ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳು ಕೇವಲ 10 ತಿಂಗಳ ಅವಧಿಯಲ್ಲಿ 15,000 ಯು‍‍ನಿ‍‍ಟ್‍‍ಗಳ ಮಾರಾಟವಾಗುವ ಮೂಲಕ ಹೊಸ ಮೈಲು‍‍ಗಲ್ಲನ್ನು ಸ್ಥಾಪಿಸಿದ್ದಾರೆ. 650 ಸಿಸಿ ಬೈಕ್‍ ವಿ‍ಭಾಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ 15,000 ಸಾವಿರ ಯು‍‍ನಿಟ್‍‍ಗಳು ಮಾರಾಟವಾಗಿರುವುದು.

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಕಾಂಟಿ‍‍ನೆಂಟಲ್ ಜಿ‍ಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಅನ್ನು ದೇಶಿಯ ಮಾರುಕಟ್ಟೆಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಿದರು. ಇದರ ಬೆಲೆಯು ಅಗ್ಗವಾಗಿದೆ ಮತ್ತು ಹಲವಾರು ವೈಶಿಷ್ಟ್ಯಗಳಿಂದ ಕೊಡಿರುವ ಕಾರಣ ದೇಶಿಯ ಮಾರುಕಟ್ಟೆ ಗ್ರಾಹಕರು ಈ ಬೈಕ್‍‍ಗೆ ಫಿದಾ ಆದರು.

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಈ ಎರಡೂ ಬೈಕ್‍‍ಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ನೋಟವನ್ನು ಪಡೆದುಕೊಂಡಿದೆ. ಕಾಂಟಿನೆಂಟಲ್ ಜಿಟಿ 650 ಕೆಫ್ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ಎರಡು ಬೈಕ್‍‍ಗಳು ಏರ್-ಕೂಲ್ಡ್ 648 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಹೊಂದಿದ್ದು, ಇದು 7,250 ಆರ್‍‍‍ಪಿಎಂನಲ್ಲಿ ಗರಿಷ್ಟ 47 ಬಿಎಚ್‍‍ಪಿ ಪವರ್ ಮತ್ತು 5,250 ಆರ್‍‍ಪಿ‍ಎಂನಲ್ಲಿ 52 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಲಿಪರ್ ಕ್ಲಚ್ ನೊಂದಿಗೆ 6-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಹಿಂಭಾಗದ ಟೈರ್‍‍ಗೆ ಜೋ‍ಡಿಸಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಅಳವಡಿಸಲಾಗಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ ಬೈಕ್ ಬಿಡುಗಡೆಯಾದ ಮೊದಲ ತಿಂಗಳಲ್ಲಿ 325 ಯುನಿಟ್‍‍ಗಳು ಮಾರಾಟವಾಗುವ ಮೂಲಕ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಟ್ವಿನ್ 650 ಬೈಕ್ ಕಳೆದ ವರ್ಷ ಡಿಸೆಂಬರ್ ಅಂತ್ಯವಾಗುವಷ್ಟರಲ್ಲಿ 623 ಯುನಿಟ್‍‍ಗಳು ಮಾರಾಟವಾಗಿದ್ದವು. ಈ ವರ್ಷದ ಜನವರಿಂದ ನೋಡಿದರೆ 1,069 ಯುನಿಟ್‍‍ಗಳಿಗಿಂತ ಕೆಳಗೆ ಬರಲಿಲ್ಲ ಮಾರಾಟದ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು.

