ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ರಿವೋಲ್ಟ್ ಇಂಟೆಲಿಕಾರ್ಪ್ ಕೆಲ ದಿನಗಳ ಹಿಂದಷ್ಟೇ ಎಲೆಕ್ಟ್ರಿಕ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕುಗಳನ್ನು ಬಿಡುಗಡೆಗೊಳಿಸುವುದರ ಜೊತೆಗೆ ಮೈ ರಿವೋಲ್ಟ್ ಪ್ಲಾನ್ ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು.

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ದೇಶದ ಪ್ರತಿಯೊಬ್ಬರು ಈ ಎಲೆಕ್ಟ್ರಿಕ್ ಬೈಕ್ ಅನ್ನು ಪಡೆಯುವಂತಾಗಬೇಕು ಎಂಬುದು ಈ ಯೋಜನೆಯ ಹಿಂದಿನ ಉದ್ದೇಶವಾಗಿತ್ತು. ಎಂಆರ್‌ಪಿ ಯೋಜನೆಯು ಯಾವುದೇ ಗುತ್ತಿಗೆ ಅಥವಾ ಬಾಡಿಗೆ ಯೋಜನೆಯಲ್ಲ. ಇದು ನಿರ್ವಹಣಾ ವೆಚ್ಚಗಳನ್ನು (ಉದಾಹರಣೆಗೆ ಟಯರ್‌ಗಳು) ಒಳಗೊಂಡ ಇಎಂಐ ಯೋಜನೆಯಾಗಿದೆ.

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಯಾವುದೇ ಡೌನ್ ಪೇಮೆಂಟ್ ಇಲ್ಲದೆ ರಿವೋಲ್ಟ್ ಆರ್‍‍ವಿ 300 ಮತ್ತು ಆರ್‍‍ವಿ 400 ಬೈಕುಗಳನ್ನು ಎಂಆರ್‍‍‍ಪಿ ಮೂಲಕ ಮಾತ್ರವೇ ಖರೀದಿಸಬೇಕು. ಪೂರ್ತಿ ಹಣವನ್ನು ಒಂದೇ ಬಾರಿಗೆ ಪಾವತಿಸುವ ಮೂಲಕ ಈ ಬೈಕುಗಳನ್ನು ಖರೀದಿಸಲು ಸಾಧ್ಯವಿಲ್ಲ.

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಗ್ರಾಹಕರ ಪ್ರತಿಕ್ರಿಯೆಯ ಆಧಾರದ ಮೇಲೆ ಭವಿಷ್ಯದಲ್ಲಿ ಈ ಯೋಜನೆ ಬದಲಾಗಬಹುದು ಎಂದು ರಿವೋಲ್ಟ್ ಕಂಪನಿಯ ಸಂಸ್ಥಾಪಕರು ತಿಳಿಸಿದ್ದಾರೆ. ಎಂಆರ್‌ಪಿ ಯೋಜನೆಯ ಪ್ರಕಾರ, ಆರ್‌ವಿ 300, ಆರ್‌ವಿ 400 ಬೇಸ್ ಮತ್ತು ಆರ್‌ವಿ 400 ಪ್ರೀಮಿಯಂ ಬೈಕುಗಳಿಗಾಗಿ 37 ತಿಂಗಳ ಕಾಲ ಕ್ರಮವಾಗಿ ರೂ.2,999,ರೂ.3,499 ಹಾಗೂ ರೂ.3,999 ಪಾವತಿಸಬೇಕು.

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಗ್ರಾಹಕನ ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸಿ ಆತನಿಗೆ ಬೈಕ್ ನೀಡಬೇಕೇ ಬೇಡವೇ ಎಂದು ನಿರ್ಧರಿಸುವ ಹಕ್ಕನ್ನು ಕಂಪನಿ ಹೊಂದಿದೆ. ಯಾವುದೇ ಮಾಲೀಕನು ಇ‍ಎಂ‍ಐ ಕಂತು ಪಾವತಿಸದಿದ್ದರೆ, ಈ ಬೈಕುಗಳನ್ನು ವಾಪಸ್ ಪಡೆಯಲು ರಿವೋಲ್ಟ್ ಸರ್ಕಾರದ ನಿಯಮಗಳನ್ನು ಅನುಸರಿಸಲಿದೆ.

