Just In
- 3 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 6 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 6 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 7 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್ಗಿಲ್ಲ ಉಳಿಗಾಲ
- Lifestyle ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಬಿಎಸ್ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್ಫೀಲ್ಡ್
ದೇಶದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ರಾಯಲ್ ಎನ್ಫೀಲ್ಡ್ ಸಂಸ್ಥೆಯು ತನ್ನ ಬೈಕ್ ಉತ್ಪನ್ನಗಳ ಬೆಲೆ ಏರಿಕೆ ಮಾಡಿದ್ದು, ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ.
ರಾಯಲ್ ಎನ್ಫೀಲ್ಡ್ ಭಾರತದಲ್ಲಿ ಸದ್ಯ ಮಧ್ಯಮ ಗಾತ್ರದ ಕ್ರೂಸರ್ ಬೈಕ್ಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 10ಕ್ಕೂ ಹೆಚ್ಚು ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಆದ್ರೆ ಬಹುತೇಕ ಬೈಕ್ ಮಾದರಿಗಳಲ್ಲಿ ಎಬಿಎಸ್ ಇಲ್ಲದಿರುವುದು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಬೈಕ್ ಮಾದರಿಗಳಲ್ಲೂ ಬೆಲೆಗಳಿಗೆ ಅನುಗುಣವಾಗಿ ಸಿಂಗಲ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯ ಒದಗಿಸಿ ಬೆಲೆ ಏರಿಕೆ ಮಾಡಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವಾರು ಹೊಸ ಬೈಕ್ಗಳನ್ನು ಪರಿಚಯಿಸಿರುವ ರಾಯಲ್ ಎನ್ಫೀಲ್ಡ್ ಸಂಸ್ಥೆಯು ರೆಟ್ರೋ ಲುಕ್ ಮೋಟಾರ್ಸೈಕಲ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಗ್ರಾಹಕರು ತಮ್ಮ ಅಭಿರುಚಿ ತಕ್ಕಂತೆ ವಿವಿಧ ಮಾದರಿಯ ಬೈಕ್ ಆವೃತ್ತಿಗಳನ್ನು ಖರೀದಿ ಮಾಡಬಹುದಾಗಿದೆ.
ಕಳೆದ ಕೆಲದಿನಗಳ ಹಿಂದಷ್ಟೇ ಕ್ಲಾಸಿಕ್ 350 ಸಿಗ್ನಲ್ಸ್ , ಟ್ರಯಲ್ಸ್ 350, ಟ್ರಯಲ್ಸ್ 500, ಇಂಟರ್ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಥಂಡರ್ಬರ್ಡ್ 350ಎಕ್ಸ್ ಮತ್ತು ಥಂಡರ್ಬರ್ಡ್ 500ಎಕ್ಸ್ ಎನ್ನುವ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಮಾಡಿದ್ದು, ಹಳೆಯ ಆವೃತ್ತಿಗಳನ್ನು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ನವೀಕರಣ ಮಾಡಿದೆ.
ಎಬಿಎಸ್ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಬೈಕ್ ಬೆಲೆಯು ತುಸು ದುಬಾರಿ ಎನ್ನಿಸಲಿದ್ದು, ಕಳೆದ ನವೆಂಬರ್ನಲ್ಲಿ ಬಿಡುಗಡೆಯಾಗಿರುವ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ಗಳ ಬೆಲೆಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಬೈಕ್ಗಳ ಬೆಲೆಯು ಏರಿಕೆಯಾಗಿದೆ.
ರಾಯಲ್ ಎನ್ಫೀಲ್ಡ್ ಬೈಕ್ಗಳ ಹೊಸ ದರ ಪಟ್ಟಿ..!
ಬೈಕ್ ಮಾದರಿಗಳು | ಹೊಸ ದರ ಪಟ್ಟಿ(ಏ.1ರಿಂದ ಅನ್ವಯ) |
350 ರಾಯಲ್ ಎನ್ಫೀಲ್ಡ್ ಬುಲೆಲ್ 350 |
ರೂ.