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ಈ ವರ್ಷದ ಮೇ ತಿಂಗಳಲ್ಲಿ ಮಾರಾಟದ ಸಂಖ್ಯೆ 2,427 ಯುನಿಟ್‍‍ಗಳಿಗೆ ಏರಿತು. ಆಟೋ‍‍ಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡು ವಾಹನಗಳ ಮಾರಾಟದ ಸಂಖ್ಯೆ ಪಾತಳಕ್ಕೆ ಕುಸಿದರು ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಮಾತ್ರ ತನ್ನ ಪಾರುಪಾತ್ಯ ಮರೆಯುತ್ತಾ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ಹಲವು ಜನಪ್ರಿಯ ಕಂಪನಿಗಳು ಈ ವರ್ಷದ ಆಗಸ್ಟ್ ತಿಂಗಳಲ್ಲಿ ಮಾರಾಟದಲ್ಲಿ ಮುಗ್ಗರಿಸಿದರೆ ರಾಯಲ್ ಎನ್‍‍‍ಫೀಲ್ಡ್ ಟ್ವಿನ್ ಬೈಕ್‍ಗಳಿಗೆ ಯಾವುದೇ ಪರಿಣಾಮ ಬೀರಿಲ್ಲ. 650 ಸಿಸಿ ವಿಭಾಗದಲ್ಲಿ ರಾಯಲ್ ಎನ್‍‍‍ಫೀಲ್ಡ್ ಟ್ವಿನ್ ಮಾತ್ರ 2,172 ಯುನಿಟ್‍‍ಗಳು ಮಾರಾಟವಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ಕಂಪನಿಯು ಕಡಿಮೆ ಸಿಸಿ‍ಗಳ ವಿಭಾಗದ ಬೈಕ್‍‍ಗಳ ಮಾರಾಟದ ಸಂಖ್ಯೆಯನ್ನು ಹೆಚ್ಚಾಗಿಸಲು ಪ್ರಯ್ನತಿಸುತ್ತಿದೆ. ಇತ್ತೀಚೆಗೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಎಸ್‍ ಅನ್ನು ಬಿ‍ಡುಗಡೆಗೊಳಿಸಿದೆ. ಈ ಬೈಕ್ ಸಿಂಗಲ್-ಚಾನೆಲ್ ಎ‍ಬಿಎಸ್ ಆವೃತ್ತಿಯನ್ನು ಹೊಂದಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಿಗೆ ಇತ್ತೀಚೆಗೆ ರೂ.6,400 ಬೆಲೆಯನ್ನು ಹೆಚ್ಚಿಸಿದೆ. ಇದು ಕಂಪನಿಗೆ 650 ಸಿಸಿ ವಿಭಾಗದ ಬೈಕ್‍‍ಗಳ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದಿದೆ ಎಂಬುವುದನ್ನು ತೋರಿಸುತ್ತದೆ. ಬೆಲೆ ಏರಿಕೆಯ ಬಳಿಕವು ಇದರ ಬೇಡಿಕೆ ಕಡಿಮೆಯಾಗಿಲ್ಲ.

ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಆರ್‍ಇ 650 ಟ್ವಿನ್ ಬೈಕುಗಳು

ರಾಯಲ್ ಎನ್‍ಫೀಲ್ಡ್ ಹಳೆಯ ತಲೆಮಾರಿನ ಬೈಕ್‍‍ಗಳಾದ ದಿ ಕ್ಲಾಸಿಕ್, ಬುಲೆಟ್ ಮತ್ತು ಥಂಡರ್ ಬರ್ಡ್ ಇವುಗಳು ಹೊಸ ಅಲೆಯನ್ನು ಸೃಷ್ಟಿಸಿದ ಬೈಕ್‍‍ಗಳಾಗಿವೆ. ಕಂಪನಿಯು ಅದೇ ಹಳೆಯ ಪ್ರಸಿದ್ದಿಯನ್ನು ಪಡೆಯಲು ಏನಾದರೂ ಮಾಡಬೇಕಾಗಿದೆ ಎಂದು ಯೋಚಿಸಿ ಅವರು ಹೊಸ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ತಂದರು. ಈ ತಂತ್ರವು ಯಶಸ್ವಿಯಾಗಿ ಟ್ವಿನ್ ಬೈಕ್‍‍ಗಳು ಹೆಚ್ಚು ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ 650ಸಿಸಿ ವಿಭಾಗದ ಬೈಕ್‍‍‍ಗಳನ್ನು ಉತ್ಪಾದಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Royal Enfield 650 Twins Cross The 15,000 Units Sales Mark In Just 10 Months - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X