ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಬಹುತೇಕ ವಾಹನ ಸವಾರರು ಇತ್ತೀಚೆಗೆ ಮಾಡಿಫೈ ವಾಹನಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಇದು ಸಾರ್ವಜನಿಕವಾಗಿ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದಾಗಿ ಕಾನೂನು ಬಾಹಿರವಾಗಿ ಓಡಾಡುತ್ತಿರುವ ಮಾಡಿಫೈ ವಾಹನ ವಿರುದ್ಧ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ಧ ದೇಶದ ಪ್ರಮುಖ ರಾಜ್ಯಗಳಲ್ಲಿ ಟ್ರಾಫಿಕ್ ಪೊಲೀಸರು ಈಗಾಗಲೇ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನು ಬಾಹಿರವಾಗಿ ಮಾಡಿಫೈ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿ ಬೈಕ್ ಎಕ್ಸಾಸ್ಟ್ ಮಾಡಿಫೈ ಮಾಡಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಟ್ರಾಫಿಕ್ ಪೊಲೀಸರು ಮಾಡಿಫೈ ಪ್ರಿಯರಿಗೆ ಶಾಕ್ ನೀಡುತ್ತಿದ್ದಾರೆ.

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ನಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಹಳ್ಳಿಗಳ ಕಡೆಗೆಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಂದರೆ ಸಾಕು 1 ಕಿ.ಮಿ ದೂರವಿರುವಾಗಲೇ ಬೈಕ್ ಬರುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ಬೈಕ್‌ಗಳ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಎಕ್ಸಾಸ್ಟ್ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ.

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಆದ್ರೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೇ ಬದಲಿಸುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಇದರಿಂದ ಬೈಕ್ ಸವಾರನಿಗೆ ಅನುಕೂಲಕತೆಗಳಿದ್ದರು ಅದು ಸಾರ್ವಜನಿಕ ಜೀವನದಲ್ಲಿ ಹೆಚ್ಚೆಚ್ಚು ಸಮಸ್ಯೆಗಳನ್ನು ಉದ್ಭವವಾಗುವಂತೆ ಮಾಡುತ್ತಿದೆ. ಜೊತೆಗೆ ಬೈಕ್‌ಗಳ ಎಕ್ಸಾಸ್ಟ್ ಬದಲಾವಣೆಯಿಂದಾಗಿ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಎಡೆಮಾಡುಕೊಡುತ್ತಿದ್ದು, ಮಾಲಿನ್ಯ ಪ್ರಮಾಣವು ಹೆಚ್ಚಾಗುವುದಕ್ಕೂ ಮಾಡಿಫೈ ಎಕ್ಸಾಸ್ಟ್ ಪ್ರಮುಖ ಕಾರಣವಾಗಿದೆ.

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಹೀಗಾಗಿ ಸಾರ್ವಜನಿಕರು ಮಾಡಿಫೈ ಬೈಕ್ ಸವಾರರ ಜೊತೆ ಹಲವು ಸಂದರ್ಭಗಳಲ್ಲಿ ವಾಗ್ವಾದಕ್ಕೆ ಕಾರಣವಾಗುತ್ತಿದ್ದು, ಮಾಡಿಫೈ ಬೈಕ್ ಸವಾರರ ವಿರುದ್ಧ ಪ್ರಕರಣಗಳನ್ನು ಕೂಡಾ ದಾಖಲಿಸುತ್ತಿದ್ದಾರೆ. ಅದರಲ್ಲೂ ಮೆಟ್ರೋ ನಗರಗಳಲ್ಲಿರುವ ಮಾಡಿಫೈ ಬೈಕ್ ಸವಾರರಿಂದ ಆಗುತ್ತಿರುವ ಕಿರಿಕಿರಿ ಅಷ್ಟಿಲ್ಲ.

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಸಾರ್ವಜನಿಕರು ನೀಡಿರುವ ದೂರಗಳ ಅನ್ವಯ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿನ ಟ್ರಾಫಿಕ್ ಪೊಲೀಸರು ರಾಯಲ್ ಎನ್‌ಫೀಲ್ಡ್ ಸವಾರರಿಗೆ ಶಾಕ್ ನೀಡುತ್ತಿದ್ದು, ಎಕ್ಸಾಸ್ಟ್ ಬದಲಿಸಿರುವ ಬೈಕ್‌ಗಳ ಸೈಲೆನ್ಸರ್‌ಗಳನ್ನು ಸ್ಪಾಟ್‌ನಲ್ಲೇ ಕಿತ್ತು ಹಾಕಿ ಭಾರೀ ಮೊತ್ತದ ದಂಡವನ್ನು ಕೂಡಾ ವಸೂಲಿ ಮಾಡುತ್ತಿದ್ದಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಜೊತೆಗೆ ಪ್ರಮುಖ ರಸ್ತೆಗಳಲ್ಲಿ ತಪಾಸಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಪೊಲೀಸರು ಸ್ಥಳದಲ್ಲೇ ಮಾಡಿಫೈ ಬೈಕ್‌ನ ಎಕ್ಸಾಸ್ಟ್‌ಗಳನ್ನ ಕಿತ್ತುಹಾಕುವುದಲ್ಲದೇ ಬೈಕ್ ಸೀಸ್ ಮಾಡುತ್ತಿದ್ದು, ಪದೇ ಪದೇ ಪೊಲೀಸರ ಕೈಗೆ ಸಿಕ್ಕಿಬಿಳುವ ಬೈಕ್ ಸವಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ಹೈದ್ರಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಅತಿಯಾಗಿ ಶಬ್ದ ಮಾಡುವ ಮಾಡಿಫೈ ಬೈಕ್‌ಗಳನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶೇಷ ಸಭೆಗಳನ್ನು ನಡೆಸಿರುವ ಹೈದ್ರಾಬಾದ್ ಪೊಲೀಸರು, ಮಾಡಿಫೈ ಬೈಕ್ ಸವಾರರಿಗೆ ಮಾತ್ರವಲ್ಲದೇ ಮಾಡಿಫೈ ಬಿಡಿಭಾಗಗಳನ್ನು ಒದಗಿಸುವ ಸಂಸ್ಥೆಗಳಿಗೆ ಮತ್ತು ಮಾಡಿಫೈ ವಿನ್ಯಾಸಗಾರರಿಗೂ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಮಾಡಿಫೈ ಎಕ್ಸಾಸ್ಟ್ ಪ್ರಿಯರಿಗೆ ಶಾಕ್ ನೀಡಿದ ಟ್ರಾಫಿಕ್ ಪೊಲೀಸರು..!

ಒಂದು ವೇಳೆ ನೀವು ಕೂಡಾ ರಾಯಲ್ ಬೈಕ್ ಅಥವಾ ಇತರೆ ಸೂಪರ್ ಬೈಕ್‌ಗಳನ್ನು ಹೊಂದಿದ್ದರೆ ಕಾನೂನು ಬಾಹಿರ ಬೈಕ್ ಮಾಡಿಫೈ ಮಾಡಿಸುವ ಮತ್ತೊಮ್ಮೆ ಯೋಚಿಸಿ. ಇಲ್ಲವಾದ್ರೆ ಭಾರೀ ಪ್ರಮಾಣದ ದಂಡ ಬೀಳುವುದಲ್ಲದೇ ಬೈಕ್ ಕೂಡಾ ಸೀಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Source: ET Auto

More from DriveSpark

Article Published On: Monday, May 20, 2019, 18:51 [IST]
English summary
Hyderabad Cops remove modified silencers from bikes to curb sound pollution. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+