1.21
ಲಕ್ಷ
|
ರಾಯಲ್ ಎನ್ಫೀಲ್ಡ್ 350 ಇಎಸ್ |
ರೂ.
1.35
ಲಕ್ಷ
|
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 |
ರೂ.
1.53
ಲಕ್ಷ
|
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಸಿಎಸ್ |
ರೂ.
1.63
ಲಕ್ಷ
|
ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್ 350 |
ರೂ.
1.56
ಲಕ್ಷ
|
ರಾಯಲ್ ಎನ್ಫೀಲ್ಡ್ ಬುಲೆಟ್ ಟ್ರಯಲ್ಸ್ 350 |
ರೂ.
1.62
ಲಕ್ಷ
|
ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್ ಎಕ್ಸ್ 350 |
ರೂ.
1.63
ಲಕ್ಷ
|
ರಾಯಲ್ ಎನ್ಫೀಲ್ಡ್ ಹಿಮಾಲಯನ್ |
ರೂ.
1.82
ಲಕ್ಷ
|
ರಾಯಲ್ ಎನ್ಫೀಲ್ಡ್ ಬುಲೆಟ್ 500 |
ರೂ.
1.88
ಲಕ್ಷ
|
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 500 |
ರೂ.
2.01
ಲಕ್ಷ
|
ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್ ಎಕ್ಸ್ 500 |
ರೂ.
2.06
ಲಕ್ಷ
|
ರಾಯಲ್ ಎನ್ಫೀಲ್ಡ್ ಬುಲೆಟ್ ಟ್ರಯಲ್ಸ್ 500 |
ರೂ.
2.07
ಲಕ್ಷ
|
ಇನ್ನು ರಾಯಲ್ ಎನ್ಫೀಲ್ಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಇದಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೈಕ್ ಉತ್ಪಾದನೆಗಾಗಿ ಬರೋಬ್ಬರಿ ರೂ.700 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.
MOST READ: ರಾಂಗ್ ಸೈಡ್ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!
ರಾಯಲ್ ಎನ್ಫೀಲ್ಡ್ ಸಂಸ್ಥೆಯು ಸದ್ಯ ವಿವಿಧ ಮಾದರಿಯ ಹೊಸ ಬೈಕ್ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಸ್ನೇಹಿ ಉತ್ಪನ್ನಗಳನ್ನು ಹೊರತರುವ ಇರಾದೆಯಲ್ಲಿದೆ.
ಇದಕ್ಕಾಗಿಯೇ ಚೆನ್ನೈ ಬಳಿಯ ವಲ್ಲಂ ವಡಗಾಲ್ನಲ್ಲಿರುವ ತನ್ನ ಬೈಕ್ ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಬೈಕ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಬೈಕ್ ಖರೀದಿಯ ಕಾಯುವಿಕೆಯ ಅವಧಿಯನ್ನು ತಗ್ಗಿಸಲು ಇದು ಮಹತ್ವದ ಯೋಜನೆಯಾಗಿದೆ.
MOST READ: ನೋ ಪಾರ್ಕಿಂಗ್ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!
ಹಾಗೆಯೇ ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ನಿಯಮಾವಳಿಗಳಿಗೆ ಅನುಸಾರವಾಗಿ ಹೊಸ ಬೈಕ್ಗಳನ್ನು ಅಭಿವೃದ್ಧಿಗೊಳಿಸುವುದು ಒಂದು ಸವಾಲಾಗಿದ್ದು, ಹೊಸ ಬಂಡವಾಳ ಹೂಡಿಕೆ ಮಾಡಿರುವುದು ರಾಯಲ್ ಎನ್ಫೀಲ್ಡ್ ಸಂಸ್ಥೆಯ ಹೊಸ ಯೋಜನೆಗಳಿಗೆ ಸಾಕಷ್ಟು ಸಹಕಾರಿಯಾಗಿಯಾಗಿದೆ ಎನ್ನಬಹುದು.