ಬಿಡುಗಡೆಯಾದ ಪೋಲಾರಿಟಿ ಎಲೆಕ್ಟ್ರಿಕ್ ಬೈಕಿನ ಟೀಸರ್
ಪುಣೆ ಮೂಲದ ಎಲೆಕ್ಟ್ರಿಕ್ ಬೈಕ್ ಉತ್ಪಾದನಾ ಕಂಪನಿ ಪೋಲಾರಿಟಿ ಹೊಸ ಬೈಕಿನ ಟೀಸರ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಹೊಸ ಟಾಪ್-ಆಫ್-ಲೈನ್ ವಿಭಾಗದ ಬೈಕ್‍ಗಳು 100 ಕಿ.ಮೀ ವೇಗವನ್ನು ಹೊಂದಿದೆ ಎಂದು ಟೀಸರ್‍ನಲ್ಲಿ ತಿಳಿಸಿದೆ. ಪೋಲಾರಿಟಿ ಕಂಪನಿಯು ಇದೇ ತಿಂಗಳು 20 ರಂದು ಒಟ್ಟು ಆರು ಬೈಕ್‍ಗಳನ್ನು ಬಿಡುಗಡೆ ಮಾಡಲಿದೆ.

ಪೋಲಾರಿಟಿ ಕಂಪನಿಯು 2017 ರಿಂದಲೇ ಈ ಬೈಕ್‍ಗಳನ್ನು ಅಭಿವೃದ್ದಿಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಬೈಕ್‍ಗಳನ್ನು ಸ್ಪೋರ್ಟ್ ಮತ್ತು ಎಕ್ಸಿಕ್ಯುಟಿವ್ ಎಂಬ ಎರಡು ವಿಭಾಗಗಳನ್ನು ಹೊಂದಿದೆ. ಸ್ಪೋರ್ಟ್ ಸಾಲಿನಲ್ಲಿ ಎಸ್1ಕೆ, ಎಸ್2 ಕೆ ಮತ್ತು ಎಸ್3 ಮಾದರಿಗಳನ್ನು ಒಳಗೊಂಡಿದ್ದರೆ, ಎಕ್ಸಿಕುಟಿವ್ ಮಾದರಿಗಳ ಸಾಲಿನಲ್ಲಿ ಇ1 ಕೆ, ಇ2 ಮತ್ತು ಇ3 ಕೆ ಮಾದರಿಗಳನ್ನು ಒಳಗೊಂಡಿದೆ.

ಎಸ್3ಕೆ ಮತು ಇ3ಕೆ ಟಾಪ್-ಆಫ್-ಲೈನ್ ಮಾದರಿಗಳಾಗಿದ್ದು, ಇದು 100 ಕಿ.ಮೀ ವೇಗವನ್ನು ಹೊಂದಿದೆ. ಬೈಕ್ ಬಿಡುಗಡೆಯಾದ ಬಳಿಕ ಟೋಕನ್ ಮೊತ್ತ ರೂ. 1,001 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಪೋಲಾರಿಟಿ ಎಲೆಕ್ಟ್ರಿಕ್ ಬೈಕ್‍ಗಳು ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಕಂಪನಿಯ ಪ್ರಕಾರ ಒಂದು ಸಿಂಗಲ್ ಚಾರ್ಚ್‍ನಿಂದ 80 ಕಿ.ಮೀ ಮೈಲೇಜ್ ನೀಡುತ್ತದೆ. ಬೈಕ್‍ಗಳಿಗೆ ಪೆಡಲ್‍ಗಳ ಸೌಲಭ್ಯವನ್ನು ನೀಡಿದ್ದು, ಬೈಕಿನ ಜಾರ್ಜ್ ಮುಗಿದರೆ ಪೆಡಲ್‍ಗಳನ್ನು ಹೊದ್ದು ಸೈಕಲ್ ಮಾದರಿಯಲ್ಲಿ ಸಾಗಬಹುದು. ಪೆಡಲುಗಳು ಹೆಚ್ಚು ಸಹಕಾರಿಯಾಗಿದೆ. ಬೈಕ್‍ನಲ್ಲಿ 1 ರಿಂದ 3 ಕೆಡಬ್ಲ್ಯು ವರೆಗಿನ ಪವರ್ ಹೊಂದಿರುವ ಎಲೆಕ್ಟ್ರಿಕ್ ಹಬ್ ಮೋಟರ್‍ಗಳಿವೆ.

