ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣ ಅಂದ್ರೆ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಸುರಕ್ಷಾ ಮಾರ್ಗಸೂಚಿಯು ಬೈಕ್ ಸವಾರರಿಗೆ ಮತ್ತಷ್ಟು ಸುರಕ್ಷತೆಯನ್ನು ಒದಗಿಸಲಿದೆ.

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಹೌದು. ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ದ್ವಿಚಕ್ರ ವಾಹನಗಳಲ್ಲಿ ಸಿಬಿಎಸ್(ಕಾಂಬಿ ಬ್ರೇಕಿಂಗ್ ಸಿಸ್ಟಂ) ಮತ್ತು ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ತಂತ್ರಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಹೀಗಾಗಿ ಹೊಸ ನಿಯಮದಂತೆ ಪಿಯಾಜಿಯೊ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮದಂತೆ ಸುರಕ್ಷಾ ಸೌಲಭ್ಯಗಳನ್ನು ಒದಗಿಸಿವೆ.

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಇಟಾಲಿ ಮೂಲದ ಸುಪ್ರಸಿದ್ಧ ವಾಹನ ಸಂಸ್ಥೆಯಾಗಿರುವ ಪಿಯಾಜಿಯೊ ಸಂಸ್ಥೆಯು ಭಾರತದಲ್ಲಿ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಆವೃತ್ತಿಗಳನ್ನು ಅಭಿವೃದ್ಧಿ ಮತ್ತು ಮಾರಾಟ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ ರೂಲ್ಸ್ ನಂತೆಯೇ ವೆಸ್ಪಾದಲ್ಲಿ ಮತ್ತು ಎಪ್ರಿಲಿಯಾ ಸ್ಕೂಟರ್‌ಗಳಲ್ಲಿ ಸಿಬಿಯು ಮತ್ತು ಎಬಿಎಸ್ ಒದಗಿಸಿದೆ.

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಹೊಸ ನಿಯಮದ ಪ್ರಕಾರ, 125ಸಿಸಿ ಮೇಲ್ಪಟ್ಟ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸಿಬಿಎಸ್ ತಂತ್ರಜ್ಞಾನವನ್ನು ಮತ್ತು 150ಸಿಸಿ ಮೇಲ್ಪಟ್ಟ ಬೈಕ್‌ಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ತಂತ್ರಜ್ಞಾನವು ಕಡ್ಡಾಯಸಲಾಗಿದ್ದು, ಹೊಸ ನಿಯಮದಂತೆ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್‌ಗಳು ಇಂದಿನಿಂದಲೇ ಮಾರಾಟಕ್ಕೆ ಲಭ್ಯವಾಗಿರಲಿವೆ.

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಹಾಗಾದ್ರೆ ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ನಿಮ್ಮ ಬೈಕ್‌ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಕೆಲವೇ ಸೇಕೆಂಡುಗಳಲ್ಲಿ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದಾಗಿದೆ.

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಉದಾಹರಣೆ, ನೀವು ಎಬಿಎಸ್ ಇಲ್ಲದ ಒಂದು ಬೈಕ್ ಅಥವಾ ಕಾರಿನ ಚಾಲನೆ ಮಾಡುತ್ತಿದ್ದೀರಿ ಎಂದುಕೊಳ್ಳಿ. ಆಗ ಹಠಾತ್ ಆಗಿ ನಿಮ್ಮ ವಾಹನಕ್ಕೆ ಬೇರೆ ಯಾವುದೋ ವಾಹನವೋ ಇಲ್ಲವೇ ಯಾರಾದ್ರು ರಸ್ತೆ ದಾಟುವವರು ಸಡನ್ ಆಗಿ ಅಡ್ಡಬಂದಲ್ಲಿ ಬಹುತೇಕ ವಾಹನ ಸವಾರರು ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಒತ್ತಲು ಪ್ರಯತ್ನ ಪಡುವುದು ಕಾಮನ್.

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಈ ವೇಳೆ ಬ್ರೇಕ್ ಅನ್ನು ಪೂರ್ಣ ಪ್ರಮಾಣದಲ್ಲಿ ಅದುಮಿದಾಗ ಕಾರಿನ ಸ್ಟೀರಿಂಗ್ ಅಥವಾ ಬೈಕಿನ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು, ಇದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಯಾವುದೇ ಅವಕಾಶವಿರುವುದಿಲ್ಲ. ಆದ್ರೆ ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಎಬಿಎಸ್ ಸಾಕಷ್ಟು ಸಹಕಾರಿಯಾಗುತ್ತೆ.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಹಾಗೆಯೇ ಸಿಬಿಎಸ್ ಕೂಡಾ ಎಬಿಎಸ್ ನಂತಯೇ ಕಾರ್ಯನಿರ್ವಹಿಸಲಿದ್ದು, ಡ್ರಮ್ ಬ್ರೇಕ್‌ಗಿಂತಲೂ ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸಿಬಿಎಸ್ ಇದ್ದಲ್ಲಿ ಸ್ಕಿಡ್‌ನಿಂದ ಆಗಬಹುದಾದ ದುರಂತಗಳನ್ನು ತಗ್ಗಿಸಬಹುದಾಗಿದ್ದು, ಎಡಬದಿಯ ಬ್ರೇಕ್ ಅನ್ನು ಒತ್ತಿದಾಗ ಹಿಂಬದಿಯ ಚಕ್ರದ ಮೇಲೆ ಅಷ್ಟೇ ಅಲ್ಲದೇ ಮುಂಭಾಗದ ಚಕ್ರದ ಮೇಲೂ ಹಿಡಿತ ಸಾಧಿಸುತ್ತೆ. ಹಾಗೆಯೇ ಬಲಬದಿಯ ಬ್ರೇಕ್ ಅನ್ನು ಸಡನ್ ಒತ್ತಿದಾಗಲೂ ಅದು ಹಿಂಭಾಗದ ಚಕ್ರಕ್ಕೂ ಅನ್ವಯಿಸುತ್ತೆ.

ಸಿಬಿಎಸ್ ಮತ್ತು ಎಬಿಎಸ್‌ನೊಂದಿಗೆ ನವೀಕರಣಗೊಂಡ ವೆಸ್ಪಾ ಮತ್ತು ಎಪ್ರಿಲಿಯಾ

ಬೆಲೆ ಏರಿಕೆಯ ಬಿಸಿ

ಹೌದು, ಸಾಮಾನ್ಯ ಮಾದರಿಯ ಡ್ರಮ್ ಬ್ರೇಕ್ ಸಿಸ್ಟಂ ಹೊಂದಿರುವ ಬೈಕ್‌ ಬೆಲೆಗಳಿಂತ ಸಿಬಿಎಸ್ ಮತ್ತು ಎಬಿಎಸ್ ಹೊಂದಿರುವ ಬೈಕ್ ಬೆಲೆಯು ತುಸು ದುಬಾರಿ ಎನ್ನಿಸಲಿದ್ದು, ಎಬಿಎಸ್ ತಂತ್ರಜ್ಞಾನದ ಗುಣಮಟ್ಟದ ಆಧಾರದ ಮೇಲೆ ಕನಿಷ್ಠ ರೂ.5 ಸಾವಿರದಿಂದ ರೂ.12 ಸಾವಿರದಷ್ಟು ಬೆಲೆ ಏರಿಕೆಯಾಗಲಿವೆ.

Article Published On: Wednesday, April 10, 2019, 19:47 [IST]
English summary
Piaggio Updates Vespa, Aprilia Lineups With ABS And CBS. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+