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಸರ್ಕಾರದ ನಿಯಮಗಳ ಪ್ರಕಾರ, ಕಂತು ಪಾವತಿಸಲು ವಿಫಲವಾದ ಒಂದು ತಿಂಗಳೊಳಗೆ ಗ್ರಾಹಕರಿಗೆ ಮೊದಲ ನೋಟೀಸ್ ನೀಡಬೇಕಾಗುತ್ತದೆ. ಬೈಕ್ ಅನ್ನು ವಶಕ್ಕೆ ಪಡೆಯುವ ಮೊದಲು, ಎರಡನೇ ನೋಟಿಸ್ ನೀಡಬೇಕು.

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಕಂಪನಿಯು ಈ ಎಲೆಕ್ಟ್ರಿಕ್ ಬೈಕುಗಳನ್ನು ಗ್ರಾಹಕರಿಂದ ವಾಪಸ್ ಪಡೆಯುವ ಮೊದಲು ಗ್ರಾಹಕರ ಸಮಸ್ಯೆಯನ್ನು ಬಗೆಹರಿಸಲು, ಅವರೊಂದಿಗೆ ಹಲವು ಬಾರಿ ಮಾತುಕತೆ ನಡೆಸಲಿದೆ ಎಂದು ರಿವೋಲ್ಟ್ ಸಂಸ್ಥಾಪಕ ರಾಹುಲ್ ಶರ್ಮಾ ಹೇಳಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಒಂದೊಮ್ಮೆ ರಿವೋಲ್ಟ್ ಮಾಲೀಕರಿಗೆ ಮಾಸಿಕ ಪಾವತಿಗಳನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಕಂಪನಿಯನ್ನು ಸಂಪರ್ಕಿಸಿ, ಕೆಲವು ಔಪಚಾರಿಕತೆಗಳನ್ನೂ ಪೂರೈಸಿದ ನಂತರ ಒಪ್ಪಂದವನ್ನು ಮುಕ್ತಾಯಗೊಳಿಸಿ ಕೊಳ್ಳಬಹುದಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಈ ರೀತಿಯ ವಿಶಿಷ್ಟವಾದ ಯೋಜನೆಗೆ ಯಾವುದೇ ಕಂಪನಿಯು ಸಾಕಷ್ಟು ಹಣವನ್ನು ಹೊಂದಿರಬೇಕಾಗುತ್ತದೆ. ಇದು ಗ್ರಾಹಕರಿಗೆ ದೊರೆಯುವ ಆಕರ್ಷಕ ಕೊಡುಗೆಯಾಗಿದೆ. ರಿವೋಲ್ಟ್ ಕಂಪನಿಯ ಪ್ರತಿಸ್ಪರ್ಧಿ ಕಂಪನಿಗಳು ರಿವೋಲ್ಟ್ ಕಂಪನಿಯ ಈ ಯೋಜನೆಗೆ, ಗ್ರಾಹಕರಿಂದ ದೊರೆಯುವ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ಸದ್ಯಕ್ಕೆ, ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳನ್ನು ನವದೆಹಲಿ ಹಾಗೂ ಪುಣೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ರಿವೋಲ್ಟ್ ಕಂಪನಿಯು ತನ್ನ ಮಾರಾಟವನ್ನು ಇತರ ಪ್ರಮುಖ ನಗರಗಳಲ್ಲಿಯೂ ಆರಂಭಿಸುವ ಯೋಜನೆಯನ್ನು ಹೊಂದಿದೆ.

ಇ‍ಎಂ‍ಐ ಪಾವತಿಸದಿದ್ದರೆ ಬೈಕ್ ಹಿಂದಕ್ಕೆ ಪಡೆಯಲಿದೆ ರಿವೋಲ್ಟ್..!

ರಿವೋಲ್ಟ್ ಬೈಕುಗಳಿಗೆ ಬೇಡಿಕೆಯೂ ಅಧಿಕವಾಗಿದೆ. ಈಗಾಗಲೇ ನವೆಂಬರ್ ತಿಂಗಳವರೆಗಿನ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳನ್ನು ಮಾರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಪ್ರೀಮಿಯಂ ಎಲೆಕ್ಟ್ರಿಕ್ ಕೆಫೆ ರೇಸರ್ ಅನ್ನು ಟೀಸ್ ಮಾಡಲಾಗಿದೆ.

More from DriveSpark

Article Published On: Monday, September 9, 2019, 18:10 [IST]
English summary
Revolt electric motorcycle will be impounded if owner fails to pay EMI - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+