ಪೋಲಾರಿಟಿ ಎಲೆಕ್ಟ್ರಿಕ್ ಬೈಕ್‍ಗಳು ಹೆಚ್ಚಾಗಿ ಸಿಟಿ ಜನರನ್ನು ಗುರಿಯಾಗಿಸಿ ಬಿಡುಗಡೆ ಮಾಡುತ್ತಿದ್ದಾರೆ. ಸಿಟಿ ಜನರು ಹೆಚ್ಚಾಗಿ ಎಲೆಕ್ಟಿಕ್ ಬೈಕ್‍ಗಳ ಕಡೆ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಬೈಕ್‍ಗಳು ಪರಿಸರ ಸ್ನೇಹಿ ಮತ್ತು ಈ ಬೈಕ್ ಅನ್ನು ನಿಭಾಯಿಸಲು ಅಧಿಕ ಖರ್ಚು ಇಲ್ಲದ ಕಾರಣ ಹೆಚ್ಚಿನ ಜನರು ಎಲೆಕ್ಟ್ರಿಕ್ ಬೈಕ್‍ಗಳನ್ನು ಆಯ್ಕೆ ಮಾಡುತ್ತಿದ್ದಾರೆ

ಈ ಬೈಕ್‍ನ ಮುಂಭಾಗ ಅಪ್‍ಸೈಡ್-ಡೌನ್ ಯುನಿಟ್ ಮತ್ತು ಹಿಂಭಾಗದಲ್ಲಿ ಮೋನೋ ಶಾಕ್ ಸಸ್ಪೆನ್ಷನ್ ಯುನಿಟ್ ಅನ್ನು ಅಳವಡಿಸಿದ್ದಾರೆ. ಹಲವಾರು ವೈಶಿಷ್ಟ್ಯಗಳು ಹೊಂದಿರುವ ಈ ಬೈಕ್‍ನ ಮತ್ತೊಂದು ವಿಶೇಷವೆಂದರೆ ಇದು ಸಿಂಗಲ್ ಸೀಟ್ ಬೈಕ್ ಆಗಿದೆ.

ಕಂಪನಿಯು ಬಿಡುಗಡೆ ಮಾಡಿರುವ ಟೀಸರ್ ವಿಡಿಯೋದಿಂದ ಬೈಕ್‍ನ ಇತರ ವೈಶಿಷ್ಟ್ಯಗಳು ಸಹ ಬಹಿರಂಗವಾಗಿದೆ. ಈ ಬೈಕಿನಲ್ಲಿ ಎಲ್‍ಇಡಿ ಹೆಡ್‍ಲೈಟ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಭಾರತದ ಕಿರಿದಾದ ರಸ್ತೆಗಳಲ್ಲಿ ಸಾಗಲು ಅನ್-ಆಫ್-ರೋಡ್ ಟೈರ್‍ಗಳು, ಆರೋಗ್ಯ ಮತ್ತು ಫಿಟ್‌ನೆಸ್ ಅಪ್ಲಿಕೇಶನ್‌ಗಳೊಂದಿಗೆ ಸಿಂಕ್ ಮಾಡಲು ಸಾಧ್ಯವಾಗುವ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ. ನೀವು ಪೆಡಲ್‌ಗಳ ಮೂಲಕ ಬೈಕ್ ಬಳಸುವಾಗ ಫಿಟ್‌ನೆಸ್ ಅಪ್ಲಿಕೇಶನ್‌ಗಳಿಗೆ ಸಂಪರ್ಕ ಸಾಧಿಸುತ್ತದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬೈಕಿನ ಹೆಚ್ಚುವರಿ ವೈಶಿಷ್ಟ್ಯಗಳು ನ್ಯಾವಿಗೇಷನ್‍ಗಾಗಿ ಜಿಪಿಎಸ್ ಮತ್ತು ಅಪ್ಲಿಕೇಶನ್ ಸಂಪರ್ಕಕ್ಕೆ ಸ್ಮಾರ್ಟ್ಫೋನ್ ಜೋಡಣೆ ಮಾಡಿದ್ದು, ಅದನ್ನು ಸಕ್ರಿಯಗೊಳಿಸಲು ಬ್ಲೂಟೂತ್ ಸಂಪರ್ಕವನ್ನು ಒಳಗೊಂಡಿವೆ. ಆಫ್-ರೋಡ್ ಉತ್ಸಾಹಿಗಳು ಈ ಬೈಕುಗಳನ್ನು ಫನ್ ರೈಡ್‍ಗೆ ಬಳಸಬಹುದು ಎಂದು ಕಂಪನಿ ಹೇಳಿ ಕೊಂಡಿದೆ. ಕಸ್ಟಮ್ ಪೋಲಾರಿಟಿ ಸ್ಟ್ಯಾಂಡ್ ಅಳವಡಿಸಲಾಗಿದ್ದು, ಇದನ್ನು ವ್ಯಾಯಾಮ ಸಾಧನವಾಗಿಯೂ ಬಳಸಬಹುದು.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಪೋಲಾರಿಟಿ ತಮ್ಮ ಹೊಸ ಬೈಕಿನ ಟೀಸರ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬೈಕ್ ಸಿಟಿ ಜನರಿಗೆ ಹೆಚ್ಚು ಸಹಕಾರಿಯಾಗಿದ್ದು, ಈ ಬೈಕ್ ಪರಿಸರ ಸ್ನೇಹಿ ಜೊತೆಗೆ ಪೆಡಲ್‍ಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಹೆಚ್ಚಿಸಬಹುದು. ಇದರ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಿಲ್ಲ. ಇದರ ಬೆಲೆಯು ಅಗ್ಗವಾಗಿದ್ದರೆ ಇನ್ನಷ್ಟು ಜನರನ್ನು ಅಕರ್ಷಿಸುವುದು ಖಚಿತ.


Click it and Unblock the Notifications