ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ಬಾಲಿವುಡ್ ನಟ ಜಾಕಿ ಶ್ರಾಫ್ ಹೊಸ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಖರೀದಿಸಿದ್ದಾರೆ. ಪುಣೆಯ ಬಹ್ಮ ಮೋಟಾರ್ಸ್ ಅವರ ಬಳಿಯಿಂದ ಇತ್ತೀಚೆಗೆ ಮಿಸ್ಟರ್ ಕ್ಲೀನ್ ಬಣ್ಣದ ಆಯ್ಕೆಯ ಹೊಸ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಅನ್ನು ಖರೀದಿಸಿದ್ದಾರೆ.

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ಬಾಲಿವುಡ್ ನಟ ಜಾಕಿ ಶ್ರಾಫ್ ಅವರಿಗೆ ಬೈಕ್‍ ಮತ್ತು ಕಾರುಗಳ ಬಗ್ಗೆ ಕ್ರೇಜ್ ಹೆಚ್ಚಿದೆ. ಜಾಕಿ ಶ್ರಾಫ್‍‍ರವರು ಹೊಸ ಐಷಾರಾಮಿ ಕಾರುಗಳು ಅಲ್ಲದೇ ವಿಟೇಂಜ್ ಕಾರುಗಳನ್ನು ಹೊಂದಿದ್ದಾರೆ. ಜಾಕಿ ಶ್ರಾಫ್ ಅವರು ಹಲವಾರು ಬೈಕ್‍‍ಗಳ ಸಂಗ್ರಹವನ್ನು ಕೂಡ ಹೊಂದಿದ್ದಾರೆ.

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ಜಾಕಿ ಶ್ರಾಫ್ ಅವರು ಖರೀದಿಸಿದ ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ರೆಟ್ರೊ ಲುಕ್ ಅನ್ನು ಹೊಂದಿದೆ. ಮಿಸ್ಟರ್ ಕ್ಲೀನ್ ಬಣ್ಣದ ಆಯ್ಕೆಯನ್ನು ಹೊಂದಿರುವ ಈ ಬೈಕ್ ತನ್ನ ಸರಣಿಯಲ್ಲಿ ದುಬಾರಿ ಮಾದರಿಯಾಗಿದೆ. ಇದೇ ಬೈಕ್ ಅನ್ನು ಜಾಕಿ ಶ್ರಾಫ್ ಅವರು ಖರೀದಿಸಿದ್ದಾರೆ.

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ಅವರ ಬಳಿಯಿರುವ ರಾಯಲ್ ಎನ್‍‍ಫೀಲ್ಡ್ ಬೈಕ್ ಸಾಮಾನ್ಯ ಕ್ಯಾಸ್ಟ್ ಐರಾನ್ ಸರಣಿಯ ಬೈಕ್ ಅನ್ನು ಹೊಂದಿತ್ತು. ಜಾಕಿ ಶ್ರಾಫ್ ಅವರ ಈ ಬೈಕ್ ಅನ್ನು ವೆರ್ಡೆಂಚಿ ಕಸ್ಟಮ್ಸ್ ಅವರು ವಿಚಿತ್ರವಾಗಿ ಮಾರ್ಪಡಿಸಿದ್ದಾರೆ. ಸ್ಕೇಲ್ಟರ್ ಎಂದು ಕರೆಯಲಾಗುವ ಈ ಬೈಕು ಭಾರತದ ಅತ್ಯಂತ ವಿಶಿಷ್ಟವಾಗಿ ಮಾರ್ಪಡಿಸಿದ ರಾಯಲ್ ಎನ್‍‍ಫೀಲ್ಡ್ ಬೈಕ್ ಆಗಿದೆ.

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 649 ಸಿಸಿ ಪ್ಯಾರೆಲಲ್-ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 48 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ ಜಿಟಿ 650 ಬೈಕಿನ ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ಈ ಬೈಕಿನಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಟ್ವಿನ್ ಕಾಯಿಲ್-ಕವರ್, 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್‍‍ಗಳಿವೆ. ರಾಯಲ್ ಎನ್‍‍ಫೀಲ್ಡ್, 650 ಸಿಸಿ ಬೈಕ್‍‍ಗಳಲ್ಲಿ ಸಣ್ಣ ಬದಲಾವಣೆಗಳನ್ನು ತಂದಿದೆ. ಇತ್ತೀಚಿಗೆ ಕಾಂಟಿನೆಟಲ್ ಜಿಟಿ 650 ಬೈಕಿನ ಹೆಡ್‍‍ಲೈ‍ಟ್‍‍ಗಳಲ್ಲಿ ಬದಲಾವಣೆ ಮಾಡಲಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ್‍‍ಗಳು, ಅಕ್ಟೋಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಬೈಕ್‍ ಎಂಬ ಹೆಗ್ಗಳಿಕೆಯನ್ನು ಪಡೆದಿವೆ. ಈ ಬೈಕ್ ಮಾರಾಟದಲ್ಲಿ ಕೆಟಿಎಂ ಡ್ಯೂಕ್ 390, ಬಜಾಜ್ ಡೊಮಿನಾರ್ 400, ಕವಾಸಕಿ ನಿಂಜಾ 300 ಮತ್ತು ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್‍‍ಗಳನ್ನು ಹಿಂದಿಕ್ಕಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ರಾಯಲ್ ಎನ್‍ಫೀಲ್ಡ್ ಹಳೆಯ ತಲೆಮಾರಿನ ಬೈಕ್‍‍ಗಳಾದ ದಿ ಕ್ಲಾಸಿಕ್, ಬುಲೆಟ್ ಮತ್ತು ಥಂಡರ್ ಬರ್ಡ್ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದ್ದವು. ಕಂಪನಿಯು ಅದೇ ಜನಪ್ರಿಯತೆಯನ್ನು ಪಡೆಯಲು ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ್‍ಗಳನ್ನು ಬಿಡುಗಡೆಗೊಳಿಸಿತ್ತು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹೊಸ ರಾಯಲ್ ಎನ್‍‍ಫೀಲ್ಡ್ ಬೈಕ್ ಖರೀದಿಸಿದ ಬಾಲಿವುಡ್ ನಟ

ಇಂಟರ್‌ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍‍ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕುಗಳ ಬಿಎಸ್-6 ಮಾದರಿಗಳು ಲಭ್ಯವಿರಲಿದೆ.

Most Read Articles

Kannada
English summary
Jackie Shroff’s latest ride is a Royal Enfield Continental GT 650 - Read in Kannada
Story first published: Saturday, November 23, 2019, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X