್

2019ರ ಹೊಸ ಸುಜುಕಿ ಜಿಕ್ಸರ್155 ಬೈಕಿನಲ್ಲಿಯೂ ಸಹ ನವೀಕರಿಸಿದ 155 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಈಗ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಬರುತ್ತದೆ. ಈ ಸಿಸ್ಟಂ ಅನ್ನು ಹಿಂದಿನ ಮಾದರಿಯಲ್ಲಿದ್ದ ಕಾರ್ಬ್ಯುರೇಟರ್‍‍ನ ಬದಲಿಗೆ ಅಳವಡಿಸಲಾಗಿದೆ. ಈ ಎಂಜಿನ್ 14ಬಿ‍‍ಹೆಚ್‍‍ಪಿ ಪವರ್ ಹಾಗೂ 14ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್‍‍ನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್

ಹೊಸ ಸುಜುಕಿ ಜಿಕ್ಸರ್155 ಬೈಕಿನ ಸಸ್ಪೆಂಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳಿದ್ದು, ಹಿಂಭಾಗದಲ್ಲಿ ಮೊನೊ ಶಾಕ್ ಸೆಟ್ ಅಪ್‍‍ಗಳಿವೆ. ಬ್ರೇಕಿಂಗ್ ನಿಯಂತ್ರಣಕ್ಕಾಗಿ ಎರಡೂ ಬದಿಯಲ್ಲಿ ಡಿಸ್ಕ್ ಗಳಿದ್ದು, ಸಿಂಗಲ್ ಚಾನಲ್ ಎಬಿಎಸ್ ಇರಲಿದೆ. ಈ ಬೈಕ್ 17 ಇಂಚಿನ ಟ್ಯೂಬ್‌ಲೆಸ್ ಟಯರ್‌ ಹೊಂದಿರಲಿದ್ದು, ಬೈಕಿನ ಮುಂಭಾಗದಲ್ಲಿ 100/80 ಹಾಗೂ ಹಿಂಭಾಗದಲ್ಲಿ 140/60 ಅಳತೆಯ ಟಯರ್‍‍ಗಳಿವೆ.

ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

2019ರ ಸುಜುಕಿ ಜಿಕ್ಸರ್155 ನವೀಕೃತ ಬೈಕ್ ಅನ್ನು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟಾಲಿಕ್ ಸೋನಿಕ್ ಸಿಲ್ವರ್ ಹಾಗೂ ಮೆಟಾಲಿಕ್ ಟೈಟಾನ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿದ್ದ ಸುಜುಕಿ ಜಿಕ್ಸರ್155 ಬೈಕ್ ಅನ್ನು ಕೊನೆಗೂ ನವೀಕರಿಸಲಾಗಿದೆ. 2019ರ ಸುಜುಕಿ ಜಿಕ್ಸರ್155 ಹಲವಾರು ಅಪ್‍‍ಡೇಟ್‍ಗಳೊಂದಿಗೆ ಬರುತ್ತಿದ್ದು, ಮೊದಲಿಗಿಂತಲೂ ಹೆಚ್ಚಿನ ಆಕರ್ಷಕ ಪ್ಯಾಕೇಜ್ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ, ಹೊಸ ಸುಜುಕಿ ಜಿಕ್ಸರ್155 ಬೈಕ್, ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಕೆಟಿಎಂ ಡ್ಯೂಕ್ 125 ಹಾಗೂ ಯಮಹಾ ಎಫ್‌ಝಡ್-ಎಸ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New (2019) Suzuki Gixxer 155 Facelift Launched In India — Priced At Rs 1 Lakh - Read in kannada
Story first published: Friday, July 12, 2019, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X