ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ನವೆಂಬರ್ ತಿಂಗಳಿನ ಮಾದರಿವಾರು ಬೈಕ್‍‍ಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ನವೆಂಬರ್ ತಿಂಗಳಿನ ರಾಯಲ್ ಎನ್‍‍ಫೀಲ್ಡ್ ಮಾದರಿವಾರು ಬೈಕ್‍ಗಳ ಮಾರಾಟದಲ್ಲಿ ಕ್ಲಾಸಿಕ್ 350 ಬೈಕ್ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಕ್ಲಾಸಿಕ್ 350

ರಾಯಲ್ ಎನ್‍‍ಫೀಲ್ಡ್ ಬೈಕು‍ಗಳ ಮಾದರಿವಾರು ಮಾರಾಟದ ಪಟ್ಟಿಯಲ್ಲಿ ಕ್ಲಾಸಿಕ್ 350 ಬೈಕ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕಿನ 35,951 ಯುನಿ‍‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಈ ಬೈಕಿನ 39,025 ಯು‍‍ನಿ‍‍ಟ್‍ಗಳು ಮಾರಾಟವಾಗಿದ್ದವು.

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳ ಮಾರಾಟದಲ್ಲಿ ಶೇ.8ರಷ್ಟು ಕುಸಿತ ಕಂಡಿದೆ. ಇತ್ತೀಚಿಗೆ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಂಗಲ್ ಸೀಟ್ ಬೈಕು 346 ಸಿಸಿ ಸಿಂಗಲ್ ಸಿಲಿಂಡರ್ ಏರ್‍‍ಕೂಲ್ಡ್ ಎಂಜಿನ್ 5,250 ಆರ್‌ಪಿಎಂನಲ್ಲಿ 19.80 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 28 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಬುಲೆಟ್ 350

ಮಾರಾಟದ ಪಟ್ಟಿಯಲ್ಲಿ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಟ್ವಿನ್ ಸ್ಪಾರ್ಕ್ ಬೈಕ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಬುಲೆಟ್ 350 ಟ್ವಿನ್ ಸ್ಪಾರ್ಕ್ ಆವೃತಿಯ 12,902 ಯು‍‍ನಿ‍‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಇದೇ ಆವೃತ್ತಿಯ 12,326 ಯು‍‍ನಿ‍‍ಟ್‍ಗಳು ಮಾರಾಟವಾಗಿದ್ದವು.

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಬುಲೆಟ್ ಎಲೆಕ್ಟ್ರಾ ಟ್ವಿನ್ ಸ್ಪಾರ್ಕ್

ಈ ಪಟ್ಟಿಯಲ್ಲಿ ಬುಲೆಟ್ ಎಲೆಕ್ಟ್ರಾ ಟ್ವಿನ್ ಸ್ಪಾರ್ಕ್ ಬೈಕ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಈ ಆವೃತ್ತಿಯ 3,641 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಇನ್ನೂ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 2,317 ಯು‍‍ನಿ‍‍‍ಟ್‍ಗಳು ಮಾರಾಟವಾಗಿತ್ತು.

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಥಂಡರ್‍‍ಬರ್ಡ್ 350

ರಾಯಲ್ ಎನ್‍‍ಫೀಲ್ಡ್ ನವೆಂಬರ್ ತಿಂಗಳ ಮಾರಾಟದ ಪಟ್ಟಿಯಲ್ಲಿ ಥಂಡರ್‍‍ಬರ್ಡ್ 350 ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್‍ ತಿಂಗಳಲ್ಲಿ ಈ ಬೈಕಿನ 3,588 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ.

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಆದರೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಥಂಡರ್‍‍ಬರ್ಡ್ 350 ಆವೃತ್ತಿಯಲ್ಲಿ 8,109 ಯುನಿ‍‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.56 ಕುಸಿತ ಕಂಡಿದೆ. ರಾಯಲ್ ಎನ್‍‍ಫೀಲ್ಡ್ ನವೆಂಬರ್ ತಿಂಗಳ ಮಾರಾಟದ ಪಟ್ಟಿಯಲ್ಲಿ 650 ಟ್ವಿನ್ ಐದನೇ ಸ್ಥಾನವನ್ನು ಪಡೆದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

650 ಟ್ವಿನ್

ಕಳೆದ ನವೆಂಬರ್ ತಿಂಗಳಲ್ಲಿ 650 ಟ್ವಿನ್ ಆವೃತ್ತಿಯ 1,027 ಯು‍‍ನಿ‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 650 ಟ್ವಿನ್ ಆವೃತ್ತಿಯ 325 ಯು‍‍ನಿ‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ.

MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಹಿಮಾಲಯನ್

ಅಡ್ವೆಂಚರ್ ಸೆಗ್‍ಮೆಂಟ್‍ನಲ್ಲಿ ಗಮನ ಸೆಳೆಯುತ್ತಿರುವ ಹಿಮಾಲಯನ್ ಬೈಕಿನ ಜನಪ್ರಿಯತೆಯು ಹೆಚ್ಚುತ್ತಿದೆ. ರಾಯಲ್ ಎನ್‍‍ಫೀಲ್ಡ್ ಬೈಕಿನ ಮಾರಾಟದಲ್ಲಿ ಶೇ.4ರಷ್ಟು ಬೆಳವಣಿಗೆಯನ್ನು ಕಂಡಿದೆ. ಈ ಮೂಲಕ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಕಳೆದ ನವೆಂಬರ್ ತಿಂಗಳಲ್ಲಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಆವೃತ್ತಿಯ 763 ಯು‍‍ನಿ‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 763 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು.

ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಇನ್ನೂ ಈ ಪಟ್ಟಿಯಲ್ಲಿ ಉಳಿದ ಸ್ಥಾನವನ್ನು ಕ್ರಮವಾಗಿ ಕ್ಲಾಸಿಕ್ 500, ಥಂಡರ್‍‍ಬರ್ಡ್ 500 ಮತ್ತು ಬುಲೆಟ್ 500 ಬೈಕುಗಳು ಪಡೆದುಕೊಂಡಿವೆ. ಕಳೆದ ನವೆಂಬರ್ ತಿಂಗಳಲ್ಲಿ ಈ ಆವೃತ್ತಿಗಳು ಕ್ರಮವಾಗಿ 280 ಯುನಿ‍‍ಟ್‍ಗಳು, 86 ಯುನಿ‍‍ಟ್‍‍ಗಳು ಮತ್ತು 24 ಯು‍‍ನಿ‍ಟ್‍ಗಳು ಮಾರಾಟವಾಗಿವೆ.

Most Read Articles

Kannada
English summary
Royal Enfield Nov 2019 Sales Analysis – Classic 350 On Top - Read in Kannada
Story first published: Friday, December 20, 2019, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X