ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ನಾರ್ಟನ್ - ಕೈನೆಟಿಕ್ ಅಲೆಯನ್ಸ್ ದೇಶಿಯ ಮಾರುಕಟ್ಟೆಗಾಗಿ ಪ್ರೀಮಿಯಂ ಬೈಕ್ ಉತ್ಪಾದನೆಯನ್ನು ಆರಂಭಿಸಿದೆ. ಕಂಪನಿಯು ಮಧ್ಯಮ ವರ್ಗದ ಜನರಿಗೆ ಸಹಕಾರಿಯಾಗುವಂತೆ ಅಗ್ಗದ ಬೆಲೆಯ ಬೈಕ್ ಅನ್ನು ಉತ್ಪಾದಿಸಲು ಪ್ರಾರಂಭಿಸಿದೆ.

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ಇಂಗ್ಲೇಡ್ ಮೂಲದ ಪ್ರೀಮಿಯಂ ಬೈಕ್ ಉತ್ಪಾದಕರಾದ ನಾರ್ಟನ್ ಮೋಟಾರ್ ಸೈಕಲ್ ಕಂಪನಿಯು ಕೈನೆಟಿಕ್ ಗ್ರೂಪ್ ಜೊತೆ 2017ರಲ್ಲಿ ಜಂಟಿಯಾಗಿ ಒಪ್ಪಂದವನ್ನು ಮಾಡಿಕೊಂಡಿದರು. ಈ ಒಪ್ಪಂದದ ಮೇರೆಗೆ ಗ್ರಾಹಕರ ಅಧ್ಯತೆಗಳನ್ನು ಅರಿತು ಮತ್ತು ಹೆಚ್ಚಿನ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ ಬೈಕ್ ಉತ್ಪಾದನೆ ಮಾಡಲು ಪ್ರಾರಂಭಿಸಿದೆ.

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ನಾರ್ಟನ್ ಮತ್ತು ಕೈನೆಟಿಕ್ ಜಂಟಿಯಾಗಿ 500ಸಿಸಿ ಗಿಂತ ಕಡಿಮೆ ಇರುವ ನೂತನ ಬೈಕ್ ಅನ್ನು ಉತ್ಪಾದನೆ ಮಾಡುತ್ತೇವೆ ಎಂದು ಕೈನೆಟಿವ್ ಗ್ರೂಪ್ ಎಂಡಿ ಅಜಿಂಕಿಯಾ ಫಿರೋಡಿಯಾ ತಿಳಿಸಿದ್ದಾರೆ.

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ಇಂಗ್ಲೇಡ್ ನಲ್ಲಿ ನಾರ್ಟನ್ ಕಮಾಂಡೋ 961 ಕ್ಯಾಲಿಫೋರ್ನಿಯಾ ಮತ್ತು ಕಮಾಂಡೋ 961 ಎಂಕೆ ಎಂಬ ಎರಡು ಬೈಕ್‍‍ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಇದೇ ಮಾದರಿಯ ಫೀಚರ್ಸ್ ಅನ್ನು ಹೊಂದಿರುವ ಬೈಕ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ನಿರೀಕ್ಷೆ ಮಾಡಬಹುದು.

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ನಾರ್ಟನ್ ಬೈಕಿನ ಸಂಪ್ರಾದಾಯಕ ಶೈಲಿ ವಿನ್ಯಾಸ ಮತ್ತು ವೈಶಿಷ್ಟೈಗಳೊಂದಿಗೆ ಉತ್ತಮ ಕ್ಷಮತೆಯನ್ನು ಹೊಂದಿರಲಿದ್ದು, ಹೊಸ ಬೈಕ್ನಲ್ಲಿ ಜೋಡಣೆ ಮಾಡುವ ಎಂಜಿನ್ ಗಳ ಬಗ್ಗೆ ಮಾಹಿತಿ ನೀಡಿಲ್ಲ. 350 ಸಿಸಿ ಯಿಂದ 500 ಸಿಸಿ ನಡುವೆ ಇರುವ ಎಂಜಿನ್ ಅನ್ನು ಅಳವಡಿಸಬಹುದು.

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ಈ ಬೈಕ್ ಅನ್ನು ಕಮಾಂಡೋ ಕಬ್ ಎಂದು ಕರೆಯಬಹುದು, ಇದು ಇಲ್ಲಿಯ ತನಕ ಬಿಡುಗಡೆಗೊಂಡಿರುವುದಕ್ಕಿಂತ ನೂತನ ಮಾರ್ಡನ್ ಲುಕ್ ಬೈಕ್ ಆಗಿರಲಿದೆ. ಇದನ್ನು ಸಂಪೂರ್ಣವಾದ ಉತ್ಪಾದನೆ ಭಾರತದಲ್ಲೇ ನಡೆಯಲಿದೆ.

