ರಾಯಲ್ ಎನ್‍ಫೀಲ್ಡ್ ಬೈಕ್ ಮಾರಾಟದಲ್ಲಿ ಕುಸಿತ
ದ್ವಿಚಕ್ರ ವಾಹನ ಉದ್ಯಮವು ಕಳೆದ ಹಲವು ತಿಂಗಳುಗಳಿಂದ ಮಾರಾಟದಲ್ಲಿ ಕುಸಿತ ಕಣುತ್ತಿದೆ. ದೇಶದ ವಾಹನ ತಯಾರಕರು ಹಬ್ಬದ ವೇಳೆಯಲ್ಲಿ ವಾಹನದ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ದೇಶಿಯ ಮಾರುಕಟ್ಟೆಯ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಕೂಡ ಪ್ರಮುಖ ಮಾದರಿಗಳ ಮಾರಾಟದಲ್ಲಿ ಕುಸಿತ ಕಂಡಿದೆ.

ರಾಯಲ್ ಎನ್‍ಫೀಲ್ಡ್ ಕಳೆದ ಕೆಲವು ತಿಂಗಳುಗಳಿಂದ ಮಾರಾಟದಲ್ಲಿ ಗಮನಾರ್ಹವಾದ ಕುಸಿತವನ್ನು ಕಂಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 54,858 ಯುನಿಟ್‍ಗಳ ಮಾರಾಟವಾಗಿವೆ. ರಾಯಲ್ ಎನ್‍ಫೀಲ್ಡ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 70,065 ಯುನಿಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.21.70 ರಷ್ಟು ಕುಸಿತ ಕಂಡಿದೆ.

ರಾಯಲ್ ಎನ್‍ಪೀಲ್ಡ್ ಶ್ರೇಣಿಯ ಪ್ರಮುಖ ಬೈಕ್‍ಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವು ಕಡಿಮೆಯಾಗಿದೆ ಆದರೆ ರಫ್ತು ಗಣನೀಯವಾಗಿ ಹೆಚ್ಚಾಗಿದೆ. 2018ರ ಸೆಪ್ಟೆಂಬರ್ ತಿಂಗಳಲ್ಲಿ 1,597 ಯುನಿಟ್‍ಗಳ ರಫ್ತಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಶೇ.191 ರಷ್ಟು ಹೆಚ್ಚಳವಾಗಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 4,642 ಯುನಿಟ್‍ಗಳಷ್ಟು ಮಾರಾಟವಾಗಿವೆ.

ರಾಯಲ್ ಎನ್‍ಫೀಲ್ಡ್ ಕಂಪನಿಯ ಜನಪ್ರಿಯ ಕ್ಲಾಸಿಕ್ 350 ಬೈಕ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 29,376 ಯುನಿಟ್‍ಗಳು ಮಾರಾಟವಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 44,021 ಯುನಿಟ್‍ಗಳ ಮಾರಾಟವಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಈ ವರ್ಷದ ಸೆಪ್ಟೆಂಬರ್ ತಿಂಗಳು ಹೋಲಿಸಿದರೆ ಶೇ. 33.27 ರಷ್ಟು ಕುಸಿತ ಕಂಡಿದೆ.

ಕ್ಲಾಸಿಕ್ 500 ಬೈಕ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 1,558 ಯುನಿಟ್‍ಗಳು ಮಾರಾಟವಾಗಿದ್ದರೆ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 589 ಯುನಿಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಈ ವರ್ಷದ ಸೆಪ್ಟೆಂಬರ್ ತಿಂಗಳನ್ನು ಹೋಲಿಸಿದರೆ ಶೇ.62.20 ರಷ್ಟು ಕುಸಿತ ಕಂಡಿದೆ.

ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ ಮಾತ್ರ ಮಾರಾಟದಲ್ಲಿ ಏರೆಕೆಯಾಗಿದೆ. ಕಳೆದ ತಿಂಗಳಲ್ಲಿ ಶೇ.3.50 ರಷ್ಟು ಏರಿಕೆ ಕಂಡಿದೆ. ಬುಲೆಟ್ 350 ಬೈಕ್ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 12,399 ಯುನಿಟ್‍ಗಳು ಮಾರಾಟವಾಗಿದೆ. ಬುಲೆಟ್ 500 ಬೈಕಿನ ಮಾರಾಟದಲ್ಲಿ ಶೇ.56.42 ರಷ್ಟು ಕುಸಿತವನ್ನು ಕಂಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 78 ಯುನಿಟ್‍ಗಳ ಮಾರಾಟವಾಗಿದೆ.
| ಸ್ಥಾನ | ಮಾದರಿಗಳು | ಸೆ.19 | ಸೆ.18 | ವ್ಯತ್ಯಾಸ % |
| 1 | ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 | 29,376 | 44,021 | -33.27 |
| 2 | ರಾಯಲ್ ಎನ್‍ಫೀಲ್ಡ್ ಬುಲೆಟ್ 350 | 12,399 | 12,009 | 3.25 |
| 3 | ರಾಯಲ್ ಎನ್‍ಫೀಲ್ಡ್ ಎಲೆಕ್ಟ್ರಾ 350 | 4,782 | 2,092 | 128.59 |
| 4 | ರಾಯಲ್ ಎನ್‍ಫೀಲ್ಡ್ ಥಂಡರ್ ಬರ್ಡ್ 350 | 4,293 | 8,709 | -50.71 |
| 5 | ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ | 1,856 | - | - |
| 6 | ರಾಯಲ್ ಎನ್‍ಫೀಲ್ಡ್ ಹಿಮಾಲಯನ್ | 1,404 | 1,140 | 23.16 |
| 7 | ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 | 589 | 1,558 | -62.20 |
| 8 | ರಾಯಲ್ ಎನ್‍ಫೀಲ್ಡ್ ಥಂಡರ್ ಬರ್ಡ್ 500 | 81 | 357 | -77.31 |
| 9 | ರಾಯಲ್ ಎನ್‍ಫೀಲ್ಡ್ ಬುಲೆಟ್ 500 | 78 | 179 | -56.42 |

ಥಂಡರ್‍ಬರ್ಡ್ 350 ಬೈಕ್ ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ 4,293 ಯುನಿಟ್‍ಗಳ ಮಾರಾಟವಾಗಿವೆ. ಥಂಡರ್‍ಬರ್ಡ್ 350 ಬೈಕ್‍ನಲ್ಲಿ ಶೇ.50.71 ರಷ್ಟು ಕುಸಿತವಾಗಿದೆ. ಇನ್ನೂ ಥಂಡರ್‍ಬರ್ಡ್ 500 ಬೈಕ್‍ನ ಮಾರಾಟದಲ್ಲಿ ಶೇ.77.31 ರಷ್ಟು ಕುಸಿತ ಕಂಡಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಲೆಕ್ಟ್ರಾ 350 ಬೈಕ್‍ಮಾರಾಟದಲ್ಲಿ ಶೇ.128.59 ರಷ್ಟು ಏರಿಕೆ ಕಂಡಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 4,782 ಯುನಿಟ್‍ಗಳ ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 2,092 ಯುನಿಟ್‍ಗಳ ಮಾರಾಟವಾಗಿವೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

650 ಟ್ವಿನ್ಸ್ ಬೈಕ್ ಕಳೆದ ತಿಂಗಳಲ್ಲಿ 1,856 ಯುನಿಟ್‍ಗಳ ಮಾರಾಟವಾಗಿವೆ. ಆದರೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 2,172 ಯುನಿಟ್‍ಗಳ ಮಾರಾಟಕ್ಕೆ ಹೋಲಿಸಿದರೆ ಈ ಎರಡು ಮಾದರಿಗಳು ಶೇ.14.55 ಕಡಿಮೆಯಾಗಿದೆ.

ಸೆಪ್ಟೆಂಬರ್ 2019 ರಲ್ಲಿ, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಎಸ್ ಅನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತತಕ್ಲಾಸಿಕ್ 350 ಎಸ್ ತಮಿಳುನಾಡು ಮತ್ತು ಕೇರಳದಲ್ಲಿ ಮಾತ್ರ ಮಾರಾಟದಲ್ಲಿದೆ. ರಾಯಲ್ ಎನ್‍ಫೀಲ್ಡ್ ಹಬ್ಬದ ವೇಳೆಯಲ್ಲಿ ಹೆಚ್ಚಿನಾ ಮಾರಾಟವಾಗಬಹುದು ಎಂದು ನಿರೀಕ್ಷಿಸಬಹುದು.


Click it and Unblock the Notifications