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ಇದರ ಬೆಲೆಯು ದುಬಾರಿಯಾಗಿರುವುದಿಲ್ಲಾ, ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡೂ ಈ ಬೈಕ್ ಉತ್ಪಾದನೆ ಮಾಡುತ್ತಿದ್ದಾರೆ. ರಾಯಲ್ ಎನ್‍ಫೀಲ್ಡ್ ಬೈಕ್ ಗಿಂತಲೂ ಕಡಿಮೆ ಬೆಲೆಯಾಗಿರಲಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ 2021ರಲ್ಲಿ ಬಿಡುಗಡೆಯಾಗಲಿದೆ.

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ಭಾರತದಲ್ಲಿ ಇದು ಕೈನಿಟಿಕ್ ಮಲ್ಟಿ-ಬ್ರಾಂಡ್ ಶೋ ರೂಂ, ಮೊಟೋರೊಯೆಲ್ ಮೂಲಕ ಮಾರಟ ಮಾಡಲಿದೆ. ನವಿ ಮುಂಬೈನಲ್ಲಿ ಹೊಸದಾಗಿ ಡೀಲರ್‍ ಗಳು ಸೇರ್ಪಡೆಗೊಂಡಿದೆ. ಬೈಕ್ ಬಿಡುಗಡೆಯಾಗುವ ವೇಳೆಗೆ ಡೀಲರ್ ಗಳ ಸಂಖ್ಖೆಯನ್ನು ಅಧಿಕ ಮಾಡಲು ಕಂಪನಿ ಪ್ರಯತ್ನಿಸುತ್ತಿದೆ. ನಾರ್ಟನ್ ಕಮಾಂಡೋ ಕಬ್ ವಿಶಿಷ್ಟವಾಗಿ ಬ್ರಿಟಿಷ್ ಕ್ಲಾಸಿಕ್ ಶೈಲಿಯನ್ನು ಹೊಂದಿರಲಿದೆ. ಈ ಬೈಕ್ 500 ಸಿಸಿ ಗಿಂತಲೂ ಕಡಿಮೆ ಹೊಂದಿದ್ದು, ಇದು ನಾರ್ಟನ್ ಅಟ್ಲಾಸ್ ನಂತರದ ಸ್ಥಾನವನ್ನು ಪಡೆಯಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ಸಧ್ಯ ನಾರ್ಟನ್ ದುಬಾರಿ ಬೈಕ್‍‍ಗಳನ್ನು ಮಾರಟ ಮಾಡುತ್ತಿದ್ದು, ಆದರೆ ನಾರ್ಟನ್ ಕಮಾಂಡೋ ಕಬ್ ಮಾತ್ರ ತನ್ನ ಶ್ರೇಣೆಯಲ್ಲಿ ಬೆಲೆ ಕಡಿಮೆಯಾದ ಬೈಕ್ ಆಗಲಿದೆ. ವಾರ್ಷಿಕವಾಗಿ ಭಾರತ ಮತ್ತು ಏಷ್ಯಾದ ಇತರ ಮಾರುಕಟ್ಟೆಯಲ್ಲಿ 25,000 ಯುನಿಟ್ ಗಳನ್ನು ಮಾರಟ ಮಾಡಲು ನಿರ್ಧರಿಸಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ದೇಶಿಯ ಮಾರುಕಟ್ಟೆಗಾಗಿ ನಾರ್ಟನ್ ಅಗ್ಗದ ಬೆಲೆ ಬೈಕ್ ಉತ್ಪಾದನೆ

ಬೈಕಿನ ಫ್ರೇಮ್. ಸೈಲೆನ್ಸರ್, ಸ್ವಿಂಗಾರ್ಮ್, ಪ್ಲಾಸ್ಟಿಕ್ ಭಾಗಗಳು ಮತ್ತು ಚಕ್ರಗಳು ಭಾರತದಲ್ಲೆ ತಯಾರಿಸಲಿದ್ದು, ಉಳಿದ ಎಂಜಿನ್, ಫ್ಯೂಲ್ ಟ್ಯಾಂಕ್, ಲ್ಯಾಂಪ್ ಎಲೆಕ್ಟ್ರಿಕ್‍ಗಳನ್ನು ಇಂಗ್ಲೆಡ್‍‍ನಿಂದ ಆಮದು ಮಾಡಿ ಭಾರತದಲ್ಲಿ ಜೋಡಣೆ ಮಾಡುತ್ತಾರೆ. 2021 ರ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ನಡೆಸಲಿದೆ. ಇದಕ್ಕೂ ಮುನ್ನ ಕೈನೆಟಿಕ್ ಗ್ರೂಪ್ ಅಟ್ಲಾಸ್ 650 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

Most Read Articles

Kannada
English summary
norton working sub-500cc bike for india - Read in Kannada
Story first published: Saturday, August 31, 2019, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X